Cancer Causing Chemicals In Car: ಕಾರಿನಲ್ಲಿ ಹೆಚ್ಚು ಸುತ್ತಾಡಬೇಡಿ ಕ್ಯಾನ್ಸರ್ ಬರಬಹುದು ಎಚ್ಚರ!

| Updated By: ಅಕ್ಷಯ್​ ಪಲ್ಲಮಜಲು​​

Updated on: May 11, 2024 | 3:26 PM

ಕಾರು ಬಳಕೆಯು ಆರೋಗ್ಯವನ್ನು ಹಾಳುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಈ ವಿಷಯದಲ್ಲಿ ಒಂದು ಸಂಶೋಧನೆ ನಡೆಸಲಾಗಿದೆ. ಕಾರಿನಲ್ಲಿ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳಿವೆ ಎಂಬುದನ್ನು ಇದು ಬಹಿರಂಗಪಡಿಸಿದ್ದು, ಉಸಿರಾಟದ ಸಮಯದಲ್ಲಿ ಇವು ದೇಹವನ್ನು ಪ್ರವೇಶಿಸುತ್ತವೆ ಎಂದು ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

Cancer Causing Chemicals In Car: ಕಾರಿನಲ್ಲಿ ಹೆಚ್ಚು ಸುತ್ತಾಡಬೇಡಿ ಕ್ಯಾನ್ಸರ್ ಬರಬಹುದು ಎಚ್ಚರ!
Follow us on

ಕಳೆದ ದಶಕದಲ್ಲಿ ಕಾರು ಖರೀದಿಸುವವರ ಸಂಖ್ಯೆ ವೇಗವಾಗಿ ಹೆಚ್ಚಾಗಿದೆ. ಆದರೆ ಕಾರು ಬಳಕೆಯು ಆರೋಗ್ಯವನ್ನು ಹಾಳುಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಹೌದು, ಈ ವಿಷಯದಲ್ಲಿ ಒಂದು ಸಂಶೋಧನೆ ನಡೆಸಲಾಗಿದೆ. ಕಾರಿನಲ್ಲಿ ಕ್ಯಾನ್ಸರ್ ಉಂಟು ಮಾಡುವ ರಾಸಾಯನಿಕಗಳಿವೆ ಎಂಬುದನ್ನು ಇದು ಬಹಿರಂಗಪಡಿಸಿದ್ದು, ಉಸಿರಾಟದ ಸಮಯದಲ್ಲಿ ಇವು ದೇಹವನ್ನು ಪ್ರವೇಶಿಸುತ್ತವೆ ಎಂದು ಅಮೆರಿಕದ ಡ್ಯೂಕ್ ವಿಶ್ವವಿದ್ಯಾಲಯದ ಸಂಶೋಧಕರು ತಿಳಿಸಿದ್ದಾರೆ.

2015 ಮತ್ತು 2022 ರ ನಡುವಿನ 101 ಎಲೆಕ್ಟ್ರಿಕ್, ಗ್ಯಾಸ್ ಕಾರುಗಳಲ್ಲಿನ ಕ್ಯಾಬಿನ್ ಗಾಳಿಯನ್ನು ಈ ಸಂಶೋಧನೆ ಸ್ಟಡಿ ಮಾಡಿದೆ. ಇದರ ಪ್ರಕಾರ, 99% ಕಾರುಗಳು ಟಿಸಿಐಪಿಪಿ (TCIPP) ಎಂಬ ಜ್ವಾಲೆ ನಿವಾರಕ ಅಥವಾ ಬೆಂಕಿ ನಿರೋಧಕ (FIRE RETARDERS) ಗಳನ್ನು ಒಳಗೊಂಡಿದೆ ಎಂಬುದನ್ನು ಕಂಡು ಹಿಡಿದಿದ್ದಾರೆ. ಇದನ್ನು ಕಾರ್ಸಿನೋಜೆನಿಕ್ ಅಂದರೆ ಕ್ಯಾನ್ಸರ್​ಕಾರಕ ಎಂದು ಪರಿಗಣಿಸಲಾಗಿದ್ದು ಇವು ಉಸಿರಾಟದ ಮೂಲಕ ದೇಹದೊಳಗೆ ಸೇರಿಕೊಳ್ಳುತ್ತದೆ. ಬಳಿಕ ಇದು ಕ್ಯಾನ್ಸರ್​​ ಜೊತೆಗೆ ನರ ಸಂಬಂಧಿತ ಹಾಗೂ ಸಂತಾನೋತ್ಪತಿ ಸಮಸ್ಯೆಗಳಿಗೂ ಕಾರಣವಾಗಬಹುದು ಎಂದು ಅಂದಾಜಿಸಲಾಗಿದೆ.

