ನುಂಗಲು ಕಷ್ಟವಾಗುತ್ತಿದ್ದರೆ ನಿರ್ಲಕ್ಷ್ಯ ಬೇಡ; ಕ್ಯಾನ್ಸರ್ ಲಕ್ಷಣವೂ ಇದ್ದೀತು ಜೋಪಾನ!

|

Updated on: Mar 25, 2024 | 4:55 PM

ನೀವು ಆಹಾರವನ್ನು ನುಂಗಲು ಯಾವಾಗಲೂ ತೊಂದರೆಪಡುತ್ತಿದ್ದರೆ ಅಥವಾ ನಿಮ್ಮ ಗಂಟಲಿನಲ್ಲಿ ನೋವು ಉಂಟಾಗುತ್ತಿದ್ದರೆ ಅದನ್ನು ನಿರ್ಲಕ್ಷ್ಯ ಮಾಡಬೇಡಿ. ಈ ರೋಗಲಕ್ಷಣಗಳನ್ನು ನೀವು ಎಂದಿಗೂ ನಿರ್ಲಕ್ಷಿಸಬಾರದು. ಏಕೆಂದರೆ ಅದು ಗಂಟಲು ಕ್ಯಾನ್ಸರ್‌ನಂತಹ ಮಾರಣಾಂತಿಕ ಕಾಯಿಲೆಗಳ ಲಕ್ಷಣಗಳೂ ಆಗಿರಬಹುದು. ಹೀಗಾಗಿ, ಈ ಕೆಳಗಿನ ಲಕ್ಷಣಗಳು ಉಂಟಾಗಿದ್ದರೆ ತಕ್ಷಣ ವೈದ್ಯರನ್ನು ಭೇಟಿಯಾಗಲು ಮರೆಯಬೇಡಿ.

ನುಂಗಲು ಕಷ್ಟವಾಗುತ್ತಿದ್ದರೆ ನಿರ್ಲಕ್ಷ್ಯ ಬೇಡ; ಕ್ಯಾನ್ಸರ್ ಲಕ್ಷಣವೂ ಇದ್ದೀತು ಜೋಪಾನ!
ಗಂಟಲಿನಲ್ಲಿ ನೋವು
Follow us on

ಕೆಲವರಿಗೆ ಪದೇಪದೆ ಗಂಟಲಿನಲ್ಲಿ ಗೆಡ್ಡೆಯಂತಹ ವಸ್ತು ಬೆಳೆಯುತ್ತದೆ, ಎಂಜಲು ನುಂಗಲು ಪರದಾಡುತ್ತಾರೆ. ಇಂತಹ ಲಕ್ಷಣಗಳು ಶೀತ, ಜ್ವರದಿಂದ ಉಂಟಾಗಿರಬಹುದು ಎಂದು ಬಹುತೇಕರು ನಿರ್ಲಕ್ಷ್ಯ ಮಾಡುತ್ತಾರೆ. ಆದರೆ, ಈ ಲಕ್ಷಣಗಳನ್ನು ಸುಲಭವಾಗಿ ನಿರ್ಲಕ್ಷ್ಯ ಮಾಡುವಂತಿಲ್ಲ. ಏಕೆಂದರೆ, ಇದು ಗಂಟಲು ಕ್ಯಾನ್ಸರ್​​ನ ಲಕ್ಷಣವೂ ಆಗಿರಬಹುದು! ಅಮೆರಿಕನ್ ಕ್ಯಾನ್ಸರ್ ಸೊಸೈಟಿಯ ಪ್ರಕಾರ, ಲಾರಿಂಜಿಯಲ್ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ಜೀವಿತಾವಧಿಯ ಅಪಾಯವು ಪುರುಷರಲ್ಲಿ 200ರಲ್ಲಿ 1 ಮತ್ತು ಮಹಿಳೆಯರಿಗೆ 840ರಲ್ಲಿ 1 ಆಗಿದೆ. ಲಾರಿಂಜಿಯಲ್ ಕ್ಯಾನ್ಸರ್ ಎಂದೂ ಕರೆಯಲ್ಪಡುವ ಈ ಗಂಟಲಿನ ಕ್ಯಾನ್ಸರ್ ಎಂಬ ಮಾರಣಾಂತಿಕ ರೋಗವು ಪ್ರತಿ ವರ್ಷ ಶೇ. 2-3ರಷ್ಟು ಹೆಚ್ಚಾಗುತ್ತಿದೆ.

