2. ಖನಿಜಗಳು: ನಮ್ಮ ದೇಹಕ್ಕೆ ಅಗತ್ಯವಿರುವ ಪ್ರಮುಖ ಖನಿಜಾಂಶಗಳೆಂದರೆ, ಮೆಗ್ನೀಸಿಯಮ್, ಕ್ಯಾಲ್ಸಿಯಂ, ರಂಜಕ, ಸೋಡಿಯಂ, ಪೊಟ್ಯಾಸಿಯಮ್, ಕ್ಲೋರೈಡ್, ಐರನ್, ಜಿಂಕ್, ಅಯೋಡಿನ್ ಮುಂತಾದವು. ಇವು ನಮ್ಮ ದೇಹದ ನೀರಿನ ಮಟ್ಟವನ್ನು ಸಮತೋಲನಗೊಳಿಸಿ, ಆರೋಗ್ಯಕರ ಚರ್ಮ, ಕೂದಲು ಮತ್ತು ಉಗುರುಗಳನ್ನು ಕಾಪಾಡುತ್ತವೆ. ಮೂಳೆಯ ಆರೋಗ್ಯವನ್ನು ಸುಧಾರಿಸುತ್ತವೆ. ಮೂಳೆಗಳನ್ನು ಬಲಪಡಿಸಿ, ರಕ್ತ ಹೆಪ್ಪುಗಟ್ಟುವಿಕೆಗೆ ಸಹಾಯ ಮಾಡುತ್ತದೆ, ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ. ಸೀ ಫುಡ್, ಅಯೋಡಿಕರಿಸಿದ ಟೇಬಲ್ ಉಪ್ಪು, ಹಾಲು ಮತ್ತು ಇತರ ಡೈರಿ ಉತ್ಪನ್ನಗಳು, ಸೀಡ್ಸ್, ತರಕಾರಿಗಳು, ಹಸಿರು ಸೊಪ್ಪು, ಹಣ್ಣುಗಳು, ಚಿಕನ್ನಲ್ಲಿ ಖನಿಜಾಂಶಗಳಿವೆ.