ಅಲ್ಝೈಮರ್, ಕ್ಯಾನ್ಸರ್ ನಿಯಂತ್ರಣಕ್ಕೆ ಅಣಬೆ!
ಅಲ್ಝೈಮರ್ ಮೆಮೊರಿ ಸಮಸ್ಯೆಗಳಿಗೆ ಲಯನ್ಸ್ ಮೇನ್ ಅಣಬೆ, ಕ್ಯಾನ್ಸರ್ ನಿಯಂತ್ರಣಕ್ಕೆ ಶಿಥಾಕೆ ಅಣಬೆ ಮತ್ತು ಕ್ಯಾಲ್ಸಿಯಂ ಕೊರತೆಗೆ ಎಲ್ಮ್ ಆಯಿಸ್ಟರ್ ಅಣಬೆಗಳು ಸಹಾಯಕವಾಗುತ್ತವೆ ಎಂದು ತಿಳಿಸಲಾಗಿದೆ. ಅಣಬೆಗಳಲ್ಲಿ ನಾರಿನಾಂಶ, ಪೊಟ್ಯಾಸಿಯಮ್, ವಿಟಮಿನ್ ಡಿ ಮತ್ತು ಪ್ರೋಟೀನ್‌ಗಳು ಸಮೃದ್ಧವಾಗಿವೆ. ಅಣಬೆಯಲ್ಲಿ ನಾರಿನಾಂಶ, ಪೊಟ್ಯಾಸಿಯಣ, ವಿಟಮಿನ್ ಡಿ ಮತ್ತು ಪ್ರೊಟೀನ್ಗಳು ಹೇರಳವಾಗಿವೆ.

ಬೆಂಗಳೂರು, ಫೆಬ್ರವರಿ 26: ಮನುಷ್ಯನ ನೆನಪಿನ ಶಕ್ತಿ ಕುಂದಿಸುವ ಅಲ್ಝೈಮರ್ (Alzheimer), ಕ್ಯಾನ್ಸರ್ (Cancer) ನಿಯಂತ್ರಣಕ್ಕೆ ಮತ್ತು ಕ್ಯಾಲ್ಸಿಯಂ ಕೊರತೆ ನೀಗಿಸಲು ಬಹು ಔಷಧೀಯ ಗುಣಗಳುಳ್ಳ ಅಣಬೆ (Mushroom) ಬಂದಿವೆ. ಮೆದುಳಿನ ನರ ಕೋಶಗಳು ಸತ್ತಾಗ ಮೆದುಳು ಮತ್ತು ನರಮಂಡಲದ ಮೇಲೆ ಪರಿಣಾಮ ಬೀರಿ ಉಂಟಾಗುವ ಮರೆವಿನ ಕಾಯಿಲೆಯಾದ ಆಲ್ಝೈಮರ್ ಅನ್ನು ನಿಯಂತ್ರಣದಲ್ಲಿಡುವುದು ಹಾಗೂ ನರ ಕೋಶಗಳನ್ನು ತೀರಾ ಹಾನಿಗೊಳಗಾದಂತೆ ತಡೆಯಲು ಲಯನ್ಸ್ ಮೇನ್ ಹೆಸರಿನ ಅಣಬೆಯನ್ನು ಭಾರತೀಯ ತೋಟಗಾರಿಕಾ ಸಂಶೋಧನಾ ಸಂಸ್ಥೆ (ಐಐಹೆಚ್ಆರ್) ಅಭಿವೃದ್ಧಿಪಡಿಸಿದೆ.
ಹಾನಿಗೊಳಗಾಗುವ ನಗರಗಳಿಗೆ ಬಲ ತುಂಬ ಪೋಷಕಾಂಶಗಳು ಈ ಅಣಬೆಯಲ್ಲಿವೆ. ಇನ್ನು, ದೇಹದಲ್ಲಿ ಕ್ಯಾಲ್ಸಿಯಂ ಕೊರತೆ ಕುಂಡುಬಂದಲ್ಲಿ ಎಲ್ಮ್ಆಯಿಸ್ಟರ್ ಎಂಬ ಅಣಬೆಗಳನ್ನು ನಿಯಮಿತವಾಗಿ ಸೇವಿಸಿದರೆ ಕ್ಯಾಲ್ಸಿಯಂ ಸಮ ಸ್ಥಿತಿಗೆ ಬರುತ್ತದೆ ಎಂದು ವರದಿಯಾಗಿದೆ.
ಕ್ಯಾನ್ಸರ್ ಅನ್ನು ನಿಯಂತ್ರಣದಲ್ಲಿಡುವ ಹಾಗೂ ಕ್ಯಾನ್ಸರ್ ರೋಗಿಗಳಿಗೆ ರೋಗ ನಿರೋಧಕ ಶಕ್ತಿ ಹೆಚ್ಚಿಸುವ ವಿಶಿಷ್ಟ ಗುಣಗಳುಳ್ಳ, ಜೊತೆಗೆ ದೇಹದಲ್ಲಿನ ಕೊಬ್ಬನ್ನು ನಿಯಂತ್ರಿಸುವ ಅಣಬೆ ಶಿಥಾಕೆ. ಕೀಮೋಥೆರಪಿ ಮಾಡಿಸಿಕೊಳ್ಳವ ಕ್ಯಾನ್ಸರ್ ರೋಗಗಳಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಲು ಇದು ಸಹಕಾರಿಯಾಗಿದೆ. ಇನ್ನು, ಅಣಬೆಯಲ್ಲಿ ಡಿ ವಿಟಮಿನ್ ಇದ್ದು, ಡಯಾಬಿಟೀಸ್ ನಿಯಂತ್ರಣಕ್ಕೂ ಉತ್ತಮವಾಗಿದೆ. ಇದರ ಜೊತೆಗೆ ಕಿಂಗ್ ಆಯಿಸ್ಟ್ರರ್ ಹೆಸರಿನ ಅಣಬೆಯೂ ಎಲ್ಲರಿಗೆ ಅಚ್ಚುಮೆಚ್ಚಾಗಿದೆ.
ಇದನ್ನೂ ಓದಿ: ಮಕ್ಕಳಲ್ಲಿ ಮಧುಮೇಹ ಬರದಂತೆ ತಡೆಯಲು ಈ ಸಲಹೆಗಳನ್ನು ಪಾಲಿಸಿ
ಸಾಮಾನ್ಯವಾಗಿ ಎಲ್ಲ ಬಗೆಯ ಅಣಬೆಗಳಲ್ಲಿ ಆರೋಗ್ಯಕ್ಕೆ ಪೂರಕವಾದ ಔಷಧೀಯ ಗುಣಗಳಿವೆ. ನಾರಿನಾಂಶ, ಪೊಟ್ಯಾಸಿಯಣ, ವಿಟಮಿನ್ ಡಿ ಮತ್ತು ಪ್ರೊಟೀನ್ಗಳು ಹೇರಳವಾಗಿವೆ.
ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ
Published On - 12:32 pm, Wed, 26 February 25




