Eye Checkup For Babies: ಶಿಶುವಿಗೆ ಕಣ್ಣಿನ ತಪಾಸಣೆ ಮುಖ್ಯವೇ? ವೈದ್ಯರ ಅಭಿಪ್ರಾಯವೇನು?
ಹುಟ್ಟಿನಿಂದಲೇ ಮಗುವಿನ ದೇಹದ ಸರಿಯಾದ ಪರೀಕ್ಷೆ ಮಾಡಿಸುವುದು ಅತ್ಯಂತ ಅವಶ್ಯಕ, ಇದರಿಂದ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಪತ್ತೆಹಚ್ಚಬಹುದು ಜೊತೆಗೆ ಆ ಸಮಸ್ಯೆ ಉಲ್ಬಣಗೊಳ್ಳುವುದನ್ನು ತಡೆಯಬಹುದು. ಆದರೆ ಜನನದ ನಂತರ, ಪೋಷಕರು ಹೆಚ್ಚಾಗಿ ಶಿಶುಗಳ ಕಣ್ಣಿನ ಆರೋಗ್ಯವನ್ನು ಕಡೆಗಣಿಸುತ್ತಾರೆ. ದೇಹದ ಇತರ ಭಾಗಗಳಂತೆ, ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಪೋಷಕರಿಗೆ ಬಹಳ ಮುಖ್ಯವಾಗುತ್ತದೆ. ಆದರೆ ಅನೇಕ ಬಾರಿ ಶಿಶುಗಳಿಗೆ ಕಣ್ಣಿನ ಪರೀಕ್ಷೆ ಮಾಡುವುದು ಅಗತ್ಯವೇ ಅಥವಾ ಬೇಡವೇ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತದೆ. ಹಾಗಾದರೆ ಶಿಶುವಿಗೆ ಕಣ್ಣಿನ ತಪಾಸಣೆ ಮುಖ್ಯವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.

ಪೋಷಕರಾದ ನಂತರ ಜವಾಬ್ದಾರಿಗಳು ಹೆಚ್ಚುತ್ತವೆ. ಆಗ ಪ್ರತಿಯೊಬ್ಬ ಪೋಷಕರ ಆದ್ಯತೆಯೂ ಅವರ ಮಗುವಾಗಿರುತ್ತದೆ. ಇಂತಹ ಪರಿಸ್ಥಿತಿಯಲ್ಲಿ, ಮಗುವಿನ ಯೋಗಕ್ಷೇಮ ಎಲ್ಲಕಿಂತ ಮುಖ್ಯವಾಗುತ್ತದೆ. ಮಗು ಹುಟ್ಟಿದ ಬಳಿಕ ನಿಜವಾದ ಆತಂಕ ಆರಂಭವಾಗುತ್ತದೆ. ಏಕೆಂದರೆ ಪ್ರತಿ ದಿನವೂ ಮಗುವಿನ ಬಗ್ಗೆ ಕಾಳಜಿ ವಹಿಸಬೇಕಾಗುತ್ತದೆ. ಅದರಲ್ಲಿಯೂ ಹುಟ್ಟಿನಿಂದಲೇ ಮಗುವಿನ ದೇಹದ ಸರಿಯಾದ ಪರೀಕ್ಷೆ ಮಾಡಿಸುವುದು ಅತ್ಯಂತ ಅವಶ್ಯಕ, ಇದರಿಂದ ದೇಹದಲ್ಲಿ ಯಾವುದೇ ರೀತಿಯ ಸಮಸ್ಯೆಗಳಿದ್ದರೂ ಪತ್ತೆಹಚ್ಚಬಹುದು ಜೊತೆಗೆ ಆ ಸಮಸ್ಯೆ ಉಲ್ಬಣಗೊಳ್ಳುವುದನ್ನು ತಡೆಯಬಹುದು. ಆದರೆ ಜನನದ ನಂತರ, ಪೋಷಕರು ಹೆಚ್ಚಾಗಿ ಶಿಶುಗಳ ಕಣ್ಣಿನ ಆರೋಗ್ಯವನ್ನು ಕಡೆಗಣಿಸುತ್ತಾರೆ. ದೇಹದ ಇತರ ಭಾಗಗಳಂತೆ, ಕಣ್ಣಿನ ಆರೋಗ್ಯದ ಬಗ್ಗೆ ವಿಶೇಷ ಗಮನ ಹರಿಸುವುದು ಪೋಷಕರಿಗೆ ಬಹಳ ಮುಖ್ಯವಾಗುತ್ತದೆ. ಆದರೆ ಅನೇಕ ಬಾರಿ ಶಿಶುಗಳಿಗೆ ಕಣ್ಣಿನ ಪರೀಕ್ಷೆ ಮಾಡುವುದು ಅಗತ್ಯವೇ ಅಥವಾ ಬೇಡವೇ ಎಂಬ ಪ್ರಶ್ನೆ ಪೋಷಕರನ್ನು ಕಾಡುತ್ತದೆ. ಹಾಗಾದರೆ ಶಿಶುವಿಗೆ ಕಣ್ಣಿನ ತಪಾಸಣೆ ಮುಖ್ಯವೇ? ವೈದ್ಯರು ಈ ಬಗ್ಗೆ ಏನು ಹೇಳುತ್ತಾರೆ ಎಂಬುದನ್ನು ತಿಳಿದುಕೊಳ್ಳಿ.
