Eye Care: ವಾಯು ಮಾಲಿನ್ಯದಿಂದ ಕಣ್ಣುಗಳಲ್ಲಿ ಕಾಂಜಂಕ್ಟಿವಿಟಿಸ್ ಬರಬಹುದು; ಇರಲಿ ಎಚ್ಚರ

ಕಣ್ಣುಗಳಲ್ಲಿ ಕೆಂಪು ಮತ್ತು ಊತವನ್ನು ಉಂಟುಮಾಡುತ್ತದೆ. ಹೆಚ್ಚಿನ ಜನರಲ್ಲಿ, ಇದು ತಾನಾಗಿಯೇ ಸರಿ ಹೋಗುತ್ತದೆ. ಆದರೆ ಈ ಸಮಸ್ಯೆ ಎರಡು ಅಥವಾ ಮೂರು ದಿನಗಳವರೆಗೆ ಮುಂದುವರಿದರೆ ನಂತರ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ನೇತ್ರತಜ್ಞ ಡಾ.ಎ.ಕೆ.ಗ್ರೋವರ್ ತಿಳಿಸಿದ್ದಾರೆ.

Eye Care: ವಾಯು ಮಾಲಿನ್ಯದಿಂದ ಕಣ್ಣುಗಳಲ್ಲಿ ಕಾಂಜಂಕ್ಟಿವಿಟಿಸ್ ಬರಬಹುದು; ಇರಲಿ ಎಚ್ಚರ
ಸಂಗ್ರಹ ಚಿತ್ರ
Follow us
TV9 Web
| Updated By: shruti hegde

Updated on: Nov 25, 2021 | 8:02 AM

ದೆಹಲಿ ಮತ್ತು ಅದರ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಾಯು ಮಾಲಿನ್ಯದ (Air pollution) ಮಟ್ಟವು ಈ ಹಿಂದೆ ಹೋಲಿಸಿದರೆ ಗಣನೀಯವಾಗಿ ಕಡಿಮೆಯಾಗಿದೆ. ಆದರೆ ಜನರು ಇನ್ನೂ ಅನೇಕ ಆರೋಗ್ಯ ಸಂಬಂಧಿತ ಸಮಸ್ಯೆಗಳನ್ನು ಎದುರಿಸುತ್ತಿದ್ದಾರೆ. ಮಾಲಿನ್ಯದಿಂದ ಕಣ್ಣುಗಳಲ್ಲಿ ಕಾಂಜಂಕ್ಟಿವಿಟಿಸ್ (conjunctivitis) ಕೂಡ ಉಂಟಾಗುತ್ತದೆ ಎಂದು ವೈದ್ಯರು ಹೇಳುತ್ತಾರೆ. ಕಾಂಜಂಕ್ಟಿವಿಟಿಸ್ ಎಂದರೆ ಕಣ್ಣಿನ ಬಿಳಿ ಭಾಗದಲ್ಲಿ ಕೆಂಪಾಗುವುದು. ಹೀಗಾಗಿ ಕಾಂಜಂಕ್ಟಿವಿಟಿಸ್ ಆಗದಂತೆ ಕಣ್ಣುಗಳನ್ನು ರಕ್ಷಿಸಲು ವಿಶೇಷ ಕಾಳಜಿ ಅಗತ್ಯ.

