ಮದುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇಲ್ಲಿದೆ ರಾಮಬಾಣ

ಅಡುಗೆಮನೆಯಲ್ಲಿನ ಲವಂಗ ಮಧುಮೇಹಿಗಳಿಗೆ ರಾಮಬಾಣವಾಗಿದೆ.

ಮದುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳಲು ಇಲ್ಲಿದೆ ರಾಮಬಾಣ
ಲವಂಗ
TV9kannada Web Team

| Edited By: Vivek Biradar

Sep 15, 2022 | 7:00 AM

ಕೋವಿಡ್ ಸಾಂಕ್ರಾಮಿಕವು ಅನೇಕ ಜನರ ಜೀವನ ವಿಧಾನದ ಮೇಲೆ ಶಾಶ್ವತವಾದ ಪರಿಣಾಮವನ್ನು ಬೀರಿದೆ. ಹ್ಯುಮುನಿಟಿ ಪವರ್​ ಹಾನಿಗೊಳಿಸುವುದರ ಹೊರತಾಗಿ, ಇದು ಮನೆಯಿಂದ ಕೆಲಸ ಮಾಡವ (work from home) ಸಹ ಪ್ರಾರಂಭಿಸಿತು. ಇದರಿಂದ ಗಂಟೆಗಟ್ಟಲೆ ಸುಮ್ಮನೆ ಕೂರುವುದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಎದುರಾಗುತ್ತವೆ. ಈ ರೀತಿಯ ಜೀವನಶೈಲಿ ಮತ್ತು ಆಹಾರ ಪದ್ಧತಿಯೇ ಅದಕ್ಕೆ ಮಧುಮೇಹಕ್ಕೆ ಮುಖ್ಯ ಕಾರಣ ಎನ್ನುತ್ತಾರೆ ತಜ್ಞರು.

ಇಂದು ಅನೇಕ ಜನರು ಎದುರಿಸುತ್ತಿರುವ ಪ್ರಮುಖ ಸಮಸ್ಯೆಗಳಲ್ಲಿ ಮಧುಮೇಹವೂ ಒಂದು. ನಮ್ಮ ದೇಶದಲ್ಲಿ ಅನೇಕ ಜನರು ಈ ಕಾಯಿಲೆಯಿಂದ ಬಳಲುತ್ತಿದ್ದಾರೆ. ಮಧುಮೇಹಿಗಳ ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸುವುದು ಬಹಳ ಮುಖ್ಯ. ಅಧಿಕ ರಕ್ತದ ಗ್ಲೂಕೋಸ್ ಮಟ್ಟಗಳು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಅದಕ್ಕಾಗಿಯೇ ಆರೋಗ್ಯ ತಜ್ಞರು ಮಧುಮೇಹ ರೋಗಿಗಳಿಗೆ ಕಡಿಮೆ ಗ್ಲೈಸೆಮಿಕ್ ಇಂಡೆಕ್ಸ್ ಹೊಂದಿರುವ ಆಹಾರವನ್ನು ಸೇವಿಸಲು ಸಲಹೆ ನೀಡುತ್ತಾರೆ.

ಅಡುಗೆಮನೆಯಲ್ಲಿ ಸಿಗುವ ಲವಂಗವು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ ಎಂದು ನಿಮಗೆ ತಿಳಿದಿದೆಯೇ? ಅಡುಗೆಮನೆಯಲ್ಲಿನ ಲವಂಗ ಮಧುಮೇಹಿಗಳಿಗೆ ರಾಮಬಾಣವಾಗಿದೆ.

ಮಧುಮೇಹಿಗಳಿಗೆ ಲವಂಗ ಹೇಗೆ ಕೆಲಸ ಮಾಡುತ್ತದೆ?

ಲವಂಗವು ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ಔಷಧೀಯ ಗುಣಗಳಿಂದ ಕೂಡಿದೆ. ಲವಂಗವನ್ನು ತಿನ್ನುವುದರಿಂದ ಶೀತ, ಕೆಮ್ಮು ಮತ್ತು ತಲೆನೋವಿನಂತಹ ಸಮಸ್ಯೆಗಳಿಂದ ಮುಕ್ತಿ ಪಡೆಯಬಹುದು. ಇದಲ್ಲದೆ, ಲವಂಗವು ರಕ್ತದಲ್ಲಿನ ಗ್ಲೂಕೋಸ್ ಮಟ್ಟವನ್ನು ನಿಯಂತ್ರಿಸುವ ಗುಣಗಳನ್ನು ಸಹ ಹೊಂದಿದೆ. ಆದರೆ ಮಧುಮೇಹ ರೋಗಿಗಳು ಲವಂಗವನ್ನು ಸೇವಿಸುವ ಮೊದಲು ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಮಧುಮೇಹಿಗಳು ಲವಂಗವನ್ನು ಹೇಗೆ ತಿನ್ನಬೇಕು?

ಒಂದು ಲೋಟ ನೀರಿನಲ್ಲಿ 8 ಅಥವಾ 10 ಲವಂಗವನ್ನು ಕುದಿಸಿ. ಈ ನೀರನ್ನು ಸೋಸಿ ಬಿಸಿ ಇರುವಾಗಲೇ ಕುಡಿಯಿರಿ. ಮಧುಮೇಹಿಗಳು ಇದನ್ನು ಕನಿಷ್ಠ ಮೂರು ತಿಂಗಳ ಕಾಲ ಕುಡಿದರೆ ರಕ್ತದಲ್ಲಿನ ಸಕ್ಕರೆ ಅಂಶವನ್ನು ನಿಯಂತ್ರಣದಲ್ಲಿರುತ್ತದೆ ಎನ್ನುತ್ತಾರೆ ಆರೋಗ್ಯ ತಜ್ಞರು.

ತಾಜಾ ಸುದ್ದಿ

Follow us on

Related Stories

Most Read Stories

Click on your DTH Provider to Add TV9 Kannada