ತೂಕ ಇಳಿಸಿಕೊಳ್ಳಬೇಕಾ?; ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಿ

ಆರೋಗ್ಯಕರವಾದ ರೀತಿಯಲ್ಲಿ ತೂಕ ಇಳಿಸಿಕೊಳ್ಳಲು ನಮಗೆ ಸುಲಭವಾಗಿ ಸಿಗುವ ಹಣ್ಣುಗಳನ್ನು ಸೇವಿಸಬಹುದು. ಈ ಹಣ್ಣುಗಳಲ್ಲಿ ಇರುವ ಪೋಷಕಾಂಶ, ಫೈಬರ್, ಖನಿಜಾಂಶ ಹಾಗೂ ವಿಟಮಿನ್​ಗಳು ನಮ್ಮ ದೇಹವನ್ನು ಆರೋಗ್ಯವಾಗಿಡುವುದು ಮಾತ್ರವಲ್ಲದೆ ಹೆಚ್ಚಿನ ಕೊಬ್ಬನ್ನು ಕರಗಿಸಲು ಸಹಾಯ ಮಾಡುತ್ತದೆ.

ತೂಕ ಇಳಿಸಿಕೊಳ್ಳಬೇಕಾ?; ನಿಮ್ಮ ಡಯೆಟ್​ನಲ್ಲಿ ಈ ಹಣ್ಣುಗಳನ್ನು ಸೇರಿಸಿಕೊಳ್ಳಿ
ಹಣ್ಣುಗಳುImage Credit source: pexels.com
Follow us
ಸುಷ್ಮಾ ಚಕ್ರೆ
|

Updated on:Sep 12, 2023 | 4:52 PM

ನಮ್ಮ ಆಹಾರ ಪದ್ಧತಿಯಲ್ಲಿ ಕೆಲವು ಬದಲಾವಣೆಗಳನ್ನು ಮಾಡಿಕೊಂಡರೆ ಅನಗತ್ಯವಾಗಿ ತೂಕ ಹೆಚ್ಚಾಗುವುದನ್ನು ತಡೆಯಬಹುದು. ನಮ್ಮ ಆಹಾರದಲ್ಲಿ ಹೆಚ್ಚೆಚ್ಚು ಹಣ್ಣುಗಳು ಮತ್ತು ತರಕಾರಿಗಳನ್ನು ಬಳಸುವುದರಿಂದ ಆರೋಗ್ಯವೂ ಚೆನ್ನಾಗಿರುತ್ತದೆ, ಸೌಂದರ್ಯಕ್ಕೂ ಸಹಕಾರಿಯಾಗಿದೆ. ಹಣ್ಣುಗಳು ನಮ್ಮ ದೇಹಕ್ಕೆ ಪೋಷಕಾಂಶಗಳು, ಜೀವಸತ್ವಗಳು ಮತ್ತು ಖನಿಜಗಳನ್ನು ನೀಡುತ್ತವೆ. ರೋಗಗಳು ಮತ್ತು ಕೆಟ್ಟ ಕೊಲೆಸ್ಟ್ರಾಲ್ ವಿರುದ್ಧ ಹೋರಾಡಲು ಹಣ್ಣುಗಳು ಸಹಾಯ ಮಾಡುತ್ತವೆ.

ಹಣ್ಣುಗಳಲ್ಲಿ ಪೋಷಕಾಂಶಗಳು ಬಹಳ ಹೇರಳವಾಗಿದೆ. ಹಣ್ಣುಗಳಲ್ಲಿ ಹೆಚ್ಚು ನೀರಿನ ಅಂಶ ಮತ್ತು ಫೈಬರ್ ಇರುತ್ತದೆ. ಪೌಷ್ಟಿಕತಜ್ಞರು ಸಾವಯವ ಮತ್ತು ಕಚ್ಚಾ ಹಣ್ಣುಗಳು ಮತ್ತು ತರಕಾರಿಗಳನ್ನು ಹೆಚ್ಚು ತಿನ್ನಲು ಸಲಹೆ ನೀಡುತ್ತಾರೆ. ಹಾಗೇ, ಹಣ್ಣಿನ ಜ್ಯೂಸ್ ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ನಿಮ್ಮ ತೂಕ ಕಡಿಮೆ ಮಾಡಲು ಸಹಾಯ ಮಾಡುವ ಟಾಪ್ 10 ಹಣ್ಣುಗಳಿವು.

