Drinking Water : ನೀರು ಕುಡಿಯುವುದನ್ನು ಮರೆತು ಬಿಡುತ್ತೀರಾ? ಈ ಟಿಪ್ಸ್ ಪಾಲಿಸಿ
ಬೇಸಿಗೆಯ ಧಗೆಯು ಜೋರಾಗಿದೆ. ಸೂರ್ಯನ ಸುಡು ಬಿಸಿಲಿನ ನಡುವೆ ದೇಹವು ನಿರ್ಜಲೀಕರಣಕ್ಕೆ ಒಳಗಾಗುತ್ತದೆ. ಹೀಗಾಗಿ ದಿನಕ್ಕೆ ಇಂತಿಷ್ಟು ನೀರು ಕುಡಿಯುವುದು ಅಗತ್ಯ. ಕೆಲವರು ಏನೇ ಹೇಳಿದರೂ ನೀರು ಕುಡಿಯುವುದು ಕಡಿಮೆಯೇ. ಬಾಯಾರಿಕೆಯಾದಾಗ ಮಾತ್ರ ನೀರು ಕುಡಿಯುತ್ತಾರೆ. ಆದರೆ ನಿಮ್ಮ ದೇಹವು ಸರಿಯಾಗಿ ಕಾರ್ಯನಿರ್ವಹಿಸಬೇಕಕಾದರೆ ನೀರು ಕುಡಿಯುವುದು ಅಗತ್ಯ. ಆದರೆ ಈ ನೀರು ಕುಡಿಯುವುದು ಮರೆತು ಹೋದರೆ ಈ ಟಿಪ್ಸ್ ಪಾಲಿಸಿ ನೋಡಿ.
ಈಗಿನ ಕಾಲದಲ್ಲಿ ಆರೋಗ್ಯವಂತರಾಗಿ ಬಿಟ್ಟರೆ ಅದಕ್ಕಿಂತ ಮಿಗಿಲಾದ ಸಂಪತ್ತು ಮತ್ತೊಂದಿಲ್ಲ. ಆರೋಗ್ಯವಾಗಿರಬೇಕಾದರೆ ಪೌಷ್ಟಿಕಾಂಶಯುಕ್ತ ಆಹಾರ ಹಾಗೂ ಸರಿಯಾದ ನಿದ್ದೆಯು ಎಷ್ಟು ಮುಖ್ಯವೋ, ದೇಹಕ್ಕೆ ನೀರು ಕೂಡ ಅಷ್ಟೇ ಅಗತ್ಯ. ನೀರು ಕುಡಿಯುವ ಪ್ರಮಾಣವು ಕಡಿಮೆಯಾದರೆ ದೇಹವು ನಿರ್ಜಲೀಕರಣಕ್ಕೆ ಒಳಗಾಗಿ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆಯು ಅಧಿಕ. ಹೀಗಾಗಿ ನೀರು ಕಡಿಮೆ ಕುಡಿದರೂ ತೊಂದರೆಯೇ, ಹೆಚ್ಚಾದರೆ ಅಡ್ಡಪರಿಣಾಮಗಳೇ ಹೆಚ್ಚು. ಹೀಗಾಗಿ ದಿನಕ್ಕೆ ಇತಿಮಿತಿಯಲ್ಲಿ ನೀರು ಕುಡಿಯುವ ಅಭ್ಯಾಸ ಬೆಳೆಸಿಕೊಂಡರೆ ಆರೋಗ್ಯಕ್ಕೆ ಹಿತಕರ.
* ಮನೆಯಿಂದ ಹೊರಗಡೆ ಹೋಗುವಾಗ ನಿಮ್ಮ ಬ್ಯಾಗ್ ನಲ್ಲಿ ನೀರಿನ ಬಾಟಲ್ ಇಟ್ಟುಕೊಳ್ಳುವುದು ಮರೆಯದಿರಿ. ಈ ಅಭ್ಯಾಸದಿಂದ ಆಗಾಗ ನೀರು ಕುಡಿಯಲು ನೆನಪಾಗುತ್ತದೆ.
* ಬಾಯಾರಿಕೆಯಾಗದೇ ಇದ್ದರೂ ನೀರು ಕುಡಿಯುತ್ತಿರಬೇಕಾದರೆ ಫೋನ್ ನಲ್ಲಿ ಅಲರಂ ಅನ್ನು ಸೆಟ್ ಮಾಡಿಕೊಳ್ಳುವುದು ಒಳ್ಳೆಯದು.
* ಬೆಳಿಗ್ಗೆ ಎದ್ದಾಗ, ಊಟಕ್ಕೆ ಅರ್ಧ ಗಂಟೆ ಮೊದಲು, ಊಟವಾದ ಅರ್ಧ ಗಂಟೆ ನಂತರ ನೀರನ್ನು ಕುಡಿಯುವ ಅಭ್ಯಾಸವಿರಲಿ.
ಇದನ್ನೂ ಓದಿ: ವೆಸ್ಟ್ ನೈಲ್ ಜ್ವರದ ಲಕ್ಷಣಗಳೇನು?; ಇದನ್ನು ತಡೆಗಟ್ಟೋದು ಹೇಗೆ?
* ನೀರಿನ ಬದಲಿಗೆ ನಿಂಬೆ ಅಥವಾ ಪುದೀನಾ ಮಿಶ್ರಿತ ಜ್ಯೂಸ್ ಕುಡಿಯಲು ಬಹುದು. ಹೀಗೆ ಮಾಡುವುದರಿಂದ ಈ ಜ್ಯೂಸ್ ಕುಡಿಯುವುದಕ್ಕೂ ಮನಸ್ಸಾಗುತ್ತದೆ. ಅಗತ್ಯವಿರುವಷ್ಟು ನೀರು ದೇಹಕ್ಕೆ ಸೇರುತ್ತದೆ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