ಗಂಟಲು ಕ್ಯಾನ್ಸರ್ ಎಂದರೇನು?:

ಗಂಟಲಿನ ಕ್ಯಾನ್ಸರ್ ನಿಮ್ಮ ಗಂಟಲಿನ ಒಂದು ಅಥವಾ ಹೆಚ್ಚಿನ ಭಾಗಗಳ ಮೇಲೆ ಪರಿಣಾಮ ಬೀರುತ್ತದೆ. ತಜ್ಞರ ಪ್ರಕಾರ, ಸಾಮಾನ್ಯವಾಗಿ ಗಂಟಲು ಕ್ಯಾನ್ಸರ್ ಹೊಂದಿರುವ ಜನರು ತಮ್ಮ ಗಂಟಲು ಅಥವಾ ಓರೊಫಾರ್ನೆಕ್ಸ್‌ನಲ್ಲಿ ಕ್ಯಾನ್ಸರ್ ಹೊಂದಿರುತ್ತಾರೆ. ಅವರ ಗಂಟಲಿನ ಮಧ್ಯ ಭಾಗದಲ್ಲಿ ಈ ಕ್ಯಾನ್ಸರ್ ಉಂಟಾಗುತ್ತದೆ. ಗಂಟಲಿನ ಕ್ಯಾನ್ಸರ್​ಗೆ ಚಿಕಿತ್ಸೆ ನೀಡಲು ವೈದ್ಯರು ಸಾಮಾನ್ಯವಾಗಿ ಶಸ್ತ್ರಚಿಕಿತ್ಸೆಯನ್ನು ಮಾಡುತ್ತಾರೆ.

ಇದನ್ನೂ ಓದಿ: Brain Cancer: ವಿಪರೀತ ಬಾಯಾರಿಕೆ ಮೆದುಳಿನ ಕ್ಯಾನ್ಸರ್ ಲಕ್ಷಣವೂ ಆಗಿರಬಹುದು ಎಚ್ಚರ!

ಗಂಟಲಿನ ಕ್ಯಾನ್ಸರ್​ನ ಲಕ್ಷಣಗಳು:

ಗಂಟಲಿನ ಕ್ಯಾನ್ಸರ್‌ನ ಲಕ್ಷಣಗಳು ಗೆಡ್ಡೆಯ ಸ್ಥಳವನ್ನು ಅವಲಂಬಿಸಿ ಬದಲಾಗುತ್ತವೆ. ಆದರೆ, ಗಂಟಲಿನ ಕ್ಯಾನ್ಸರ್​ನ ಸಾಮಾನ್ಯ ಲಕ್ಷಣಗಳು ಈ ಕೆಳಗಿನಂತಿರಬಹುದು….

ನಿಮ್ಮ ಗಂಟಲಿನಲ್ಲಿ ಗೆಡ್ಡೆ:

ನಿಮ್ಮ ಗಂಟಲಿನಲ್ಲಿ ಗೆಡ್ಡೆ ಉಂಟಾಗಬಹುದು. ವೈದ್ಯರ ಪ್ರಕಾರ, ಒಂದು ಅಥವಾ ಹೆಚ್ಚಿನ ದುಗ್ಧರಸ ಗ್ರಂಥಿಗಳಲ್ಲಿ ಊತವು ಗಂಟಲಿನ ಕ್ಯಾನ್ಸರ್​ನ ಸಾಮಾನ್ಯ ಲಕ್ಷಣವಾಗಿದೆ. ಅದರ ಜೊತೆಗೆ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಲಕ್ಷಣವೂ ಇದಾಗಿರಬಹುದು. ಕ್ಯಾನ್ಸರ್ ಸಾಮಾನ್ಯವಾಗಿ ಗೆಡ್ಡೆಯನ್ನು ರೂಪಿಸುತ್ತದೆ, ಅದು ನಿಧಾನವಾಗಿ ದೊಡ್ಡದಾಗುತ್ತದೆ.

ನುಂಗಲು ತೊಂದರೆ:

ಗಂಟಲಿನ ಕ್ಯಾನ್ಸರ್ ಕೂಡ ಸ್ವಲ್ಪ ಅಥವಾ ತೀವ್ರವಾದ ನೋವು ಉಂಟುಮಾಡುತ್ತದೆ. ಆಹಾರವನ್ನು ಅಗಿಯುವಾಗ ಮತ್ತು ನುಂಗುವಾಗ ಸುಡುವ ಸಂವೇದನೆಯನ್ನು ಉಂಟುಮಾಡುತ್ತದೆ. ಆಹಾರವು ಕೆಲವೊಮ್ಮೆ ನಿಮ್ಮ ಗಂಟಲಿಗೆ ಅಂಟಿಕೊಳ್ಳಬಹುದು.

ಗಂಟಲು ಕೆರೆತ:

ನಿಮ್ಮ ಗಂಟಲಿನಲ್ಲಿ ಶುರುವಾದ ನೋವು ಅಥವಾ ಅಸ್ವಸ್ಥತೆ ವಾಸಿಯಾಗದಿದ್ದರೆ ಅದು ಗಂಟಲಿನ ಕ್ಯಾನ್ಸರ್‌ನ ಸಾಮಾನ್ಯ ಲಕ್ಷಣಗಳಲ್ಲಿ ಒಂದಾಗಿರಬಹುದು.