1. ಟೊಮ್ಯಾಟೊ:

ಟೊಮ್ಯಾಟೊ ಹಣ್ಣುಗಳ ಗುಂಪಿಗೆ ಸೇರುತ್ತದಾ? ಅಥವಾ ತರಕಾರಿಗಳ ಗುಂಪಿಗೆ ಸೇರುತ್ತದಾ? ಎಂಬ ಗೊಂದಲ ಮೊದಲಿನಿಂದಲೂ ಇದೆ. ಟೊಮ್ಯಾಟೋ ಹಣ್ಣುಗಳಲ್ಲಿ ಫ್ಲೇವನಾಯ್ಡ್​​ ಸಮೃದ್ಧವಾಗಿದೆ. ಟೊಮ್ಯಾಟೋ ನಮ್ಮ ತೂಕವನ್ನು ಕಡಿಮೆ ಮಾಡುತ್ತದೆ. ಆದರೆ, ಅದರಿಂದ ತಯಾರಿಸುವ ಕೆಚಪ್, ಜ್ಯಾಮ್​ಗಳಲ್ಲಿ ಸಕ್ಕರೆ ಅಂಶ ಹೆಚ್ಚಾಗಿರುವುದರಿಂದ ಅದನ್ನು ಸೇವಿಸಿದರೆ ಹೊಟ್ಟೆಯ ಕೊಬ್ಬು ಹೆಚ್ಚಾಗಿ ನಿಮ್ಮನ್ನು ಸ್ಥೂಲಕಾಯರನ್ನಾಗಿ ಮಾಡುತ್ತದೆ.

ಇದನ್ನೂ ಓದಿ: ಹೃದಯದ ಆರೋಗ್ಯದಿಂದ ಚರ್ಮದ ಕಾಂತಿಯವರೆಗೆ; ಗೆಣಸಿನ ಪ್ರಯೋಜನಗಳಿವು

2. ಅವಕಾಡೊಗಳು/ ಬೆಣ್ಣೆ ಹಣ್ಣು:

ಅವಕಾಡೊಗಳು ತೂಕ ಇಳಿಸುವ ಸೂಪರ್‌ಫುಡ್‌ಗಳಾಗಿವೆ. ಇದರಲ್ಲಿ ಹೃದಯಕ್ಕೆ ಆರೋಗ್ಯಕರವಾದ ಕೊಬ್ಬುಗಳು ಮತ್ತು ಉತ್ಕರ್ಷಣ ನಿರೋಧಕಗಳಿರುತ್ತವೆ. ತೂಕ ಇಳಿಸುವ ಆಹಾರದಲ್ಲಿ ಅವಕಾಡೊಗಳು ಪ್ರಮುಖವಾಗಿವೆ. ಏಕೆಂದರೆ, ಹೆಚ್ಚಿನ ಜನರು ಸಾಕಷ್ಟು ಆರೋಗ್ಯಕರ ಕೊಬ್ಬನ್ನು ಪಡೆಯುವುದಿಲ್ಲ. ಆರೋಗ್ಯಕರ ಕೊಬ್ಬುಗಳು ದೇಹದ ಚಯಾಪಚಯ ದರವನ್ನು ಅದರ ಅತ್ಯುತ್ತಮ ಮಟ್ಟದಲ್ಲಿ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಇದಲ್ಲದೆ, ಆರೋಗ್ಯಕರ ಕೊಬ್ಬುಗಳು ದೇಹದಲ್ಲಿ ಟೆಸ್ಟೋಸ್ಟೆರಾನ್ ಮಟ್ಟವನ್ನು ಹೆಚ್ಚಿಸುತ್ತವೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ತೂಕ ನಷ್ಟಕ್ಕೆ ಸಂಬಂಧಿಸಿದ ಮೊದಲ ಹಾರ್ಮೋನ್​ಗಳಲ್ಲಿ ಒಂದಾಗಿದೆ. ಅವಕಾಡೊಗಳು ವಿಟಮಿನ್ ಸಿ, ವಿಟಮಿನ್ ಬಿ -6, ಮೆಗ್ನೀಸಿಯಮ್ ಮುಂತಾದ ಪೋಷಕಾಂಶಗಳು ಮತ್ತು ಖನಿಜಗಳಲ್ಲಿ ಸಮೃದ್ಧವಾಗಿವೆ.

