AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಪುದೀನಾ ಎಲೆಗಳನ್ನು ದಿನಕ್ಕೆ ಎರಡು ಬಾರಿ ಜಗಿದು ತಿನ್ನಿ ವೈದ್ಯರಿಂದ ದೂರವಿರಿ

ಈ ಋತುವಿನಲ್ಲಿ ಅಲರ್ಜಿ ಸಮಸ್ಯೆಗಳು ಹೆಚ್ಚಾಗುವುದರಿಂದ ಮನೆಯಲ್ಲಿಯೇ ಕೆಲವು ಮದ್ದುಗಳನ್ನು ಮಾಡುವ ಮೂಲಕ ದೇಹವನ್ನು ರೋಗಗಳಿಂದ ರಕ್ಷಿಸಿಕೊಳ್ಳಬೇಕಾಗುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಸೇರಿಸುವುದರ ಮೂಲಕ ಈ ರೀತಿಯ ಸಮಸ್ಯೆಗಳಿಂದ ದೂರವಿರಬಹುದಾಗಿದೆ. ಪುದೀನಾವನ್ನು ಅನಾದಿಕಾಲದಿಂದಲೂ ಬಳಸುತ್ತಾ ಬರಲಾಗುತ್ತಿದ್ದು ಮಾನವನಿಗೆ ತಿಳಿದಿರುವ ಅತ್ಯಂತ ಹಳೆಯ ಗಿಡಮೂಲಿಕೆಗಳಲ್ಲಿ ಬಂದಾಗಿದೆ. ಇದರಲ್ಲಿರುವ ಗಮನಾರ್ಹ ಔಷಧೀಯ ಗುಣಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ಪುದೀನಾ ಎಲೆಗಳನ್ನು ದಿನಕ್ಕೆ ಎರಡು ಬಾರಿ ಜಗಿದು ತಿನ್ನಿ ವೈದ್ಯರಿಂದ ದೂರವಿರಿ
ಸಾಂದರ್ಭಿಕ ಚಿತ್ರ
ಪ್ರೀತಿ ಭಟ್​, ಗುಣವಂತೆ
| Edited By: |

Updated on: Feb 25, 2025 | 12:36 PM

Share

ಚಳಿಗಾಲ ಮುಗಿಯುತ್ತಾ ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳು ಹೆಚ್ಚಾಗುತ್ತದೆ. ಹಾಗಾಗಿ ಇಂತಹ ಸಮಯದಲ್ಲಿ ಆರೋಗ್ಯವನ್ನು ಕಾಪಾಡಿಕೊಳ್ಳುವುದು ಬಹಳ ಮುಖ್ಯವಾಗುತ್ತದೆ. ಈ ಋತುವಿನಲ್ಲಿ ಅಲರ್ಜಿ ಸಮಸ್ಯೆಗಳು ಕೂಡ ಹೆಚ್ಚಾಗುವುದರಿಂದ ಮನೆಯಲ್ಲಿಯೇ ಕೆಲವು ಮದ್ದುಗಳನ್ನು ಮಾಡುವ ಮೂಲಕ ದೇಹವನ್ನು ರೋಗಗಳಿಂದ ರಕ್ಷಿಸಿಕೊಳ್ಳಬೇಕಾಗುತ್ತದೆ. ನಿಮ್ಮ ದೈನಂದಿನ ಆಹಾರ ಕ್ರಮದಲ್ಲಿ ಪುದೀನಾವನ್ನು ಸೇರಿಸುವುದರ ಮೂಲಕ ಈ ರೀತಿಯ ಸಮಸ್ಯೆಗಳಿಂದ ದೂರವಿರಬಹುದಾಗಿದೆ. ಪುದೀನಾವನ್ನು ಅನಾದಿಕಾಲದಿಂದಲೂ ಬಳಸುತ್ತಾ ಬರಲಾಗುತ್ತಿದ್ದು ಮಾನವನಿಗೆ ತಿಳಿದಿರುವ ಅತ್ಯಂತ ಹಳೆಯ ಗಿಡಮೂಲಿಕೆಗಳಲ್ಲಿ ಬಂದಾಗಿದೆ. ಇದರಲ್ಲಿರುವ ಗಮನಾರ್ಹ ಔಷಧೀಯ ಗುಣಗಳು ಆರೋಗ್ಯ ಕಾಪಾಡಿಕೊಳ್ಳಲು ಸಹಕಾರಿಯಾಗಿದೆ. ಹಾಗಾದರೆ ಇದರ ಸೇವನೆ ಮಾಡುವುದರಿಂದ ಸಿಗುವ ಪ್ರಯೋಜನಗಳೇನು ತಿಳಿದುಕೊಳ್ಳಿ.