ನಿಮ್ಮ ಧ್ವನಿಯಲ್ಲಿ ಬದಲಾವಣೆ:

ಗಂಟಲಿನ ಕ್ಯಾನ್ಸರ್‌ನ ಪ್ರಮುಖ ಲಕ್ಷಣವೆಂದರೆ, ಧ್ವನಿಯಲ್ಲಿನ ಬದಲಾವಣೆ. ಧ್ವನಿಯಲ್ಲಿ ಸ್ವಲ್ಪ ವ್ಯತ್ಯಾಸವನ್ನು ನೀವು ಗಮನಿಸಬಹುದು. ನೀವು ಯಾವಾಗಲೂ ಶೀತವನ್ನು ಹೊಂದಿರುವಂತೆ ಧ್ವನಿಸಬಹುದು. ನಿಮ್ಮ ಕೆಲವು ಪದಗಳನ್ನು ನೀವು ಅಸ್ಪಷ್ಟಗೊಳಿಸಬಹುದು ಅಥವಾ ಕೆಲವು ಶಬ್ದಗಳನ್ನು ಉಚ್ಚರಿಸುವಲ್ಲಿ ತೊಂದರೆ ಹೊಂದಬಹುದು.

ಇದನ್ನೂ ಓದಿ: Blood Cancer: ನಿಮಗೆ ರಕ್ತದ ಕ್ಯಾನ್ಸರ್​ ಉಂಟಾಗಿರುವ 7 ಲಕ್ಷಣಗಳಿವು

ನಿಮ್ಮ ನಾಲಿಗೆಯಲ್ಲಿ ಕೆಲವು ಬಿಳಿ ತೇಪೆಗಳನ್ನು ನೀವು ಗಮನಿಸಬಹುದು. ಅವುಗಳು ಯಾವುದೇ ನೋವನ್ನು ಉಂಟುಮಾಡದಿದ್ದರೂ ಸಹ ದೀರ್ಘಕಾಲದವರೆಗೂ ಹಾಗೇ ಇರುತ್ತವೆ.

ಗಂಟಲಿನ ಕ್ಯಾನ್ಸರ್​ಗೆ ಕಾರಣವೇನು?:

ನಿಮ್ಮ ಗಂಟಲಿನ ಜೀವಕೋಶಗಳ ಆನುವಂಶಿಕ ರಚನೆಯಲ್ಲಿ ಏನಾದರೂ ಬದಲಾವಣೆಗಳನ್ನು ಉಂಟುಮಾಡಿದಾಗ ಗಂಟಲಿನ ಕ್ಯಾನ್ಸರ್ ಸಂಭವಿಸುತ್ತದೆ. ಈ ಬದಲಾವಣೆಯು ಆರೋಗ್ಯಕರ ಗಂಟಲಿನ ಕೋಶಗಳನ್ನು ಕ್ಯಾನ್ಸರ್ ಕೋಶಗಳಾಗಿ ಪರಿವರ್ತಿಸುತ್ತದೆ. ಅದು ಬೆಳೆಯುತ್ತಾ ಹೋಗುತ್ತದೆ. ಈ ಬದಲಾವಣೆಗೆ ಕಾರಣವೇನು ಎಂದು ಸಂಶೋಧಕರು ತನಿಖೆ ನಡೆಸುತ್ತಿದ್ದಾರೆ. ಗಂಟಲಿನ ಕ್ಯಾನ್ಸರ್​ಗೆ ಕಾರಣವಾಗುವ ಕೆಲವು ಸಾಮಾನ್ಯ ಅಂಶಗಳು ಇಲ್ಲಿವೆ…

  • ತಂಬಾಕು ಅಗಿಯುವುದು ಮತ್ತು ನಶ್ಯ ಸೇರಿದಂತೆ ತಂಬಾಕು ಉತ್ಪನ್ನಗಳನ್ನು ಸೇದುವುದು ಅಥವಾ ಬಳಸುವುದು ಗಂಟಲಿನ ಕ್ಯಾನ್ಸರ್ ಸೇರಿದಂತೆ ತಲೆ ಮತ್ತು ಕುತ್ತಿಗೆಯ ಕ್ಯಾನ್ಸರ್ ಅನ್ನು ಅಭಿವೃದ್ಧಿಪಡಿಸುವ ದೊಡ್ಡ ಅಪಾಯಕಾರಿ ಅಂಶವಾಗಿದೆ.
  • ಮಧ್ಯಮ ಪ್ರಮಾಣಕ್ಕಿಂತ ಹೆಚ್ಚು ಆಲ್ಕೋಹಾಲ್ ಕುಡಿಯುವುದು ಕೂಡ ಇದಕ್ಕೆ ಮತ್ತೊಂದು ಮುಖ್ಯ ಕಾರಣ.
  • ನೀವು ಹ್ಯೂಮನ್ ಪ್ಯಾಪಿಲೋಮವೈರಸ್ ಅಥವಾ HPV ಎಂಬ ಲೈಂಗಿಕವಾಗಿ ಹರಡುವ ಸೋಂಕಿಗೆ ಒಳಗಾಗಿದ್ದರೂ ಗಂಟಲು ಕ್ಯಾನ್ಸರ್ ಬರುವ ಅಪಾಯವಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