ಆಹಾರ ಪದ್ಧತಿಯ ಬದಲಾವಣೆಯಿಂದ ದೀರ್ಘಕಾಲದ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದೇ? ತಜ್ಞರು ಹೇಳುವುದೇನು?

ತಜ್ಞರು ಹೇಳಿದಂತೆ, ರೋಗಿಯು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತೀವ್ರವಾದ ಮೈಗ್ರೇನ್​ನಿಂದ ಬೇಸತ್ತಿದ್ದರು. ಈ ಸಮಸ್ಯೆ ಅವರನ್ನು ದುರ್ಬಲರನ್ನಾಗಿ ಮಾಡಿತ್ತು.

ಆಹಾರ ಪದ್ಧತಿಯ ಬದಲಾವಣೆಯಿಂದ ದೀರ್ಘಕಾಲದ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಕಂಡುಕೊಳ್ಳಬಹುದೇ? ತಜ್ಞರು ಹೇಳುವುದೇನು?
ಸಂಗ್ರಹ ಚಿತ್ರ

ತಲೆನೋವಿನಲ್ಲಿ ಹಲವು ಬಗೆಗಳಿವೆ. ತಲೆ ನೆತ್ತಿ ಭಾಗ ನೋವು, ಹಿಂಭಾಗದಲ್ಲಿ ನೋವು ಕಾಣಿಸಿಕೊಳ್ಳುವುದು, ಕೆಲವು ಮಾನಸಿಕ ಒತ್ತಡದಿಂದ ಬರುವಂಥದ್ದು ಹೀಗೆ ವಿವಿಧ ರೀತಿಯಲ್ಲಿ ತಲೆನೋವು ಕಾಣಿಸಿಕೊಳ್ಳುತ್ತವೆ. ಇವುಗಳನ್ನು ನೋವು ನಿವಾರಕ ಮಾತ್ರೆ, ಉತ್ತಮ ನಿದ್ರೆ, ವಿಶ್ರಾಂತಿ ಪಡೆಯುವ ಮೂಲಕ ಕಡಿಮೆ ಮಾಡಿಕೊಳ್ಳಬಹುದು. ಆದರೆ ಮೈಗ್ರೇನ್​​ ತಲೆನೋವು ಅಥವಾ ಅರೆ ತಲೆನೋವು ಸಾಮಾನ್ಯವಾಗಿ ಅಷ್ಟು ಬೇಗ ನಿವಾರಣೆ ಆಗುವಂಥದ್ದಲ್ಲ. ದೃಢ ನಿರ್ಧಾರದಿಂದ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಗಳು ಮತ್ತು ಪೌಷ್ಟಿಕಯುಕ್ತ ಆಹಾರ ಪದ್ಧತಿಯು ನಿಮ್ಮದಾಗಿದ್ದರೆ ಮೈಗ್ರೇನ್ ತಲೆನೋವನ್ನು ನಿಯಂತ್ರಣಕ್ಕೆ ತರುವ ಸಾಧ್ಯತೆಗಳಿವೆ. 60 ವರ್ಷದ ವ್ಯಕ್ತಿಯೋರ್ವರು 12 ವರ್ಷಗಳಿಂದ ತೀವ್ರ ಮೈಗ್ರೇನ್​ನಿಂದ ಬಳಲುತ್ತಿದ್ದು ಇದೀಗ ಮೂರು ತಿಂಗಳೊಳಗೆ ಸಮಸ್ಯೆಯಿಂದ ಪರಿಹಾರ ಕಂಡುಕೊಂಡಿರುವುದನ್ನು ಬ್ಯುಸಿನೆಸ್ ಇನ್​ಸೈಡರ್​ ಉಲ್ಲೇಖಿಸಿದೆ. ಹಾಗಿರುವಾಗ ಅವರ ಆಹಾರ ಪದ್ಧತಿ ಹೇಗಿತ್ತು? ಎಂಬುದನ್ನು ತಿಳಿಯೋಣ.

