Sign In

By signing in or creating an account, you agree with Associated Broadcasting Company's Terms & Conditions and Privacy Policy.

Garlic and Ghee : ಪ್ರತಿದಿನ ಬೆಳ್ಳುಳ್ಳಿ ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದಾಗುವ ಅಧ್ಬುತ ಪ್ರಯೋಜನಗಳಿವು

ಬೆಳ್ಳುಳ್ಳಿ ಮತ್ತು ತುಪ್ಪ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಎರಡನ್ನೂ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ.

Garlic and Ghee : ಪ್ರತಿದಿನ ಬೆಳ್ಳುಳ್ಳಿ ಮತ್ತು ತುಪ್ಪವನ್ನು ಒಟ್ಟಿಗೆ ಸೇವಿಸುವುದರಿಂದಾಗುವ ಅಧ್ಬುತ ಪ್ರಯೋಜನಗಳಿವು
Ghee And Garlic
Follow us
TV9 Web
| Updated By: ನಯನಾ ರಾಜೀವ್

Updated on: Sep 03, 2022 | 10:45 AM

ಬೆಳ್ಳುಳ್ಳಿ ಮತ್ತು ತುಪ್ಪ ನಿಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿ. ಈ ಎರಡನ್ನೂ ಸೇವಿಸುವುದರಿಂದ ನಿಮ್ಮ ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತದೆ. ಅದೇ ಸಮಯದಲ್ಲಿ, ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸುವುದರಿಂದ, ಕೊಲೆಸ್ಟ್ರಾಲ್ ಸಹ ಕಡಿಮೆ ಇರುತ್ತದೆ, ಇದರಿಂದಾಗಿ ನಿಮ್ಮ ಹೃದಯವು ಆರೋಗ್ಯಕರವಾಗಿರುತ್ತದೆ.

ತುಪ್ಪ ಸೇವನೆಯಿಂದ ದೇಹದಲ್ಲಿ ಕೊಬ್ಬು ಹೆಚ್ಚಾಗಬಹುದು ಎಂದು ಅನೇಕರು ಭಾವಿಸುತ್ತಾರೆ, ಆದರೆ ತುಪ್ಪವನ್ನು ಸರಿಯಾಗಿ ಸೇವಿಸುವುದರಿಂದ ನಿಮಗೆ ಹಲವಾರು ಪ್ರಯೋಜನಗಳಿವೆ.

ಆಸಿಡಿಟಿ ಮತ್ತು ಇದು ಮಲಬದ್ಧತೆಯಂತಹ ಸಮಸ್ಯೆಗಳನ್ನೂ ದೂರ ಮಾಡುತ್ತದೆ. ಬೆಳ್ಳುಳ್ಳಿ ಮತ್ತು ತುಪ್ಪವನ್ನು ಒಟ್ಟಿಗೆ ತಿನ್ನುವುದರಿಂದ ಆಗುವ ಲಾಭಗಳೇನು ಎಂಬುದನ್ನು ಇಲ್ಲಿ ತಿಳಿಸಲಾಗಿದೆ.

ರೋಗನಿರೋಧಕ ಶಕ್ತಿಯನ್ನು ಬಲಪಡಿಸುತ್ತವೆ ನಿಮ್ಮ ಪ್ರತಿರಕ್ಷಣಾ ವ್ಯವಸ್ಥೆಯು ಬಲವಾಗಿರದಿದ್ದರೆ ನೀವು ರೋಗಗಳು ಮತ್ತು ಜ್ವರಕ್ಕೆ ಗುರಿಯಾಗುವುದಿಲ್ಲ. ಅಷ್ಟೇ ಅಲ್ಲ ಶೀತ, ನೆಗಡಿ, ಜ್ವರದಂತಹ ಸಮಸ್ಯೆಗಳನ್ನು ಮತ್ತೆ ಮತ್ತೆ ಎದುರಿಸಬೇಕಿಲ್ಲ. ಇದನ್ನು ತಪ್ಪಿಸಲು, ನೀವು ರಾತ್ರಿ ಮಲಗುವ 3 ಗಂಟೆಗಳ ಮೊದಲು ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸಬಹುದು, ಇದು ನಿಮ್ಮ ದೇಹವನ್ನು ಒಳಗಿನಿಂದ ಬಲಪಡಿಸುತ್ತದೆ.

