ತಲೆ ಕೂದಲು ದಟ್ಟವಾಗಿ ಬೆಳೆಯಲು ಅನೇಕರು ಕೊಬ್ಬರಿ ಎಣ್ಣೆಯನ್ನು ಬಳಸುತ್ತಾರೆ. ಹಾಗೆಯೇ ಬೇಸಿಗೆಯ ಸಮಯದಲ್ಲಿ ಮೈ-ಕೈಗೆ ಸವರಿಕೊಳ್ಳುತ್ತಾರೆ. ಚಳಿಗಾಲದ ಸಮಯದಲ್ಲಿ ಮುಖ ಒಡಕು ಕಾಣಿಸುತ್ತದೆ ಎಂಬ ಕಾರಣಕ್ಕೆ ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಕೊಬ್ಬರಿ ಎಣ್ಣೆಯನ್ನು ಹೆಚ್ಚು ಬಳಸುತ್ತಾರೆ. ಕೆಲವರು ಸ್ನಾನ ಮಾಡಿ ಬಂದ ತಕ್ಷಣ ಕೊಬ್ಬರಿ ಎಣ್ಣೆಯನ್ನು ಮೈ-ಕೈಗೆ ಹಚ್ಚಿಕೊಳ್ಳುವ ರೂಢಿಯಿರುತ್ತದೆ. ಆದರೆ ಅತಿಯಾಗಿ ಕೊಬ್ಬರಿ ಎಣ್ಣೆ ಬಳಕೆ ನಿಮ್ಮ ಸೂಕ್ಷ್ಮ ಚರ್ಮಕ್ಕೆ ಹಾನಿಯುಂಟು ಮಾಡುವ ಸಾಧ್ಯತೆ ಹೆಚ್ಚಿರುತ್ತದೆ.
ರಾತ್ರಿ ಮಲಗುವ ಮುನ್ನ ಕೊಬ್ಬರಿ ಎಣ್ಣೆಯನ್ನು ಹಚ್ಚಿಕೊಂಡು ಮಲಗುವ ಅಭ್ಯಾಸ ರೂಢಿಯಲ್ಲಿರುತ್ತದೆ. ಅತಿಯಾಗಿ ಕೊಬ್ಬರಿ ಎಣ್ಣೆ ಅಥವಾ ತೆಂಗಿನ ಎಣ್ಣೆಯನ್ನು ಬಳಸಿದರೆ ಚರ್ಮದ ಹಾನಿ ಉಂಟಾಗುತ್ತದೆ. ರಾತ್ರಿ ಮಲಗುವ ಮುನ್ನ ಅತಿಯಾಗಿ ಕೂದಲಿಗೆ ಏಣ್ಣೆ ಹಚ್ಚಿ ಮಲಗಿದರೆ ಕೂದಲು ಬೆಳವಣಿಗೆಗೆ ತೊಂದರೆಯಾಗುವ ಸಾಧ್ಯತೆ ಹೆಚ್ಚಾಗಿರುತ್ತದೆ.
ರಾತ್ರಿ ನೀವು ಮುಖಕ್ಕೆ ಕೊಬ್ಬರಿ ಎಣ್ಣೆಯನ್ನು ಹಚ್ಚಿ ಮಲಗಿದರೆ ಬೆಳಿಗ್ಗೆ ಎದ್ದ ತಕ್ಷಣ ಮುಖವನ್ನು ಸ್ವಚ್ಛವಾಗಿ ತೊಳೆಯಿರಿ. ಏಕೆಂದರೆ ಎಣ್ಣೆಯುಕ್ತ ಚರ್ಮದಿಂದ ಮುಖದಲ್ಲಿ ಮೊಡವೆಗಳು ಏಳುತ್ತವೆ. ಕೊಬ್ಬರಿ ಎಣ್ಣೆಯಲ್ಲಿ ಹೆಚ್ಚು ಕೊಲೆಸ್ಟ್ರಾಲ್ ಮಟ್ಟ ಇರುವುದರಿಂದ ದೇಹದಲ್ಲಿ ಬೊಜ್ಜು ಕಾಣಿಸಿಕೊಳ್ಳಲು ಕಾರಣವಾಗುತ್ತದೆ. ಅತಿಯಾಗಿ ಜಂಕ್ಫುಡ್ಗಳ ಸೇವನೆಯಿಂದಲೂ ದೇಹದಲ್ಲಿ ಕೊಲೆಸ್ಟ್ರಾಲ್ ಮಟ್ಟ ಹೆಚ್ಚಿ ಬೊಜ್ಜು ಕಾಣಿಸಿಕೊಳ್ಳುತ್ತದೆ. ಇದು ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗಬಹುದು.
ಹೆಚ್ಚಾಗಿ ತೆಂಗಿನ ಎಣ್ಣೆಯನ್ನು ಚರ್ಮಕ್ಕೆ ಹಚ್ಚಿಕೊಳ್ಳುವುದರಿಂದ ಅಲರ್ಜಿ ಸಮಸ್ಯೆ ಕಂಡು ಬರುತ್ತವೆ. ಚಳಿಗಾಲದಲ್ಲಿ ಬಳಸುವ ಬಿಸಿ ಎಣ್ಣೆಯಿಂದ ಮುಖ ಕೆಂಪು ಬಣ್ಣಕ್ಕೆ ತಿರುಗುತ್ತದೆ ಹಾಗೂ ಕೊಬ್ಬರಿ ಎಣ್ಣೆಯ ಹೆಚ್ಚಿನ ಸೇವನೆಯಿಂದ ಆರೋಗ್ಯಕ್ಕೂ ಹಾನಿಯುಂಟಾಗುತ್ತದೆ.
ಕೊಬ್ಬರಿ ಎಣ್ಣೆಯಲ್ಲಿ ಕರಿದ ತಿಂಡಿಗಳನ್ನು ಹೆಚ್ಚು ಸೇವಿಸುವುದರಿಂದ ಮುಖ ಕಾಂತಿ ಕಳೆದುಕೊಳ್ಳುತ್ತದೆ. ಮೊಡವೆಗಳು ಕಾಣಿಸಿಕೊಳ್ಳಲು ಆರಂಭಗೊಳ್ಳುತ್ತದೆ. ಕೆಮ್ಮು, ಕಫದಂತಹ ಸಮಸ್ಯೆಗಳು ಕಂಡು ಬರುತ್ತವೆ. ಆದ್ದರಿಂದ ಯಾವುದೇ ಪದಾರ್ಥವನ್ನು ಅತಿಯಾಗಿ ಸೇವಿಸುವುದು ಒಳ್ಳೆಯದಲ್ಲ. ಹಿತ-ಮಿತವಾಗಿ ಬಳಸಿ ನಿಮ್ಮ ಆರೋಗ್ಯದ ಕಾಳಜಿ ಮಾಡಿ.
ಇದನ್ನೂ ಓದಿ:
ಕಣ್ಣಿಗೆ ತಂಪು ದೇಹಕ್ಕೆ ಸೊಂಪು! ದೀಪಾವಳಿಗಷ್ಟೇ ಅಲ್ಲ.. ನಿತ್ಯವೂ ಮಾಡಿ ಎಣ್ಣೆ ಸ್ನಾನ