ಆಹಾದ ಪದ್ಧತಿಯಲ್ಲಿ ಅವರು ಹಸಿರು ಎಲೆಗಳನ್ನು ಸೇರಿಸಿದರು. ಆ ಬಳಿಕ ವ್ಯಕ್ತಿ 12 ವರ್ಷಗಳಿಂದ ಬಳಲುತ್ತಿದ್ದ ಮೈಗ್ರೇನ್ ಸಮಸ್ಯೆಯಿಂದ ಪರಿಹಾರ ಕಂಡುಕೊಂಡರು. ಬಿಎಮ್​ಜೆ ಕೇಸ್ ರಿಪೋರ್ಟ್ಸ್ ಪ್ರಕಟಿಸಿದ ಕೇಸ್ ಸ್ಟಡಿ ಪ್ರಕಾರ, 12 ವರ್ಷಗಳಿಂದ ಮೈಗ್ರೇನ್ ಹೊಂದಿರುವ ರೋಗಿಯು ಸಮಸ್ಯೆಯಿಂದ ಪರಿಹಾರ ಕಂಡುಕೊಂಡಿದ್ದಾರೆ ಎಂದು ತಿಳಿದು ಬಂದಿದೆ.

ಆ ವ್ಯಕ್ತಿಯು ದೀರ್ಘಕಾಲದ ಮೈಗ್ರೇನ್ ಸಮಸ್ಯೆಯನ್ನು ಎದುರಿಸಿದ್ದಾರೆ. ಆಹಾರದಲ್ಲಿನ ಬದಲಾವಣೆಯ ನಂತರದಲ್ಲಿ ಅವರು ಸಮಸ್ಯೆಯಿಂದ ಮುಕ್ತರಾಗಿದ್ದಾರೆ. ಕೇವಲ ಆಹಾರದಲ್ಲಿನ ಬದಲಾವಣೆಯು ದೀರ್ಘಕಾಲದ ಮೈಗ್ರೇನ್ಅನ್ನು ಗುಣಪಡಿಸುತ್ತದೆ ಎಂದು ತೀರ್ಮಾನಿಸುವುದು ಅಸಾಧ್ಯ. ಈ ರೋಗಿಯು ಕೇವಲ ಮೈಗ್ರೇನ್ ಒಂದೇ ಹೊಂದಿರಲಿಲ್ಲ ಇತರ ಆರೋಗ್ಯ ಸಮಸ್ಯೆಗಳಿದ್ದವು ಎಂದು ತಜ್ಞರು ಹೇಳಿದ್ದಾರೆ.

ಅಧ್ಯಯನದ ಪ್ರಕಾರ, ರೋಗಿಯು ಆಸ್ಪತ್ರೆಗೆ ಭೇಟಿ ನೀಡಿದ ಸಂದರ್ಭದಲ್ಲಿ ಅವರು ತೀವ್ರವಾದ ಮೈಗ್ರೇನ್​ನಿಂದ ಬೇಸತ್ತಿದ್ದರು. ಇದು ಅವರನ್ನು ದುರ್ಬಲರನ್ನಾಗಿ ಮಾಡಿತ್ತು. ಕೆಲವು ಬಾರಿ ಮೈಗ್ರೇನ್ 72 ಗಂಟೆಗಳವರೆಗೆ ಇರುತ್ತದೆ. ಇದು ಸಹಿಸಲಾರದಷ್ಟು ಸಂಕಟವನ್ನು ಸೃಷ್ಟಿಸುತ್ತದೆ. ಮೈಗ್ರೇನ್ ಇಲ್ಲದ ಸಮಯದಲ್ಲಿ ಅವರು ಆರಾಮವಾಗಿರುತ್ತಿದ್ದರು ಎಂದು ತಜ್ಞರು ಹೇಳಿದ್ದಾರೆ.

ಮೈಗ್ರೇನ್​ನಿಂದ ಪರಿಹಾರ ಪಡೆದ ಬಳಿಕ, ನಾನು ನ್ನ ಜೀವನವನ್ನು ಮರಳಿ ಪಡೆದಿದ್ದೇನೆ. ಹಿಂದೆ ಕಳೆದ ನೋವಿನಲ್ಲಿ ಎಂದಿಗೂ ಇನ್ನು ಮುಂದೆ ಬಂಧಿಯಾಗಿರುವುದಿಲ್ಲ ಎಂದು ಮೃಗ್ರೇನ್​ನಿಂದ ಬೇಸತ್ತಿದ್ದ ವ್ಯಕ್ತಿ ತಿಳಿಸಿದ್ದಾರೆ. ಈ ಕೆಲವು ವಿಧಾನಗಳನ್ನು ಆಹಾರ ಪದ್ಧತಿಯಲ್ಲಿ ಅಳವಡಿಸುವಂತೆ ರೋಗಿಗೆ ಸೂಚನೆ ನೀಡಲಾಗಿತ್ತು.

