AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Food Care: ದಿನನಿತ್ಯ ಸೇವಿಸುವ ಈ ಆಹಾರಗಳು ವಿಷವಾಗಿ ಬದಲಾಗಬಹುದು!

ನಾವು ಯಾವ ರೀತಿಯ ಆಹಾರ ಸೇವಿಸುತ್ತೇವೆ, ಎಷ್ಟು ಸೇವಿಸುತ್ತೇವೆ ಎಂಬುದು ನಮ್ಮ ಆರೋಗ್ಯವನ್ನು ನಿರ್ಧರಿಸುತ್ತದೆ. ಹೀಗಾಗಿ, ಉತ್ತಮವಾದ ಆಹಾರಗಳ ಆಯ್ಕೆ, ಸರಿಯಾದ ಸಮಯಕ್ಕೆ ಅವುಗಳ ಸೇವನೆಯ ಜೊತೆಗೆ ಸರಿಯಾದ ರೀತಿಯನ್ನು ಆ ಆಹಾರಗಳನ್ನು ಸೇವಿಸುವುದು ಕೂಡ ಬಹಳ ಮುಖ್ಯ. ಇಲ್ಲವಾದರೆ ಫುಡ್ ಪಾಯ್ಸನ್​ನಂತಹ ಆರೋಗ್ಯ ಸಮಸ್ಯೆಗಳು ಎದುರಾಗುವ ಸಾಧ್ಯತೆ ಇರುತ್ತದೆ.

Food Care: ದಿನನಿತ್ಯ ಸೇವಿಸುವ ಈ ಆಹಾರಗಳು ವಿಷವಾಗಿ ಬದಲಾಗಬಹುದು!
ಅಣಬೆImage Credit source: iStock
ಸುಷ್ಮಾ ಚಕ್ರೆ
|

Updated on: Mar 12, 2024 | 4:38 PM

Share

ನಾವು ಸೇವಿಸುವ ಆಹಾರಗಳು (Foods) ಆರೋಗ್ಯಕರವಾಗಿದ್ದರೂ ಕೆಲವೊಮ್ಮೆ ಅವು ನಮ್ಮ ದೇಹಕ್ಕೆ ವಿಷವಾಗಿ (Poison) ಪರಿವರ್ತನೆಯಾಗುವ ಸಾಧ್ಯತೆಯೂ ಇರುತ್ತದೆ. ಹೀಗಾಗಿ, ನಾವು ಸೇವಿಸುವ ಆಹಾರ ನಮ್ಮ ದೇಹಕ್ಕೆ ಹೊಂದುತ್ತದೆಯೇ ಎಂದು ಗಮನಿಸುವುದು ಅತಿ ಮುಖ್ಯ. ಏಕೆಂದರೆ, ನಾವು ದಿನನಿತ್ಯ ಸೇವಿಸುವ ಸಾಮಾನ್ಯ ಆಹಾರಗಳು ಕೂಡ ವಿಷವಾಗಿ ಬದಲಾಗಬಹುದು ಮತ್ತು ಹಾನಿಕಾರಕವಾಗಬಹುದು. ಅಂತಹ ಆಹಾರಗಳು ಯಾವುವು? ಅವು ಹೇಗೆ ನಮ್ಮ ಆರೋಗ್ಯಕ್ಕೆ ತೊಂದರೆ ಮಾಡುತ್ತವೆ? ಎಂಬ ಕುರಿತು ಮಾಹಿತಿ ಇಲ್ಲಿದೆ.

ಚೆರಿಗಳು:

ಚೆರಿ ಹಣ್ಣುಗಳು ತಮ್ಮ ಎಲೆಗಳು ಮತ್ತು ಬೀಜಗಳಲ್ಲಿ ಹೆಚ್ಚು ವಿಷಕಾರಿ ಸಂಯುಕ್ತಗಳನ್ನು ಹೊಂದಿರುತ್ತವೆ.

ಅಣಬೆಗಳು:

ಪ್ರಪಂಚದಲ್ಲಿ ಸುಮಾರು 12 ಮಾರಣಾಂತಿಕ ವಿಷಕಾರಿ ಅಣಬೆ ಪ್ರಭೇದಗಳಿವೆ.

ಇದನ್ನೂ ಓದಿ: ಮೊಟ್ಟೆಗಿಂತ ಹೆಚ್ಚು ಪ್ರೋಟೀನ್ ಹೊಂದಿರುವ 7 ಆಹಾರಗಳು ಯಾವುವು ಗೊತ್ತಾ?

ಮೊಟ್ಟೆ ಮತ್ತು ಅನ್ನ:

ಮೊಟ್ಟೆ ಮತ್ತು ಅನ್ನಯನ್ನು ಮತ್ತೆ ಬಿಸಿ ಮಾಡುವುದರಿಂದ ಅದರಲ್ಲಿ ಸಾಲ್ಮೊನೆಲ್ಲಾ ಬ್ಯಾಕ್ಟೀರಿಯಾ ಉತ್ಪತ್ತಿಯಾಗುತ್ತದೆ. ಅದು ಆಹಾರ ವಿಷವನ್ನು ಉಂಟುಮಾಡಬಹುದು.

