Brain Cancer: ವಿಪರೀತ ಬಾಯಾರಿಕೆ ಮೆದುಳಿನ ಕ್ಯಾನ್ಸರ್ ಲಕ್ಷಣವೂ ಆಗಿರಬಹುದು ಎಚ್ಚರ!

ಬೇಸಿಗೆಯಲ್ಲಿ ಅತಿಯಾಗಿ ಬಾಯಾರಿಕೆ ಉಂಟಾಗುವುದು ಸಾಮಾನ್ಯ. ಈ ಸಮಯದಲ್ಲಿ ಎಷ್ಟು ನೀರು ಕುಡಿದರೂ ಒಳ್ಳೆಯದು. ಇಲ್ಲದಿದ್ದರೆ ನಿರ್ಜಲೀಕರಣ ಉಂಟಾಗಿ, ನಾನಾ ರೀತಿಯ ಬೇರೆ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಆದರೆ, ನಿಮಗೆ ವಿಪರೀತ ಬಾಯಾರಿಕೆ ಆಗುತ್ತಿದ್ದರೆ ಅದು ಕೆಲವೊಮ್ಮೆ ಅನಾರೋಗ್ಯದ ಸಂಕೇತವೂ ಆಗಿರಬಹುದು. ವಿಪರೀತ ಬಾಯಾರಿಕೆ ಮೆದುಳಿನ ಕ್ಯಾನ್ಸರ್ ಲಕ್ಷಣ ಕೂಡ ಆಗಿರಬಹುದು ಎನ್ನುತ್ತದೆ ಒಂದು ಅಧ್ಯಯನ.

Brain Cancer: ವಿಪರೀತ ಬಾಯಾರಿಕೆ ಮೆದುಳಿನ ಕ್ಯಾನ್ಸರ್ ಲಕ್ಷಣವೂ ಆಗಿರಬಹುದು ಎಚ್ಚರ!
ನೀರುImage Credit source: iStock
Follow us
|

Updated on: Mar 12, 2024 | 6:56 PM

33 ವರ್ಷ ವಯಸ್ಸಿನ ಬ್ರಿಟಿಷ್ ನೌಕಾಪಡೆಯ ಅಧಿಕಾರಿಯೊಬ್ಬರು ವಿಪರೀತ ಬಾಯಾರಿಕೆ (Thirsty) ಮತ್ತು ದಣಿವನ್ನು ಅನುಭವಿಸುತ್ತಿದ್ದರು. ಇದರಿಂದಾಗಿ ವೈದ್ಯರ ಬಳಿ ತಪಾಸಣೆ ಮಾಡಿಸಿಕೊಂಡಾಗ ಅವರಿಗೆ ಟರ್ಮಿನಲ್ ಬ್ರೈನ್ ಕ್ಯಾನ್ಸರ್ (Brain Cancer) ಇದೆ ಎಂದು ಗೊತ್ತಾಯಿತು. ತಜ್ಞರು ಹೇಳುವಂತೆ, ಬೇಸಿಗೆಯಲ್ಲಿ ಅತಿಯಾದ ಬಾಯಾರಿಕೆ ಸಹಜ. ಆದರೆ ಇದು ಮೆದುಳಿನ ಕ್ಯಾನ್ಸರ್ ಲಕ್ಷಣವೂ ಆಗಿರಬಹುದು. ಮೆದುಳಿನ ಗೆಡ್ಡೆಯು ಕೆಲವೊಮ್ಮೆ ಮೆದುಳಿನಲ್ಲಿರುವ ಪಿಟ್ಯುಟರಿ ಗ್ರಂಥಿಯಿಂದ ಬಿಡುಗಡೆಯಾಗುವ ಹಾರ್ಮೋನ್‌ಗಳನ್ನು ತೊಂದರೆಗೊಳಿಸಬಹುದು. ಇದರರ್ಥ ನಿಮ್ಮ ದೇಹವು ಮೂತ್ರವನ್ನು ಸಾಕಷ್ಟು ಕೇಂದ್ರೀಕರಿಸಲು ಸಾಧ್ಯವಾಗುವುದಿಲ್ಲ. ಇದು ಅತಿಯಾದ ಬಾಯಾರಿಕೆಗೆ ಕಾರಣವಾಗುತ್ತದೆ.

ಡೋರೆ ಎಂಬ ನೌಕಾಪಡೆಯ ಅಧಿಕಾರಿ ಮೊದಲು ತೀವ್ರವಾರ ತರಬೇತಿಯಿಂದ, ಕೆಲಸದಿಂದ ಬಾಯಾರಿಕೆ, ಸುಸ್ತು ಹೆಚ್ಚಾಗಿದೆ ಎಂದುಕೊಂಡಿದ್ದರು. ನಂತರ ವೈದ್ಯರು ಅವರಿಗೆ ಮೆದುಳಿನ ಕ್ಯಾನ್ಸರ್ ಉಂಟಾಗಿರುವುದನ್ನು ತಿಳಿಸಿದರು. ಬಳಿಕ ರೇಡಿಯೊಥೆರಪಿ ಮತ್ತು ಕೀಮೋಥೆರಪಿ ಚಿಕಿತ್ಸೆಗಳನ್ನು ನಡೆಸಲಾಯಿತು. ಸ್ಟೀರಾಯ್ಡ್​ಗಳನ್ನು ಕೂಡ ನೀಡಲಾಯಿತು. ಆಲ್ಕೋಹಾಲ್ ಸೇವನೆ ತ್ಯಜಿಸುವುದು ಮತ್ತು ಸಸ್ಯ ಆಧಾರಿತ ಆಹಾರವನ್ನು ಅನುಸರಿಸುವುದು ಸೇರಿದಂತೆ ಹಲವು ರೀತಿಯ ಜೀವನಶೈಲಿಯ ಬದಲಾವಣೆ ಮಾಡಿಕೊಳ್ಳಲು ಅವರಿಗೆ ವೈದ್ಯರು ಸೂಚಿಸಿದ್ದಾರೆ.

