World Brain Tumour Day 2022 : ಬ್ರೇನ್ ಟ್ಯೂಮರ್​ಗೆ ಅತಿಯಾದ ತಲೆನೋವೊಂದೇ ಮುಖ್ಯಲಕ್ಷಣವಲ್ಲ

Brain Tumour: ಸರಿಯಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಮಾನಸಿಕ ಸ್ಥಿಮಿತ ಕಳೆದುಕೊಂಡು ನಡೆ ನುಡಿಯಲ್ಲಿ ವ್ಯತ್ಯಾಸ ತೋರಬಹುದು. ನಡಿಗೆಯಲ್ಲಿಯೂ ನಿಯಂತ್ರಣ ಕಳೆದುಕೊಳ್ಳಬಹುದು. ದೃಷ್ಟಿದೋಷಕ್ಕೂ ಈಡಾಗಬಹುದು.

World Brain Tumour Day 2022 : ಬ್ರೇನ್ ಟ್ಯೂಮರ್​ಗೆ ಅತಿಯಾದ ತಲೆನೋವೊಂದೇ ಮುಖ್ಯಲಕ್ಷಣವಲ್ಲ
ಸೌಜನ್ಯ : ಅಂತರ್ಜಾಲ
Follow us
TV9 Web
| Updated By: ಶ್ರೀದೇವಿ ಕಳಸದ

Updated on: Jun 08, 2022 | 12:44 PM

World Brain Tumour Day 2022 : ಜೂನ್ 8 ವಿಶ್ವ ಬ್ರೇನ್​ ಟ್ಯೂಮರ್ ದಿನ. ಜನರಲ್ಲಿ ಈ ಕಾಯಲೆಯ ತಡೆಗಟ್ಟುವಿಕೆಯ ಬಗ್ಗೆ ಅರಿವು ಮೂಡಿಸಲು ಈ ದಿನವನ್ನು ಮೀಸಲಿಡಲಾಗಿದೆ. ‘ನಾವು ಒಟ್ಟಾಗಿದ್ದಷ್ಟೂ ಬಲಶಾಲಿ’ ಎಂಬುದು 2022ರ ಸಾಲಿನ ಧ್ಯೇಯವಾಕ್ಯ. ನ್ಯಾಷನಲ್ ಹೆಲ್ತ್ ಪೋರ್ಟಲ್​ಗಳ ಪ್ರಕಾರ ಪ್ರತೀ ದಿನ ಸುಮಾರು 500 ರಷ್ಟು ಜನರು ಬ್ರೇನ್​ ಟ್ಯೂಮರ್ ಕಾಯಿಲೆಗೆ ಒಳಗಾಗುತ್ತಿದ್ದಾರೆ. ಮೆದುಳಿನಲ್ಲಿ ಅಸಹಜ ಜೀವಕೋಶಗಳು ಉತ್ಪತ್ತಿಯಾದಾಗ ಈ ಕಾಯಿಲೆ ಉಂಟಾಗುತ್ತದೆ. ಕೆಲವೊಮ್ಮೆ ಇದು ಕ್ಯಾನ್ಸರ್​ಕಾರಕ ಜೀವಕೋಶಗಳಾಗಿ ಮಾರ್ಪಾಡಾಗುವ ಸಾಧ್ಯತೆಯೂ ಇರುತ್ತದೆ. ಈ ಕಾಯಿಲೆ ಯಾವ ವಯಸ್ಸಿನಲ್ಲಿಯೂ ಬರಬಹುದು. ಈತನಕವೂ ವೈದ್ಯಕೀಯ ಲೋಕ ಈ ಕಾಯಿಲೆಗೆ ಕಾರಣವನ್ನು ನಿರ್ದಿಷ್ಟವಾಗಿ ಕಂಡುಹಿಡಿದಿಲ್ಲ. ಆದರೆ ಇತ್ತೀಚಿನ ಆಧುನಿಕ ಜೀವನಶೈಲಿಗೆ ಅನುಗುಣವಾಗಿ ಅತೀಹೆಚ್ಚು ಮೊಬೈಲ್​ ಬಳಸುವುದರಿಂದ ಅದರಿಂದ ಹೊಮ್ಮಿದ ರೇಡಿಯೇಷನ್​ಗಳು ಬ್ರೇನ್ ಟ್ಯೂಮರ್​ ಗೆ ಕಾರಣವಾಗುತ್ತಿರಬಹುದು ಎಂದು ಹೇಳಲಾಗುತ್ತಿದೆಯಾದರೂ ಇದು ಇನ್ನೂ ಸಾಬೀತವಾಗಿಲ್ಲ, ಈ ಕುರಿತ ಸಂಶೋಧನೆ ಸಾಗಿದೆ.

