Childhood Diabetes Alert: ಮಕ್ಕಳಲ್ಲಿ ಮಧುಮೇಹ ಬರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ

ಭಾರತದಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಕ್ಕಳಲ್ಲಿ ಈ ರೋಗವು ವೇಗವಾಗಿ ಹೆಚ್ಚುತ್ತಿದೆ. ಇದು ಕಳವಳಕಾರಿ ವಿಷಯವಾಗಿದ್ದು ವೈದ್ಯರು ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ರೋಗಗಳಿಗೆ ಒಡ್ಡಿಕೊಳ್ಳುವುದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಕಂಡುಬರುವುದು ಬೊಜ್ಜು, ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಗಳಂತಹ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಪರಿಸ್ಥಿತಿಯಲ್ಲಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳ ಬಗ್ಗೆ ಎಲ್ಲಾ ಪೋಷಕರಿಗೆ ಸರಿಯಾದ ತಿಳುವಳಿಕೆ ಅವಶ್ಯಕತೆ ಇದೆ. ಆಗ ಮಾತ್ರ ಈ ರೋಗವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.

Childhood Diabetes Alert: ಮಕ್ಕಳಲ್ಲಿ ಮಧುಮೇಹ ಬರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ
ಸಾಂದರ್ಭಿಕ ಚಿತ್ರ
Updated By: ಅಕ್ಷಯ್​ ಪಲ್ಲಮಜಲು​​

Updated on: Feb 25, 2025 | 6:15 PM

ಪ್ರಪಂಚದಾದ್ಯಂತ ಮಧುಮೇಹ ಪ್ರಕರಣಗಳು ಹೆಚ್ಚುತ್ತಿವೆ. ಈ ಆರೋಗ್ಯ ಸಮಸ್ಯೆ ಒಂದು ಕಾಲದಲ್ಲಿ ವಯಸ್ಕರು ಮತ್ತು ವಯಸ್ಸಾದವರಲ್ಲಿ ಕಂಡುಬರುತ್ತಿತ್ತು. ಈಗ ಚಿಕ್ಕ ಮಕ್ಕಳ ಮೇಲೂ ಪರಿಣಾಮ ಬೀರುತ್ತಿದೆ. ಅದರಲ್ಲಿಯೂ ಭಾರತದಲ್ಲಿ ಮಧುಮೇಹ ಪ್ರಕರಣಗಳು ಹೆಚ್ಚಾಗುತ್ತಿದ್ದು ಮಕ್ಕಳಲ್ಲಿ ಈ ರೋಗವು ವೇಗವಾಗಿ ಹೆಚ್ಚುತ್ತಿದೆ. ಇದು ಕಳವಳಕಾರಿ ವಿಷಯವಾಗಿದ್ದು ವೈದ್ಯರು ಕೂಡ ಈ ಬಗ್ಗೆ ಎಚ್ಚರಿಕೆ ನೀಡುತ್ತಿದ್ದಾರೆ. ಚಿಕ್ಕ ವಯಸ್ಸಿನಲ್ಲಿಯೇ ಇಂತಹ ರೋಗಗಳಿಗೆ ಒಡ್ಡಿಕೊಳ್ಳುವುದು ಅನೇಕ ರೀತಿಯ ಸಮಸ್ಯೆಗಳಿಗೆ ಕಾರಣವಾಗಬಹುದು. ಚಿಕ್ಕ ವಯಸ್ಸಿನಲ್ಲಿಯೇ ಮಧುಮೇಹ ಕಂಡುಬರುವುದು ಬೊಜ್ಜು, ಮೂತ್ರಪಿಂಡ ಮತ್ತು ಯಕೃತ್ತಿನ ಸಮಸ್ಯೆಗಳಂತಹ ಇತರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಪರಿಸ್ಥಿತಿಯಲ್ಲಿ, ಮಕ್ಕಳಲ್ಲಿ ಹೆಚ್ಚುತ್ತಿರುವ ಮಧುಮೇಹ ಪ್ರಕರಣಗಳ ಬಗ್ಗೆ ಎಲ್ಲಾ ಪೋಷಕರಿಗೆ ಸರಿಯಾದ ತಿಳುವಳಿಕೆ ಅವಶ್ಯಕತೆ ಇದೆ. ಆಗ ಮಾತ್ರ ಈ ರೋಗವನ್ನು ನಿಯಂತ್ರಣದಲ್ಲಿ ಇಡಬಹುದಾಗಿದೆ.

