ಕೊರೊನಾ ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಇಡ್ಲಿ, ದೋಸೆ

ಒಂದು ಲಕ್ಷ ಕಿಲೋಗ್ರಾಂಗಳಷ್ಟು ಹಿಟ್ಟಿನೊಂದಿಗೆ ನೀವು ಎಷ್ಟು ಇಡ್ಲಿಗಳನ್ನು ತಯಾರಿಸಬಹುದು? ವಿಶ್ವದ ಅತಿದೊಡ್ಡ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಕಾ ಸಂಸ್ಥೆ ಈ ಕುರಿತಂತೆ ಲೆಕ್ಕಾಚಾರಕ್ಕೆ ಮುಂದಾಗಿದೆ.

ಕೊರೊನಾ ಸಾಂಕ್ರಾಮಿಕ ಕಾಯಿಲೆ ಸಮಯದಲ್ಲಿ ಬೇಡಿಕೆ ಹೆಚ್ಚಿಸಿಕೊಂಡ ಇಡ್ಲಿ, ದೋಸೆ
ಇಡ್ಲಿ
Follow us
shruti hegde
|

Updated on:May 02, 2021 | 11:07 AM

ಒಂದು ಲಕ್ಷ ಕಿಲೋಗ್ರಾಂಗಳಷ್ಟು ಹಿಟ್ಟಿನೊಂದಿಗೆ ನೀವು ಎಷ್ಟು ಇಡ್ಲಿಗಳನ್ನು ತಯಾರಿಸಬಹುದು? ವಿಶ್ವದ ಅತಿದೊಡ್ಡ ಇಡ್ಲಿ ಮತ್ತು ದೋಸೆ ಹಿಟ್ಟು ತಯಾರಿಕಾ ಸಂಸ್ಥೆ ಈ ಕುರಿತಂತೆ ಲೆಕ್ಕಾಚಾರಕ್ಕೆ ಮುಂದಾಗಿದೆ. ಈ ಪ್ರಕಾರ ಸುಮಾರು 20 ಲಕ್ಷ ಇಡ್ಲಿಗಳ ತಯಾರಿಸಬಹುದು ಎಂಬ ಅಂದಾಜು ದಾಖಲಾಗಿದೆ. ಬೆಂಗಲೂರು ಮೂಲದ ಐಡಿ ಫ್ರೆಶ್​ ಫುಡ್​ ಸಂಸ್ಥೆ ಮಾರ್ಚ್​ 31ರಂದು ವಿಶ್ವ ಇಡ್ಲಿ ದಿನ ಎಂದು ಕರ್ನಾಟಕದ ಆನೇಕಲ್​ನಲ್ಲಿ ಮೊದಲಿಗೆ ಅಚರಣೆ ಪ್ರಾರಂಭಿಸುತ್ತದೆ.  ಹೆಚ್ಚಿನ ಜನ ಮನೆಯಲ್ಲೇ ಇರುವುದನ್ನು ಗಮನಿಸಿ ಈ ಕಂಪನಿ ಜನರನ್ನು ಉದ್ಯೋಗಕ್ಕಾಗಿ ಕರೆದು ಸ್ಟಾರ್ಟ್​ಅಪ್​ ಕಂಪನಿಯಂತೆ ಕಾರ್ಯನಿರ್ವಹಿಸುತ್ತಾ ಬಂದಿದೆ.

ಇತ್ತೀಚೆಗೆ ದೇಶದಲ್ಲಿ ವ್ಯಾಪಕವಾಗಿ ಹರಡುತ್ತಿರುವ ಕೊವಿಡ್​ ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಆರೋಗ್ಯಕರವಾದ ಇಡ್ಲಿ ಮತ್ತು ದೋಸೆಯ ಬೇಡಿಕೆ ಹೆಚ್ಚಾಗಿದೆ ಎಂದು ಮಾರುಕಟ್ಟೆ ಸಂಶೋಧನೆ ತೋರಿಸಿದೆ ಎಂದು ಐಡಿ ಫ್ರೆಶ್​ ಫುಡ್​ ಸಹ ಸಂಸ್ಥಾಪಕ ಮತ್ತು ಸಿಇಒ ಮುಸ್ತಫಾ ಪಿಸಿ ಹೇಳಿದ್ದಾರೆ. ಭಾರತದಲ್ಲಿ ಸಾಂಪ್ರದಾಯಿಕ ಅಡುಗೆ ಮಾಡುವ ವಿಧಾನ ರೂಢಿಯಲ್ಲಿದ್ದು, ಹೆಚ್ಚಿನ ಜನ ಸಾಂಪ್ರದಾಯಿಕ ಅಡುಗೆಯನ್ನೇ ಇಷ್ಟಪಡುತ್ತಾರೆ. ಮನೆಯಲ್ಲಿಯೇ ಸರಳವಾಗಿ ಅಹಾರ ತಯಾರಿಸುವ ಸಾಧ್ಯತೆಗಳಿಗೆ ಜನರು ಈ ಪರಿಸ್ಥಿಗೆ ಮೊರೆ ಹೋಗಿದ್ದಾರೆ ಎಂದು ಅವರು ಹೇಳುತ್ತಾರೆ.

