AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ICMR Dietary Guidelines Part 2 : ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಏನು ತಿನ್ನಬೇಕು, ತಿನ್ನಬಾರದು?

ಒಂದು ಹೆಣ್ಣು ಗರ್ಭಿಣಿಯಾಗಿ ಮಗುವಿಗೆ ಜನ್ಮ ನೀಡುವುದು ಸುಲಭದ ಮಾತಲ್ಲ. ಹೆಣ್ಣಿನ ಪಾಲಿಗದು ಮರುಜನ್ಮ. ಗರ್ಭ ಧರಿಸಿದ ಮೊದಲನೇ ತಿಂಗಳಿನಿಂದ ಒಂಬತ್ತನೇ ತಿಂಗಳವರೆಗೆ ದೇಹದಲ್ಲಿ ನಾನಾ ರೀತಿಯ ಬದಲಾವಣೆಗಳಾಗುತ್ತವೆ. ಇದೀಗ ಆರೋಗ್ಯವಂತ ಮಗುವನ್ನು ಪಡೆಯಲು ಗರ್ಭಿಣಿ ಮಹಿಳೆಯು ಆಹಾರದ ಬಗ್ಗೆ ಹೆಚ್ಚು ಗಮನ ನೀಡಬೇಕೆಂದು ನ್ಯಾಷನಲ್ ಇನ್‌ಸ್ಟಿಟ್ಯೂಟ್ ಆಫ್ ನ್ಯೂಟ್ರಿಷನ್, ಹೈದರಾಬಾದ್, ಭಾರತೀಯರಿಗೆ ಪರಿಷ್ಕೃತ ಆಹಾರ ಮಾರ್ಗಸೂಚಿಯಲ್ಲಿ ತಿಳಿಸಿದೆ.

ICMR Dietary Guidelines Part  2 : ಗರ್ಭಿಣಿಯರ ಆಹಾರ ಕ್ರಮ ಹೇಗಿರಬೇಕು? ಏನು ತಿನ್ನಬೇಕು, ತಿನ್ನಬಾರದು?
ICMR Dietary Guidelines
ಸಾಯಿನಂದಾ
| Edited By: |

Updated on: May 12, 2024 | 11:19 AM

Share

ಇಂದಿನ ಜೀವನ ಶೈಲಿ ಹಾಗೂ ಆಹಾರ ಪದ್ಧತಿಯಲ್ಲಾಗುವ ಬದಲಾವಣೆಗಳಿಂದ ಗರ್ಭ ಧರಿಸಿದ ಮಹಿಳೆಯರಲ್ಲಿ ಆರೋಗ್ಯ ಸಮಸ್ಯೆಗಳು ಕಾಣಿಸಿಕೊಳ್ಳುತ್ತಿವೆ. ಗರ್ಭಿಣಿಯಾದ ಮಹಿಳೆಯು ಆಹಾರಗಳ ಸೇವನೆಯಲ್ಲಿ ಎಷ್ಟು ಜಾಗರೂಕರಾಗಿದ್ದರೂ ಸಾಲದು. ಗರ್ಭಿಣಿ ಮಹಿಳೆಯರ ಆಹಾರ ಕ್ರಮಗಳ ಬಗ್ಗೆ ತಜ್ಞರಾದ ವೈದ್ಯೆ ಡಾ| ಹೇಮಲತಾ ಆರ್‌. ಅವರ ನೇತೃತ್ವದಲ್ಲಿ ರಚಿಸಲಾದ ಆಹಾರ ಮಾರ್ಗಸೂಚಿಯಲ್ಲಿ ಅಗತ್ಯ ವಿಷಯಗಳನ್ನು ತಿಳಿಸಲಾಗಿದೆ. ಈ ಆಹಾರ ಮಾರ್ಗ ಸೂಚಿಯಲ್ಲಿ 17 ಸಲಹೆಗಳನ್ನು ಒಳಗೊಂಡಿದ್ದು, ಎರಡನೇ ಸಲಹೆಯಲ್ಲಿ ಗರ್ಭಿಣಿ ಮಹಿಳೆಯರ ಆಹಾರ ಕ್ರಮಗಳ ಹೇಗಿರಬೇಕು ಎನ್ನುವುದನ್ನು ಉಲ್ಲೇಖಿಸಲಾಗಿದೆ.

