ಆಸ್ಪಿರಿನ್ ಸೇವನೆಯು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆಯೇ? ಹೊಸ ಅಧ್ಯಯನದಲ್ಲಿ ತಿಳಿದ ಸತ್ಯ ಏನು ಗೊತ್ತಾ?
ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೊಂದಿರುವವರು ಆಸ್ಪಿರಿನ್ ತೆಗೆದುಕೊಳ್ಳುವುದರಿಂದ ಅಥವಾ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದರಿಂದ ಹೃದಯ ವೈಫಲ್ಯದ ಅಪಾಯ ಹೆಚ್ಚಾಗುತ್ತದೆ ಎಂದು ಅಧ್ಯಯನ ತಿಳಿಸಿದೆ.
ಆಸ್ಪಿರಿನ್ ಸೇವನೆಯು ಹೃದಯಾಘಾತದ ಅಪಾಯವನ್ನು ಹೆಚ್ಚಿಸುತ್ತದೆ ಎಂದು ಹೊಸ ಅಧ್ಯಯನವೊಂದು ತಿಳಿಸಿದೆ. ಆ ಪ್ರಕಾರ, ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದರಿಂದ ಅಥವಾ ಆಸ್ಪಿರಿನ್ (Aspirin) ಸೇವನೆಯು ಹೃದಯ ವೈಫಲ್ಯದ ಅಪಾಯವು ಶೇಕಡಾ 26 ರಷ್ಟು ಹೆಚ್ಚಾಗುತ್ತದೆ. ಜತೆಗೆ ಧೂಮಪಾನ, ಬೊಜ್ಜು, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆ ಕೂಡ ಹೃದ್ರೋಗಕ್ಕೆ ಕಾರಣವಾಗುತ್ತದೆ. ಇಎಸ್‌ಸಿ ಹಾರ್ಟ್ ಫೇಲ್ಯೂರ್ ಜರ್ನಲ್ನಲ್ಲಿ ಈ ಅಧ್ಯಯನದ ವಿವರ ಪ್ರಕಟವಾಗಿದೆ. ಹೃದಯಕ್ಕೆ ಸಂಬಂಧಿಸಿದ ಕಾಯಿಲೆ ಹೊಂದಿರುವವರು ಆಸ್ಪಿರಿನ್ ತೆಗೆದುಕೊಳ್ಳುವುದರಿಂದ ಅಥವಾ ನೋವು ನಿವಾರಕ ಮಾತ್ರೆ ತೆಗೆದುಕೊಳ್ಳುವುದರಿಂದ ಹೃದಯ ವೈಫಲ್ಯದ ಅಪಾಯ ಹೆಚ್ಚಾಗುತ್ತದೆ. ಅಧ್ಯಯನದ ದೃಢೀಕರಣದ ಅಗತ್ಯವಿರುವುದರಿಂದ ಆಸ್ಪಿರಿನ್ ಮತ್ತು ಹೃದಯ ವೈಫಲ್ಯದ ನಡುವಿನ ಸಂಭಾವ್ಯ ಸಂಪರ್ಕವನ್ನು ಸ್ಪಷ್ಟಪಡಿಸುವ ಅಗತ್ಯವಿದೆ ಎಂದು ಜರ್ಮನಿ ಫ್ರೀಬರ್ಗ್ ವಿಶ್ವವಿದ್ಯಾನಿಲಯದ ಅಧ್ಯಯನ ಲೇಖಕ ಡಾ.ಬ್ಲೆರಿಮ್ ಮುಜಾಜ್ ಹೇಳಿದ್ದಾರೆ.
ಹೃದಯ ವೈಫಲ್ಯದ ಮೇಲೆ ಆಸ್ಪಿರಿನ್ನ ಪ್ರಭಾವವು ವಿವಾದಾಸ್ಪದವಾಗಿದೆ. ಈ ಅಧ್ಯಯನವು ಹೃದ್ರೋಗ ಹೊಂದಿರುವ ಮತ್ತು ಯಾವುದೇ ಸಮಸ್ಯೆ ಇಲ್ಲದಿರುವ ಜನರಲ್ಲಿ ಹೃದಯ ವೈಫಲ್ಯದ ಬಗೆಗಿನ ಸಂಬಂಧವನ್ನು ಮೌಲ್ಯಮಾಪನ ಮಾಡುವ ಗುರಿಯನ್ನು ಹೊಂದಿದೆ. ಜತೆಗೆ ಔಷಧವನ್ನು ತೆಗೆದುಕೊಳ್ಳುವುದರಿಂದ ಯಾವ ರೀತಿಯ ಅಡ್ಡಪರಿಣಾಮಗಳಾಗುತ್ತದೆ ಎಂಬುವುದನ್ನು ತಿಳಿಯುವ ಅಗತ್ಯ ಇದೆ ಎನ್ನುವುದು ಈ ಅಧ್ಯಯನದ ಬಗೆಗಿನ ವಿಮರ್ಶೆ.