ಜಾಯಿಕಾಯಿ:

ಜಾಯಿಕಾಯಿಯನ್ನು ಹೆಚ್ಚು ಪ್ರಮಾಣದಲ್ಲಿ ಸೇವಿಸಿದರೆ ಅದು ವಾಕರಿಕೆ, ನಿರ್ಜಲೀಕರಣ ಮತ್ತು ಬಡಿತದಂತಹ ಅಡ್ಡ ಪರಿಣಾಮಗಳನ್ನು ಉಂಟುಮಾಡಬಹುದು.

ಆಲೂಗಡ್ಡೆ:

ಆಲೂಗಡ್ಡೆ ಸೋಲನೈನ್ ಎಂದು ಕರೆಯಲ್ಪಡುವ ವಿಷಕಾರಿ ಅಂಶಗಳನ್ನು ಹೊಂದಿರುತ್ತದೆ. ಇದು ನರ ಮತ್ತು ಜೀರ್ಣಾಂಗ ವ್ಯವಸ್ಥೆಗಳ ಮೇಲೆ ಪರಿಣಾಮ ಬೀರುವ ಮೂಲಕ ವಿಷಕ್ಕೆ ಕಾರಣವಾಗಬಹುದು.

ಇದನ್ನೂ ಓದಿ: ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ

ಹಸಿ ಗೋಡಂಬಿ:

ಇದು ಉರುಶಿಯೋಲ್ ಎಂಬ ರಾಸಾಯನಿಕವನ್ನು ಹೊಂದಿರುತ್ತದೆ. ಇದು ವಿಷಯುಕ್ತ ಹಸಿರು ಸಸ್ಯದಲ್ಲೂ ಇರುತ್ತದೆ. ಇದನ್ನು ಅತಿಯಾಗಿ ಸೇವಿಸಿದರೆ ಮಾರಣಾಂತಿಕವಾಗಬಹುದು.

ಬಾದಾಮಿ:

ಕಹಿ ಬಾದಾಮಿಯು ಗ್ಲೈಕೋಸೈಡ್ ಅಮಿಗ್ಡಾಲಿನ್ ಅನ್ನು ಹೊಂದಿರುವುದರಿಂದ ಅದು ಕಚ್ಚಾ ರೂಪದಲ್ಲಿದ್ದಾಗ ಅತ್ಯಂತ ವಿಷಕಾರಿಯಾಗಿರುತ್ತದೆ.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ರಷ್ಯಾ-ಉಕ್ರೇನ್ ಶಾಂತಿ ಹಾದಿಯಲ್ಲಿ ಸಾಗುತ್ತೆ ಎನ್ನುವ ನಂಬಿಕೆ ಇದೆ: ಮೋದಿ
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಸಾಫ್ಟವೇರ್‌ ಹುಡ್ಗ ,ನಿಂತಿದ್ದವನು ಮೆಟ್ರೋ ಹಳಿಗೆ ಸಡನ್ ಜಿಗಿದ್ಬಿಟ್ಟ!
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಡಿಕೆಶಿ ನಿವಾಸಕ್ಕೆ ದೌಡಾಯಿಸಿ ಪ್ರಿಯಾಂಕ್ ಖರ್ಗೆ: ಒಂದು ತಾಸು ಮಾತುಕತೆ
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ಮಹಾತ್ಮ ಗಾಂಧಿ ಸ್ಮಾರಕಕ್ಕೆ ಗೌರವ ಸಲ್ಲಿಸಿದ ರಷ್ಯಾ ಅಧ್ಯಕ್ಷ ಪುಟಿನ್
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ವಧು-ವರರ ಆನ್​ಲೈನ್ ಆರತಕ್ಷತೆ! ವಧುವಿನ ತಂದೆ ಹೇಳಿದ್ದೇನು ನೋಡಿ
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ದೇವಸ್ಥಾನಗಳಲ್ಲಿ ಮದುವೆ ಮಾಡಿಸಲು ಹಿಂದೇಟು; ಅರ್ಚಕರ ನಿರ್ಧಾರಕ್ಕೆ ಕಾರಣ ಏನು
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ಬೆಂಗಳೂರಿನ ಹಲವೆಡೆ ತುಂತುರು ಮಳೆ, ಚುಮು ಚುಮು ಚಳಿ
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ತುಮಕೂರು: ಎಟಿಎಂ ಮಷಿನನ್ನೇ ಹೊತ್ತಯ್ದು ಕಸದ ಬುಟ್ಟಿ ಬಳಿ ಬಿಟ್ಟ ಕಳ್ಳರು!
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಉತ್ತರಾಖಂಡ: ಕಂದಕಕ್ಕೆ ಬಿದ್ದ ಬೊಲೆರೊ, ಐವರು ಸಾವು
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ
ಇಂಡಿಗೋ ವಿಮಾನ ರದ್ದು: ಕೆಎಸ್​ಆರ್​ಟಿಸಿ ಬಿಎಂಟಿಸಿ ಆದಾಯಕ್ಕೂ ಹೊಡೆತ