3. ಕಿತ್ತಳೆ:

ಕಿತ್ತಳೆ ಹಣ್ಣುಗಳು ಪರಿಣಾಮಕಾರಿ ತೂಕ ಇಳಿಸುವ ಹಣ್ಣುಗಳಾಗಿದ್ದು, ಇದು ರುಚಿಕರ ಮತ್ತು ಪೌಷ್ಟಿಕವಾಗಿದೆ. ಇವು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ ಮತ್ತು ಫೈಬರ್ ಮತ್ತು ಪೊಟ್ಯಾಸಿಯಮ್‌ನಲ್ಲಿ ಸಮೃದ್ಧವಾಗಿವೆ. ಜೊತೆಗೆ ಕ್ಯಾನ್ಸರ್-ಹೋರಾಟದ ಸಿಟ್ರಸ್ ಲಿಮೋನಾಯ್ಡ್‌ಗಳನ್ನು ಹೊಂದಿರುತ್ತವೆ. ಕಿತ್ತಳೆಯಲ್ಲಿ ವಿಟಮಿನ್ ಸಿ ಹೆಚ್ಚಾಗಿದೆ. ಇದು ಚರ್ಮ, ಕಾರ್ಟಿಲೆಜ್, ಸ್ನಾಯು, ಅಸ್ಥಿರಜ್ಜುಗಳು ಮತ್ತು ರಕ್ತನಾಳಗಳಂತಹ ದೇಹದ ಪ್ರಮುಖ ಅಂಗಾಂಶಗಳ ಬೆಳವಣಿಗೆಗೆ ಅಗತ್ಯವಾಗಿರುತ್ತದೆ. ಕಿತ್ತಳೆಯ ಪ್ರಯೋಜನಗಳನ್ನು ಹೆಚ್ಚಿಸಲು ಜ್ಯೂಸ್ ಕುಡಿಯುವ ಬದಲು ಹಣ್ಣುಗಳನ್ನು ಹಾಗೇ ತಿನ್ನಿರಿ.

4. ಕಲ್ಲಂಗಡಿ:

ಕಲ್ಲಂಗಡಿ ತೂಕ ನಷ್ಟಕ್ಕೆ ಅದ್ಭುತ ಹಣ್ಣು. ಇದು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ ಮತ್ತು ಹೆಚ್ಚಿನ ನೀರಿನ ಅಂಶವನ್ನು ಹೊಂದಿದೆ. ಇದು ಅದರ ತೂಕದ 90 ಪ್ರತಿಶತವನ್ನು ಹೊಂದಿರುತ್ತದೆ. 100 ಗ್ರಾಂ ಕಲ್ಲಂಗಡಿ ಸೇವೆಯು 30 ಕ್ಯಾಲೊರಿಗಳನ್ನು ಹೊಂದಿರುತ್ತದೆ! ಇದಲ್ಲದೆ, ಅವು ಹೊಟ್ಟೆಯ ಕೊಬ್ಬನ್ನು ಸುಡುವ ಅರ್ಜಿನೈನ್ ಎಂಬ ಅಮೈನೋ ಆಮ್ಲಗಳಲ್ಲಿ ಸಮೃದ್ಧವಾಗಿವೆ. ಕಲ್ಲಂಗಡಿಯಲ್ಲಿ ಪೊಟ್ಯಾಸಿಯಂ ಅಂಶ ಸಮೃದ್ಧವಾಗಿದೆ.

ಇದನ್ನೂ ಓದಿ: ಮಧುಮೇಹಿಗಳು ಮಾವಿನ ಹಣ್ಣು ತಿನ್ನಬಹುದಾ?; ಉತ್ತರ ಇಲ್ಲಿದೆ

5. ಸ್ಟ್ರಾಬೆರಿಗಳು:

ಸ್ಟ್ರಾಬೆರಿಗಳು ರುಚಿಕರವಾದ ಮತ್ತು ಪೌಷ್ಟಿಕಾಂಶದ ಹಣ್ಣುಗಳಲ್ಲಿ ಒಂದಾಗಿದೆ. ಈ ಸುಂದರವಾಗಿ ಕಾಣುವ ಮತ್ತು ಸುವಾಸನೆಯುಳ್ಳ ಹಣ್ಣುಗಳು ಉತ್ಕರ್ಷಣ ನಿರೋಧಕಗಳು ಮತ್ತು ವಿಟಮಿನ್ ಸಿ ಯಲ್ಲಿ ಸಮೃದ್ಧವಾಗಿವೆ. ಇದು ದೇಹದಲ್ಲಿ HDL ಅಥವಾ ಉತ್ತಮ ಕೊಬ್ಬಿನ ಮಟ್ಟವನ್ನು ಹೆಚ್ಚಿಸಲು ಕಾರಣವಾಗಿವೆ. ಈ ಸೂಪರ್ ಹಣ್ಣುಗಳಿಂದ ಗರಿಷ್ಠ ಪ್ರಯೋಜನಗಳನ್ನು ಪಡೆಯಲು ಬೆಳಿಗ್ಗೆ ನಿಮ್ಮ ಮೊಸರು ಅಥವಾ ಓಟ್ ಮೀಲ್ ಗಂಜಿಗೆ ಕೆಲವು ಸ್ಟ್ರಾಬೆರಿಗಳನ್ನು ಮಿಕ್ಸ್​ ಮಾಡಿಕೊಂಡು ತಿನ್ನಿ.

