Cumin: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!

| Updated By: ಸಾಧು ಶ್ರೀನಾಥ್​

Updated on: Aug 28, 2022 | 6:06 AM

ಜೀರಿಗೆ, ಕರಿಎಳ್ಳು, ಸಾಸಿವೆ ಇವುಗಳನ್ನು ಸಮ ಭಾಗ ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಮುಖದ ಕಪ್ಪು ಕಲೆಗಳು ಗುಣವಾಗುತ್ತದೆ.

Cumin: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!
ಜೀರಿಗೆ: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!
Follow us on

ಜೀರಿಗೆ: ಅಡುಗೆ ಮನೆಯಲ್ಲಿ ಇರಲೇಬೇಕಾದ ಸಾಂಬಾರು ಪದಾರ್ಥ ಜೀರಿಗೆ, ವಿಕ್ನೆಸ್ ದೂರ ಮಾಡುತ್ತದೆ!

  1. * ಜೀರಿಗೆ ಕಷಾಯವನ್ನು ಮಾಡಿ ತಣ್ಣಗಾದ ಮೇಲೆ ಕಲ್ಲು ಸಕ್ಕರೆ ಹಾಕಿ ಸೇವಿಸಿದರೆ ಜ್ವರದ ನಂತರದ ಅಶಕ್ತತೆ (ವಿಕ್ನೆಸ್) ಗುಣವಾಗುತ್ತದೆ.
  2. * ಎರಡು ಚಮಚದಷ್ಟು ಪುಡಿಯನ್ನು ಬೆಳಿಗ್ಗೆ ಹಾಗಲಕಾಯಿ ರಸದಲ್ಲಿ ಮತ್ತು ಸಂಜೆ ಕಬ್ಬಿನ ಬೆಲ್ಲದಲ್ಲಿ ಸೇವಿಸಿದರೆ ಶೀತ ಜ್ವರ ಎರಡೂ ಗುಣವಾಗುತ್ತದೆ.
  3. * ಊಟದ ನಂತರ ಸ್ವಲ್ಪ ಜೀರಿಗೆ ಪುಡಿ, ಕಾಳುಮೆಣಸು, ಸೈಂಧವ ಲವಣ ಸೇರಿಸಿ ಮಜ್ಜಿಗೆ ಹದಮಾಡಿ ಕುಡಿಯುವುದರಿಂದ ಮೂಲವ್ಯಾಧಿ ಮತ್ತು ಅತಿಸಾರ ಗುಣವಾಗುತ್ತದೆ.
  4. * ಜೀರಿಗೆ, ಕರಿಎಳ್ಳು, ಸಾಸಿವೆ ಇವುಗಳನ್ನು ಸಮ ಭಾಗ ಸೇರಿಸಿ ಪೇಸ್ಟ್ ಮಾಡಿ ಲೇಪಿಸಿದರೆ ಮುಖದ ಕಪ್ಪು ಕಲೆಗಳು ಗುಣವಾಗುತ್ತದೆ.
  5. * ಜೀರಿಗೆ, ಸೈಂಧವ ಲವಣ ಸಮಪ್ರಮಾಣದಲ್ಲಿ ಸೇರಿಸಿ ನುಣ್ಣಗೆ ಅರೆದು ತುಪ್ಪವನ್ನು ಸೇರಿಸಿ ಬೆಚ್ಚಗೆ ಮಾಡಿ ಚೇಳು, ನಾಯಿ, ಸಾಲಿಂಗ, ಪಲ್ಲಿ, ಇಲಿ ಇವುಗಳ ಕಡಿತದಿಂದ ಆದ ಗಾಯಕ್ಕೆ ಹಚ್ಚಿದರೆ ನೋವು ನಿವಾರಕ ಮತ್ತು ವಿಷ ಏರುವುದಿಲ್ಲ.
