ಒಂದು ಕಡೆ ಮಳೆ, ಇನ್ನೊಂದು ಕಡೆ ಕೊರೊನಾ, ನಿಮ್ಮ ಮಕ್ಕಳ ರಕ್ಷಣೆ ಹೇಗೆ? ಇಲ್ಲಿದೆ ನೋಡಿ

ಶಾಲೆ ಆರಂಭಕ್ಕೂ ಮೊದಲೇ ಕೊರೊನಾ ಪ್ರಕರಣಗಳು ಹೆಚ್ಚಾಗುತ್ತಿರುವುದು, ಪೋಷಕರ ಆತಂಕಕ್ಕೆ ಕಾರಣವಾಗಿದೆ. ಹಾಗಾಗಿ ಈ ಸಮಯದಲ್ಲಿ ಮಕ್ಕಳ ಆರೋಗ್ಯ ಕಾಪಾಡಿಕೊಳ್ಳಲು ಕೆಲವು ಮುಂಜಾಗ್ರತಾ ಕ್ರಮಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಹಾಗಾದರೆ ಈ ಸಮಯದಲ್ಲಿ ಮಕ್ಕಳಿಗೆ ಯಾವ ರೀತಿಯ ಆರೋಗ್ಯಕರ ಅಭ್ಯಾಸಗಳನ್ನು ರೂಢಿಸಬೇಕು? ಅವರ ಆಹಾರ ಕ್ರಮ ಹೇಗಿರಬೇಕು? ಶಾಲೆಗೆ ಹೋಗುವ ಮಕ್ಕಳನ್ನು ಸೋಂಕುಗಳಿಂದ ಹೇಗೆ ರಕ್ಷಿಸಬೇಕು? ಪದೇ ಪದೇ ಕಾಡುವ ಜ್ವರ, ಶೀತ, ಕೆಮ್ಮು ಬರದಂತೆ ಮಕ್ಕಳನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಒಂದು ಕಡೆ ಮಳೆ, ಇನ್ನೊಂದು ಕಡೆ ಕೊರೊನಾ, ನಿಮ್ಮ ಮಕ್ಕಳ ರಕ್ಷಣೆ ಹೇಗೆ? ಇಲ್ಲಿದೆ ನೋಡಿ
ಸಾಂದರ್ಭಿಕ ಚಿತ್ರ
Image Credit source: Getty Images
Updated By: ಅಕ್ಷಯ್​ ಪಲ್ಲಮಜಲು​​

Updated on: May 27, 2025 | 5:43 PM

ಇನ್ನೇನು ಶಾಲಾ- ಕಾಲೇಜು ಆರಂಭವಾಗುವ ದಿನ ಹತ್ತಿರ ಬರುತ್ತಿದೆ ಎನ್ನುವಾಗ ಕೊರೊನಾ ವೈರಸ್ (Coronavirus) ಪ್ರಕರಣಗಳು ಹೆಚ್ಚುತ್ತಿರುವುದು ಎಲ್ಲರಿಗೂ ಭಯ ಹುಟ್ಟಿಸಿದೆ. ಈ ಸಮಯದಲ್ಲಿ ಮಕ್ಕಳ ಆರೋಗ್ಯ (Children’s health) ಕಾಪಾಡಿಕೊಳ್ಳುವುದು ಹೇಗೆ ಎಂಬುದೇ ಪೋಷಕರಿಗೆ ತಲೆನೋವಾಗಿದೆ. ಕೊರೊನಾಕ್ಕೆ ಹೆದರಿ ಮಕ್ಕಳನ್ನು ಶಾಲೆಗೆ ಕಳುಹಿಸದೆ ಇರುವುದಕ್ಕೆ ಸಾಧ್ಯವಿಲ್ಲ. ಸಾಮಾನ್ಯವಾಗಿ ಮಕ್ಕಳ ಆರೋಗ್ಯ ಬಹಳ ಸೂಕ್ಷ್ಮವಾಗಿರುತ್ತದೆ. ಹಾಗಾಗಿ ಅವರನ್ನು ಸೋಂಕುಗಳಿಂದ ಕಾಪಾಡಿಕೊಳ್ಳುವುದು ಸುಲಭವಲ್ಲ. ಆದರೆ ಕೆಲವು ಆರೋಗ್ಯಕರ ಅಭ್ಯಾಸಗಳನ್ನು ಮಕ್ಕಳಲ್ಲಿ ರೂಢಿಸಿದರೆ ಇದು ಅಸಾಧ್ಯವೂ ಅಲ್ಲ. ಹಾಗಾದರೆ ಮಕ್ಕಳಿಗೆ ಯಾವ ರೀತಿಯ ಅಭ್ಯಾಸಗಳನ್ನು ರೂಢಿಸಬೇಕು? ಅವರ ಆಹಾರ ಕ್ರಮ (Diet) ಹೇಗಿರಬೇಕು? ಶಾಲೆಗೆ ಹೋಗುವ ಮಕ್ಕಳನ್ನು ಈ ರೀತಿ ಸೋಂಕುಗಳಿಂದ ಹೇಗೆ ರಕ್ಷಿಸಬೇಕು? ಪದೇ ಪದೇ ಕಾಡುವ ಜ್ವರ, ಶೀತ, ಕೆಮ್ಮು ಬರದಂತೆ ಮಕ್ಕಳನ್ನು ಕಾಪಾಡಿಕೊಳ್ಳಲು ಏನು ಮಾಡಬೇಕು ಎಂಬುದನ್ನು ತಿಳಿದುಕೊಳ್ಳಿ.