ಗರ್ಭಿಣಿ ಮಹಿಳೆಯರು ಈ ಆಹಾರಗಳನ್ನು ಸೇವಿಸಿ:

ತಾಯಿ ಹಾಗೂ ಗರ್ಭದಲ್ಲಿ ಬೆಳೆಯುತ್ತಿರುವ ಮಗು ಆರೋಗ್ಯವಂತರಾಗಿಬೇಕಾದರೆ ಹಸಿರು ಎಲೆಗಳ ತರಕಾರಿಗಳು, ಹಣ್ಣುಗಳು ಮಾಂಸಾಹಾರ, ವಿವಿಧ ಕಾಳುಗಳು ಸೇವಿಸುವುದು ಉತ್ತಮ. ಹಾಲಿನಲ್ಲಿ ಕ್ಯಾಲ್ಶಿಯಂ ಹೇರಳವಾಗಿದ್ದು, ನಿಯಮಿತವಾಗಿ ಹಾಲು ಸೇವಿಸುವುದು ಒಳ್ಳೆಯದು 2ನೇ ಟ್ರೈಮಿಸ್ಟರ್​ನಲ್ಲಿ ದಿನಕ್ಕೆ 200 ಕ್ಯಾಲೋರಿ ಆಹಾರ ಹಾಗೂ ಮೂರನೇ ಟ್ರೈಮಿಸ್ಟರ್​ನಲ್ಲಿ ಇದನ್ನ 400 ಕ್ಯಾಲೋರಿಯನನ್ನು ಸೇವಿಸುವುದು ಮಗುವಿನ ಬೆಳವಣಿಗೆಗೆ ಪೂರಕವಾಗಿದೆ. ಆದರೆ ಗರ್ಭಿಣಿ ಮಹಿಳೆಯರು ಸೂರ್ಯನ ಬೆಳಕಿಗೆ ಒಡ್ಡಿಕೊಳ್ಳುವುದರಿಂದ ವಿಟಮಿನ್ ಡಿ ಅಂಶವು ದೇಹಕ್ಕೆ ಪ್ರಯೋಜನಕಾರಿಯಾಗಿದೆ. ದಿನಕ್ಕೆ ಅರ್ಧ ಗಂಟೆಗಳ ಕಾಲ ವಾಕ್​ ಹಾಗೂ ವ್ಯಾಯಾಮ ಮಾಡುವುದು ಒಳ್ಳೆಯದು ಎನ್ನಲಾಗಿದೆ.

ಗರ್ಭದಲ್ಲಿರುವ ಮಗುವಿಗೆ ಈ ಆಹಾರವು ಒಳ್ಳೆಯದಲ್ಲ:

ಗರ್ಭಿಣಿ ಮಹಿಳೆಯರು ಸಂಸ್ಕರಿಸಿದ ಆಹಾರದಿಂದ ದೂರ ಉಳಿಯುವುದು ಆರೋಗ್ಯದ ದೃಷ್ಟಿಯಿಂದ ಹಿತಕರ. ಈ ಆಹಾರದಲ್ಲಿ ಕೊಬ್ಬು, ಸಕ್ಕರೆ ಮತ್ತು ಉಪ್ಪು ಅಧಿಕವಾಗಿರುವ ಕಾರಣ ಗರ್ಭದಲ್ಲಿರುವ ಬೆಳೆಯುತ್ತಿರುವ ಭ್ರೂಣದ ಬೆಳವಣಿಗೆ ಹಾನಿಯುಂಟು ಮಾಡುತ್ತವೆ. ಅಪೌಷ್ಟಿಕತೆಯಿರುವ ಹಾಗೂ ತೂಕ ಕಡಿಮೆಯಿರುವ ಮಹಿಳೆಯರು ಗರ್ಭಾವಸ್ಥೆಯಲ್ಲಿ ಕಡಿಮೆ ಜನನ ತೂಕವನ್ನು ಹೊಂದಿರುವ ಇಲ್ಲವಾದರೆ ಪ್ರಸವಪೂರ್ವ ಶಿಶುಗಳಿಗೆ ಜನ್ಮ ನೀಡುವ ಸಾಧ್ಯತೆಯೇ ಅಧಿಕವಾಗಿರುತ್ತದೆ. ಸಂಸ್ಕರಿಸಿದ ಆಹಾರಗಳ ಜೊತೆಗೆ ಧೂಮಪಾನ ಮತ್ತು ಮದ್ಯಪಾನವನ್ನು ಮಾಡಬಾರದು. ಗರ್ಭಾವಸ್ಥೆಯ ಮಧುಮೇಹವಿದ್ದರೆ ಸಕ್ಕರೆ ಅಂಶಯುಕ್ತ ಆಹಾರ ಸೇವನೆ ಮಾಡಬಾರದು. ಅತಿಯಾದ ಡಯಟ್ ಮಾಡುವುದು ಒಳ್ಳೆಯದಲ್ಲ. ಮಗುವಿನ ಆರೋಗ್ಯದ ಮೇಲೆ ಪರಿಣಾಮವನ್ನು ಬೀರುತ್ತದೆ ಎಂದು ಮಾರ್ಗಸೂಚಿನಲ್ಲಿ ತಿಳಿಸಲಾಗಿದೆ.