ಇದು ಅತ್ಯಂತ ಸಾಮಾನ್ಯವಾದ ಕಣ್ಣಿನ ಸಮಸ್ಯೆಯಾಗಿದ್ದು, ಇದು ಯಾವುದೇ ವಯಸ್ಸಿನಲ್ಲಿ ಸಂಭವಿಸಬಹುದು. ಸಾಮಾನ್ಯವಾಗಿ ಕಾಂಜಂಕ್ಟಿವಿಟಿಸ್ ಬೇಸಿಗೆಯಲ್ಲಿ ಕಂಡುಬರುತ್ತದೆ. ಆದರೆ ಕೆಲವೊಮ್ಮೆ ಮಾಲಿನ್ಯ ಮತ್ತು ಧೂಳು ಕೂಡ ಈ ಸಮಸ್ಯೆಯನ್ನು ಆಗಾಗ ಉಂಟುಮಾಡಬಹುದು. ಇದು ಕಣ್ಣುಗಳಲ್ಲಿ ಕೆಂಪು ಮತ್ತು ಊತವನ್ನು ಉಂಟುಮಾಡುತ್ತದೆ. ಹೆಚ್ಚಿನ ಜನರಲ್ಲಿ, ಇದು ತಾನಾಗಿಯೇ ಸರಿ ಹೋಗುತ್ತದೆ. ಆದರೆ ಈ ಸಮಸ್ಯೆ ಎರಡು ಅಥವಾ ಮೂರು ದಿನಗಳವರೆಗೆ ಮುಂದುವರಿದರೆ ನಂತರ ವೈದ್ಯರನ್ನು ಸಂಪರ್ಕಿಸುವುದು ಮುಖ್ಯ ಎಂದು ನೇತ್ರತಜ್ಞ ಡಾ.ಎ.ಕೆ.ಗ್ರೋವರ್ ತಿಳಿಸಿದ್ದಾರೆ.

ಇದು ಸಾಂಕ್ರಾಮಿಕ ರೋಗ ದೆಹಲಿಯ ನಾನಕ್ ನೇತ್ರ ಆಸ್ಪತ್ರೆಯ ವೈದ್ಯ ವಿನಯ್ ಪ್ರತಾಪ್ ಪ್ರಕಾರ, ಇದು ಸಾಂಕ್ರಾಮಿಕ ರೋಗ. ಅಂದರೆ ಒಬ್ಬರಿಂದ ಇನ್ನೊಬ್ಬರಿಗೆ ಹರಡಬಹುದು. ಆದ್ದರಿಂದ, ಒಬ್ಬ ವ್ಯಕ್ತಿಯು ಕಾಂಜಂಕ್ಟಿವಿಟಿಸ್​ನ ಸಮಸ್ಯೆಯನ್ನು ಹೊಂದಿದ್ದರೆ, ಅವರ ಕಣ್ಣನ್ನು ನೋಡಿದ ಇನ್ನೊಬ್ಬರಿಗೂ ಇದು ಹರಡುತ್ತದೆ. ಕೆಲವರಿಗೆ ಒಂದು ಕಣ್ಣಿನಲ್ಲಿ ಮಾತ್ರ ಈ ಸಮಸ್ಯೆ ಇದ್ದರೆ, ಅನೇಕ ಸಂದರ್ಭಗಳಲ್ಲಿ ಎರಡೂ ಕಣ್ಣುಗಳಲ್ಲಿ ನೋವು ಮತ್ತು ಉರಿ ಇರುತ್ತದೆ. ಅಂತಹ ಪರಿಸ್ಥಿತಿಯಲ್ಲಿ, ತಕ್ಷಣವೇ ಕಣ್ಣಿನ ವೈದ್ಯರನ್ನು ಸಂಪರ್ಕಿಸಬೇಕು.

ಕಾಂಜಂಕ್ಟಿವಿಟಿಸ್​ಗೆ ಚಿಕಿತ್ಸೆ ಕಣ್ಣುಗಳನ್ನು ಸ್ವಚ್ಛಗೊಳಿಸಲು ನೀರನ್ನು ಬಳಸಿ. ಕಣ್ಣುಗಳಲ್ಲಿ ಕೆಂಪಾಗುವಿಕೆಯು ಕಂಡುಬಂದರೆ, ಮೊದಲು ನಿಮ್ಮ ಕೈ, ಮುಖ ಮತ್ತು ಕಣ್ಣುಗಳನ್ನು ಶುದ್ಧ ನೀರಿನಿಂದ ತೊಳೆಯಿರಿ. ಇದರ ನಂತರವೂ, ಕಣ್ಣುಗಳ ನೋವು ಅಥವಾ ಕೆಂಪು ಕಡಿಮೆಯಾಗದಿದ್ದರೆ, ವೈದ್ಯರನ್ನು ಸಂಪರ್ಕಿಸಿ. ಇದಲ್ಲದೆ, ನಿಯಮಿತವಾಗಿ ಕಣ್ಣುಗಳನ್ನು ನೋಡಿಕೊಳ್ಳುವುದು ಮತ್ತು ಶುಚಿತ್ವದ ಬಗ್ಗೆ ವಿಶೇಷ ಕಾಳಜಿ ವಹಿಸುವುದು ಮುಖ್ಯವಾಗಿದೆ.

