AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Eye Sight: ಕಣ್ಣಿನ ದೃಷ್ಟಿ ಚುರುಕುಗೊಳಿಸಲು ಈ ಐದು ವಿಧಾನಗಳನ್ನು ಪಾಲಿಸಿ

Tips to improve Eye Sight: ಕಣ್ಣುಗಳನ್ನು ಆರೋಗ್ಯವಾಗಿರಲು ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸುವುದು ಅವಶ್ಯಕ. ಕೆಳಗಿನ ಮನೆಮದ್ದುಗಳು ಮತ್ತು ಆಯುರ್ವೇದ ವಿಧಾನಗಳೊಂದಿಗೆ ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಿ.

Eye Sight: ಕಣ್ಣಿನ ದೃಷ್ಟಿ ಚುರುಕುಗೊಳಿಸಲು ಈ ಐದು ವಿಧಾನಗಳನ್ನು ಪಾಲಿಸಿ
ಕಣ್ಣಿನ ದೃಷ್ಟಿ ಚುರುಕುಗೊಳಿಸಲು ಈ ಐದು ವಿಧಾನಗಳನ್ನು ಪಾಲಿಸಿ
ಸಾಧು ಶ್ರೀನಾಥ್​
|

Updated on: Mar 25, 2024 | 2:00 PM

Share

ಕಣ್ಣುಗಳು ನಮ್ಮ ದೇಹದ ಪ್ರಮುಖ ಅಂಗಗಳಲ್ಲಿ ಒಂದಾಗಿದೆ. ದೃಷ್ಟಿ ಕಳೆದುಕೊಂಡರೆ ಈ ಜಗತ್ತು ಕತ್ತಲೆಯಾಗುತ್ತದೆ. ಬದುಕೂ ಕತ್ತಲೆಕತ್ತಲೆಯಾಗುತ್ತದೆ. ಅದಕ್ಕಾಗಿಯೇ ಈ ಅಂಗಗಳ ಬಗ್ಗೆ ಹೆಚ್ಚಿನ ಕಾಳಜಿ (Eye Sight) ವಹಿಸಬೇಕು. ಆದರೆ ಇಂದಿನ ಮೊಬೈಲ್-ಲ್ಯಾಪ್‌ಟಾಪ್ ಯುಗದಲ್ಲಿ.. ನಮ್ಮ ಕಣ್ಣುಗಳು ಹೆಚ್ಚಿನ ಸಮಯ ಈ ಸಾಧನಗಳಿಗೆ ಅಂಟಿಕೊಂಡಿರುತ್ತವೆ. ಈ ಅಭ್ಯಾಸವು ಕಣ್ಣುಗಳ ಮೇಲೆ ತೀವ್ರ ಪರಿಣಾಮ ಬೀರುತ್ತದೆ. ಜೊತೆಗೆ ಹಲವಾರು ದೈಹಿಕ ಸಮಸ್ಯೆಗಳು ಮತ್ತು ಅಲರ್ಜಿಯಂತಹ ಅಪಾಯಗಳೂ ಬರುತ್ತವೆ. ಇವೆಲ್ಲವುಗಳಿಂದ ಕಣ್ಣುಗಳು ಆರೋಗ್ಯವಾಗಿರಲು ಮತ್ತು ದೃಷ್ಟಿಯನ್ನು ಕಾಪಾಡಿಕೊಳ್ಳುವತ್ತ ಗಮನ ಹರಿಸುವುದು ಅವಶ್ಯಕ. ಕೆಳಗಿನ ಮನೆಮದ್ದುಗಳು ಮತ್ತು ಆಯುರ್ವೇದ ವಿಧಾನಗಳೊಂದಿಗೆ ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಿ. ನೇತ್ರ ಆಯುರ್ವೇದ (Ayurveda) ಕಣ್ಣಿನ ವಿಶೇಷ ಚಿಕಿತ್ಸಾಲಯದ ವೈದ್ಯರು (Health) ಸೂಚಿಸಿದ ಆಯುರ್ವೇದ ವಿಧಾನಗಳು ಇವು.

ಕಣ್ಣುಗಳು ಸಾಮಾನ್ಯವಾಗಿ ಇತರ ಭಾಗಗಳಿಗಿಂತ ಹೆಚ್ಚು ಸೂಕ್ಷ್ಮವಾಗಿರುತ್ತವೆ. ಅವುಗಳನ್ನು ಆರೋಗ್ಯವಾಗಿಡಲು.. ಅಂಜನಾ (ಕೊಲಾರಿಯಂ) ಅನ್ನು ಮೂಗಿನ ಹೊಳ್ಳೆಗಳ ಮೂಲಕ ತೆಗೆದುಕೊಳ್ಳಬೇಕು. ಕಣ್ಣುಗಳನ್ನು ರಕ್ಷಿಸಲು ಮತ್ತು ಕಫವನ್ನು ತೆಗೆದುಹಾಕಲು ಇದನ್ನು ಬಳಸಲಾಗುತ್ತದೆ.

ದೃಷ್ಟಿ ಸುಧಾರಿಸುವ ನಿಟ್ಟಿನಲ್ಲಿ ಕಾಲುಗಳ ಮಸಾಜ್ ಮಾಡುವುದು ಚೆನ್ನಾಗಿ ಕೆಲಸ ಮಾಡುತ್ತದೆ. ಆಯುರ್ವೇದ ಭಾಷೆಯಲ್ಲಿ ಇದನ್ನು ಪಾದಭಂಗ ಎನ್ನುತ್ತಾರೆ.