6. ಪೇರಲ:

ಪೇರಲ ಹಣ್ಣು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ಇದು ಮಧುಮೇಹಿಗಳಿಗೆ ಉತ್ತಮವಾಗಿದೆ. ಪೇರಲವು ಜೀರ್ಣಕ್ರಿಯೆಗೆ ಸಹಾಯ ಮಾಡುತ್ತದೆ ಮತ್ತು ಕರುಳಿನ ಚಲನೆಯನ್ನು ನಿರ್ವಹಿಸುತ್ತದೆ. ಅವು ವಿಟಮಿನ್ ಸಿ, ಲೈಕೋಪೀನ್ ಮತ್ತು ಉತ್ಕರ್ಷಣ ನಿರೋಧಕಗಳಲ್ಲಿ ಸಮೃದ್ಧವಾಗಿವೆ. ಇವೆಲ್ಲವೂ ಕ್ಯಾನ್ಸರ್ ತಡೆಗಟ್ಟುವಿಕೆ ಮತ್ತು ಚರ್ಮದ ಉರಿಯೂತಕ್ಕೆ ಸಹಾಯ ಮಾಡುತ್ತದೆ.

7. ಲಿಂಬೆ ಹಣ್ಣು:

ಲಿಂಬೆ ಹಣ್ಣು ವಿಟಮಿನ್ ಸಿ ಮತ್ತು ಫೈಬರ್‌ನ ಉತ್ತಮ ಮೂಲಗಳಾಗಿದೆ. ತೂಕ ನಷ್ಟಕ್ಕೆ ಸಹಾಯ ಮಾಡುವ ಡಿಟಾಕ್ಸ್ ವಾಟರ್ ಡ್ರಿಂಕ್‌ಗಳಿಗೆ ಲಿಂಬೆ ಹಣ್ಣನ್ನು ಬಳಸಲಾಗುತ್ತದೆ. ಒಂದು ಗ್ಲಾಸ್ ಲಿಂಬೆ ಜ್ಯೂಸ್ ಕೇವಲ 11 ಕ್ಯಾಲೊರಿಗಳನ್ನು ಹೊಂದಿರುತ್ತದೆ.

8. ಪಿಯರ್ಸ್:

ತೂಕ ಇಳಿಸುವ ದಿನಗಳಲ್ಲಿ ಪಿಯರ್ಸ್ ಹಣ್ಣುಗಳು ಉತ್ತಮ ಆಯ್ಕೆಯಾಗಿದೆ. ಒಂದೇ ಒಂದು ಪಿಯರ್ಸ್​ ಹಣ್ಣು ನಿಮ್ಮ ದೈನಂದಿನ ಫೈಬರ್ ಸೇವನೆಯ ಶೇಕಡಾ 24ರಷ್ಟನ್ನು ಪೂರೈಸುತ್ತದೆ! ದಿನಕ್ಕೆ ಕನಿಷ್ಠ 3 ಪಿಯರ್ಸ್​ ತಿನ್ನುವ ಮಹಿಳೆಯರಿಗೆ ಹಸಿವು ಕಡಿಮೆಯಾಗುತ್ತದೆ. ಇದರಿಂದ ಅನಗತ್ಯ ಕ್ಯಾಲೊರಿಗಳನ್ನು ಸಂಗ್ರಹಿಸುವ ಸಾಧ್ಯತೆ ಕಡಿಮೆಯಾಗುತ್ತದೆ. ಇದು ಕೊಬ್ಬು, ಕೊಲೆಸ್ಟ್ರಾಲ್ ಮತ್ತು ಪೊಟ್ಯಾಸಿಯಮ್​ನಿಂದ ಮುಕ್ತವಾಗಿದೆ ಮತ್ತು ಕಡಿಮೆ ಕ್ಯಾಲೋರಿಗಳನ್ನು ಹೊಂದಿದೆ. ಒಂದು ಮಧ್ಯಮ ಗಾತ್ರದ ಪಿಯರ್ಸ್ ಕೇವಲ 100 ಕ್ಯಾಲೋರಿಗಳನ್ನು ಹೊಂದಿರುತ್ತದೆ.