  6. * ಜೀರಿಗೆ ಬೆಟ್ಟದ ನೆಲ್ಲಿಕಾಯಿ ಹತ್ತಿ ಎಲೆ ಸೇರಿಸಿ ನೀರು ಹಾಕಿ ನುಣ್ಣಗೆ ರುಬ್ಬಿ ತಲೆಗೆ ಪ್ಯಾಕ್ ಹಾಕಿದರೆ ಇರುಳುಗಣ್ಣು ಗುಣವಾಗುತ್ತದೆ.
  7. * ಜೀರಿಗೆ, ಏಲಕ್ಕಿ, ಪಟಿಗಾರದ ಅರಳು ಇವುಗಳನ್ನು ಚನ್ನಾಗಿ ಅರೆದು ನೀರಿನಲ್ಲಿ ಹಾಕಿ ಬಾಯಿ ಮುಕ್ಕಳಿಸುವುದರಿಂದ ಬಾಯಿ ಹುಣ್ಣು ಗುಣವಾಗುತ್ತದೆ.
  8. * ಗರ್ಭಿಣಿ ಸ್ತ್ರೀಯರು ಏಳು ತಿಂಗಳ ನಂತರ ಜೀರಿಗೆ ಕಷಾಯದಲ್ಲಿ ಹಾಲು ಸ್ವಲ್ಪ ಬೆಲ್ಲ ಸೇರಿಸಿ ಊಟದ ನಂತರ ಕುಡಿದರೆ ಗರ್ಭದ ನೀರು ಕಡಿಮೆ ಆಗುವುದಿಲ್ಲ ಮತ್ತು ಸುಲಭದ ಹೆರಿಗೆ ಆಗುತ್ತದೆ.
  9. * ಜೀರಿಗೆ ಪುಡಿ, ಹುಣಸೆ ಹಣ್ಣಿನ ರಸ, ಬೆಲ್ಲ ಸೇರಿಸಿ ಜ್ಯೂಸ್ ಮಾಡಿ ಕುಡಿದರೆ ಪಿತ್ತವಿಕಾರ (ವರ್ಟಿಗೊ) ಗುಣವಾಗುತ್ತದೆ.
  10. * ಜೀರಿಗೆ ಸ್ವಲ್ಪ ಹುರಿದು ಕಾಳುಮೆಣಸು, ಓಮಂಕಾಳು, ಸೈಂಧವ ಲವಣ, ಅಳಲೆಕಾಯಿ ಸೇರಿಸಿ ನೀರು ಅಥವಾ ಜೇನುತುಪ್ಪ ಸೇರಿಸಿ ತಿನ್ನುವುದರಿಂದ ವಾತ ವಿಕಾರ ಗುಣವಾಗುತ್ತದೆ.
  11. * ಜೀರಿಗೆಯನ್ನು ದಿನವೂ ಊಟಕ್ಕೆ ಮೊದಲು ಸೇವಿಸಿದರೆ ಜೀರ್ಣ ಕ್ರಿಯೆ ಸರಿಯಾಗುತ್ತದೆ.
  12. * ಊಟದ ನಂತರ ಜೀರಿಗೆ ಜಗಿದು ತಿಂದರೆ ಬಾಯಿ ವಾಸನೆ ನಿವಾರಣೆ ಆಗಿ ಹಲ್ಲು ಗಟ್ಟಿಯಾಗುತ್ತದೆ.
  13. * ಜೀರಿಗೆ ಕಷಾಯ ಕುಡಿದು ಹೊಕ್ಕಳಿಗೆ ಆಕಳು ತುಪ್ಪವನ್ನು ಹಚ್ಚಿ ಮಸಾಜ್ ಮಾಡುವುದರಿಂದ ಅತಿಯಾದ ಕೆಮ್ಮು ಗುಣವಾಗುತ್ತದೆ.
    ಇದು ನನಗೆ ತಿಳಿದದ್ದು ಅಡುಗೆ ಮನೆಯ ಜೀರಿಗೆ ಕರಾಮತ್ತು ಇನ್ನೂ ಎಷ್ಟೋ. ( ಲೇಖಕಿ -ಸುಮನಾ ಮಳಲಗದ್ದೆ)