ವೆಸ್ಟರ್ನ್ ಯುರೋಪ್ ಮತ್ತು ಯುಎಸ್ ನಿಂದ ಹೊಮೇಜ್ನಲ್ಲಿ 30,827 ವ್ಯಕ್ತಿಗಳನ್ನು ಒಳಗೊಂಡತೆ ಅಧ್ಯಯನ ನಡೆಸಿದ್ದು, ಹೃದಯ ವೈಫಲ್ಯದ ಅಪಾಯದ ಬಗ್ಗೆ ಗಮನಹರಿಸಲಾಗಿದೆ. ಹೃದ್ರೋಗಕ್ಕೆ ಗುರಿಯಾಗಿರುವವರಿಗೆ ಅಥವಾ ಇನ್ನಿತರರಿಗೆ ಧೂಮಪಾನ, ಸ್ಥೂಲಕಾಯತೆ, ಅಧಿಕ ರಕ್ತದೊತ್ತಡ, ಅಧಿಕ ಕೊಲೆಸ್ಟ್ರಾಲ್, ಮಧುಮೇಹ ಮತ್ತು ಹೃದಯರಕ್ತನಾಳದ ಕಾಯಿಲೆಗಳೇ ಹೃದಯ ವೈಫಲ್ಯಕ್ಕೆ ಇನ್ನಿತರ ಕಾರಣವಾಗಬಹುದು ಎಂದೂ ಕೂಡ ತಿಳಿದು ಬಂದಿದೆ.
ಈ ಅಧ್ಯಯನದಲ್ಲಿ ಮುಖ್ಯವಾಗಿ 40 ವರ್ಷ ಮತ್ತು ಅದಕ್ಕಿಂತ ಹೆಚ್ಚಿನ ವಯಸ್ಸಿನವರು ಭಾಗಿಯಾಗಿದ್ದಾರೆ. ದಾಖಲಾತಿಯಲ್ಲಿ ಆಸ್ಪಿರಿನ್ ಬಳಕೆದಾರರು ಮತ್ತು ಬಳಕೆದಾರರಲ್ಲದವರು ಎಂದು ವರ್ಗೀಕರಿಸಲಾಗಿದೆ. ಅಧ್ಯಯನಕ್ಕೆ ಒಳಪಟ್ಟವರನ್ನು ಆಸ್ಪತ್ರೆಗೆ ಸೇರಿಸುವ ಅಗತ್ಯವಿರುವ ಮಾರಣಾಂತಿಕ ಅಥವಾ ಮಾರಣಾಂತಿಕವಲ್ಲದ ಹೃದಯ ವೈಫಲ್ಯದ ಆಧರಾರ ಮೇಲೆ ಅಧ್ಯಯನಕ್ಕೆ ಗುರಿಯಾಗಿಸಲಾಗಿದೆ.
67 ವರ್ಷ ವಯಸ್ಸಿವರನ್ನು ಹೆಚ್ಚು ಆಯ್ಕೆ ಮಾಡಿಕೊಂಡಿದ್ದು, ಇದರಲ್ಲಿ 34 ಪ್ರತಿಶತ ಮಹಿಳೆಯರು ಭಾಗಿಯಾಗಿದ್ದಾರೆ. ಒಟ್ಟು 7,698 ಜನರನ್ನು ಅಧ್ಯಯನಕ್ಕೆ ಗುರಿಯಾಗಿಸಿದ್ದು, 5 ವರ್ಷಗಳ ಅಂತರದಲ್ಲಿ 1,330 ಜನರಲ್ಲಿ ಹೃದಯ ವೈಫಲ್ಯದ ಸಮಸ್ಯೆ ಕಂಡು ಬಂದಿದೆ .ವಿಶೇಷ ಎಂದರೆ 1330 ಜನರು ಆಸ್ಪಿರಿನ್ ಸೇವಿಸುವವರಾಗಿದ್ದಾರೆ.
ಲಿಂಗ, ವಯಸ್ಸು, ದೇಹದ ಮಾಸ್ ಇಂಡೆಕ್ಸ್, ಧೂಮಪಾನ, ಮದ್ಯಪಾನ, ರಕ್ತದೊತ್ತಡ, ಹೃದಯ ಬಡಿತ, ರಕ್ತದ ಕೊಲೆಸ್ಟ್ರಾಲ್, ಕ್ರಿಯೇಟಿನೈನ್, ಅಧಿಕ ರಕ್ತದೊತ್ತಡ, ಮಧುಮೇಹ, ಮೂತ್ರವರ್ಧಕಗಳು, ಹೃದಯರಕ್ತನಾಳದ ಕಾಯಿಲೆ ಮತ್ತು ರೆನಿನ್ ಚಿಕಿತ್ಸೆಗೆ ಸರಿಹೊಂದಿಸಿದ ನಂತರವೇ ಆಸ್ಪಿರಿನ್ ಬಳಕೆ ಮತ್ತು ಅದರ ಪರಿಣಾಮದಿಂದ ಹೃದಯ ವೈಫಲ್ಯವಾಗುತ್ತದೆಯೇ ಎಂದು ತನಿಖಾಧಿಕಾರಿಗಳು ನಿರ್ಣಯಿಸಿದ್ದಾರೆ.