ವೈದ್ಯರ ಪ್ರಕಾರ, ಪುದೀನಾ ಆರೋಗ್ಯಕರವಾಗಿದೆ. ಇದನ್ನು ಬಳಸುವುದರಿಂದ ದೇಹಕ್ಕೆ ಅನೇಕ ರೀತಿಯ ಪ್ರಯೋಜನಗಳಿವೆ. ಈ ಪುದೀನಾ ಎಲೆಗಳಲ್ಲಿ ಪಾಲಿಫಿನಾಲ್ ಗಳು ಸಮೃದ್ಧವಾಗಿದೆ. ಅಲ್ಲದೆ ಇದರ ಎಲೆಗಳಲ್ಲಿರುವ ಅಂಶವೂ ಕೊಬ್ಬಿನ ಪ್ರಮಾಣವನ್ನು ಕಡಿಮೆ ಮಾಡುವುದರಿಂದ ಪುದೀನಾ ದೇಹಕ್ಕೆ ಅತ್ಯಂತ ಪ್ರಯೋಜನಕಾರಿ ಎನ್ನಲಾಗುತ್ತದೆ. ಇದರ ರಸವು ಕಹಿಯಾಗಿದ್ದರೂ, ಇದು ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಹೊಂದಿದೆ. ನಿಮಗೆ ಇದರ ರಸ ಸೇವನೆ ಮಾಡಲು ಸಾಧ್ಯವಾಗದಿದ್ದರೆ, ಅದರ ನಾಲ್ಕು ಅಥವಾ ಐದು ತಾಜಾ ಎಲೆಗಳನ್ನು ಜಗಿದು ತಿನ್ನಿರಿ. ಹಾಗಾದರೆ ಇದನ್ನು ಯಾವಾಗ ಸೇವನೆ ಮಾಡಬೇಕು? ಎಷ್ಟು ಬಾರಿ ಸೇವನೆ ಮಾಡಬೇಕು ಎನ್ನುವುದನ್ನು ತಿಳಿದುಕೊಳ್ಳಿ.

ಮುಟ್ಟಿನ ಸಮಯದಲ್ಲಿ ಕಂಡು ಬರುವ ನೋವಿಗೆ ಮುಕ್ತಿ ನೀಡುತ್ತೆ

ಸಾಮಾನ್ಯವಾಗಿ ಪುದೀನಾ ಎಲೆಗಳನ್ನು ದಿನಕ್ಕೆ ಎರಡು ಬಾರಿ ಜಗಿದು ತಿನ್ನಬೇಕು, ಇದರಿಂದ ಸಾಕಷ್ಟು ಪ್ರಯೋಜನಗಳಿವೆ. ನಿಮ್ಮ ಜೀರ್ಣಾಂಗ ವ್ಯವಸ್ಥೆ ದುರ್ಬಲವಾಗಿದ್ದರೆ, ಗ್ಯಾಸ್ ಮತ್ತು ಹೊಟ್ಟೆ ನೋವಿನಿಂದ ಬಳಲುತ್ತಿದ್ದರೆ, ಪುದೀನಾ ಎಲೆ ಸಂಜೀವಿನಿಯಾಗಿ ಕೆಲಸ ಮಾಡುತ್ತದೆ. ಈ ಎಲೆಗಳು ಉತ್ಕರ್ಷಣ ನಿರೋಧಕಗಳನ್ನು ಹೊಂದಿರುತ್ತವೆ. ಇದು ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಜೊತೆಗೆ ಈ ಪುದೀನಾ ಎಲೆಗಳು, ಮುಟ್ಟಿನ ಸಮಯದಲ್ಲಿ ಮಹಿಳೆಯರಲ್ಲಿ ಕಂಡು ಬರುವ ಹೊಟ್ಟೆ ನೋವು, ಉರಿಯೂತ ಮತ್ತು ಬೆನ್ನು ನೋವಿಗೆ ಮುಕ್ತಿ ನೀಡುತ್ತದೆ ಅಲ್ಲದೆ ದೇಹಕ್ಕೆ ವಿಶ್ರಾಂತಿ ನೀಡಲು ಸಹಾಯ ಮಾಡುತ್ತದೆ.

ಇದನ್ನೂ ಓದಿ: ತೂಕ ಇಳಿಕೆಗೆ ಯಾವ ಖರ್ಜೂರ ಉತ್ತಮ? ಇಲ್ಲಿದೆ 6 ವಿಧದ ಖರ್ಜೂರ

ಬಾಯಿಯಿಂದ ಯಾವಾಗಲೂ ಕೊಳಕು ವಾಸನೆ ಬರುತ್ತಿದ್ದರೆ ಪುದೀನಾ ಎಲೆಗಳು ಈ ಸಮಸ್ಯೆಗೆ ರಾಮಬಾಣವಾಗಿದೆ. ಇದನ್ನು ಪ್ರತಿನಿತ್ಯ ಸೇವನೆ ಮಾಡುವುದರಿಂದ ಬಾಯಿಯಲ್ಲಿರುವ ರೋಗಾಣುಗಳು ಸಾಯುತ್ತವೆ. ಕೊಳಕು ವಾಸನೆ ಬರುವುದಿಲ್ಲ. ಈ ಎಲೆಗಳು ಮಾರುಕಟ್ಟೆಗಳಲ್ಲಿ ಸುಲಭವಾಗಿ ಲಭ್ಯವಿದ್ದು ಮನೆಗಳಲ್ಲಿಯೂ ಬೆಳೆಸಬಹುದು ಜೊತೆಗೆ ಇದು ಅಗ್ಗವೂ ಹೌದು. ಹಾಗಾಗಿ ಪ್ರತಿದಿನ ಬೆಳಿಗ್ಗೆ ಮೂರು ಅಥವಾ ನಾಲ್ಕು ತಾಜಾ ಎಲೆಗಳನ್ನು ಜಗಿದು ತಿನ್ನಿರಿ, ಪ್ರಯೋಜನಗಳನ್ನು ನೀವೇ ನೋಡಬಹುದು.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