ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ

ಜೀವನಶೈಲಿಯಲ್ಲಿನ ಬದಲಾವಣೆ, ಕೆಲಸದ ಒತ್ತಡ, ಆಹಾರ ಪದ್ಧತಿ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಪವರ್ ಕನ್ನಡಕವನ್ನು ಧರಿಸುವಂತೆ ಮಾಡಿದೆ. ದೃಷ್ಟಿ ಹೆಚ್ಚಿಸಲು ಯಾವುದೇ ವಿಶೇಷ ಔಷಧಿ ಇಲ್ಲ. ಆದರೆ ಈ ಕೆಲವು ಥೆರಪಿಗಳು ಕನ್ನಡಕದ ದಾಸರಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ.

ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ
ಸಂಗ್ರಹ ಚಿತ್ರ
Follow us
TV9 Web
| Updated By: preethi shettigar

Updated on: Nov 24, 2021 | 8:12 AM

ಇಂದಿನ ಕಾಲದಲ್ಲಿ ಯುವಕರಿಂದ ಹಿಡಿದು ಮಕ್ಕಳವರೆಗೆ ಪವರ್ ಹೊಂದಿರುವ ಕನ್ನಡಕ ಧರಿಸುವುದನ್ನು ನಾವು ನೋಡುತ್ತೇವೆ. ಹಿಂದಿನ ಕಾಲದಲ್ಲಿ ವಯಸ್ಸಾದ ನಂತರ ದೃಷ್ಟಿ ಕಡಿಮೆಯಾಗುತ್ತದೆ ಎಂಬ ಕಾರಣಕ್ಕೆ ಕನ್ನಡಕದ ಮೊರೆ ಹೋಗುತ್ತಿದ್ದರು. ಆದರೆ ಇಂದಿನ ಪರಿಸ್ಥಿತಿಯೇ ಬೇರೆ. ಜೀವನಶೈಲಿಯಲ್ಲಿನ ಬದಲಾವಣೆ, ಕೆಲಸದ ಒತ್ತಡ, ಆಹಾರ ಪದ್ಧತಿ, ಮಕ್ಕಳಿಂದ ಹಿಡಿದು ಹಿರಿಯರ ವರೆಗೆ ಎಲ್ಲರೂ ಪವರ್ ಕನ್ನಡಕವನ್ನು(Power glass) ಧರಿಸುವಂತೆ ಮಾಡಿದೆ. ದೃಷ್ಟಿ ಹೆಚ್ಚಿಸಲು ಯಾವುದೇ ವಿಶೇಷ ಔಷಧಿ ಇಲ್ಲ. ಆದರೆ ಈ ಕೆಲವು ಥೆರಪಿಗಳು (Therapy) ಕನ್ನಡಕದ ದಾಸರಾಗುವುದನ್ನು ತಪ್ಪಿಸಲು ಸಹಾಯ ಮಾಡುತ್ತದೆ. ಹಾಗಿದ್ದರೆ ಯಾವ ಚಿಕಿತ್ಸೆಯು ನಿಮ್ಮನ್ನು ಕನ್ನಡಕದಿಂದ ದೂರವಾಗಿಸುತ್ತದೆ ಎಂಬ ಬಗ್ಗೆ ಈ ವರದಿ ನಿಮಗೆ ತಿಳಿಸುತ್ತದೆ.

ಕನ್ನಡಕ ಧರಿಸುವುದರಿಂದ ತಪ್ಪಿಸಲು ಈ 5 ಥೆರಪಿ ಅಭ್ಯಾಸ ಮಾಡಿಕೊಳ್ಳಿ ನೇತ್ರಧಾರ ಥೆರಪಿ (Netradhara Therapy) ನೇತ್ರಧಾರ ಥೆರಪಿಯು ಕಣ್ಣಿನ ಸಮಸ್ಯೆಯಿಂದ ದೂರ ಮಾಡಲು ಪ್ರಯೋಜನಕಾರಿಯಾಗಿದೆ. ಈ ಥೆರಪಿಯನ್ನು ನಿರ್ವಹಿಸಲು, ಮೂಗಿನ ಮೇಲೆ ನಿರಂತರವಾಗಿ 5 ರಿಂದ 6 ಇಂಚು ಎತ್ತರದಲ್ಲಿ 2 ರಿಂದ 3 ನಿಮಿಷಗಳ ಕಾಲ ನಿಮ್ಮ ಕಣ್ಣುಗಳಿಗೆ ಎಣ್ಣೆಯನ್ನು ಹಾಕಿ. ಇದು ನಿಮ್ಮ ಕಣ್ಣಿನ್ನು ಸ್ವಚ್ಛಗೊಳಿಸುತ್ತದೆ. ನಿರ್ವಿಶೀಕರಣ ಮಟ್ಟಕ್ಕೆ ಸಹ ಇದು ಕೆಲಸ ಮಾಡುತ್ತದೆ.

ಅಂಜನಾ ಥೆರಪಿ (Anjana Therapy)  ಅಂಜನಾ ಥೆರಪಿಯು ದೃಷ್ಟಿಯನ್ನು ಸುಧಾರಿಸುತ್ತದೆ. ಈ ಚಿಕಿತ್ಸೆಯಲ್ಲಿ ಬಳಸಲಾಗುವ ಔಷಧಿಗಳನ್ನು ಖನಿಜ, ಲೋಹ ಮತ್ತು ಗಿಡಮೂಲಿಕೆಗಳ ಮಿಶ್ರಣದಿಂದ ತಯಾರಿಸಲಾಗುತ್ತದೆ. ಈ ಎಲ್ಲಾ ವಸ್ತುಗಳನ್ನು ಮಿಶ್ರಣ ಮಾಡಿ ಪೇಸ್ಟ್ ಅನ್ನು ತಯಾರಿಸಿ. ನಂತರ ಅದನ್ನು ನಿಮ್ಮ ಕಣ್ಣುಗಳಿಗೆ ಅನ್ವಯಿಸಲಾಗುತ್ತದೆ. ಇದು ಕಣ್ಣಿಗೆ ಕನ್ನಡಕ ಧರಿಸುವುದರಿಂದ ನಿಮ್ಮನ್ನು ಕಾಪಾಡುತ್ತದೆ.