ಸಂಶೋಧನೆ ಏನು ಹೇಳುತ್ತದೆ?

ಕಾರು ಬಳಕೆದಾರರು ಪ್ರತಿದಿನ ಸರಾಸರಿ ಒಂದು ಗಂಟೆ ಕಾರಿನಲ್ಲಿ ಕಳೆಯುತ್ತಾರೆ ಈ ಸಮಯದಲ್ಲಿ, ಕಾರಿನೊಳಗೆ ಬಳಕೆ ಮಾಡಿರುವ ಬೆಂಕಿ ನಿರೋಧಕಗಳು ಉಸಿರಾಟದ ಮೂಲಕ ದೇಹವನ್ನು ಪ್ರವೇಶಿಸುತ್ತವೆ. ಈ ರಾಸಾಯನಿಕಗಳಿಂದ ಕ್ಯಾನ್ಸರ್ ಅಪಾಯವು ಹೆಚ್ಚಾಗುತ್ತದೆ ಎಂದು ಸಂಶೋಧನೆ ಹೇಳಿದೆ.

ಇದನ್ನೂ ಓದಿ: ರಾಜ್ಯದಲ್ಲಿ ಹೆಚ್ಚಾಯ್ತು ವಾಂತಿ ಭೇದಿ ಪ್ರಕರಣ: ಬೆಂಗಳೂರಿನಲ್ಲಿ ಡಯೇರಿಯಾ, ಅತಿಸಾರ ಆರ್ಭಟ

ಭಾರತದಲ್ಲೂ ಅಪಾಯವಿದೆಯೇ?

ವಿದೇಶಗಳ ಕಾರಿನಲ್ಲಿ ಬೆಂಕಿ ನಿರೋಧಕ ಅಳವಡಿಸುವುದು ಕಡ್ಡಾಯವಾಗಿದೆ, ಸಣ್ಣ ಬೆಂಕಿಯನ್ನು ತಡೆಯಲು ಸಹ ಇದನ್ನು ಬಳಸಲಾಗುತ್ತದೆ ಎಂದು ತಜ್ಞರು ಹೇಳುತ್ತಾರೆ. ಆದರೆ ಇದು ಭಾರತದಲ್ಲಿ ಕಡ್ಡಾಯವಲ್ಲ ಮತ್ತು ಅಂತಹ ರಾಸಾಯನಿಕಗಳ ಪೂರೈಕೆ ನಮ್ಮಲ್ಲಿ ತುಂಬಾ ಕಡಿಮೆ. ಹಾಗಾಗಿ ಇದಕ್ಕೆ ಹೆದರಬೇಕಾದ ಅವಶ್ಯಕತೆ ತೀರಾ ಕಡಿಮೆ. ಆದರೆ ಕಾರು ಕಂಪನಿಗಳು ಈ ಬಗ್ಗೆ ಮುನ್ನೆಚ್ಚರಿಕೆ ವಹಿಸಿ ಪ್ರಯಾಣಿಕರ ಪ್ರಾಣ ಕಾಪಾಡಬೇಕಾಗಿದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