*ಪ್ರತಿದಿನ ಕನಿಷ್ಠ ಐದು ಒಣಗಿದ ಬೀಜಗಳು ಅಥವಾ ಪಾಲಾಕ್ ಸೊಪ್ಪಿನಂತಹ ಬೇಯಿಸಿದ ಹಸಿರು ಎಲೆಗಳನ್ನು ತಿನ್ನುವುದು

*ಪ್ರತಿದಿನ 32 ಒಣ ಬೀಜಗಳು ಮತ್ತು ಹಸಿರು ಜ್ಯೂಸ್ ಕುಡಿಯುವುದು ( ಸೊಪ್ಪಿನಿಂದ ತಯಾರಿಸಿದ)

*ಧಾನ್ಯಗಳು, ಪಿಷ್ಟ ತರಕಾರಿಗಳು, ಎಣ್ಣೆ, ಮಾಂಸಾಹಾರ, ಮುಖ್ಯವಾಗಿ ಡೈರಿ ಉತ್ಪನ್ನಗಳು ಮತ್ತು ಕೆಂಪು ಮಾಂಸ ಸೇವನೆಯನ್ನು ನಿಯಂತ್ರಣದಲ್ಲಿಡುವುದು

ಈ ರೀತಿಯ ಆಹಾರ ಪದ್ಧತಿಯನ್ನು ರೋಗಿಯು ರೂಢಿಸಿಕೊಂಡಿದ್ದರು. ಮೂರು ತಿಂಗಳ ಬಳಿಕ ಅವರು ಮೈಗ್ರೇನ್ ಸಮಸ್ಯೆಯಿಂದ ಹೊರಬಂದಿದ್ದಾರೆ. ಬಳಿಕ ರೋಗಿಯು ಮೈಗ್ರೇನ್ ಔಷಧಿಗಳನ್ನು ತೆಗೆದುಕೊಳ್ಳುವುದನ್ನು ನಿಲ್ಲಿಸಿದ್ದಾರೆ. ಜೊತೆಗೆ ರೋಗಿಯು ಚಾಕಲೇಟ್, ಚೀಸ್, ಕೆಫೀನ್ ಮತ್ತು ಒಣಗಿದ ಹಣ್ಣುಗಳನ್ನು ಅತಿಯಾಗಿ ಸೇವಿಸುವುದನ್ನು ತಪ್ಪಿಸಿ ಜೀವನ ಶೈಲಿಯಲ್ಲಿ ಕೆಲವು ಬದಲಾವಣೆಯ ಜೊತೆಗೆ ದಿನ ಕಳೆದರು. ಅಮೆರಿಕನ್ ಮೈಗ್ರೇನ್ ಪೌಂಡೇಶನ್ ಪ್ರಕಾರ, ಮೈಗ್ರೇನ್ ಆನುವಂಶಿಕ ಅಸ್ವಸ್ಥತೆ. ಆದರೆ ಜೀವನಶೈಲಿ, ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮೈಗ್ರೇನ್ ಎಷ್ಟು ಬಾರಿ ಅನುಭವಿಸುತ್ತಾನೆ ಎಂಬುದನ್ನು ಅವಲಂಬಿಸಿರುತ್ತದೆ.

ಮನುಷ್ಯ ಈಗಾಗಲೇ ಸಮತೋಲಿತ ಆಹಾರವನ್ನು ಸೇವಿಸುತ್ತಿದ್ದರೂ ಹಸಿರು ಸೊಪ್ಪುಗಳನ್ನು ಸೇವಿಸುವುದರಿಂದ ಸೀರಮ್ ಬೀಟಾ-ಕ್ಯಾರೋಟಿನ್ ಪ್ರಮಾಣ ಹೆಚ್ಚಿಸಲು ಸಹಾಯಕವಾಗಿದೆ. ಅವು ಕೆಲವು ಬದಲಾವಣೆಗೆ ಕಾರಣವಾಗಿರಬಹುದು. ಅದರಲ್ಲಿಯೂ ರೋಗಿಯು ಹೆಚ್ಐವಿ ಪಾಸಿಟಿವ್ ಆಗಿದ್ದು, ಇದು ಮೈಗ್ರೇನ್ ಹೆಚ್ಚಿನ ಅಪಾಯಕ್ಕೆ ಸಂಬಂಧಿಸಿತ್ತು ಎಂದು ತಜ್ಞರು ತಿಳಿಸಿದ್ದಾರೆ.

