ಚಳಿಗಾಲದ ಸಮಯದಲ್ಲಿ ನಿಮ್ಮ ಆರೋಗ್ಯವನ್ನು ಎಷ್ಟು ಕಾಳಜಿಯಿಂದ ನೋಡಿಕೊಂಡರೂ ಸಾಲದು. ಈ ಸಮಯದಲ್ಲಿ ನೀವು ಸೇವಿಸುವ ಆಹಾರ ಪದ್ಧತಿಯ ಬಗ್ಗೆ ಗಮನವಿರಲಿ. ಜೊತೆಗೆ ಪೌಷ್ಟಿಕ ಆಹಾರ ಮತ್ತು ಪ್ರೋಟೀನ್ಯುಕ್ತ ಆಹಾರ ಸೇವನೆಯ ಮೂಲಕ ಆರೋಗ್ಯವನ್ನು ಸುಧಾರಿಸಿಕೊಳ್ಳಿ. ಹೀಗಿರುವಾಗ ಚಳಿಗಾಲದ ಸಮಯದಲ್ಲಿ ಖರ್ಜೂರ ಸೇವನೆ ಒಳ್ಳೆಯದೆ? ಖರ್ಜೂರ ಸೇವನೆಯಿಂದ ಆರೋಗ್ಯಕ್ಕೆ ಎಷ್ಟೆಲ್ಲಾ ಪ್ರಯೋಜನಗಳಿವೆ? ಎಂಬುದನ್ನು ತಿಳಿಯೋಣ. ದೇಹದಲ್ಲಿ ಹಿಮೋಗ್ಲೋಬಿನ್ ಮಟ್ಟ ಕಡಿಮೆ ಆಗಿದ್ದರೆ ಖರ್ಜೂರ ಸೇವನೆ ಆರೋಗ್ಯಕ್ಕೆ ಒಳ್ಳೆಯದು. ರಕ್ತದಲ್ಲಿನ ಹಿಮೋಗ್ಲೋಬಿನ್ ಮಟ್ಟ ಸುಧಾರಿಸುವುದರ ಜೊತೆಗೆ ದೇಹಕ್ಕೆ ಶಕ್ತಿಯನ್ನು ಹೆಚ್ಚಿಸುತ್ತದೆ. ಹಾಗಾಗಿ ನಿಮ್ಮ ಆಹಾರ ವ್ಯವಸ್ಥೆಯಲ್ಲಿ ಖರ್ಜೂರ ಸೇರಿರಲಿ.
ಜೀರ್ಣಕ್ರಿಯೆಯನ್ನು ಸುಧಾರಿಸುವುದರಿಂದ ಹಿಡಿದು ದೇಹದಲ್ಲಿನ ರಕ್ತದ ಕೊರತೆಯನ್ನು ಹೋಗಲಾಡಿಸುವವರೆಗೆ ಖರ್ಜೂರವು ತುಂಬಾ ಪ್ರಯೋಜನಕಾರಿ. ಕಬ್ಬಿಣಾಂಶದ ಕೊರತೆ ಇರುವವರು ಖರ್ಜೂರ ಸೇವಿಸುವುದರಿಂದ ಆರೋಗ್ಯವನ್ನು ಸುಧಾರಿಸಿಕೊಳ್ಳಬಹುದಾಗಿದೆ. ಮಕ್ಕಳಿಂದ ಹಿಡಿದು ವೃದ್ಧರವರೆಗೆ ಇಷ್ಟವಾಗುವ ಖರ್ಜೂರ ಸೇವನೆಯಿಂದ ಪ್ರಯೋಜನಗಳೆಷ್ಟಿವೆ ಎಂಬುದು ಈ ಕೆಳಗಿನಂತಿದೆ.
