Health : ಮಧುಮೇಹಿಗಳೀಗ ‘ಸೈಕಲ್​ದೇವೋಭವ’ ಎನ್ನುತ್ತಿದ್ದಾರೆ

| Updated By: ಶ್ರೀದೇವಿ ಕಳಸದ

Updated on: Jun 08, 2022 | 2:23 PM

Diabetes : ಇಂದು ಮಧುಮೇಹ ವಿಶ್ವದಾದ್ಯಂತ ವಯಸ್ಸಿನ ಬೇಧವಿಲ್ಲದೆ ಕಾಡತೊಡಗಿದೆ. ದೈಹಿಕ ಶ್ರಮವಿಲ್ಲದೆ ಈ ರೋಗವನ್ನು ನಿಯಂತ್ರಣದಲ್ಲಿಡುವುದು ಅಸಾಧ್ಯವೆನ್ನುವುದು ಅನೇಕರ ಅರಿವಿಗೆ ಬರತೊಡಗುತ್ತಿದ್ದಂತೆ ಸೈಕಲ್ ಸವಾರಿಯಲ್ಲಿ ತೊಡಗಿಕೊಳ್ಳುತ್ತಿದ್ದಾರೆ.

Health : ಮಧುಮೇಹಿಗಳೀಗ ‘ಸೈಕಲ್​ದೇವೋಭವ’ ಎನ್ನುತ್ತಿದ್ದಾರೆ
ಸೌಜನ್ಯ : ಅಂತರ್ಜಾಲ
Follow us on

Cycling : ಸೈಕಲ್ ಓಡಿಸುವುದು ಅನೇಕ ರೀತಿಯಲ್ಲಿ ಆರೋಗ್ಯವೃದ್ಧಿಗೆ ಕಾರಣ ಎನ್ನುವುದು ಗೊತ್ತಿರುವ ವಿಷಯವೇ. ಆದರೆ  ಇದು ಮಧುಮೇಹವನ್ನು ನಿಯಂತ್ರಣದಲ್ಲಿಟ್ಟುಕೊಳ್ಳುವಲ್ಲಿಯೂ ಇದು ಪ್ರಮುಖ ಪಾತ್ರ ವಹಿಸುತ್ತದೆ ಎನ್ನುವುದು ಅನುಭವದಿಂದ ತಿಳಿಯುತ್ತಿದ್ದಂತೆ ಹೆಚ್ಚುಜನ ಸೈಕಲ್​ನತ್ತ ವಾಲುತ್ತಿದ್ದಾರೆ. ಸೈಕಲ್ ಓಡಿಸುವಾಗ ಶರೀರದ ಎಲ್ಲಾ ಭಾಗಗಳಿಗೂ ಸೂಕ್ತರೀತಿಯಲ್ಲಿ ರಕ್ತಪರಿಚಲನೆ ಉಂಟಾಗುವುದರಿಂದ ಗ್ಲುಕೋಸ್​ನ ಮಟ್ಟ​ ನಿಯಂತ್ರಣದಲ್ಲಿರುತ್ತದೆ. ಹಾಗಾಗಿ 1817ರಲ್ಲಿ ಈ ಸೈಕಲ್​ ಕಂಡುಹಿಡಿದ ಶ್ರೇಯಸ್ಸು ಜರ್ಮನ್ ಸಂಶೋಧಕ ಕಾರ್ಲ್ ವಾನ್ ಡ್ರಾಯಿಸ್​ಗೆ ಸಲ್ಲುತ್ತದೆ. ಸೈಕಲ್​ ಗೆ ಆರಂಭದಲ್ಲಿ ‘ಸ್ವಿಫ್ಟ್​ ​ವಾಕರ್’ ಎಂದು ಕರೆಯಲಾಗುತ್ತಿತ್ತು, ಇದು ಉಳ್ಳವರ ಹವ್ಯಾಸಕ್ಕೆ ಮಾತ್ರ ಸೀಮಿತವಾಗಿತ್ತು. ಆದರೆ ಕ್ರಮೇಣ ಉತ್ಪಾದನೆಯು ವಾಣಿಜ್ಯ ರೂಪು ಪಡೆದುಕೊಂಡಾಗ ಸಾಮಾನ್ಯರ ಪ್ರಯಾಣಕ್ಕೂ ಸುಲಭವಾಗಿ ಲಭ್ಯವಾಯಿತು. ಈಗತೂ ಸೈಕಲ್​ ಎನ್ನುವುದು ಆರೋಗ್ಯವೃದ್ಧಿಯ ಸಾಧನವಾಗಿ ಪರಿಣಮಿಸಿದೆ.