ಫಲಿತಾಂಶಗಳ ಸ್ಥಿರತೆಯನ್ನು ಪರಿಶೀಲಿಸಲು, ಹೃದಯಾಘಾತದ ಅಪಾಯದ ಅಂಶಗಳಿಗೆ ಆಸ್ಪಿರಿನ್ ಬಳಕೆದಾರರು ಮತ್ತು ಬಳಕೆದಾರರಲ್ಲದವರನ್ನು ಹೊಂದಾಣಿಕೆ ಮಾಡಿದ ನಂತರ ಸಂಶೋಧಕರು ವಿಶ್ಲೇಷಣೆಯನ್ನು ಪುನರಾವರ್ತಿಸಿದ್ದಾರೆ. ಈ ಹೊಂದಾಣಿಕೆಯ ವಿಶ್ಲೇಷಣೆಯಲ್ಲಿ, ಆಸ್ಪಿರಿನ್ 26 ಪ್ರತಿಶತದಷ್ಟು ಹೊಸ ಹೃದಯ ವೈಫಲ್ಯದ ರೋಗನಿರ್ಣಯದ ಅಪಾಯದೊಂದಿಗೆ ಗುರುತಿಸಿಕೊಂಡಿದೆ. ಫಲಿತಾಂಶಗಳನ್ನು ಮತ್ತಷ್ಟು ಪರಿಶೀಲಿಸಲು, ಹೃದಯರಕ್ತನಾಳದ ಕಾಯಿಲೆಯ ಇತಿಹಾಸ ಹೊಂದಿರುವ ರೋಗಿಗಳನ್ನು ಹೊರತುಪಡಿಸಿದ ನಂತರ ವಿಶ್ಲೇಷಣೆಯನ್ನು ಪುನರಾವರ್ತಿಸಲಾಯಿತು. ಭಾಗವಹಿಸಿದ 22,690 ಜನರು ಹೃದಯರಕ್ತನಾಳದ ಕಾಯಿಲೆಯಿಂದ ಮುಕ್ತವಾಗಿದ್ದಾರೆ. ಇವರಲ್ಲಿ ಆಸ್ಪಿರಿನ್ ಬಳಕೆಯೇ ಹೃದಯ ವೈಫಲ್ಯದ ಅಪಾಯವನ್ನು 27 ಪ್ರತಿಶತದಷ್ಟು ಹೆಚ್ಚಿಸಿದೆ.
ಹೃದ್ರೋಗ ಹೊಂದಿರುವ ಮತ್ತು ಇಲ್ಲದ ವ್ಯಕ್ತಿಗಳಲ್ಲಿ ಆಸ್ಪಿರಿನ್ ಬಳಕೆ ಮತ್ತು ಘಟನೆಯ ಹೃದಯ ವೈಫಲ್ಯದ ನಡುವಿನ ಸಂಬಂಧವನ್ನು ತನಿಖೆ ಮಾಡಲು ಇದು ಮೊದಲ ದೊಡ್ಡ ಅಧ್ಯಯನವಾಗಿದೆ. ಕನಿಷ್ಠ ಒಂದು ಅಪಾಯಕಾರಿ ಅಂಶ ಇದಾಗಿದೆ ಎನ್ನುವುದನ್ನು ತಳ್ಳಿ ಹಾಕುವಂತಿಲ್ಲ. ಆಸ್ಪಿರಿನ್ ಅನ್ನು ಸಾಮಾನ್ಯವಾಗಿ ಬಳಸಲಾಗುತ್ತದೆ ನಮ್ಮ ಅಧ್ಯಯನದಲ್ಲಿ ಭಾಗವಹಿಸಿದ ನಾಲ್ವರಲ್ಲಿ ಒಬ್ಬರು ತೆಗೆದುಕೊಳ್ಳುತ್ತಿದ್ದಾರೆ. ಈ ಜನಸಂಖ್ಯೆಯಲ್ಲಿ, ಆಸ್ಪಿರಿನ್ ಬಳಕೆಯು ಇತರ ಅಪಾಯಕಾರಿ ಅಂಶಗಳಿಂದ ಹೊರತು ಪಡಿಸಿ ಸ್ವತಂತ್ರವಾದ ಹೃದಯ ವೈಫಲ್ಯದೊಂದಿಗೆ ಸಂಬಂಧಿಸಿದೆ ಎಂದು ಡಾ.ಬ್ಲೆರಿಮ್ ಮುಜಾಜ್ ತಿಳಿಸಿದ್ದಾರೆ.
ಇದನ್ನೂ ಓದಿ: ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ
Health Tips: ಸಿಗರೇಟ್ ಸೇದುವವರೇ ಗಮನಿಸಿ; ಹೃದಯನಾಳದ ಸಮಸ್ಯೆಗೆ ಸ್ಟ್ರೋಕ್ ಮೊದಲ ಲಕ್ಷಣವಾಗಿರಬಹುದು!
Published On - 1:08 pm, Wed, 24 November 21