ಎಳನೀರನ್ನು ಯಾವ ಸಮಯದಲ್ಲಿ ಕುಡಿದರೆ ಒಳ್ಳೆಯದು?

|

Updated on: Jan 20, 2024 | 6:46 PM

ನೀವು ಸೋಡಾ ಅಥವಾ ಇತರ ಸಕ್ಕರೆ ಪಾನೀಯಗಳನ್ನು ಸೇವಿಸಲು ಆಸೆಯಾದಾಗೆಲ್ಲ ಎಳನೀರು ಸೇವಿಸಿದರೆ ನಿಮ್ಮ ದೇಹಕ್ಕೆ ಹೆಚ್ಚಿನ ಸಕ್ಕರೆ ಅಥವಾ ಕ್ಯಾಲೋರಿ ಸೇರ್ಪಡೆಯಾಗುವುದಿಲ್ಲ. ಆದರೆ ಎಳನೀರು ಕುಡಿಯಲು ಒಳ್ಳೆಯ ಸಮಯವಿದೆಯೇ?

ಎಳನೀರನ್ನು ಯಾವ ಸಮಯದಲ್ಲಿ ಕುಡಿದರೆ ಒಳ್ಳೆಯದು?
ಎಳನೀರು
Image Credit source: iStock
Follow us on

ದಿನವೂ ನಮ್ಮ ದೇಹವನ್ನು ಸರಿಯಾಗಿ ಹೈಡ್ರೇಟ್ ಮಾಡುವುದು ಅತ್ಯಗತ್ಯ. ಇಲ್ಲವಾದರೆ ನಿರ್ಜಲೀಕರಣದಿಂದ ಹಲವು ರೀತಿಯ ಆರೋಗ್ಯ ಸಮಸ್ಯೆಗಳು ಉಂಟಾಗುತ್ತವೆ. ಎಳನೀರು ನಮ್ಮ ಬಾಯಾರಿಕೆಯನ್ನು ನೀಗಿಸುವುದು ಮಾತ್ರವಲ್ಲದೆ ನಮ್ಮ ದೇಹಕ್ಕೆ ಅಗತ್ಯವಾದ ಶಕ್ತಿಯನ್ನು ನೀಡುತ್ತವೆ. ಆದರೆ ಎಳನೀರು ಕುಡಿಯಲು ಒಳ್ಳೆಯ ಸಮಯವಿದೆಯೇ? ಯಾವುದು ಎಳನೀರು ಕುಡಿಯಲು ಸರಿಯಾದ ಸಮಯ? ಎಂಬ ಬಗ್ಗೆ ಮಾಹಿತಿ ಇಲ್ಲಿದೆ.

ಪ್ರತಿದಿನ ಬೆಳಿಗ್ಗೆ 10 ಗಂಟೆಗೆ 1 ಲೋಟ ಎಳನೀರನ್ನು ಕುಡಿಯುವುದರಿಂದ ತೂಕ ಇಳಿಸಲು ಸಹಾಯಕವಾಗಿದೆ. ಇದು ದೇಹವನ್ನು ಹೈಡ್ರೇಟ್ ಆಗಿಡುತ್ತದೆ ಮತ್ತು ಬ್ಯಾಕ್ಟೀರಿಯಾದ ಸೋಂಕನ್ನು ತಡೆಯುತ್ತದೆ. ಎಳನೀರಿನಲ್ಲಿ ಕ್ಯಾಲೋರಿ ಕಡಿಮೆ ಇದ್ದು, ಮೆಡಿಕಲ್ ನ್ಯೂಸ್ ಟುಡೇ ವರದಿ ಪ್ರಕಾರ ಒಂದು ಕಪ್ ಎಳನೀರಿನಲ್ಲಿ ಕೇವಲ 45 ಕ್ಯಾಲೋರಿಗಳಿವೆ. ಆದ್ದರಿಂದ, ನೀವು ಸೋಡಾ ಅಥವಾ ಇತರ ಸಕ್ಕರೆ ಪಾನೀಯಗಳನ್ನು ಸೇವಿಸಲು ಆಸೆಯಾದಾಗೆಲ್ಲ ಎಳನೀರು ಸೇವಿಸಿದರೆ ನಿಮ್ಮ ದೇಹಕ್ಕೆ ಹೆಚ್ಚಿನ ಸಕ್ಕರೆ ಅಥವಾ ಕ್ಯಾಲೋರಿ ಸೇರ್ಪಡೆಯಾಗುವುದಿಲ್ಲ.

ಇದನ್ನೂ ಓದಿ: ಉಪವಾಸದ ಸಮಯದಲ್ಲಿ ಎಳನೀರು ಕುಡಿಯಬಹುದೇ?

ಎಳನೀರನ್ನು ಸಂಜೆ ಕುಡಿಯುವುದಕ್ಕಿಂತ ಬೆಳಿಗ್ಗೆ ಬೇಗನೆ ಕುಡಿಯುವುದು ಉತ್ತಮ. ಆದರೆ, ಎಳನೀರನ್ನು ಮಿತವಾಗಿ ಕುಡಿಯುವುದು ಒಳಿತು. ಒಂದುವೇಳೆ ನಿಮ್ಮ ರಕ್ತದಲ್ಲಿ ಹೆಚ್ಚಿನ ಮಟ್ಟದ ಪೊಟ್ಯಾಸಿಯಂ ಇದ್ದರೆ ಎಳನೀರನ್ನು ಕುಡಿಯಬೇಡಿ. ಎಳನೀರಿನಲ್ಲಿ ಹೆಚ್ಚಿನ ಪ್ರಮಾಣದ ಪೊಟ್ಯಾಸಿಯಂ ಇರುತ್ತದೆ. ಆದ್ದರಿಂದ ಮೂತ್ರಪಿಂಡದ ಕಾಯಿಲೆ ಇರುವವರು ಮತ್ತು ಹೃದಯದ ತೊಂದರೆ ಇರುವವರು ಇದನ್ನು ಸೇವಿಸುವುದು ಉತ್ತಮವಲ್ಲ.

ಇದನ್ನೂ ಓದಿ: ಬಿಸಿ ಹಾಲು ಕುಡಿದರೆ ನಿಜಕ್ಕೂ ಚೆನ್ನಾಗಿ ನಿದ್ರೆ ಬರುತ್ತಾ?

ಕೆಲವಿ ಜನರು ರಾತ್ರಿ ಮಲಗುವ ವೇಳೆ ಎಳನೀರು ಕುಡಿಯುತ್ತಾರೆ. ಆದರೆ, ಅದು ನಿಮ್ಮ ನಿದ್ರೆಯ ಮೇಲೆ ಹೇಗೆ ಪರಿಣಾಮ ಬೀರುತ್ತದೆ ಎಂಬುದನ್ನು ನೆನಪಿನಲ್ಲಿಡಿ. ಸಂಜೆಯ ಮೇಲೆ ಎಳನೀರು ಕುಡಿಯುವುದಕ್ಕಿಂತ ಬೆಳಗ್ಗೆ ಸೇವಿಸುವುದು ಒಳ್ಳೆಯದು. ಅದರಿಂದ ಆರೋಗ್ಯ ಪ್ರಯೋಜನಗಳು ಹೆಚ್ಚು.

ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