ಈ ರೋಗಕ್ಕೆ ತುತ್ತಾದ ವ್ಯಕ್ತಿಯ ಸಾಮಾನ್ಯ ಲಕ್ಷಣಗಳೆಂದರೆ ಅತಿಯಾದ ತಲೆನೋವು, ಮೂರ್ಛೆ ಬೀಳುವುದು,  ದೃಷ್ಟಿದೋಷ, ಮಾನಸಿಕ ಏರುಪೇರಿನ ಸಾಧ್ಯತೆ. ತಲೆನೋವು ಮತ್ತು ವಾಂತಿ ಬೆಳಗಿನ ಹೊತ್ತು ಹೆಚ್ಚು ಇರುತ್ತದೆ. ಜೊತೆಗೆ ಮಾತು, ನಡಿಗೆಯಲ್ಲಿ ಆಗಾಗ ನಿಯಂತ್ರಣ ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಈ ಗುಣಲಕ್ಷಣಗಳಿದ್ದಲ್ಲಿ ಎಂಆರ್​ಐ ಮತ್ತು ಸಿ.ಟಿ ಸ್ಕ್ಯಾನ್, ಆ್ಯಂಜಿಯೋಗ್ರಾಮ್​ ಪರೀಕ್ಷೆಗಳಿಗೆ ರೋಗಿ ಒಳಪಡಬೇಕಾಗುತ್ತದೆ. ಇಷ್ಟೇ ಅಲ್ಲ ಪಂಚೇಂದ್ರಿಯಗಳು ಸರಿಯಾಗಿ ಕಾರ್ಯ ನಿರ್ವಹಿಸುತ್ತದೆಯೋ ಇಲ್ಲವೋ, ನರಮಂಡಲ ಕಾರ್ಯ ನಿರ್ವಹಣೆಯಲ್ಲಿ ಏರುಪೇರಾಗುತ್ತಿದೆಯೋ ಎಂಬುದನ್ನು ತಿಳಿದುಕೊಳ್ಳಲು ವಿವಿಧ ಪರೀಕ್ಷೆಗಳನ್ನು ಮಾಡಲಾಗುತ್ತದೆ. ನಂತರ ರೋಗದ ಪ್ರಮಾಣ, ಉಲ್ಭಣದ ಸಾಧ್ಯತೆಯನ್ನಾಧರಿಸಿ ಔಷಧಿ, ಶಸ್ತ್ರಚಿಕಿತ್ಸೆ, ಕಿಮೋಥೆರಪಿ, ರೇಡಿಯೋಥೆರಪಿ, ಸ್ಟಿರಾಯ್ಡ್​ ಚಿಕಿತ್ಸೆಗೆ ರೋಗಿಯನ್ನು ಒಳಪಡಿಸಲಾಗುತ್ತದೆ.

ಇದನ್ನೂ ಓದಿ : Health: ನಿಮ್ಮ ‘ಓಟ’ ಸರಿಯಾದ ದಿಕ್ಕಿನಲ್ಲಿ ಸಾಗಿದೆಯೇ? ಪರೀಕ್ಷಿಸಿಕೊಳ್ಳಿ

ಬ್ರೈನ್ ಟ್ಯೂಮರ್​ಗೆ ಒಳಗಾದ ವ್ಯಕ್ತಿಗೆ ಮೆದುಳಿನಲ್ಲಿ ಬೆಳೆದ ಗೆಡ್ಡೆ ಮೆದುಳಿನಿಂದ ದೇಹದ ಇತರೇ ಭಾಗಕ್ಕೆ ತಲುಪುವ ಜೀವಕೋಶಕ್ಕೆ ತಡೆ ಉಂಟುಮಾಡುತ್ತದೆ. ಆಗ ಮೆದುಳಿನ ಸಂಕೇತಗಳು ದೇಹದ ಭಾಗಕ್ಕೆ ಸೂಕ್ತವಾಗಿ ತಲುಪದೆ ಚಲನೆಯನ್ನು ಕಳೆದುಕೊಳ್ಳುವ ಸಾಧ್ಯತೆ ಇರುತ್ತದೆ. ಆದ್ದರಿಂದ ವ್ಯಕ್ತಿ ಮೂರ್ಛೆಗೆ ಒಳಗಾದಲ್ಲಿ ತಡಮಾಡದೆ ವೈದ್ಯರನ್ನು ಸಂಪರ್ಕಿಸಬೇಕು.

ಇದನ್ನೂ ಓದಿ : Health : ಅಸ್ತಮಾ, ಉಸಿರಾಟ, ದಂತಸಮಸ್ಯೆಗಳಿಗೆ ಸಿದ್ಧೌಷಧಿ ಈ ಲವಂಗದೆಣ್ಣೆ

ಸರಿಯಾಗಿದ್ದ ವ್ಯಕ್ತಿ ಇದ್ದಕ್ಕಿದ್ದಂತೆ ಮಾನಸಿಕ ಸ್ಥಿಮಿತ ಕಳೆದುಕೊಳ್ಳುವ ಸಾಧ್ಯತೆಯೂ ಇರುತ್ತದೆ. ಮಾತು ನಡೆ ನುಡಿಯಲ್ಲಿ ವ್ಯತ್ಯಾಸ ತೋರುತ್ತದೆ. ಇದು ಆರಂಭಿಕ ಲಕ್ಷಣವೆಂದು ತಿಳಿಯಬೇಕು. ನಿರ್ಲಕ್ಷಿಸಿದರೆ ಮಾನಸಿಕ ಸ್ಥಿಮಿತವನ್ನೇಕ ಕಳೆದುಕೊಳ್ಳುವ ಅಪಾಯಕ್ಕೆ ಇದು ತಳ್ಳಬಹುದು.

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್