ಹಸಿರು ಸೊಪ್ಪಿನಲ್ಲಿ ಬೀಟಾ-ಕ್ಯಾರಟೀನ್ ಮತ್ತು ಇತರ ಪೋಷಕಾಂಶಗಳು ಸಮೃದ್ಧವಾಗಿರುತ್ತವೆ. ಅಪೌಷ್ಟಿಕ ಆಹಾರವನ್ನು ನೀವು ಸೇವಿಸುತ್ತಿದ್ದರೆ ಹೆಚ್ಚು ಜಾಗರೂಕರಾಗಿರಿ ಎಂದು ತಜ್ಞರು ಸಲಹೆ ನೀಡಿದ್ದಾರೆ.  ತಜ್ಞರ ಪ್ರಕಾರ ಆಹಾರದಲ್ಲಿನ ಬದಲಾವಣೆಯ ಬಳಿಕ ವ್ಯಕ್ತಿಯಲ್ಲಿ ಕೆಲವು ಬದಲಾವಣೆಗಳಾದವು. ಈ ಕುರಿತಂತೆ ಇನ್ನು ಹೆಚ್ಚಿನ ಅಧ್ಯಯನಗಳ ಅವಶ್ಯಕತೆ ಇದೆ. ಇದು ಕೇವಲ ಒಂದು ಪ್ರಕರಣದ ಅಧ್ಯಯನವಾಗಿದೆ ಎಂದು ತಜ್ಞರು ತಿಳಿಸಿದ್ದಾರೆ.

ನಿಮ್ಮ ಆರೋಗ್ಯವನ್ನು ಸುಧಾರಿಸಿಕಕೊಳ್ಳಲು ನಿಮ್ಮ ಆಹಾರ ಪದ್ಧತಿಯಲ್ಲಿನ ಕೆಲವು ಬದಲಾವಣೆಗಳು ಮುಖ್ಯ. ಆದರೆ ನಿಮ್ಮ ಆರೋಗ್ಯ ಸಂಬಂಧಿಸಿದಂತೆ ನೀವು ವೈದ್ಯರಲ್ಲಿ ಸಲಹೆ ಪಡೆದ ಬಳಿಕ ನಿಮ್ಮ ಜೀವನಶೈಲಿ ಮತ್ತು ಆಹಾರ ಪದ್ಧತಿಯಲ್ಲಿ ಬದಲಾವಣೆ ಮಾಡಿಕೊಳ್ಳಿ. ಯಾವುದೇ ಕಾರಣಕ್ಕೂ ಆರೋಗ್ಯದ ಕುರಿತಾಗಿ ನಿರ್ಲಕ್ಷ್ಯಬೇಡ. ತಜ್ಞರ ಸಲಹೆಯ ಮೇರೆಗೆ ನಿಮ್ಮ ಅರೋಗ್ಯ ಸುಧಾರಿಸಿಕೊಳ್ಳಿ.

ಇದನ್ನೂ ಓದಿ:

Eye Health: ನಿಮ್ಮ ದೃಷ್ಟಿ ಕ್ಷೀಣಿಸುತ್ತಿದೆಯೇ? ಕಣ್ಣುಗಳ ಆರೋಗ್ಯ ಸುರಕ್ಷತೆಗೆ ಇಲ್ಲಿವೆ ಸಲಹೆಗಳು

Benefits Of Dates: ಆರೋಗ್ಯ ಕಾಳಜಿಗಾಗಿ ಚಳಿಗಾಲದ ಸಮಯದಲ್ಲಿ ಖರ್ಜೂರ ಸೇವನೆ ಒಳ್ಳೆಯದೇ?

Click on your DTH Provider to Add TV9 Kannada