ಕಳೆದ ವರ್ಷ ಈ ಕಂಪನಿ 35 ಕೋಟಿ ಇಡ್ಲಿ ತಯಾರಿಸಿದೆ. ಭಾರತದಲ್ಲಿ ಮಾತ್ರವಲ್ಲದೇ ವಿದೇಶಗಳಿಗೂ ರಫ್ತು ಮಾಡಲಾಗುತ್ತಿದೆ. 2003ರಿಂದ ಪ್ರಾರಂಭಗೊಂಡ ಈ ಕಂಪನಿ 300 ಕ್ಕೂ ಹೆಚ್ಚು ಮಳಿಗೆಯನ್ನು ಹೊಂದಿದ್ದು, ಕ್ಯಾಲಿಫೋರ್ನಿಯಾ ಸೇರಿದಂತೆ ಇನ್ನಿತರ ದೇಶಗಳಿಗೂ ಆಹಾರವನ್ನು ರಫ್ತು ಮಾಡುತ್ತಿದೆ. ಚೆನ್ನೈನ ಸುವೈ ಭವನ್​ನಲ್ಲಿ ಐದು ಕಿಚನ್​ ಸೆಂಟರ್​ಗಳಿದ್ದು, ಸಾಂಕ್ರಾಮಿಕದ ಪರಿಸ್ಥಿತಿಯಲ್ಲಿ ಜನರಿಗೆ ದೋಸೆಗಳನ್ನು ಪೂರೈಸುತ್ತಿದೆ. ರವೆ ಮತ್ತು ರಾಗಿಯಿಂದ ತಯಾರಿಸಿದ ಆಹಾರವನ್ನೂ ಪೂರೈಸುತ್ತಿದೆ. ಮನೆ ಮನೆಗಳಿಗೂ ಕೂಡಾ ಆಹಾರವನ್ನು ತಲುಪಿಸುವ ಕಾರ್ಯ ಮಾಡುತ್ತಿದೆ.

ಕೊಯಮತ್ತೂರಿನ ಮೂಲದ ಮಹಿಳಾ ಉದ್ಯಮಿ ಕವಿತಾ ಮೋಹನ್​, ತುರ್ತು ಪರಿಸ್ಥಿತಿಯಲ್ಲಿ ಆಹಾರ ತಯಾರಿಕೆಗೆ ಮುಂದಾಗುತ್ತಾರೆ. ಕೊವಿಡ್​ ಪರಿಸ್ಥಿತಿಯಲ್ಲಿ ಕಳೆದ ವರ್ಷ ಸಣ್ಣ ಕೈಗಾರಿಕಾ ಉದ್ಯೋಗವನ್ನು ಪ್ರಾರಂಭಿಸುತ್ತಾರೆ. ತೃಪ್ತ್​ ಎಂಬ ಹೆಸರಿನ ಸಣ್ಣ ಕೈಗಾರಿಕೆಯನ್ನು ಪ್ರಾರಂಭಿಸುತ್ತಾರೆ. ನಾನು ಸ್ಥಳೀಯ ಜನರಿಗೆ ಆಹಾರವನ್ನು ಪೂರೈಸುತ್ತಿದ್ದೇನೆ. ಪ್ರತಿ ನಿತ್ಯ 50 ಕೆಜಿ ಹಿಟ್ಟಿನಿಂದ ಆಹಾರ ತಯಾರಿಸುತ್ತೇನೆ. ಬೇಡಿಕೆ ಹೆಚ್ಚಾದಂತೆ ಅದರ ಪೂರೂಕೆಯನ್ನೂ ಹೆಚ್ಚಿಸುತ್ತೇನೆ ಎಂದು ಅವರು ಅಭಿಪ್ರಾಯ ಪಟ್ಟಿದ್ದಾರೆ.