ಇದನ್ನೂ ಓದಿ: International Women’s Day 2024: ಮಹಿಳೆಯರು ತಿಳಿದುಕೊಳ್ಳಲೇಬೇಕಾದ ಸ್ತನ ಕ್ಯಾನ್ಸರ್​​ನ 5 ಲಕ್ಷಣಗಳಿವು

ಪಿಟ್ಯುಟರಿ ಗ್ರಂಥಿ – ಮೆದುಳಿನ ಬಟಾಣಿ ಗಾತ್ರದ ಭಾಗವು ಬಾಯಾರಿಕೆಯ ಅರ್ಥವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ವೈದ್ಯರು ಹೇಳುತ್ತಾರೆ. ದೇಹವು ನಿರ್ಜಲೀಕರಣಗೊಳ್ಳುತ್ತಿರುವುದನ್ನು ಪತ್ತೆಹಚ್ಚಿದಾಗ ದ್ರವ ಪದಾರ್ಥವನ್ನು ಕುಡಿಯಲು ಅದು ನಿಮಗೆ ಹೇಳುತ್ತದೆ. ಟ್ಯೂಮರ್‌ನಿಂದಾಗಿ, ನಿಮ್ಮ ವ್ಯವಸ್ಥೆಯು ಹದಗೆಡಬಹುದು ಮತ್ತು ಪ್ರತಿದಿನ ಸಾಕಷ್ಟು ನೀರು ಕುಡಿಯಲು ನಿಮ್ಮನ್ನು ಪ್ರೇರೇಪಿಸಬಹುದು.

ಆಸ್ಟ್ರೋಸೈಟೋಮಾ ಎಂದರೇನು?:

ಆಸ್ಟ್ರೋಸೈಟೋಮಾ ಎಂಬುದು ಮೆದುಳು ಅಥವಾ ಬೆನ್ನುಹುರಿಯಲ್ಲಿ ಸಂಭವಿಸುವ ಒಂದು ರೀತಿಯ ಕ್ಯಾನ್ಸರ್ ಆಗಿದೆ. ಇದು ನರ ಕೋಶಗಳನ್ನು ಬೆಂಬಲಿಸುವ ಆಸ್ಟ್ರೋಸೈಟ್ಸ್ ಎಂಬ ಜೀವಕೋಶಗಳಲ್ಲಿ ಪ್ರಾರಂಭವಾಗುತ್ತದೆ. ಕೆಲವು ಆಸ್ಟ್ರೋಸೈಟೋಮಾಗಳು ಬಹಳ ನಿಧಾನವಾಗಿ ಬೆಳೆಯುತ್ತವೆ ಮತ್ತು ಇನ್ನು ಕೆಲವು ತ್ವರಿತವಾಗಿ ಬೆಳೆಯುವ ಆಕ್ರಮಣಕಾರಿ ಕ್ಯಾನ್ಸರ್ ಆಗಿರಬಹುದು ಎಂದು ವೈದ್ಯರು ಹೇಳುತ್ತಾರೆ.

ಇದನ್ನೂ ಓದಿ: Women Health: ಪುರುಷರಿಗಿಂತ ಮಹಿಳೆಯರಿಗೆ ಹೆಚ್ಚು ತಲೆನೋವು ಬರಲು ಕಾರಣವೇನು?

ಅತಿಯಾದ ಬಾಯಾರಿಕೆಯ ಭಾವನೆಯ ಹೊರತಾಗಿ, ಆಸ್ಟ್ರೋಸೈಟೋಮಾವು ತೀವ್ರ ತಲೆನೋವು, ವಾಕರಿಕೆ ಮತ್ತು ವಾಂತಿ, ಸುಸ್ತು, ಬುದ್ಧಿಮಾಂದ್ಯತೆಯಂತಹ ಬದಲಾದ ಮಾನಸಿಕ ಸಮಸ್ಯೆ, ಮರೆವು, ವ್ಯಕ್ತಿತ್ವ ಅಥವಾ ಮನಸ್ಥಿತಿಯ ಬದಲಾವಣೆಗಳಂತಹ ಇತರ ಅರಿವಿನ ಸಮಸ್ಯೆಗಳು, ನಿರಂತರ ಆಯಾಸ, ದೃಷ್ಟಿಯ ಸಮಸ್ಯೆಗಳು, ಮಾತಿನ ಸಮಸ್ಯೆಗಳ ಲಕ್ಷಣಗಳನ್ನು ಕೂಡ ಒಳಗೊಂಡಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