ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ

ಮಕ್ಕಳಿಗೆ ಜಾಸ್ತಿ ಚಾಕೋಲೇಟ್ ಕೊಟ್ಟರೆ ಅವರ ಹಲ್ಲುಗಳು ಹಾಳಾಗುತ್ತವೆ. ಹೆಚ್ಚಿನ ಮಕ್ಕಳು ಚಾಕೊಲೇಟ್‌ಗಳನ್ನು ಇಷ್ಟಪಡುತ್ತಾರೆ. ಅವರು ಅವಕಾಶ ಸಿಕ್ಕಾಗಲೆಲ್ಲಾ ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ಆದರೆ, ಚಾಕೋಲೇಟ್ ತಿಂದ ಬಳಿಕ ಮಕ್ಕಳಿಗೆ ಬಾದಾಮಿ ಕೊಟ್ಟರೆ ಅವರ ಆರೋಗ್ಯ ಚೆನ್ನಾಗಿರುತ್ತದೆ.

ಚಾಕೋಲೇಟ್ ತಿಂದ ನಂತರ ಮಕ್ಕಳಿಗೆ ಬಾದಾಮಿ ಕೊಡಿ
ಬಾದಾಮಿImage Credit source: iStock
Follow us
ಸುಷ್ಮಾ ಚಕ್ರೆ
|

Updated on: Feb 21, 2024 | 4:57 PM

ಬಾದಾಮಿ ಹಲ್ಲುಗಳಿಗೆ ಒಳ್ಳೆಯದು. ಏಕೆಂದರೆ ಬಾದಾಮಿ ಹಲ್ಲುಗಳನ್ನು ಸ್ವಚ್ಛಗೊಳಿಸಲು ಮತ್ತು ನಿಮಗೆ ಆರೋಗ್ಯಕರ ನಗು ನೀಡಲು ಸಹಾಯ ಮಾಡುತ್ತದೆ. ಬಾದಾಮಿ ಕಡಿಮೆ ಸಕ್ಕರೆ ಅಂಶವನ್ನು ಹೊಂದಿರುತ್ತವೆ, ಇದು ಪ್ಲೇಕ್ ಆಮ್ಲಗಳ ಉತ್ಪಾದನೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಪೋಷಕರು ಮತ್ತು ವೈದ್ಯರು ಮಕ್ಕಳಿಗೆ ಸಕ್ಕರೆಯ ಸೇವನೆಯನ್ನು ಮಿತಿಗೊಳಿಸಲು ಸಲಹೆ ನೀಡುತ್ತಾರೆ. ಆದರೆ, ಮಕ್ಕಳು ಚಾಕೋಲೇಟ್ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕೇ? ಎಂಬ ಪ್ರಶ್ನೆ ನಿಮಗಿದೆಯೇ? ಖಂಡಿತವಾಗಿಯೂ ಚಾಕೋಲೇಟ್ ತಿನ್ನುವುದನ್ನು ಸಂಪೂರ್ಣವಾಗಿ ನಿಲ್ಲಿಸಬೇಕು ಎಂದೇನೂ ಇಲ್ಲ. ಇದಲ್ಲದೆ, ಪೋಷಕರಿಗೆ ಚಾಕೋಲೇಟ್​ ಸೇವನೆಯಿಂದ ದೂರವಿರಲು ಮಕ್ಕಳ ಮನವೊಲಿಸುವುದು ತುಂಬಾ ಕಷ್ಟ. ಅದಕ್ಕಾಗಿ ಪರಿಹಾರ ಇಲ್ಲಿದೆ.

ಆಗಾಗ ಮಕ್ಕಳು ಚಾಕೋಲೇಟ್, ಪೇಸ್ಟ್ರಿ, ಕೇಕ್ ತಿನ್ನುವುದರಿಂದ ಸಮಸ್ಯೆಯೇನೂ ಇಲ್ಲ. ಮಕ್ಕಳು ಮಿತವಾಗಿ ಚಾಕೋಲೇಟ್ ಸೇವಿಸಬಹುದು. ಆದರೆ, ಮಕ್ಕಳ ಹಲ್ಲುಗಳನ್ನು ಸರಿಯಾಗಿ ಕ್ಲೀನ್ ಮಾಡುವುದು ಅತ್ಯಗತ್ಯ. ಪೋಷಕರು ತಿಳಿದುಕೊಳ್ಳಬೇಕಾದ ಒಂದು ವಿಷಯವೆಂದರೆ, ತಮ್ಮ ಮಕ್ಕಳು ಚಾಕೊಲೇಟ್ ಬಾರ್ ಅನ್ನು ತಿಂದರೆ, ಅವರಿಗೆ ತಕ್ಷಣ ಶೇಂಗಾ ಅಥವಾ ಬಾದಾಮಿ ಕೊಡಬೇಕು. ಅದು ಹೇಗೆ ಸಹಾಯ ಮಾಡುತ್ತದೆ ಎಂಬುದನ್ನು ತಿಳಿಯಲು ಮುಂದೆ ಓದಿ…

ಇದನ್ನೂ ಓದಿ: Chocolate Day 2024: ಮನೆಯಲ್ಲೇ ಚಾಕೋಲೇಟ್ ತಯಾರಿಸಿ ಸಂಗಾತಿಗೆ ಸರ್​ಪ್ರೈಸ್ ನೀಡಿ

ಚಾಕೊಲೇಟ್ ಹೇಗೆ ಹಾನಿ ಮಾಡುತ್ತದೆ?:

ಚಾಕೊಲೇಟ್‌ಗಳನ್ನು ತಿನ್ನುವುದರಿಂದ ದೈಹಿಕ ಮತ್ತು ಮಾನಸಿಕ ಪ್ರಯೋಜನಗಳಿವೆ. ವಿಶೇಷವಾಗಿ ಡಾರ್ಕ್ ಚಾಕೋಲೇಟ್ ಆರೋಗ್ಯಕ್ಕೆ ಬಹಳ ಪ್ರಯೋಜನಕಾರಿ. ಆದರೆ, ಮಕ್ಕಳು ಹಾಲು, ಸಕ್ಕರೆ ಆಧಾರಿತ ಚಾಕೊಲೇಟ್‌ಗಳನ್ನು ತಿನ್ನಲು ಇಷ್ಟಪಡುತ್ತಾರೆ. ನೀವು ಅವುಗಳನ್ನು ಸೇವಿಸಲು ನೀಡಿದಾಗ ಹಲ್ಲುಗಳ ಆರೋಗ್ಯ ಕೆಡುತ್ತದೆ.

ಇದನ್ನೂ ಓದಿ: ಬಾದಾಮಿ ಹಾಲು ಪಕ್ಕಕ್ಕಿಡಿ, ವಾಲ್​ನಟ್ ಹಾಲು ಕುಡಿದು ನೋಡಿ!

ಚಾಕೊಲೇಟ್ ನಂತರ ಬಾದಾಮಿ ತಿನ್ನುವುದು ಯಾಕೆ ಒಳ್ಳೆಯದು?:

ಮಕ್ಕಳು ಚಾಕೊಲೇಟ್ ತಿನ್ನುವುದನ್ನು ತಡೆಯಲು ಪೋಷಕರಿಗೆ ಕಷ್ಟವಾದರೆ, ಚಾಕೊಲೇಟ್ ತಿಂದ ನಂತರ ಶೇಂಗಾ ಅಥವಾ ಬಾದಾಮಿಯನ್ನು ತಿನ್ನಿಸುವ ಮೂಲಕ ದಂತಕ್ಷಯದ ಅಪಾಯವನ್ನು ನಿಭಾಯಿಸಬಹುದು ಎಂದು ದಂತವೈದ್ಯ ಡಾ ಚಿರಾಗ್ ಅರುಣ್ ಚಾಮ್ರಿಯಾ ಹೇಳಿದ್ದಾರೆ. “ಇದು ಚಾಕೊಲೇಟ್‌ಗಳಲ್ಲಿನ ಎಲ್ಲಾ ಆಮ್ಲೀಯತೆಯನ್ನು ತೆಗೆದುಹಾಕಲುತ್ತದೆ. ಇದು ಹಲ್ಲಿನ ಆರೋಗ್ಯಕ್ಕೂ ಒಳ್ಳೆಯದು ಎಂದು ಅವರು ಇನ್‌ಸ್ಟಾಗ್ರಾಮ್‌ನಲ್ಲಿ ಪೋಸ್ಟ್ ಮಾಡಿದ ವೀಡಿಯೊದಲ್ಲಿ ತಿಳಿಸಿದ್ದಾರೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಕ್ಯಾಚ್ ಕೈಚೆಲ್ಲಿದ ಪಂತ್: ಸಿಟ್ಟಿನಲ್ಲಿ ಗುರಾಯಿಸಿದ ಬುಮ್ರಾ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣ ಉಪ ಚುನಾವಣೆಯಲ್ಲಿ ನಿಖಿಲ್​ಗೆ ಸೋಲಾಗೋದು ಹೆಚ್ಚು ಕಡಿಮೆ ಖಚಿತ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಚನ್ನಪಟ್ಟಣದಲ್ಲಿ ಸಿಪಿ ಯೋಗೇಶ್ವರ್ ವಿಜಯೋತ್ಸವಕ್ಕೆ ಅಭಿಮಾನಿಗಳಿಂದ ಸಿದ್ಧತೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಎರಡು ಕುಟುಂಬಗಳಿಗೆ ಚನ್ನಪಟ್ಟಣ ಚುನಾವಣಾ ಫಲಿತಾಂಶ ಪ್ರತಿಷ್ಠೆಯ ಪ್ರಶ್ನೆ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
ಪ್ರಧಾನಿ ಮೋದಿ ನಾಯಕತ್ವದ ಎನ್​ಡಿಎ ಮಹಾರಾಷ್ಟ್ರ, ಜಾರ್ಖಂಡ್ ಗೆಲ್ಲಲಿದೆ:ಸಚಿವ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
‘ನನಗೂ ಹೊಟ್ಟೆ ಉರಿಯುತ್ತಿದೆ’; ಕಳಪೆ ಪಡೆದ ರಜತ್​ನಿಂದ ಮನೆಯವರಿಗೆ ಕಿರಿಕಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Devotional: ದೇವಾಲಯದ ಅನ್ನ ಪ್ರಸಾದ ಮಹತ್ವ ತಿಳಿಯಿರಿ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
Daily Horoscope: ಈ ರಾಶಿಯವರಿಗೆ ಇಂದು ಆರ್ಥಿಕವಾಗಿ ಲಾಭವಾಗಲಿದೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಸುಸ್ಥಿರ ಅಭಿವೃದ್ಧಿಗೆ ಈ ಸಮಿಟ್ ಒಂದು​ ರೋಡ್​ ಮ್ಯಾಪ್: ಮೋದಿ ಶ್ಲಾಘನೆ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ
ಭಾರತೀಯ ಕಂಪನಿಗಳ ಅಭಿವೃದ್ಧಿಯಲ್ಲಿ ಬೆಂಜ್ ಪಾತ್ರ ಮಹತ್ವದ್ದು; ಬಾಬಾ ಕಲ್ಯಾಣಿ