ನವಜಾತ ಶಿಶುವಿಗೆ ಕಣ್ಣಿನ ತಪಾಸಣೆ ಮುಖ್ಯವೇ?
ದೆಹಲಿಯ ಎಕ್ಸೆಲ್ ಐ ಕ್ಲಿನಿಕ್ ನ ನೇತ್ರತಜ್ಞೆ ಡಾ. ಅನಿಶಾ ಸೇಠ್ ಗುಪ್ತಾ ಅವರು ಈ ಬಗ್ಗೆ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಕೆಲವು ಶಿಶುಗಳಿಗೆ, ಹೆಚ್ಚಿನ ಕಾಳಜಿ ಅಥವಾ ಅಪಾಯದ ಅಂಶಗಳು ಇಲ್ಲದಿದ್ದರೆ ಕಣ್ಣಿನ ತಪಾಸಣೆ ಅಗತ್ಯವಿಲ್ಲ. ಸಾಮಾನ್ಯವಾಗಿ, ನವಜಾತ ಶಿಶುಗಳ ಜನನದ ನಂತರ ಹಲವಾರು ರೀಕ್ಷೆಗಳನ್ನು ನಡೆಸಲಾಗುತ್ತದೆ, ಆದರೆ ಕಣ್ಣಿನ ತಪಾಸಣೆ ಮಗು ಜನನವಾದ ನಂತರ ಮಾಡುವ ಪರೀಕ್ಷೆಯ ಭಾಗವಲ್ಲ. ಹಾಗಾಗಿ ಮಗುವಿಗೆ ಯಾವುದೇ ರೀತಿಯ ಕಣ್ಣಿಗೆ ಸಂಬಂಧಿತ ಸಮಸ್ಯೆಗಳು ಇಲ್ಲದಿದ್ದರೆ ಕಣ್ಣಿನ ತಪಾಸಣೆಗೆ ಮಾಡಿಸಬೇಕೇ ಅಥವಾ ಬೇಡವೇ ಎಂದು ಪೋಷಕರು ಯೋಚಿಸುತ್ತಾರೆ. ಆದರೆ ಈ ಸಮಯದಲ್ಲಿ ಶಿಶುಗಳಿಗೆ ಕಣ್ಣಿನ ತಪಾಸಣೆ ಆರ್ ಒಪಿ ಸ್ಕ್ರೀನಿಂಗ್ ಅತ್ಯಗತ್ಯವಾಗಿದೆ. ಅಕಾಲಿಕ ಶಿಶುಗಳು, ಅಂದರೆ 34 ವಾರಗಳಿಗಿಂತ ಕಡಿಮೆ ಅಥವಾ 2 ಕಿಲೋ ಗ್ರಾಂಗಳಿಗಿಂತ ಕಡಿಮೆ ತೂಕವಿರುವವರು ಹೆಚ್ಚಿನ ಅಪಾಯದಲ್ಲಿರುತ್ತಾರೆ. ಆರ್ ಒಪಿ ಎಂದರೆ ಅವಧಿಪೂರ್ವ ಶಿಶುಗಳ ಮೇಲೆ ಪರಿಣಾಮ ಬೀರುವ ರೆಟಿನೋಪತಿ ಆಫ್ ಪ್ರಿಮೆಚ್ಯೂರಿಟಿ. ಜನನದ ನಂತರ ಶಿಶುಗಳಲ್ಲಿ ಈ ಸಮಸ್ಯೆಯನ್ನು ಗುರುತಿಸುವುದು ಬಹಳ ಮುಖ್ಯ ಜೊತೆಗೆ ಚಿಕಿತ್ಸೆಯೂ ಅವಶ್ಯಕ.
ಶಿಶುಗಳಿಗೆ ಕಣ್ಣಿನ ತಪಾಸಣೆ ಏಕೆ ಮುಖ್ಯ?