ಇದನ್ನೂ ಓದಿ: ನೀರು ಕುಡಿಯುವುದನ್ನು ಮರೆತು ಬಿಡುತ್ತೀರಾ? ಈ ಟಿಪ್ಸ್ ಪಾಲಿಸಿ

ಈ ಅಭ್ಯಾಸವಿದ್ದರೆ ನಿಲ್ಲಿಸಿ ಬಿಡಿ :

ಅಧಿಕ ರಕ್ತದೊತ್ತಡ ಹಾಗೂ ಮಧುಮೇಹ ಸಮಸ್ಯೆಯಿದ್ದರೆ ಗರ್ಭಾವಸ್ಥೆಯಲ್ಲಿ ತೂಕ ಇಳಿಕೆಯ ಕೆಲಸಕ್ಕೆ ಕೈ ಹಾಕಬಾರದು. ಒಂದು ವೇಳೆ ತೂಕ ಇಳಿಕೆಯತ್ತ ಗಮನ ಹರಿಸಿದರೆ ಹುಟ್ಟುವ ಮಕ್ಕಳು ಮಧುಮೇಹ ಸಮಸ್ಯೆ ಇಲ್ಲವಾದರೆ ಸ್ಥೂಲಕಾಯದ ಸಮಸ್ಯೆಗೆ ಒಳಗಾಗುವ ಸಾಧ್ಯತೆಯೇ ಹೆಚ್ಚು. ಹೀಗಾಗಿ ಸಮತೋಲಿತ ಆಹಾರ ಸೇವನೆಗಳ ಜೊತೆಗೆ ಸಕ್ಕರೆ ಅಂಶ ಹಾಗೂ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವ ಆಹಾರ ಸೇವನೆಯತ್ತ ಗಮನ ಕೊಡುವುದು ಒಳ್ಳೆಯದು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸಾಯಿನಂದಾ
ಸಾಯಿನಂದಾ

ಮೂಲತಃ ಉಡುಪಿಯವರು. ಪ್ರತಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿದ್ದಾರೆ. ಪ್ರತಿಷ್ಠಿತ ಕಾಲೇಜುಗಳಲ್ಲಿ ಉಪನ್ಯಾಸಕಿಯಾಗಿ ಕೆಲಸ ಮಾಡಿದ ಅನುಭವ ಇದೆ. ಪ್ರಾರಂಭದಿಂದಲೂ ಬರವಣಿಗೆಯಲ್ಲಿ ಒಲವು ಹೆಚ್ಚಿರುವ ಇವರು ಕರ್ನಾಟಕ ಟೈಮ್ ವೆಬ್ ಸೈಟ್ ನಲ್ಲಿ ಕೆಲಸ ಮಾಡಿದ ಅನುಭವವಿದೆ. ಬಿಡುವು ಸಿಕ್ಕಾಗಲೆಲ್ಲಾ ಸಿನಿಮಾ ನೋಡುವುದು ಹಾಗೂ ಓದುವುದು ಇವರ ಹವ್ಯಾಸ

Read More
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ಕಣ್ಣು ಆಪರೇಷನ್​​ಗೆ ಕರೆದು ಕೇವಲ ಅನಸ್ತೇಷಿಯಾ ಕೊಟ್ಟು ಕಳುಹಿಸಿದ್ರು!
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ತಾಂಡವ್ ಕ್ಯಾಪ್ಟನ್ ಆದ್ರೆ ಪ್ರಶಾಂತ್​​ಗೆ ಸಂಕಷ್ಟ: ವಿಡಿಯೋ ನೋಡಿ
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ದಸರಾದಲ್ಲಿ ಸಚಿವರನ್ನ ತಡೆದ ಮಹತ್ವದ ಬೆಳವಣಿಗೆ: ಸಿಎಂ ಭೇಟಿಯಾದ ಐಪಿಎಸ್
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ಮತದಾನ ಕೇಂದ್ರದ ಬಳಿಯೇ ಸಚಿವರ ಕಾಲಿಗೆ ನಮಸ್ಕರಿಸಿದ ಬಿಜೆಪಿ ಆಭ್ಯರ್ಥಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ದೊಡ್ಡಬಳ್ಳಾಪುರದ ತೂಬಗೆರೆಯಲ್ಲಿ ಕಂಪಿಸಿದ ಭೂಮಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!