ಎಲ್ಲದಕ್ಕೂ ಮೊದಲು ಪೋಷಕರು ಮಧುಮೇಹದ ಕಾರಣಗಳು ಮತ್ತು ಲಕ್ಷಣಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಬೇಕಾಗುತ್ತದೆ. ಆಗ ಮಾತ್ರ ಪೋಷಕರು ತಮ್ಮ ಮಕ್ಕಳನ್ನು ಮಧುಮೇಹದಿಂದ ರಕ್ಷಿಸಬಹುದು. ಮಕ್ಕಳಿಗೆ ಮಧುಮೇಹ ಹೇಗೆ ಬರುತ್ತದೆ? ಇದಕ್ಕೆ ಕಾರಣ ಮತ್ತು ರೋಗಲಕ್ಷಣಗಳು ಹೇಗಿರುತ್ತವೆ ಎಂಬುದನ್ನು ತಿಳಿದುಕೊಳ್ಳಿ.

ಜಂಕ್ ಫುಡ್ – ಸಿಹಿತಿಂಡಿ ಇಷ್ಟ ಪಡುತ್ತಾರೆ

ಸಾಮಾನ್ಯವಾಗಿ ಕೆಲವು ಮಕ್ಕಳು ನೋಡುವುದಕ್ಕೆ ಆರೋಗ್ಯವಾಗಿರುತ್ತಾರೆ ಆದರೆ ಅವರು ಮನೆಯಲ್ಲಿ ಮಾಡಿದಂತಹ ಆಹಾರವನ್ನು ತಿನ್ನಲು ಇಷ್ಟಪಡುವುದಿಲ್ಲ. ಹೊರಗಡೆ ಲಭ್ಯವಿರುವ ಫಾಸ್ಟ್ ಫುಡ್ ಮತ್ತು ಪ್ಯಾಕೇಜ್ ಮಾಡಿ ಇಟ್ಟಂತಹ ತಿಂಡಿಗಳನ್ನು ತಿನ್ನಲು ಬಯಸುತ್ತಾರೆ. ಪಿಜ್ಜಾ, ಬರ್ಗರ್, ಚಿಪ್ಸ್, ಚಾಕೊಲೇಟ್, ತಂಪು ಪಾನೀಯಗಳು, ಬಾಟಲಿಗಳಲ್ಲಿ ಸಿಗುವ ಕೃತಕ ಹಣ್ಣಿನ ರಸಗಳನ್ನು ಹೆಚ್ಚು ಹೆಚ್ಚು ಬಯಸುತ್ತಾರೆ. ಹಾಗಾಗಿ ಇದರಲ್ಲಿರುವ ಸಕ್ಕರೆ ಮತ್ತು ಅನಾರೋಗ್ಯಕರ ಕೊಬ್ಬುಗಳು ಕ್ರಮೇಣ ದೇಹದಲ್ಲಿನ ಇನ್ಸುಲಿನ್ ಅನ್ನು ದುರ್ಬಲಗೊಳಿಸುತ್ತವೆ. ಈ ಕಾರಣದಿಂದಾಗಿ, ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗುತ್ತದೆ. ಇದಲ್ಲದೆ, ಮಕ್ಕಳಲ್ಲಿ ಮಧುಮೇಹದ ಅಪಾಯವು ಹೆಚ್ಚಾಗುತ್ತದೆ.