ವಿಟಮಿನ್ ಸೇವನೆಯು ಸಹ ಮುಖ್ಯವಾಗಿದೆ ವೈದ್ಯರ ಪ್ರಕಾರ, ಕೆಲವೊಮ್ಮೆ ದೇಹದಲ್ಲಿ ಜೀವಸತ್ವಗಳ ಕೊರತೆಯು ಕಣ್ಣಿನ ಸೋಂಕುಗಳಿಗೆ ಕಾರಣವಾಗುತ್ತದೆ. ಇದಕ್ಕಾಗಿ ನಮ್ಮ ಆಹಾರದಲ್ಲಿ ಸಾಕಷ್ಟು ಪ್ರಮಾಣದ ಪ್ರೋಟೀನ್ ಅಂಶ ಸೇರಿಸುವುದು ಅವಶ್ಯಕ.

ಇದನ್ನೂ ಓದಿ:

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

ಕನ್ನಡಕ ಧರಿಸುವ ಆತಂಕ ಬಿಡಿ; ಕಣ್ಣಿನ ಆರೋಗ್ಯಕ್ಕಾಗಿ ಈ 5 ಥೇರಪಿಗಳ ಮೊರೆ ಹೋಗಿ

ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಕಾರು ಅಪಘಾತದಲ್ಲಿ ಜೀವ ಉಳಿಸಿದವರ ಮರೆಯದ ರಿಷಬ್ ಪಂತ್
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಬೊಮ್ಮಾಯಿ ವಿರುದ್ಧ ಏಕಾಂಗಿಯಾಗಿ ಹೋರಾಡಿ 74,000 ಮತ ಪಡೆದಿದ್ದೆ: ಖಾದ್ರಿ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಕ್ಷೇತ್ರದ ಸಮಗ್ರ ಅಭಿವೃದ್ಧಿ ಕಡೆ ಯೋಗೇಶ್ವರ್ ಗಮನ ಹರಿಸಲಿದ್ದಾರೆ: ಶೀಲಾ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ಗ್ಯಾರಂಟಿ ಯೋಜನೆಗಳು ರಾಜ್ಯ ಉಪ ಚುನಾವಣೆಗಳಲ್ಲಿ ನಮ್ಮ ಕೈ ಹಿಡಿದಿವೆ: ಸಿಎಂ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
ರಾಜ್ಯ ಬಿಜೆಪಿ ನಾಯಕರನ್ನು ಪ್ರಧಾನಿ ಮೋದಿಯವರೇ ಸರಿಮಾಡಬೇಕು: ಕಾರ್ಯಕರ್ತ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
‘ಹೊರಗೆ ಕಳಿಸುತ್ತೇನೆ’ ನಗುತ್ತಲೇ ರಜತ್​ಗೆ ಎಚ್ಚರಿಕೆ ಕೊಟ್ಟ ಕಿಚ್ಚ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಮೂರನೇ ಸೋಲಿನಿಂದ ನಿಖಿಲ್ ಕುಮಾರಸ್ವಾಮಿ ಎದೆಗುಂದಬಾರದು: ಜಿಟಿ ದೇವೇಗೌಡ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಬೈ ಎಲೆಕ್ಷನ್ ಸೋಲು: TV ಎಸೆದು ನಾಯಕರ ವಿರುದ್ಧ ಬಿಜೆಪಿ ಕಾರ್ಯಕರ್ತ ಆಕ್ರೋಶ
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಯಡಿಯೂರಪ್ಪ ಒಂದೇ ಕಲ್ಲಿಂದ ಎರಡು ಹಕ್ಕಿ ಹೊಡೆದುರುಳಿಸಿದ್ದಾರೆ: ಯೋಗೇಶ್ವರ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್
ಬಿಜೆಪಿ ಹೀನಾಯ ಸೋಲಿಗೆ ಪೂಜ್ಯ ತಂದೆ, ಮಗ ಕಾರಣ: ಗುಡುಗಿದ ಯತ್ನಾಳ್