ಸಾಮಾನ್ಯವಾಗಿ ಅವಧಿ ಪೂರ್ವ ಅಥವಾ ತೂಕ ಕಡಿಮೆ ಇರುವ ಶಿಶುಗಳು ವಿವಿಧ ರೀತಿಯ ಆರೋಗ್ಯ ಸಮಸ್ಯೆಗಳ ಅಪಾಯದಲ್ಲಿರುತ್ತಾರೆ. ಹಾಗಾಗಿ ಶಿಶುಗಳ ಆರೈಕೆಯ ಸಮಯದಲ್ಲಿ, ಆರ್ ಒಪಿ ಸ್ಕ್ರೀನಿಂಗ್ ಮುಖ್ಯವಾಗಿದೆ. ಸರಿಯಾದ ಸಮಯದಲ್ಲಿ ಜನಿಸಿದ ಶಿಶುಗಳಿಗೂ ಈ ಸ್ಕ್ರೀನಿಂಗ್ ಪ್ರಯೋಜನಕಾರಿಯಾಗಿದೆ. ಜನನದ ನಂತರ ಕಣ್ಣಿನ ತಪಾಸಣೆ ನಡೆಸುವುದರಿಂದ ಶಿಶುಗಳಲ್ಲಿ ಜನ್ಮಜಾತ ಕಣ್ಣಿನ ಪೊರೆ, ಸ್ಟ್ರಾಬಿಸ್ಮಸ್ ಅಥವಾ ಇತರ ಕಣ್ಣಿನ ಸಂಬಂಧಿತ ಸಮಸ್ಯೆಗಳ ಅಪಾಯವನ್ನು ಪತ್ತೆಹಚ್ಚುವ ಮೂಲಕ ಮಗುವಿನ ಕಣ್ಣುಗಳಲ್ಲಿನ ಸಂಭಾವ್ಯ ಸಮಸ್ಯೆಗಳನ್ನು ಕಂಡುಹಿಡಿಯಬಹುದು.
ಇದನ್ನೂ ಓದಿ: ಯಕೃತ್ತಿನ ಆರೋಗ್ಯ ಕಾಪಾಡಲು ಮಲಗುವ ಮೊದಲು ಇದರ ನೀರನ್ನು ಕುಡಿಯಿರಿ
ಪೋಷಕರು ತಮ್ಮ ಮಕ್ಕಳ ಕಣ್ಣುಗಳನ್ನು ಯಾವಾಗ ಪರೀಕ್ಷಿಸಬೇಕು?
ಈ ಪ್ರಶ್ನೆ ಆಗಾಗ ಪೋಷಕರನ್ನು ಕಾಡುತ್ತದೆ. ಇಂತಹ ಸಂದರ್ಭಗಳಲ್ಲಿ, ನಿಮ್ಮ ಮಗು ಅಕಾಲಿಕವಾಗಿ ಜನಿಸಿದ್ದರೆ, ಆರ್ ಒಪಿ ಸ್ಕ್ರೀನಿಂಗ್ ವೇಳಾಪಟ್ಟಿಯನ್ನು ಅನುಸರಿಸುವುದು ಬಹಳ ಮುಖ್ಯ. ಇನ್ನು ಸಮಯಕ್ಕೆ ಸರಿಯಾಗಿ ಜನಿಸಿದ ಮಕ್ಕಳಿಗೂ, ಕಣ್ಣಿನ ತಪಾಸಣೆ ಮಾಡುವುದು ಒಳ್ಳೆಯದು. ಮಕ್ಕಳ ಭೇಟಿಯಿಂದ ಪ್ರಾರಂಭವಾಗಿ ಮಗುವಿನ ಕಣ್ಣಿನ ಚಲನೆ ಅಥವಾ ನೋಟದಲ್ಲಿ ಯಾವುದೇ ರೀತಿಯ ಸಮಸ್ಯೆ ಇದ್ದರೆ, ತಕ್ಷಣ ವೈದ್ಯರನ್ನು ಸಂಪರ್ಕಿಸಿಸುವುದು ಒಳ್ಳೆಯದು. ಆದರೆ ಹುಟ್ಟಿದ ಎಲ್ಲಾ ಮಗುವಿಗೂ ಕಣ್ಣಿನ ಪರೀಕ್ಷೆ ಮಾಡುವ ಅಗತ್ಯವಿಲ್ಲ, ಆದರೆ ಮಗು ಅವಧಿ ಪೂರ್ವದಲ್ಲಿ ಜನಿಸಿದರೆ ಅಥವಾ ಯಾವುದೇ ರೀತಿಯ ಕಣ್ಣಿನ ಸಮಸ್ಯೆಗಳನ್ನು ಹೊಂದಿದೆ ಎಂಬುದನ್ನು ನೀವು ಗಮನಿಸಿದರೆ ತಕ್ಷಣ ತಮ್ಮ ವೈದ್ಯರನ್ನು ಸಂಪರ್ಕಿಸುವುದು ಮತ್ತು ಮಗುವಿನ ಕಣ್ಣುಗಳನ್ನು ಪರೀಕ್ಷಿಸುವುದು ಅತ್ಯಗತ್ಯ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