ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದಾ?; ಉತ್ತರ ಇಲ್ಲಿದೆ

|

Updated on: Sep 12, 2023 | 2:40 PM

ಮಾವಿನ ಹಣ್ಣಿನಲ್ಲಿರುವ ಹೆಚ್ಚಿನ ಸಕ್ಕರೆ ಅಂಶ ಮತ್ತು ಹೆಚ್ಚಿನ ಕ್ಯಾಲೋರಿಯಿಂದಾಗಿ ಮಧುಮೇಹದ ಸಮಸ್ಯೆ ಇರುವವರಿಗೆ ಮಾವಿನ ಹಣ್ಣು ತಿನ್ನುವುದೋ? ಬೇಡವೋ? ಎಂಬ ಸಂದಿಗ್ಧತೆ ಮೂಡುವುದು ಸಾಮಾನ್ಯ. ಅದಕ್ಕೆ ಉತ್ತರ ಇಲ್ಲಿದೆ ಓದಿ.

ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದಾ?; ಉತ್ತರ ಇಲ್ಲಿದೆ
ಮಾವಿನ ಹಣ್ಣು
Image Credit source: pexels.com
Follow us on

ಹಣ್ಣುಗಳ ರಾಜ ಎಂದೇ ಜನಪ್ರಿಯವಾಗಿರುವ ಮಾವಿನ ಹಣ್ಣುಗಳು ಯಾರಿಗೆ ತಾನೇ ಇಷ್ಟವಿಲ್ಲ? ಬೇಸಿಗೆಯಲ್ಲಿ ಎಲ್ಲರ ಮನೆಗಳಲ್ಲಿಯೂ ಮಾವಿನ ಹಣ್ಣಿನದ್ದೇ ದರ್ಬಾರ್. ಆದರೆ ಮಧುಮೇಹಿಗಳು ಮಾವಿನ ಹಣ್ಣನ್ನು ತಿನ್ನಬಹುದಾ? ಎಂಬುದು ಅನೇಕರ ಪ್ರಶ್ನೆ. ಮಾವಿನ ಹಣ್ಣನ್ನು ತಿಂದರೆ ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಾಗುತ್ತದಾ? ಎಂಬ ಪ್ರಶ್ನೆಗೆ ಉತ್ತರ ಇಲ್ಲಿದೆ.

ಕೆಲವು ಹಣ್ಣುಗಳಲ್ಲಿ ಸಕ್ಕರೆ ಮತ್ತು ಕಾರ್ಬೋಹೈಡ್ರೇಟ್‌ ಅಧಿಕವಾಗಿರುತ್ತವೆ. ಮಾವಿನ ಹಣ್ಣುಗಳು ನಮ್ಮ ದೇಹಕ್ಕೆ ಅಗತ್ಯವಾದ ಜೀವಸತ್ವಗಳು ಮತ್ತು ಖನಿಜಗಳಿಂದ ತುಂಬಿದೆ. ಅದರಿಂದಲೇ ಮಾವು ಹೆಚ್ಚು ಪೌಷ್ಟಿಕಾಂಶದ ಹಣ್ಣಾಗಿದೆ. ಆದರೆ, ಮಾವಿನಲ್ಲಿರುವ ಹೆಚ್ಚಿನ ಸಕ್ಕರೆ ಮತ್ತು ಹೆಚ್ಚಿನ ಕ್ಯಾಲೋರಿಯಿಂದಾಗಿ ಮಧುಮೇಹ ಸಮಸ್ಯೆ ಇರುವವರಿಗೆ ಮಾವಿನ ಹಣ್ಣು ತಿನ್ನುವುದೋ? ಬೇಡವೋ? ಎಂಬ ಸಂದಿಗ್ಧತೆ ಮೂಡುವುದು ಸಾಮಾನ್ಯ.