ಇಂದು ಮಧುಮೇಹ ವಿಶ್ವದಾದ್ಯಂತ ವಯಸ್ಸಿನ ಬೇಧವಿಲ್ಲದೆ ಕಾಡತೊಡಗಿದೆ. ದೈಹಿಕ ಶ್ರಮವಿಲ್ಲದೆ ಈ ರೋಗವನ್ನು ನಿಯಂತ್ರಣದಲ್ಲಿಡುವುದು ಅಸಾಧ್ಯವೆನ್ನುವುದು ಅನೇಕರ ಅರಿವಿಗೆ ಬರತೊಡಗಿದೆ. ಹಾಗಾಗಿ ಆರಾಮಯದಾಯಕ ಹೊರಾಂಗಣ ಚಟುವಟಿಕೆ ಎನ್ನಿಸಿಕೊಂಡಿರುವ ಸೈಕಲ್ ಸವಾರಿ ಈಗೀಗ ಹೆಚ್ಚು ಜನಪ್ರಿಯಗಾಗುತ್ತಿದೆ.

ಇದನ್ನೂ ಓದಿ : World Brain Tumour Day 2022 : ಬ್ರೇನ್ ಟ್ಯೂಮರ್​ಗೆ ಅತಿಯಾದ ತಲೆನೋವೊಂದೇ ಮುಖ್ಯಲಕ್ಷಣವಲ್ಲ

ಇದನ್ನೂ ಓದಿ
Cancer Drug Trial: ವೈದ್ಯಕೀಯ ಕ್ಷೇತ್ರದಲ್ಲಿ ಹೊಸ ಸಂಚಲನ: ಪ್ರಾಯೋಗಿಕ ಔಷಧಿಯಿಂದಲೇ ಕ್ಯಾನ್ಸರ್ ಮಾಯ
Norovirus: ನೊರೊವೈರಸ್ ರೋಗದ ಲಕ್ಷಣಗಳೇನು? ಸೋಂಕು ಹರಡುವಿಕೆಯನ್ನು ತಡೆಗಟ್ಟುವುದು ಹೇಗೆ?
Norovirus: ಕೇರಳದ ಇಬ್ಬರು ಶಾಲಾ ವಿದ್ಯಾರ್ಥಿಗಳಲ್ಲಿ ನೊರೊವೈರಸ್ ಪತ್ತೆ
Cancer v/s Diabetes: ಕ್ಯಾನ್ಸರ್ ರೋಗಿಗಳಲ್ಲಿ ಹೆಚ್ಚುತ್ತಿದೆ ಮಧುಮೇಹ: ಅಧ್ಯಯನ

ಹೆಚ್ಚು ಶ್ರಮಬೇಡದ ಕ್ರೀಡಾಸಾಧನವಾದ ಇದು ನಮ್ಮ ಶರೀರದ ಸ್ನಾಯುಗಳು ಬಲಗೊಳ್ಳುವಲ್ಲಿ ಅತ್ಯಂತ ಸಹಕಾರಿಯಾಗಿದೆ. ನಿರಾಯಾಸವಾಗಿ, ನಿರ್ಭಯದಿಂದ ಸಾಕಷ್ಟು ಮೈಲುಗಳ ಕಾಲ ಕ್ರಮಿಸಬಹುದಾಗಿದೆ. ಶೇ. 70 ರಷ್ಟು ಸ್ನಾಯುಗಳು ಬಲವರ್ಧನೆಗೊಳ್ಳುವಲ್ಲಿ ಸೈಕಲ್ ಸವಾರಿ ಪ್ರಯೋಜನಕಾರಿ. ಯಾವ ವಯಸ್ಸಿನವರೂ ಓಡಿಸಬಹುದು. ಹಾಗಾಗಿ 50ರಿಂದ 70ರ ದಶಕದಲ್ಲಿ ಜನಪ್ರಿಯವಾಗಿದ್ದ ಸೈಕಲ್ ಸವಾರಿಗೆ ಇಳಿವಯಸ್ಸಿನವರೂ ತೊಡಗಿಕೊಳ್ಳುತ್ತಿದ್ದಾರೆ. ಎಲ್ಲವೂ ಮಧುಮೇಹ, ಬೊಜ್ಜು ನಿಯಂತ್ರಣಕ್ಕಾಗಿ! ಯಾಕೆ ತಡ ಮೂಲೆಯಲ್ಲಿಟ್ಟ ಸೈಕಲ್ ಹೊರತೆಗೆಯಿರಿ ಅಥವಾ ಹೊಸದನ್ನು ಖರೀದಿಸಿ.