ಅಶ್ಯೋತನ ಥೆರಪಿ (Aschyotana Therapy) ಆರೋಗ್ಯಕರ ಆಹಾರ ಮತ್ತು ವ್ಯಾಯಾಮ ಮಾಡಿದ ನಂತರವೂ ಕನ್ನಡಕ ಧರಿಸುವ ಸಂದರ್ಭ ಎದುರಾದರೆ ಅಶ್ಯೋತನ ಥೆರಪಿ ಮಾಡಿಸಿ. ಅಶ್ಯೋತನ ಥೆರಪಿಯು ತುಂಬಾ ಉಪಯುಕ್ತವಾಗಿರುತ್ತದೆ. ಈ ಚಿಕಿತ್ಸೆಯಲ್ಲಿ, ಗಿಡಮೂಲಿಕೆಗಳಿಂದ ದ್ರವ ಔಷಧವನ್ನು ತಯಾರಿಸಲಾಗುತ್ತದೆ. ಇದರಲ್ಲಿ 8-10 ಹನಿಗಳನ್ನು ಮೂಗಿನ ಕ್ಯಾಂಥಸ್​ನಲ್ಲಿ ತೊಟ್ಟಿಕ್ಕುವಂತೆ ಮಾಡಲಾಗುತ್ತದೆ. ಇದು ನಿಮ್ಮ ಕಣ್ಣುಗಳ ಜೀವಕೋಶಗಳನ್ನು ಸ್ವಚ್ಛಗೊಳಿಸಲು ಸಹಾಯ ಮಾಡುತ್ತದೆ.

ತರ್ಪಣ ಥೆರಪಿ (Tharpana Therapy) ತರ್ಪಣ ಚಿಕಿತ್ಸೆಯು ದೃಷ್ಟಿಯನ್ನು ಹೆಚ್ಚಿಸುವುದಲ್ಲದೆ ಕಣ್ಣುಗಳನ್ನು ತಂಪಾಗಿಸುತ್ತದೆ. ಈ ಚಿಕಿತ್ಸೆಯಲ್ಲಿ, ಹಿಟ್ಟಿನ ರೂಪದಲ್ಲಿ ತಯಾರಿಸಿ, ಅದನ್ನು ಕಣ್ಣುಗಳ ಹಚ್ಚಲಾಗುತ್ತದೆ. ಇದರ ನಂತರ, ಗಿಡಮೂಲಿಕೆಗಳಿಂದ ತಯಾರಿಸಿದ ಔಷಧವನ್ನು ಒಳಗೆ ಹಾಕಲಾಗುತ್ತದೆ ಮತ್ತು ಸ್ವಲ್ಪ ಸಮಯದವರೆಗೆ ಬಿಡಲಾಗುತ್ತದೆ. ಇದು ಕಣ್ಣುಗಳ ಜೀವಕೋಶಗಳಿಗೆ ಪೋಷಣೆಯನ್ನು ಒದಗಿಸುತ್ತದೆ. ಕಣ್ಣಿನ ದೃಷ್ಟಿ ಶಕ್ತಿ ಹೆಚ್ಚಿಸಲು ಇದು ಉಪಯುಕ್ತವಾಗಿದೆ.

ಶಿರೋಧರ ಥೆರಪಿ (Shirodhara Therapy) ಈ ಚಿಕಿತ್ಸೆಯು ಅನೇಕ ವಿಷಯಗಳಿಗೆ ಪ್ರಯೋಜನಕಾರಿಯಾಗಿದೆ. ಈ ಥೆರಪಿಯಲ್ಲಿ ರೋಗಿಯನ್ನು ಮೇಜಿನ ಮೇಲೆ ಮಲಗಿಸಿ, ನಂತರ ಸುಮಾರು 45 ನಿಮಿಷಗಳ ಕಾಲ  ಹಣೆಯ ಮೇಲೆ ಔಷಧೀಯ ಎಣ್ಣೆಯನ್ನು ಸುರಿಯಲಾಗುತ್ತದೆ. ಇದು ಕಣ್ಣಿನ ಆರೈಕೆ ಜತೆಗೆ ದೇಹಕ್ಕೂ ಆರಾಮದಾಯಕವಾಗಿರುತ್ತದೆ.

ಇದನ್ನೂ ಓದಿ: Dark eye circles: ಕಣ್ಣಿನ ಸುತ್ತ ಡಾರ್ಕ್ ಸರ್ಕಲ್​ನಿಂದ ವಯಸ್ಕರಂತೆ ಕಾಣುತ್ತಿದ್ದೀರಾ? ತಜ್ಞರ ಸಲಹೆಗಳೇನು ತಿಳಿಯಿರಿ

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ರಾಹುಲ್- ಜೈಸ್ವಾಲ್ ಜೊತೆಯಾಟಕ್ಕೆ ರನ್ ಸಾಮ್ರಾಟನೇ ಫುಲ್ ಫಿದಾ
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್