AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Risks of Brain Stroke: ಈ ಕೆಟ್ಟ ಅಭ್ಯಾಸಗಳೆಲ್ಲ ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ, ವಿವರವಾಗಿ ತಿಳಿಯಿರಿ

ಈ ಅಭ್ಯಾಸಗಳನ್ನು ಹೊಂದಿರುವ ಜನರು ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೊಂದಿರುತ್ತಾರೆ! ತಕ್ಷಣ ನಿಲ್ಲಿಸದಿದ್ದರೆ ಅಪಾತ ಕಟ್ಟಿಟ್ಟಬುತ್ತಿ

Risks of Brain Stroke: ಈ ಕೆಟ್ಟ ಅಭ್ಯಾಸಗಳೆಲ್ಲ ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ, ವಿವರವಾಗಿ ತಿಳಿಯಿರಿ
ಈ ಕೆಟ್ಟ ಅಭ್ಯಾಸಗಳೆಲ್ಲ ಬ್ರೈನ್ ಸ್ಟ್ರೋಕ್ ಅಪಾಯವನ್ನು ಹೆಚ್ಚಿಸುತ್ತದೆ, ವಿವರವಾಗಿ ತಿಳಿಯಿರಿ
ಸಾಧು ಶ್ರೀನಾಥ್​
|

Updated on: Mar 25, 2024 | 2:29 PM

Share

ಇಂದಿನ ದಿನಗಳಲ್ಲಿ ಅನೇಕ ಜನರು ಬ್ರೈನ್ ಸ್ಟ್ರೋಕ್ ನಿಂದ ಬಳಲುತ್ತಿದ್ದಾರೆ. ಇದು ದೇಹದ ವಿವಿಧ ಭಾಗಗಳಲ್ಲಿ ಪಾರ್ಶ್ವವಾಯುವಿಗೆ ಕಾರಣವಾಗುತ್ತದೆ. ಆರೋಗ್ಯಕರ ಜೀವನಶೈಲಿಯಿಂದ ಈ ರೋಗವನ್ನು ತಡೆಗಟ್ಟಬಹುದು ಎಂದು ಆರೋಗ್ಯ ತಜ್ಞರು ಹೇಳುತ್ತಾರೆ. ಆದರೆ ಈ ಕೆಳಗಿನ ಅಭ್ಯಾಸಗಳು, ಆರೋಗ್ಯ ಸಮಸ್ಯೆ ಹೊಂದಿರುವವರಿಗೆ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು. ಇವುಗಳನ್ನು ತಕ್ಷಣವೇ ತಪ್ಪಿಸಬೇಕು ಎಂದು ತಜ್ಞರು ಎಚ್ಚರಿಸಿದ್ದಾರೆ.

ಅಧಿಕ ರಕ್ತದೊತ್ತಡ ಸಮಸ್ಯೆ ಇರುವವರಿಗೆ ಯಾವಾಗಲೂ ಬ್ರೈನ್ ಸ್ಟ್ರೋಕ್ ಬರುವ ಸಾಧ್ಯತೆ ಹೆಚ್ಚು. ಆದ್ದರಿಂದ ರಕ್ತದೊತ್ತಡವನ್ನು ನಿಯಂತ್ರಣದಲ್ಲಿಡಲು ಪ್ರಯತ್ನಿಸಿ.

ಧೂಮಪಾನದಂತಹ ದುಃಶ್ಚಟಗಳು ತುಂಬಾ ಅಪಾಯಕಾರಿ. ಧೂಮಪಾನಿಗಳು ಯಾವಾಗಲೂ ಈ ರೋಗಕ್ಕೆ ಗುರಿಯಾಗುತ್ತಾರೆ. ಅನಿಯಂತ್ರಿತ ಮದ್ಯಪಾನವು ಧೂಮಪಾನದಷ್ಟೇ ಅಪಾಯಕಾರಿ.

Also Read: Eye Sight – ಕಣ್ಣಿನ ದೃಷ್ಟಿ ಚುರುಕುಗೊಳಿಸಲು ಈ ಐದು ವಿಧಾನಗಳನ್ನು ಪಾಲಿಸಿ

ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರವನ್ನು ಹೆಚ್ಚಾಗಿ ಸೇವಿಸುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಹೆಚ್ಚು ಎಂದು ವೈದ್ಯರು ಹೇಳುತ್ತಾರೆ. ದೈಹಿಕವಾಗಿ ಕ್ರಿಯಾಶೀಲರಾಗಿಲ್ಲದವರಿಗೆ ಅಂದರೆ ದೈಹಿಕ ಚಲನವಲನ ಇಲ್ಲದೆ ಮಲಗಿ ಸಮಯ ಕಳೆಯುವವರಿಗೆ ಈ ಕಾಯಿಲೆ ಬರುವ ಸಾಧ್ಯತೆ ಇದೆ.

ಯಾವಾಗಲೂ ಒತ್ತಡದಲ್ಲಿರುವವರು ಮತ್ತು ಆಗಾಗ್ಗೆ ಚಿಂತೆ ಮಾಡುವವರು ಬ್ರೈನ್ ಸ್ಟ್ರೋಕ್‌ಗೆ ಗುರಿಯಾಗುತ್ತಾರೆ. ಮಧುಮೇಹ ನಿಯಂತ್ರಣದಲ್ಲಿಲ್ಲದವರೂ ಈ ಕಾಯಿಲೆಗೆ ತುತ್ತಾಗುತ್ತಾರೆ. ರಕ್ತದಲ್ಲಿ ಸಕ್ಕರೆ ಅಂಶ ಹೆಚ್ಚಿದ್ದರೆ ಈ ಕಾಯಿಲೆಗೆ ತುತ್ತಾಗುತ್ತಾರೆ.

ಆರೋಗ್ಯ ಸಂಬಂಧಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