Cumin Side Effects: ಅತಿಯಾಗಿ ಜೀರಿಗೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ

| Updated By: ನಯನಾ ರಾಜೀವ್

Updated on: Jan 20, 2023 | 8:00 AM

ಜೀರಿಗೆ(Cumin) ಎಂಬುದು ಪ್ರತಿಯೊಬ್ಬರ ಅಡುಗೆ ಮನೆಯ ಕಪಾಟಿನಲ್ಲಿ ಮೊಟ್ಟಮೊದಲು ಸಿಗುವಂತಹ ಆಹಾರ ಪದಾರ್ಥ.ಸಾಂಬಾರಿರಲಿ, ರಸಂ ಇರಲಿ, ಪಲ್ಯವಿರಲಿ, ತಂಬುಳಿ ಏನೇ ಇರಲಿ ಒಗ್ಗರಣೆಗೆ ಜೀರಿಗೆ ಹಾಕಿಲ್ಲವೆಂದರೆ ಆಹಾರವು ರುಚಿಸುವುದೇ ಇಲ್ಲ.

Cumin Side Effects: ಅತಿಯಾಗಿ ಜೀರಿಗೆ ತಿನ್ನುವುದು ಆರೋಗ್ಯಕ್ಕೆ ತುಂಬಾ ಅಪಾಯಕಾರಿ
ಜೀರಿಗೆ
Follow us on

ಜೀರಿಗೆ(Cumin) ಎಂಬುದು ಪ್ರತಿಯೊಬ್ಬರ ಅಡುಗೆ ಮನೆಯ ಕಪಾಟಿನಲ್ಲಿ ಮೊಟ್ಟಮೊದಲು ಸಿಗುವಂತಹ ಆಹಾರ ಪದಾರ್ಥ.ಸಾಂಬಾರಿರಲಿ, ರಸಂ ಇರಲಿ, ಪಲ್ಯವಿರಲಿ, ತಂಬುಳಿ ಏನೇ ಇರಲಿ ಒಗ್ಗರಣೆಗೆ ಜೀರಿಗೆ ಹಾಕಿಲ್ಲವೆಂದರೆ ಆಹಾರವು ರುಚಿಸುವುದೇ ಇಲ್ಲ. ಇದು ಸರಳವಾದ ತರಕಾರಿಯ ರುಚಿಯನ್ನು ಸಹ ಬದಲಾಯಿಸುತ್ತದೆ. ರುಚಿಯ ಹೊರತಾಗಿ, ಜೀರಿಗೆ ಆರೋಗ್ಯಕ್ಕೂ ತುಂಬಾ ಪ್ರಯೋಜನಕಾರಿ. ಜೀರಿಗೆಯನ್ನು ಸೇವಿಸುವುದರಿಂದ ಜೀರ್ಣ ಶಕ್ತಿಯು ತುಂಬಾ ಬಲವಾಗಿರುತ್ತದೆ. ಆದರೆ ಜೀರಿಗೆಯನ್ನು ತಿನ್ನುವುದರಿಂದ ನಿಮ್ಮ ಆರೋಗ್ಯಕ್ಕೂ ಹಾನಿಯಾಗುತ್ತದೆ ಎಂಬುದು ನಿಮಗೆ ತಿಳಿದಿದೆಯೇ? ಅದಕ್ಕಾಗಿಯೇ ಜೀರಿಗೆಯನ್ನು ಅತಿಯಾಗಿ ಸೇವಿಸಬಾರದು.

ಜೀರಿಗೆಯನ್ನು ಅತಿಯಾಗಿ ತಿನ್ನುವುದರಿಂದ ಆಗುವ ಅಡ್ಡಪರಿಣಾಮಗಳೇನು ಇಲ್ಲಿದೆ ಮಾಹಿತಿ

1. ಎದೆಯುರಿ
ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಎದೆಯಲ್ಲಿ ಉರಿ ಸಮಸ್ಯೆ ಉಂಟಾಗುತ್ತದೆ. ಇದರೊಂದಿಗೆ ಜೀರ್ಣಕಾರಿ ಸಮಸ್ಯೆಗಳೂ ದೂರವಾಗುತ್ತವೆ. ಈ ಕಾರಣಕ್ಕಾಗಿಯೇ ಈ ಮಸಾಲೆಯನ್ನು ಸೀಮಿತ ಪ್ರಮಾಣದಲ್ಲಿ ಸೇವಿಸಬೇಕು.

2. ಯಕೃತ್ತಿನ ಹಾನಿಯ ಅಪಾಯ
ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಮೂತ್ರಪಿಂಡಕ್ಕೆ ಹಾನಿಯಾಗುತ್ತದೆ. ಈ ಸಂದರ್ಭದಲ್ಲಿ ಜೀರಿಗೆಯನ್ನು ಕಡಿಮೆ ಸೇವಿಸಬೇಕು. ಇಲ್ಲವಾದರೆ ನಮ್ಮ ದೇಹಕ್ಕೆ ಫಿಲ್ಟರ್ ಆಗಿ ಕಾರ್ಯನಿರ್ವಹಿಸುವ ಕಿಡ್ನಿ, ಅದರ ಕಾರ್ಯಚಟುವಟಿಕೆಗೆ ತೊಂದರೆಯಾಗುತ್ತದೆ.

3. ಹುಳಿ ತೇಗು
ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ಹುಳಿ ತೇಗು ಉಂಟಾಗುತ್ತದೆ. ಬೆಲ್ಚಿಂಗ್‌ನಿಂದಾಗಿ ನಿಮ್ಮ ಕರುಳು ಮತ್ತು ಹೊಟ್ಟೆಯಲ್ಲಿ ಸಂಗ್ರಹವಾದ ಅನಿಲವು ಹೊರಬರುತ್ತದೆ.

4. ರಕ್ತದಲ್ಲಿ ಸಕ್ಕರೆ ಮಟ್ಟ ಕಡಿಮೆಯಾಗುವುದು
ಜೀರಿಗೆಯನ್ನು ಅತಿಯಾಗಿ ಸೇವಿಸುವುದರಿಂದ ದೇಹದಲ್ಲಿನ ಸಕ್ಕರೆ ಅಂಶವು ಕಡಿಮೆಯಾಗುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ದೇಹದಲ್ಲಿ ದೌರ್ಬಲ್ಯ ಮತ್ತು ತಲೆತಿರುಗುವಿಕೆಯ ಸಮಸ್ಯೆಗಳಿರಬಹುದು.

 

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