ಹವಾಮಾನ ಬದಲಾವಣೆಯಾದಾಗ ಮಕ್ಕಳಲ್ಲಿ ಆರೋಗ್ಯ ಸಮಸ್ಯೆಗಳು ಕಾಡುವುದು ಸಹಜ. ಆದರೆ ನಾವು ನಮ್ಮ ಮುಂಜಾಗೃತೆಯಲ್ಲಿ ಇರಬೇಕಾಗುತ್ತದೆ. ಮಕ್ಕಳಲ್ಲಿ ಯಾವುದೇ ರೀತಿಯ ಸಮಸ್ಯೆ ಕಂಡು ಬರಲಿ ಅದನ್ನು ಅಲಕ್ಷ್ಯ ಮಾಡದೆಯೇ, ಮೊದಲು ವೈದ್ಯರನ್ನು ಸಂಪರ್ಕಿಸಬೇಕು. ಯಾವುದೇ ಕಾರಣಕ್ಕೂ ಮಕ್ಕಳಿಗೆ ವೈದ್ಯರ ಸಲಹೆ ಪಡೆಯದೆಯೇ ನೀವೇ ಮಾತ್ರೆ ಅಥವಾ ಔಷಧಿಗಳನ್ನು ನೀಡಬೇಡಿ. ಜ್ವರ, ಶೀತ ಆರಂಭವಾಗುತ್ತಿದಂತೆಯೇ ವೈದ್ಯರ ಬಳಿ ಕರೆದುಕೊಂಡು ಹೋಗಿ. ಏಕೆಂದರೆ ಜಾಸ್ತಿ ಆದಾಗ ಅದನ್ನು ನಿಯಂತ್ರಿಸುವುದು ಬಹಳ ಕಷ್ಟವಾಗುತ್ತದೆ. ಹಾಗಾಗಿ ಆರೋಗ್ಯದ ವಿಷಯದಲ್ಲಿ ಎಂದಿಗೂ ನಿರ್ಲಕ್ಷ್ಯ ಮಾಡಬೇಡಿ.

ಯಾವ ರೀತಿ ಮುನ್ನೆಚ್ಚರಿಕೆ ವಹಿಸಬೇಕು?

