Brain Tumour: ಬ್ರೈನ್ ಟ್ಯೂಮರ್ ಪತ್ತೆ ಮಾಡುವುದು ಹೇಗೆ? ಲಕ್ಷಣಗಳೇನು?
ಬ್ರೈನ್ ಟ್ಯೂಮರ್ ಎಂಬುದು ಜೀವಕ್ಕೆ ಅಪಾಯವನ್ನು ತಂದೊಡ್ಡುವ ಕಾಯಿಲೆಕಾಯಿದೆ. ಆರಂಭಿಕ ಹಂತದಲ್ಲೇ ಪತ್ತೆ ಮಾಡಿದರೆ, ಸಾವಿನ ದವಡೆಯಿಂದ ತಪ್ಪಿಸಿಕೊಳ್ಳಬಹುದು, ಸ್ವಲ್ಪ ತಡವಾದರೂ ಜೀವಕ್ಕೆ ಅಪಾಯ ಕಟ್ಟಿಟ್ಟ ಬುತ್ತಿ. ಕೆಲವೊಮ್ಮೆ ದೇಹದಲ್ಲಿರುವ ಲಕ್ಷಣಗಳನ್ನು ನೋಡಿ ಬ್ರೈನ್ ಟ್ಯೂಮರ್ ಎಂದು ಹೇಳುವುದು ಕಷ್ಟ.

ಕೆಲವು ಲಕ್ಷಣಗಳು ಇಲ್ಲಿವೆ ವಿಪರೀತ ತಲೆ ನೋವು ತಲೆನೋವು ಕೆಲವೊಮ್ಮೆ ಮಂದ ಮತ್ತು ಸ್ಥಿರವಾಗಿರುತ್ತವೆ. ಕೆಲವೊಮ್ಮೆ ಇದು ಅತಿರೇಕಕ್ಕೂ ಹೋಗಬಹುದು. ಶೀತ, ಕಫವಾದಾಗ ಹೆಚ್ಚಾಗುತ್ತದೆ, ತಲೆ ಭಾರ ಉಂಟಾಗುತ್ತದೆ, ಮೆದುಳಿನ ಮೇಲೆ ಹೆಚ್ಚು ಒತ್ತಡ ಬಿದ್ದಾಗ ಸಹಿಸಲಾರದಷ್ಟು ನೋವಾಗುತ್ತದೆ.
ವಾಕರಿಕೆ ಸಮಸ್ಯೆ ಒತ್ತಡ ಹೆಚ್ಚಾದಂತೆ ಅನೇಕ ಲಕ್ಷಣಗಳು ಕಾಣಿಸಿಕೊಳ್ಳುತ್ತವೆ ಅದರಲ್ಲಿ ವಾಕರಿಕೆ ಕೂಡ ಒಂದು ತಲೆ ಸುತ್ತಿದ ಅನುಭವವಾಗುತ್ತದೆ, ಜತೆಗೆ ವಾಕರಿಕೆ ಇರುತ್ತದೆ.
ಎಚ್ಚರ ತಪ್ಪುವುದು ಆಗಾಗ ಎಚ್ಚರ ತಪ್ಪುತ್ತದೆ, ಇದು ಬ್ರೈನ್ ಟ್ಯೂಮರ್ನ ಸಾಮಾನ್ಯ ಲಕ್ಷಣವಾಗಿದೆ. ಕೆಲವರ ದೇಹದಲ್ಲಿ ಕಾಲುಗಳು ಸ್ನಾಯುಗಳ ಸೆಳೆತ ಉಂಟಾಗಬಹುದು. ಅಲ್ಲದೇ ಮೂರ್ಛೆ ತಪ್ಪಿ ಬೀಳಲೂ ಬಹುದು. ಹೀಗಾದಾಗ ಮೊದಲು ವೈದ್ಯಕೀಯ ಚಿಕಿತ್ಸೆ ಪಡೆಯಬೇಕು, ಇನ್ನೂ ಕೆಲವರಲ್ಲಿ ಈಡಿ ದೇಹವೇ ಸೆಳೆತಕ್ಕೆ ಒಳಗಾಗಬಹುದು.
ದೇಹ ದುರ್ಬಲವಾಗಬಹುದು ಮಾತಾಡುವ ಸಾಮರ್ಥ್ಯ ಕುಂಠಿತವಾಗಬಹುದು, ದೇಹ ದುರ್ಬಲವಾಗಬಹುದು. ಬರೆಯುವಾಗ, ಒದುವಾಗ ಅಥವಾ ಲೆಕ್ಕಾಚಾರಗಳನ್ನು ಮಾಡುವಾಗ ಆ ಸನ್ನಿವೇಶವನ್ನು ಸರಿಪಡಿಸಲು ಸಹಾಯವಾಗುತ್ತದೆ. ಜೊತೆಗೆ ನಿಮ್ಮ ದೇಹದಲ್ಲಿ ಸಾಕಷ್ಟು ನಿತ್ರಾಣದ ಸ್ಥಿತಿ ಉಂಟಾಗುತ್ತದೆ.
ದೃಷ್ಟಿ ದೋಷ ದೃಷ್ಟಿ ದೋಷವೂ ಉಂಟಾಗಬಹುದು, ಆಗ ಸರಿಯಾದ ಪರೀಕ್ಷೆ ಮಾಡಿಸಿ ಕೂಡಲೇ ಚಿಕಿತ್ಸೆ ಪಡೆದಾಗ ಮಾತ್ರ ಬದುಕುಳಿಯಲು ಸಾಧ್ಯ.
ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