ಒಬ್ಬೊಬ್ಬರಿಗೇ ಸೈಕಲ್​ ಸವಾರಿ ಮಾಡಲು ಬೇಸರವೆನ್ನಿಸುತ್ತದೆಯೇ? ಸೈಕ್ಲಿಂಗ್ ಕ್ಲಬ್​ಗಳನ್ನು ಸೇರಿಕೊಳ್ಳಿ. ಏಕೆಂದರೆ ಅಲ್ಲಿ ನಿಮಗೆ ಸಮಾನ ಮನಸ್ಕರು ಸಿಗುವ ಸಾಧ್ಯತೆ ಇರುತ್ತದೆ. ಚಿಕಿತ್ಸೆ, ದೈಹಿಕ ವ್ಯಾಯಾಮ ಮತ್ತು ಸಂತುಲಿತ ಆಹಾರದೊಂದಿಗೆ ಮಾನಸಿಕ ನೆಮ್ಮದಿ ಬಹಳೇ ಮುಖ್ಯ. ಆದ್ದರಿಂದ ಉತ್ತಮ ಸ್ನೇಹಿತರು ನಿಮಗೆ ಜೊತೆಯಾಗುತ್ತಿದ್ದಂತೆ ಮನಸ್ಸು ಹಗುರವಾಗುತ್ತದೆ. ಹೊಸಹೊಸ ಆಲೋಚನೆಗಳು ನಿಮ್ಮಲ್ಲಿ ಸ್ಫುರಣಗೊಂಡು ಕಾಯಿಲೆ ನಿಯಂತ್ರಣಕ್ಕೆ ಬರುವಲ್ಲಿ ಎರಡು ಮಾತಿಲ್ಲ.

ಇದನ್ನೂ ಓದಿ : Health : ಅಸ್ತಮಾ, ಉಸಿರಾಟ, ದಂತಸಮಸ್ಯೆಗಳಿಗೆ ಸಿದ್ಧೌಷಧಿ ಈ ಲವಂಗದೆಣ್ಣೆ

ಹಾಗೆಂದು ಕಾಯಿಲೆ ಬಂದಮೇಲೆಯೇ ಸೈಕಲ್ ಸವಾರಿ ಮಾಡಿದರಾಯಿತು ಎಂದು ಕಾಯುತ್ತ ಕೂರುವ ಕಾಲ ಇದಲ್ಲ. ದಿನಗಟ್ಟಲೆ ಕಂಪ್ಯೂಟರ್ ಮುಂದೆ ಕುಳಿತು ಕೆಲಸ ಮಾಡುವ ಜೀವನಶೈಲಿ ಎಲ್ಲೆಡೆ ಹಾಸುಹೊಕ್ಕಾಗಿರುವ ಈ ಸಂದರ್ಭದಲ್ಲಿ ಮಧುಮೇಹ, ರಕ್ತದೊತ್ತಡ, ಬೊಜ್ಜಿಗೆ ಸಂಬಂಧಿಸಿದ ಕಾಯಿಲೆ, ಮಾನಸಿಕ ಒತ್ತಡದಿಂದ ಉಂಟಾಗುವ ಏರುಪೇರುಗಳು ಯಾವಾಗಬೇಕೋ ಆಗ ಬಂದು ನಿಮ್ಮನ್ನು ಹೊಕ್ಕುವ ಸಾಧ್ಯತೆ ಇರುತ್ತದೆ. ಹಾಗಾಗಿ ಕಾರ್, ಸ್ಕೂಟರ್​, ಆಟೊ ಬದಲಾಗಿ ಸೈಕಲ್​ ಸವಾರಿಯನ್ನು ಹೆಚ್ಚು ರೂಢಿಸಿಕೊಳ್ಳಿ.