9. ದ್ರಾಕ್ಷಿ ಹಣ್ಣು:

ದ್ರಾಕ್ಷಿ ಹಣ್ಣು ಫೈಟೊಕೆಮಿಕಲ್ಸ್ ಮತ್ತು ವಿಟಮಿನ್ ಸಿಯಲ್ಲಿ ಸಮೃದ್ಧವಾಗಿದೆ. ಇವೆರಡೂ ರೋಗಗಳ ವಿರುದ್ಧ ಹೋರಾಡುತ್ತವೆ ಮತ್ತು ಹೊಟ್ಟೆಯ ಕೊಬ್ಬನ್ನು ಸುಡುತ್ತವೆ. ದ್ರಾಕ್ಷಿ ಹಣ್ಣಿನಲ್ಲಿ ನೀರಿನ ಅಂಶವೂ ಹೆಚ್ಚಾಗಿರುವುದರಿಂದ ಅನಗತ್ಯ ಕೊಬ್ಬು ಕರಗಿಸಲು ಸಹಕಾರಿಯಾಗಿದೆ.

10. ದಾಳಿಂಬೆ:

ದಾಳಿಂಬೆಯಲ್ಲಿ ಕ್ಯಾಲೋರಿ ಕಡಿಮೆ ಮತ್ತು ವಿಟಮಿನ್ ಮತ್ತು ಮಿನರಲ್ ಗಳು ಅಧಿಕವಾಗಿರುತ್ತವೆ. ಅವುಗಳು ಆರೋಗ್ಯಕರ ಪ್ರಮಾಣದ ಫೈಬರ್ ಮತ್ತು ಪಾಲಿಫಿನಾಲ್ ಸಂಯುಕ್ತಗಳನ್ನು ಹೊಂದಿರುತ್ತವೆ. ಅದು ತೂಕ ಇಳಿಸಿಕೊಳ್ಳಲು ಸಹಾಯ ಮಾಡುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Published On - 4:50 pm, Tue, 12 September 23

ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
‘ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ’ ನೋಡಲು ಜನ ಬರಲಿಲ್ಲ: ಕಾರಣ ತಿಳಿಸಿದ ವಿತರಕ
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಸತ್ತವನು ದಿಢೀರನೆ ಎದ್ದು ಕೂತ ಕತೆ; ಶಾಕಿಂಗ್ ವಿಡಿಯೋ ವೈರಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
ಭಾರತದ ಸ್ಟೀಲ್ ಉದ್ಯಮದಲ್ಲಿ ಹೆಚ್ಚು ಇಂಗಾಲದ ಡೈ ಆಕ್ಸೈಡ್ ಉತ್ಪತ್ತಿ: ಗೋಯಲ್
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
5 ಲಕ್ಷ ರೂಪಾಯಿ ಪಡೆದು ಮೋಸ ಮಾಡಿದ ಸ್ಟಾರ್​ ನಟಿ; ನಿರ್ಮಾಪಕಿ ಆರೋಪ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಶಿಕ್ಷಣ ಸಾರ್ಥಕವಾಗಲು ಮೂರು ಅಂಶಗಳ ಮನನವಾಗಬೇಕು: ಸಿದ್ದರಾಮಯ್ಯ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ಸ್ಕೂಟಿಗೆ ಡಿಕ್ಕಿ ಹೊಡೆದು 1 ಕಿ.ಮೀ ಎಳೆದೊಯ್ದ ಕಾರು; ಚಿಮ್ಮಿದ ಬೆಂಕಿ ಕಿಡಿ
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ನ್ಯೂಸ್​​9 ಗ್ಲೋಬಲ್​ ಸಮಿಟ್​ನಲ್ಲಿ ಕರ್ನಾಟಕ-ಜರ್ಮನಿ ನಂಟು: ಸಿಎಂ ಮಾತು
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ಧಾರವಾಡದಲ್ಲಿ ರೈತರೊಂದಿಗೆ ವಿತಂಡವಾದಕ್ಕಿಳಿದ ಸಚಿವ ಸಂತೋಷ್ ಲಾಡ್
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ
ನೋಟೀಸ್ ಹಿಂಪಡೆಯಲು ಸಿದ್ದರಾಮಯ್ಯ ಮೌಖಿಕ ಆದೇಶ ನೀಡಿದ್ದಾರೆ: ರೆಡ್ಡಿ