ರಕ್ತದೊತ್ತಡ ನಿಯಂತ್ರಣ ಬೆಳ್ಳುಳ್ಳಿಯ ಸೇವನೆಯು ಅಧಿಕ ರಕ್ತದೊತ್ತಡವನ್ನು ನಿಯಂತ್ರಿಸಲು ತುಂಬಾ ಪ್ರಯೋಜನಕಾರಿಯಾಗಿದೆ.ಇದರಲ್ಲಿ ಪೊಟ್ಯಾಸಿಯಮ್, ಆರೋಗ್ಯಕರ ಕೊಬ್ಬುಗಳು ಮತ್ತು ಮೆಗ್ನೀಸಿಯಮ್ ನಂತಹ ಅಂಶಗಳಿವೆ, ಇದು ನಿಮ್ಮನ್ನು ಒಳಗಿನಿಂದ ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ. ತುಪ್ಪದ ಬದಲು ಜೇನುತುಪ್ಪದೊಂದಿಗೆ ಕೂಡ ತಿನ್ನಬಹುದು. ಇದನ್ನು ಸೇವಿಸುವುದರಿಂದ ರಕ್ತದೊತ್ತಡ ನಿಯಂತ್ರಣದಲ್ಲಿರುತ್ತದೆ.

ಉದರ ಸಮಸ್ಯೆಗಳು ನಿಮಗೆ ಹೊಟ್ಟೆಗೆ ಸಂಬಂಧಿಸಿದ ಸಮಸ್ಯೆಗಳಿದ್ದರೆ, ನೀವು ಈ ಪರಿಸ್ಥಿತಿಯಲ್ಲಿಯೂ ಬೆಳ್ಳುಳ್ಳಿ ಮತ್ತು ತುಪ್ಪವನ್ನು ಸೇವಿಸಬಹುದು. ಏಕೆಂದರೆ ಇದರಲ್ಲಿ ಫೈಬರ್ ಮತ್ತು ಮೆಗ್ನೀಸಿಯಮ್ ಇದ್ದು ಹೊಟ್ಟೆಯ ಸಮಸ್ಯೆಗಳನ್ನು ನಿವಾರಿಸುತ್ತದೆ. ಇದನ್ನು ಪ್ರತಿನಿತ್ಯ ಸೇವಿಸಿದರೆ ಮಲಬದ್ಧತೆ, ಅಜೀರ್ಣ, ಹೊಟ್ಟೆನೋವು ಸಮಸ್ಯೆಯಿಂದ ಮುಕ್ತಿ ಪಡೆಯಬಹುದು.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಉತ್ತರ ಕರ್ನಾಟಕದ ಅಭಿವೃದ್ಧಿಗೆ ಸಿಎಂ ಹಣ ಮೀಸಲಿಟ್ಟಿದ್ದಾರಾ? ವಿಜಯೇಂದ್ರ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಬವೇರಿಯ 1.3 ಕೋಟಿ ಜನಸಂಖ್ಯೆಯಿರುವ ಜರ್ಮನಿಯ ಅತಿದೊಡ್ಡ ರಾಜ್ಯ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
ಸಕಾಲದಲ್ಲಿ 13 ನೇ ಕ್ರಾಸ್​ನಿಂದ 18ನೇ ಕ್ರಾಸ್ ತಲುಪಿದ ವಿದ್ಯಾರ್ಥಿನಿ
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
VIDEO: ರಾಕೆಟ್ ರಾಕೆಟ್ ರಾಕೆಟ್: ಒಂದೇ ಕೈಯಲ್ಲಿ ಧೋನಿಯ ರಾಕೆಟ್ ಸಿಕ್ಸ್
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ವೇದಿಕೆಯಲ್ಲೇ ಸಚಿವ ಖಂಡ್ರೆ, ಶಾಸಕ ಶೈಲೇಂದ್ರ ಬೆಲ್ದಾಳೆ ಮಾತಿನ ಚಕಮಕಿ
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಭಾವಿ ಪತ್ನಿ ವೈಷ್ಣವಿಗಾಗಿ ಕನ್ನಡ ಕಲಿತು ಮಾತನಾಡಿದ ಅನುಕೂಲ್
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ಬುರ್ಖಾ ತೆಗೆ, ಹೆಸರೇನು ಹೇಳು: ಬೆಂಗಳೂರಲ್ಲಿ ಮತ್ತೊಂದು ನೈತಿಕ ಪೊಲೀಸ್​ಗಿರಿ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
ರಾಯಚೂರಿನ ಆರ್​ಟಿಪಿಎಸ್ ವಿದ್ಯುತ್ ಉತ್ಪಾದನಾ ಘಟಕದಲ್ಲಿ ಅಗ್ನಿ ಅವಘಡ
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
VIDEO: ಧೋನಿ ಚಮತ್ಕಾರ... ಹೀಗೂ ರನೌಟ್ ಮಾಡಬಹುದು!
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ
ಆಸ್ಪತ್ರೆಯಲ್ಲಿ ಅಗ್ನಿ ಅವಘಡ, ಓರ್ವ ರೋಗಿ ಸಾವು, ಹಲವರಿಗೆ ಗಾಯ