  • ಪ್ರತಿನಿತ್ಯ ಮಕ್ಕಳಿಗೆ ಆರೋಗ್ಯಕರ ಆಹಾರಗಳ ಸೇವನೆ ಮಾಡುವುದಕ್ಕೆ ಪ್ರೇರೇಪಿಸಬೇಕು. ಯಾವುದೇ ಕಾರಣಕ್ಕೂ ಹೊರಗಡೆ ಸಿಗುವಂತಹ ಪ್ಯಾಕೆಟ್ ಅಥವಾ ಬೀದಿ ಬದಿ ಸಿಗುವಂತಹ ಆಹಾರಗಳನ್ನು ಅಪ್ಪಿತಪ್ಪಿಯೂ ಸೇವನೆ ಮಾಡಬಾರದು.
  • ಮಕ್ಕಳ ಆಹಾರದಲ್ಲಿ ವಿಟಮಿನ್ ಸಿ ಸಮೃದ್ಧವಾಗಿರುವಂತಹ ಆಹಾರ ಹೆಚ್ಚಾಗಿರುವಂತೆ ನೋಡಿಕೊಳ್ಳಬೇಕು.
  • ಹಸಿ ಪದಾರ್ಥಗಳ ಸೇವನೆಯನ್ನು ಕಡಿಮೆ ಮಾಡಬೇಕು. ಅಂದರೆ ಚಟ್ನಿ, ಸಾಸಿಮೆ ಹೀಗೆ ಬಿಸಿ ಮಾಡದಿರುವಂತಹ ಆಹಾರಗಳ ಸೇವನೆಯನ್ನು ಸಾಧ್ಯವಾದಷ್ಟು ಕಡಿಮೆ ಮಾಡಬೇಕು.
  • ಹಾಲು, ಹಣ್ಣು, ತರಕಾರಿಗಳ ಸೇವನೆಯನ್ನು ಹೆಚ್ಚು ಮಾಡಬೇಕು.
  • ಪ್ರತಿನಿತ್ಯವೂ ಬಿಸಿ ಬಿಸಿಯಾಗಿರುವ ಆಹಾರಗಳನ್ನು ಸೇವನೆ ಮಾಡಬೇಕು. ತಣ್ಣನೆಯ ಆಹಾರ ಈ ಸಮಯದಲ್ಲಿ ಒಳ್ಳೆಯದಲ್ಲ.
  • ಮಕ್ಕಳಿಗೆ ಕೈ ನೈರ್ಮಲ್ಯವನ್ನು ಕಾಪಾಡಿಕೊಳ್ಳಲು ಹೇಳಬೇಕು. ಇದರಿಂದ ಸೋಂಕು ಹರಡುವುದನ್ನು ಸಾಧ್ಯವಾದಷ್ಟು ತಡೆಯಬಹುದು.
  • ಪ್ರತಿನಿತ್ಯ ಒಂದು ಬಾರಿಯಾದರೂ ಲಿಂಬು ಶರಬತ್ತನ್ನು ಮಾಡಿ ಮಕ್ಕಳಿಗೆ ನೀಡಬೇಕು. ಇದು ನಮ್ಮ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ಎಳನೀರಿಗಿಂತಲೂ ಒಳ್ಳೆಯದು.
  • ಮಕ್ಕಳಿಗೆ ಮನೆಯಲ್ಲಿಯೇ ಒಂದು ಲೀ. ನೀರಿಗೆ ಒಂದು ಚಮಚ ಉಪ್ಪು ಮೂರು ಚಮಚ ಸಕ್ಕರೆ ಸೇರಿಸಿ ಅದಕ್ಕೆ ಅರ್ಧ ಲಿಂಬೆ ಸೇರಿಸಿ ಕುಡಿದರೆ ದೇಹದ ಆಯಾಸ ಕಡಿಮೆಯಾಗುತ್ತದೆ. ಶಕ್ತಿ ಹೆಚ್ಚಾಗುತ್ತದೆ. ಹಾಗಾಗಿ ಇದನ್ನು ಮಕ್ಕಳಿಗೆ ದಿನದಲ್ಲಿ ಒಮ್ಮೆಯಾದರೂ ಮಾಡಿಕೊಡಿ.
  • ಬಿಸಿ ನೀರಿನ ಸೇವನೆಯನ್ನು ಹೆಚ್ಚಿಸಿ. ಮಕ್ಕಳಿಗೆ ತಣ್ಣನೆಯ ನೀರು ಕೊಡುವ ಬದಲು ಬಿಸಿ ನೀರನ್ನು ಕುಡಿಯಲು ನೀಡಿ.
  • ಮಕ್ಕಳು ಹೊರಗೆ ಹೋಗುವಾಗ ಮಾಸ್ಕ್ ಧರಿಸಿ ಹೋಗುವುದನ್ನು ಅಭ್ಯಾಸ ಮಾಡಿ.

ಸೂಚನೆ: ಸಲಹೆ ಸೇರಿದಂತೆ ಈ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಸಲಹೆಗೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ನಿಮ್ಮ ವೈದ್ಯರನ್ನು ಸಂಪರ್ಕಿಸುವುದನ್ನು ಮರೆಯಬೇಡಿ.

ಇದನ್ನೂ ಓದಿ
ಮುಟ್ಟಿದರೆ ಮುನಿಯುವ ಈ ಗಿಡದಲ್ಲಿದೆ ಹಲವು ಪ್ರಯೋಜನ
ಗರ್ಭಾವಸ್ಥೆಯಲ್ಲಿ ಪತಿಯ ಬೆಂಬಲ ಹೇಗಿರಬೇಕು?
ಬೆಳಗ್ಗೆ ಬೇಗ ಏಳಬೇಕು ಎಂದು ಅಲಾರಾಂ ಇಡುವವರು ಈ ಸ್ಟೋರಿ ತಪ್ಪದೆ ಓದಿ
ಈ ಒಂದು ಗಿಡದ ಎಲೆ ದೇಹ ಆರೋಗ್ಯಕ್ಕೆ ರಕ್ಷಣಾ ಕವಚ

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