ಅನ್ಪುಮತಿ ಜೆಜೆ ಅವರು 2005ರಿಂದ ಫುಡ್​ ಸೆಂಟರ್​ನಲ್ಲಿ ಕೆಲಸ ಮಾಡುತ್ತಿದ್ದು, ಕಳೆದ ವರ್ಷದಿಂದ ಆಹಾರ ತಯಾರಿಕೆಯಲ್ಲಿ ಹೆಚ್ಚಿನ ಬೇಡಿಕೆ ಇದೆ. ಕಳೆದ ವರ್ಷ ಲಾಕ್​ಡೌನ್​ ಸಮಯದಲ್ಲಿ ಆಹಾರ ಪದಾರ್ಥಗಳಿಗೆ ಹೆಚ್ಚಿನ ಬೇಡಿಕೆ ಇತ್ತು ಎಂದು ಮಾಹಿತಿ ಹಂಚಿಕೊಂಡಿದ್ದಾರೆ. ಇವರ ಫುಡ್​ ಸೆಂಟರ್​ನಲ್ಲಿ 5 ಜನರು ಕೆಲಸ ಮಾಡುತ್ತಿದ್ದು, ಈ ಐವರ ಸಹಾಯದಿಂದ ಸಾಂಕ್ರಾಮಿಕ ಸಮಯದಲ್ಲಿ ಕೆಲಸ ನಿರ್ವಹಿಸಿದ್ದಾರೆ.

ಕೊಚ್ಚಿಯಲ್ಲಿ ಅಮಲ್​ ಮುರಲೀಧರನ್​ ಅವರು ಅವರ ತಾಯಿಯ ಜೊತೆ ಸೇರಿ ಫುಡ್​ ಸೆಂಟರ್​ ಪ್ರಾರಂಭಿಸುತ್ತಾರೆ. ಈ ಮೊದಲು 300 ಪ್ರಾಕೆಟ್​ನಷ್ಟು ಆಹಾರ ತಯಾರಿಸುತ್ತಿದ್ದು, ಇದೀಗ ಬೇಡಿಕೆಯ ಹೆಚ್ಚಳದ ನಂತರ 700 ಪ್ಯಾಕೆಟ್​ನಷ್ಟು ಹೆಚ್ಚಾಗಿದೆ. ನಮ್ಮ ಫುಡ್​ ಸೆಂಟರ್​ನಲ್ಲಿ ಅಕ್ಕಿ, ಬೇಳೆಗಳಿಂದ ತಯಾರಿಸಿ ಆಹಾರ ಪೂರೈಕೆ ಮಾಡುತ್ತೇವೆ. ಸಣ್ಣ ಅಂಗಡಿಗಳ ಮಾಲೀಕರು ಹೆಚ್ಚಾಗಿ ಖರೀದಿ ಮಾಡುತ್ತಾರೆ ಎಂದು ಅಮಲ್​ ಅಭಿಪ್ರಾಯ ಪಟ್ಟಿದ್ದಾರೆ. ಇಡ್ಲಿ ತಯಾರಿಕೆಯಲ್ಲಿ ಬಣ್ಣ, ಹದ, ಗಾತ್ರ ಮತ್ತು ರುಚಿ ಅತಿ ಮುಖ್ಯ. ಈ ನಾಲ್ಕು ಗುಣಗಳನ್ನು ಇಡ್ಲಿ ಹೊಂದಿರುತ್ತದೆ. ಮತ್ತು ತನ್ನ ಸವಿಯನ್ನು ತೋರ್ಪಡಿಸುತ್ತದೆ ಎಂದು ವ್ಯವಸ್ಥಾಪಕ ನಿರ್ದೇಶಕ ಮತ್ತು ಸಿಇಒ ಸೋನಿ ಮಣಿ ಅಭಿಪ್ರಾಯಪಟ್ಟಿದ್ದಾರೆ.

ಇದನ್ನೂ ಓದಿ: ತಮಿಳುನಾಡಿನ ‘ಇಡ್ಲಿ ಅಮ್ಮ’ನಿಗಾಗಿ ಕೆಲವೇ ತಿಂಗಳಲ್ಲಿ ಹೊಸ ಮನೆ, ಕ್ಯಾಂಟೀನ್​ ನಿರ್ಮಾಣ; ಭೂಮಿ ಖರೀದಿ ಮಾಡಿದ ಉದ್ಯಮಿ ಆನಂದ್ ಮಹೀಂದ್ರಾ

Published On - 10:54 am, Sun, 2 May 21

ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ನೈಜೀರಿಯಾದಲ್ಲಿ ಗ್ಯಾಸೋಲಿನ್ ಟ್ಯಾಂಕರ್ ಸ್ಫೋಟ, 70 ಮಂದಿ ಸಾವು
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್