ವ್ಯಾಯಾಮ – ಆಟಗಳ ಕೊರತೆ

ಮಕ್ಕಳು ಚೆನ್ನಾಗಿ ಆಟವಾಡಿಕೊಂಡಿದ್ದರೆ ಅವರ ಆರೋಗ್ಯವೂ ಚೆನ್ನಾಗಿರುತ್ತದೆ ಆದರೆ ಮಕ್ಕಳು ಆಟ, ವ್ಯಾಯಾಮಗಳನ್ನು ಬಿಟ್ಟು ಮೊಬೈಲ್, ಟಿವಿ ಮತ್ತು ವಿಡಿಯೋ ಗೇಮ್ ಗಳಲ್ಲಿ ನಿರತರಾಗಿರುವುದರಿಂದ, ದೈಹಿಕ ಚಟುವಟಿಕೆ ತೀವ್ರವಾಗಿ ಕಡಿಮೆಯಾಗಿದೆ. ದೇಹವು ಸರಿಯಾಗಿ ಸಕ್ರಿಯವಾಗಿಲ್ಲದಿದ್ದಾಗ, ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸುತ್ತದೆ. ಇದರಿಂದಾಗಿ ದೇಹವು ಇನ್ಸುಲಿನ್ ಅನ್ನು ಸರಿಯಾಗಿ ಬಳಸಲು ಸಾಧ್ಯವಾಗುವುದಿಲ್ಲ. ಇದು ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಬೊಜ್ಜು

ಮಕ್ಕಳ ತೂಕ ಅಗತ್ಯಕ್ಕಿಂತ ಹೆಚ್ಚಾಗಿದ್ದರೆ ಅಥವಾ ಅಧಿಕ ತೂಕ ಹೊಂದಿದ್ದರೆ, ಮಧುಮೇಹ ಬರುವ ಸಾಧ್ಯತೆಯೂ ಹೆಚ್ಚಾಗಿರುತ್ತದೆ. ದೇಹದಲ್ಲಿ ಹೆಚ್ಚುವರಿ ಕೊಬ್ಬು ಸಂಗ್ರಹವಾಗಲು ಪ್ರಾರಂಭಿಸಿದಾಗ, ಇನ್ಸುಲಿನ್ ಸರಿಯಾಗಿ ಕೆಲಸ ಮಾಡುವುದಿಲ್ಲ. ರಕ್ತದಲ್ಲಿನ ಸಕ್ಕರೆ ಮಟ್ಟವು ಹೆಚ್ಚಾಗಲು ಪ್ರಾರಂಭಿಸುತ್ತದೆ. ಕೊಬ್ಬಿನ ಹೆಚ್ಚಳದಿಂದಾಗಿ, ವಿಶೇಷವಾಗಿ ಹೊಟ್ಟೆಯ ಸುತ್ತಲೂ ಈ ಅಪಾಯವು ಮತ್ತಷ್ಟು ಹೆಚ್ಚಾಗುತ್ತದೆ.

ಕುಟುಂಬದಲ್ಲಿನ ಮಧುಮೇಹದ ಇತಿಹಾಸ

ಪೋಷಕರ ಕುಟುಂಬದಲ್ಲಿ ಯಾರಿಗಾದರೂ ಮಧುಮೇಹವಿದ್ದರೆ ಮಕ್ಕಳಿಗೂ ಅದು ಬರುವ ಸಾಧ್ಯತೆ ಇದೆ. ಆದರೆ ಎಲ್ಲಾ ಮಕ್ಕಳಿಗೂ ಈ ರೀತಿ ಬರುವುದಿಲ್ಲ. ಮಕ್ಕಳ ಆಹಾರ ಮತ್ತು ಜೀವನಶೈಲಿ ಸರಿಯಾಗಿಲ್ಲದಿದ್ದರೆ, ರೋಗವು ಬೇಗನೆ ಬರುವ ಸಾಧ್ಯತೆ ಇರುತ್ತದೆ. ಹಾಗಾಗಿ ಕುಟುಂಬದಲ್ಲಿ ಮಧುಮೇಹ ಇದ್ದವರು ತಮ್ಮ ಮಕ್ಕಳ ಆರೋಗ್ಯದ ಬಗ್ಗೆ ಹೆಚ್ಚಿನ ಕಾಳಜಿ ವಹಿಸಬೇಕು.