Also Read: ಪೋಷಕಾಂಶಗಳ ಗಣಿ: ಹಾಲಿನ ಉತ್ಪನ್ನಗಳ ಆರೋಗ್ಯಕಾರಿ ಪ್ರಯೋಜನಗಳು, ಸಮತೋಲಿತ ಆಹಾರಕ್ಕಾಗಿ ಅಗತ್ಯ ಡೈರಿ ಉತ್ಪನ್ನಗಳು

ಉತ್ತಮ ಕಣ್ಣಿನ ಆರೋಗ್ಯಕ್ಕೆ ಸಮತೋಲಿತ ಆಹಾರವು ಬಹಳ ಮುಖ್ಯ. ವಿಟಮಿನ್ ಎ, ಸಿ, ಇ, ಬಿ ಉತ್ತಮ ದೃಷ್ಟಿಯನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ. ನಿಮ್ಮ ಕಣ್ಣುಗಳನ್ನು ಆರೋಗ್ಯವಾಗಿಡಲು ಈ ವಿಟಮಿನ್‌ಗಳು ಸಮೃದ್ಧವಾಗಿರುವ ಆಹಾರವನ್ನು ಸೇವಿಸಿ.

ಹಿಂದಿನ ಕಾಲದಲ್ಲಿ ತ್ರಿಫಲಾವನ್ನು ದೃಷ್ಟಿ ಸುಧಾರಿಸಲು ಬಳಸಲಾಗುತ್ತಿತ್ತು. ತ್ರಿಫಲಾ ಹಲವಾರು ಕಣ್ಣಿನ ಸಮಸ್ಯೆಗಳನ್ನು ಪರಿಹರಿಸುವಲ್ಲಿ ಅದ್ಭುತಗಳನ್ನು ಮಾಡುತ್ತದೆ. ತ್ರಾಟಕ ಧ್ಯಾನ ಎಂಬ ಆಯುರ್ವೇದ ಅಭ್ಯಾಸವು ದೃಷ್ಟಿಯನ್ನು ಸುಧಾರಿಸುತ್ತದೆ. ಇದು ದೃಷ್ಟಿ ತೀಕ್ಷ್ಣಗೊಳಿಸಲು ಸಹಾಯ ಮಾಡುತ್ತದೆ. ತುಪ್ಪದ ದೀಪವನ್ನು ಹಚ್ಚಿ ಸ್ವಲ್ಪ ದೂರದಿಂದ ಒಂದು ದಿಕ್ಕಿನಲ್ಲಿ ಅತ್ತಿಂದಿತ್ತ ದೀಪದ ಜ್ವಾಲೆಯನ್ನು ನೋಡಿ. ಇದು ನಿಮ್ಮ ಕಣ್ಣುಗಳನ್ನು ಆರೋಗ್ಯಕರವಾಗಿರಿಸುತ್ತದೆ ಮತ್ತು ನಿಮ್ಮ ದೃಷ್ಟಿ ಸುಧಾರಿಸಲು ಸಹಾಯ ಮಾಡುತ್ತದೆ.

ಆರೋಗ್ಯ ಸಂಬಂಧಿ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಯಶಸ್ವಿ ಜೈಸ್ವಾಲ್ ಸ್ಫೋಟಕ ಸೆಂಚುರಿ: ಮುಂಬೈ ದಾಖಲೆಯ ರನ್ ಚೇಸ್​
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
ಮೊಟ್ಟೆಗಳಲ್ಲಿ ಕ್ಯಾನ್ಸರ್ ಕಾರಕ ಅಂಶ ಪತ್ತೆ?: ಭಾರಿ ಚರ್ಚೆ
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
‘ಮಾರ್ಕ್’ ಸಿನಿಮಾದಲ್ಲಿ ಹೀರೋಯಿನ್ ಇಲ್ಲ ಯಾಕೆ? ಉತ್ತರಿಸಿದ ಕಿಚ್ಚ ಸುದೀಪ್
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಚುನಾವಣೆಯಲ್ಲಿ ಸೋತಿದ್ದಕ್ಕೆ ಮೀಸೆ ಬೋಳಿಸಿಕೊಂಡ ಎಲ್‌ಡಿಎಫ್ ಕಾರ್ಯಕರ್ತ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಪಾಕ್ ವಿರುದ್ಧ ಫ್ಲಾಪ್: ಸುಲಭವಾಗಿ ಔಟಾದ ವೈಭವ್ ಸೂರ್ಯವಂಶಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ಶಾಲೆಯ ಬಳಿ ಸೆಕ್ಯುರಿಟಿಯ ಭುಜಕ್ಕೆ ಕಚ್ಚಿದ ಬೀದಿ ನಾಯಿ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ರೈಲಿನಲ್ಲಿ ಟಾಯ್ಲೆಟ್​ನಿಂದ ಹೊರಬರಲಾರದೆ ಪೊಲೀಸರಿಗೆ ಕರೆ ಮಾಡಿದ ಮಹಿಳೆ
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ನಕಲಿ ಪೊಲೀಸರಿಗೆ ಅಸಲಿ ಖಾಕಿ ಶಾಕ್​​: ದರೋಡೆಗಿಳಿದಿದ್ದ ಗ್ಯಾಂಗ್​​ ಅರೆಸ್ಟ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
ರಜತ್ ಪಾಪದ ಕೊಡ ತುಂಬಿದೆ, ಮನೆಯಿಂದ ಹೊರಗೆ ಕಳಿಸ್ತೀನಿ: ಗಿಲ್ಲಿ ಚಾಲೆಂಜ್
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು
Video: ತರಗತಿಯಲ್ಲಿ ಕುಳಿತಿದ್ದಾಗಲೇ ಹೃದಯಾಘಾತದಿಂದ ವಿದ್ಯಾರ್ಥಿನಿ ಸಾವು