ಜೀರ್ಣಕ್ರಿಯೆಗೆ ಸಹಾಯಕ
ಖರ್ಜೂರದಲ್ಲಿ ಕಬ್ಬಿಣಾಂಶ ಹೆಚ್ಚಾಗಿ ಕಂಡು ಬರುತ್ತದೆ. ಕಬ್ಬಿಣದ ಕೊರತೆ ಸಮಸ್ಯೆ ಕಾಡುತ್ತಿದ್ದವರು ಖರ್ಜೂರ ಸೇವನೆ ಮಾಡುವ ಮೂಲಕ ಅರೋಗ್ಯ ಸುಧಾರಣೆ ಕಂಡುಕೊಳ್ಳಬಹುದಾಗಿದೆ. ಜೀರ್ಣಕ್ರಿಯೆಗೆ ಸಹಾಯಕವಾಗುವುದರಿಂದ ಪ್ರತಿನಿತ್ಯ ಖರ್ಜೂರವನ್ನು ತಿನ್ನುವ ಅಭ್ಯಾಸ ಮಾಡಿಕೊಳ್ಳಿ. ಮಿತವಾಗಿ ಸೇವಿಸುವ ಮೂಲಕ ಆರೋಗ್ಯ ಪ್ರಯೋಜನಗಳನ್ನು ಪಡೆಯಬಹುದಾಗಿದೆ.
ತೂಕ ಹೆಚ್ಚಿಸಿಕೊಳ್ಳಲು
ತುಂಬಾ ತೆಳ್ಳಗಿದ್ದೀನಿ ಅನ್ನುವವರು ತೂಕ ಹೆಚ್ಚಳಕ್ಕೆ ಖರ್ಜೂರ ಸೇವನೆ ಮಾಡಬಹುದಾಗಿದೆ. ಇದರಲ್ಲಿರುವ ಜೀವ ಸತ್ವಗಳು ಮತ್ತು ಸಕ್ಕರೆ ಅಂಶ ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ಚಳಿಗಾಲದ ಸಮಯದಲ್ಲಿ ನಿಮ್ಮನ್ನು ಬೆಚ್ಚಗಿಡಲು ಇದು ಸಹಾಯ ಮಾಡುತ್ತದೆ.
ಶಕ್ತಿ ನೀಡುತ್ತದೆ
ಖರ್ಜೂರವು ದೇಹಕ್ಕೆ ಶಕ್ತಿಯನ್ನು ತುಂಬುತ್ತದೆ. ಇದರಲ್ಲಿ ದೇಹದ ಬೇಕಾದ ಅಗತ್ಯ ಪೋಷಕಾಂಶಗಳಳಿರುತ್ತದೆ. ಜೊತೆಗೆ ದಿನಪೂರ್ತಿ ಚಟುವಟಿಕೆಯಿಂದ ಕೂಡಿರಲು ಸಹಾಯ ಮಾಡುತ್ತದೆ. ಹಾಗಾಗಿ ಪ್ರತಿನಿತ್ಯ 3 ರಿಂದ 4 ಖರ್ಜೂರವನ್ನು ಸೇವಿಸುವ ಅಭ್ಯಾಸವನ್ನು ರೂಢಿಯಲ್ಲಿಟ್ಟುಕೊಳ್ಳಿ. ಪ್ರತಿದಿನ ಬೆಳಿಗ್ಗೆ ನೀರಿನಲ್ಲಿ ನೆನೆಸಿದ ಖರ್ಜೂರ ಸೇವನೆ ಮಾಡುವುದರಿಂದ ಹೆಚ್ಚಿನ ಲಾಭ ಪಡೆಯಬಹುದು.
ಇದನ್ನೂ ಓದಿ:
Immunity Booster: ಚಳಿಗಾಲದ ಸಮಯದಲ್ಲಿ ರೋಗ ನಿರೋಧಕ ಶಕ್ತಿ ಹೆಚ್ಚಿಸಿಕೊಳ್ಳಲು ಇಲ್ಲಿವೆ ಸೂಪರ್ ಫುಡ್ಗಳು
Asthma: ಚಳಿಗಾಲದ ಸಮಯದಲ್ಲಿ ಅಸ್ತಮಾ ರೋಗಿಗಳೇ ಎಚ್ಚರ! ನಿಮ್ಮ ಆರೋಗ್ಯಕ್ಕಾಗಿ ಈ ಕೆಲವು ಸಲಹೆಗಳು ನೆನಪಿನಲ್ಲಿರಲಿ