ಇದನ್ನೂ ಓದಿ: ಪುದೀನಾ ಎಲೆಗಳನ್ನು ದಿನಕ್ಕೆ ಎರಡು ಬಾರಿ ಜಗಿದು ತಿನ್ನಿ ವೈದ್ಯರಿಂದ ದೂರವಿರಿ

ಒತ್ತಡ- ಕಡಿಮೆ ನಿದ್ರೆ

ಮಕ್ಕಳ ಮೇಲಿನ ಶೈಕ್ಷಣಿಕ ಒತ್ತಡದಿಂದಾಗಿ ನಿದ್ರೆಯ ಕೊರತೆ, ಅತಿಯಾದ ಪರದೆಯ ಸಮಯ, ಒತ್ತಡವೂ ಮಧುಮೇಹಕ್ಕೆ ಮುಖ್ಯ ಕಾರಣವಾಗಬಹುದು. ದೇಹಕ್ಕೆ ವಿಶ್ರಾಂತಿ ಸಿಗದಿದ್ದಾಗ ಅಥವಾ ಮನಸ್ಸು ಸಾಕಷ್ಟು ಒತ್ತಡದಲ್ಲಿದ್ದಾಗ, ಹಾರ್ಮೋನುಗಳ ಸಮತೋಲನವು ತೊಂದರೆಗೊಳಗಾಗುತ್ತದೆ. ಇದು ಚಯಾಪಚಯ ಕ್ರಿಯೆಯ ಮೇಲೆ ಪರಿಣಾಮ ಬೀರುತ್ತದೆ ಜೊತೆಗೆ ಮಧುಮೇಹದ ಅಪಾಯವನ್ನು ಹೆಚ್ಚಿಸುತ್ತದೆ.

ಮಧುಮೇಹದಿಂದ ಮಕ್ಕಳನ್ನು ರಕ್ಷಿಸುವುದು ಹೇಗೆ? ಇಲ್ಲಿದೆ ಸರಳ ಪರಿವಾರ

ನಿಮ್ಮ ಮಕ್ಕಳಿಗೆ ಮನೆಯಲ್ಲಿ ತಯಾರಿಸಿದ ಆರೋಗ್ಯಕರ ಆಹಾರವನ್ನು ನೀಡಿ. ಹೊರಗಡೆ ಲಭ್ಯವಿರುವ ಫಾಸ್ಟ್ ಫುಡ್ ತಿನ್ನುವುದನ್ನು ಕಡಿಮೆ ಮಾಡಿ. ದಿನಕ್ಕೆ ಕನಿಷ್ಠ 1- 2 ಗಂಟೆಗಳ ಕಾಲ ಕ್ರೀಡೆ ಅಥವಾ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳುವಂತೆ ನೋಡಿಕೊಳ್ಳಿ. ಪ್ರತಿನಿತ್ಯ ಮಕ್ಕಳಿಗೆ ವ್ಯಾಯಾಮ ಮಾಡಿಸಿ. ಕ್ರಮೇಣ ಸಿಹಿತಿಂಡಿ ಮತ್ತು ತಂಪು ಪಾನೀಯಗಳ ಅಭ್ಯಾಸವನ್ನು ಕಡಿಮೆ ಮಾಡಿಸಿ. ಮಕ್ಕಳ ನಿದ್ರೆಯ ಬಗ್ಗೆ ಕಾಳಜಿ ವಹಿಸಿ. ಮಗುವಿನ ಫೋನ್ ಮತ್ತು ಟಿವಿ ಪರದೆಯ ಸಮಯವನ್ನು ಮಿತಿಗೊಳಿಸಿ. ಕುಟುಂಬದಲ್ಲಿ ಮಧುಮೇಹವಿದ್ದರೆ, ಕಾಲಕಾಲಕ್ಕೆ ಅವರ ಆರೋಗ್ಯ ತಪಾಸಣೆ ಮಾಡಿಸಿಕೊಳ್ಳಿ. ಮಕ್ಕಳು ಚಿಕ್ಕ ವಯಸ್ಸಿನಿಂದಲೇ ಆರೋಗ್ಯಕರ ಅಭ್ಯಾಸಗಳನ್ನು ಬೆಳೆಸಿಕೊಂಡರೆ, ಅವರನ್ನು ಮಧುಮೇಹದಂತಹ ಕಾಯಿಲೆಗಳಿಂದ ರಕ್ಷಿಸಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