ಇದನ್ನೂ ಓದಿ: ಮಧುಮೇಹಿಗಳ ಗಾಯಗಳು ಯಾಕೆ ಬೇಗ ವಾಸಿಯಾಗುವುದಿಲ್ಲ?; ಇಲ್ಲಿದೆ ಕಾರಣ

ಹೆಲ್ತ್‌ಲೈನ್ ಪ್ರಕಾರ, ಮಾವು ಫೈಬರ್ ಮತ್ತು ವಿವಿಧ ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತದೆ. ಇವೆರಡೂ ರಕ್ತದಲ್ಲಿನ ಸಕ್ಕರೆಯ ಪ್ರಮಾಣವನ್ನು ಕಡಿಮೆ ಮಾಡುವಲ್ಲಿ ಪಾತ್ರ ವಹಿಸುತ್ತವೆ. ಇದು ನಿಮ್ಮ ದೇಹಕ್ಕೆ ಕಾರ್ಬೋಹೈಡ್ರೇಟ್‌ಗಳ ಮತ್ತು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಸ್ಥಿರಗೊಳಿಸುತ್ತದೆ. ಹೀಗಾಗಿ, ಮಧುಮೇಹಿಗಳು ದಿನಕ್ಕೆ ಒಂದು ಮಾವಿನ ಹಣ್ಣು ತಿನ್ನುವುದರಿಂದ ಹೆಚ್ಚಿನ ಸಮಸ್ಯೆ ಆಗಲಾರದು.

ಮಾವು ನೈಸರ್ಗಿಕವಾಗಿ ಸಕ್ಕರೆ ಅಂಶವನ್ನು ಹೊಂದಿರುತ್ತದೆ. ಇದು ದೇಹದಲ್ಲಿ ರಕ್ತದಲ್ಲಿನ ಸಕ್ಕರೆ ಪ್ರಮಾಣದ ಹೆಚ್ಚಳಕ್ಕೆ ಕಾರಣವಾಗಬಹುದು. ಆದರೆ, ಅದರ ಪೌಷ್ಟಿಕಾಂಶಗಳು ರಕ್ತದಲ್ಲಿನ ಸಕ್ಕರೆಯ ಪರಿಣಾಮವನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ನೀವು ಮಧುಮೇಹಿಗಳಾಗಿದ್ದರೆ, ನಿಮ್ಮ ಆಹಾರದಲ್ಲಿ ಮಾವಿನಹಣ್ಣನ್ನು ಸೇರಿಸುವಾಗ ಕೊಂಚ ಎಚ್ಚರಿಕೆ ವಹಿಸಿದರೆ ಯಾವ ಸಮಸ್ಯೆಯೂ ಆಗುವುದಿಲ್ಲ.

ಇದನ್ನೂ ಓದಿ: ಡಯಾಬಿಟಿಸ್, ಹೃದಯದ ಸಮಸ್ಯೆಯನ್ನು ನಿಮ್ಮ ಪಾದದಿಂದಲೇ ತಿಳಿಯಬಹುದು!

ನೀವು ಮಾವಿನ ಹಣ್ಣನ್ನು ಸೇವಿಸುವಾಗ ಮೈದಾ, ಪಾಸ್ತಾ ಅಥವಾ ಹೆಚ್ಚಿನ ಗ್ಲೈಸೆಮಿಕ್ ಸೂಚಿಯನ್ನು ಹೊಂದಿರುವ ಯಾವುದೇ ಸಿಹಿತಿಂಡಿಯ ಜೊತೆಗೆ ಅದನ್ನು ಸೇವಿಸಬೇಡಿ. ಮಾವಿನ ಹಣ್ಣನ್ನು ಮಾತ್ರ ತಿನ್ನುವುದರಿಂದ ಹೆಚ್ಚಿನ ಅಪಾಯವೇನೂ ಇಲ್ಲ. ಆದರೆ, ಸಣ್ಣ ಗಾತ್ರದ 1 ಮಾವಿನ ಹಣ್ಣನ್ನು ಮಾತ್ರ 1 ದಿನಕ್ಕೆ ಸೇವಿಸುವುದು ಉತ್ತಮ. ಹೆಚ್ಚು ಸೇವಿಸಿದರೆ ರಕ್ತದ ಸಕ್ಕರೆ ಮಟ್ಟ ಹೆಚ್ಚಾಗುತ್ತದೆ. ಅಲ್ಲದೆ, ಮಧುಮೇಹಿಗಳು ಮಾವಿನ ಜ್ಯೂಸ್ ಕುಡಿಯದಿರುವುದು ಉತ್ತಮ. ಏಕೆಂದರೆ ಇದು ಗರಿಷ್ಠ ಮಟ್ಟದ ಸಕ್ಕರೆಯನ್ನು ಹೊಂದಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