Dengue Fever: ಡೆಂಗ್ಯೂನಿಂದ ವೇಗವಾಗಿ ಚೇತರಿಸಿಕೊಳ್ಳಲು ಇಲ್ಲಿದೆ ಆಹಾರ ಸಲಹೆಗಳು; ತಿನ್ನಬೇಕಾದ ಮತ್ತು ತಪ್ಪಿಸಬೇಕಾದ ಆಹಾರಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ

ಡೆಂಗ್ಯೂ ರೋಗಿಗಳಿಗೆ ಉತ್ತಮ ಜೀರ್ಣಕ್ರಿಯೆಗಾಗಿ ಲಘು ಆಹಾರವನ್ನು ಸೇವಿಸಲು ಆಗಾಗ ಸೂಚಿಸಲಾಗುತ್ತದೆ. ಏಕೆಂದರೆ ನಿಮ್ಮ ಪ್ರಗತಿಯ ಮೇಲೆ ನೀವು ಸೇವಿಸುವ ಆಹಾರ ಪ್ರಭಾವ ಬೀರುತ್ತದೆ. ಡೆಂಗ್ಯೂನಿಂದ ವೇಗವಾಗಿ ಚೇತರಿಸಿಕೊಳ್ಳಲು ನೀವು ಅನುಸರಿಸಬಹುದಾದ ಕೆಲವು ಆಹಾರ ಸಲಹೆಗಳ ಬಗ್ಗೆ ಇಲ್ಲಿದೆ ಸಂಪೂರ್ಣ ಮಾಹಿತಿ.

Dengue Fever: ಡೆಂಗ್ಯೂನಿಂದ ವೇಗವಾಗಿ ಚೇತರಿಸಿಕೊಳ್ಳಲು ಇಲ್ಲಿದೆ ಆಹಾರ ಸಲಹೆಗಳು; ತಿನ್ನಬೇಕಾದ ಮತ್ತು ತಪ್ಪಿಸಬೇಕಾದ ಆಹಾರಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳಿ
Fever
Follow us
ಪ್ರೀತಿ ಭಟ್​, ಗುಣವಂತೆ
| Updated By: Digi Tech Desk

Updated on: Aug 02, 2023 | 7:43 PM

ಡೆಂಗ್ಯೂ ಪ್ರತಿ ವರ್ಷವೂ ದೊಡ್ಡ ಪ್ರಮಾಣದಲ್ಲಿ ಜನರ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ಡೆಂಗ್ಯೂ ಹರಡುವುದನ್ನು ತಡೆಯಲು ಜನರು ಕೆಲವು ಕ್ರಮಗಳನ್ನು ಅನುಸರಿಸಲು ಸೂಚಿಸಲಾಗುತ್ತದೆ. ಅದಲ್ಲದೆ ನಿಂತ ನೀರು ಡೆಂಗ್ಯೂ ಹರಡುವ ಸೊಳ್ಳೆಗಳ ಉತ್ಪತ್ತಿ ಸ್ಥಳವಾಗುತ್ತದೆ. ಹಾಗಾಗಿ ಮನೆಯ ಸುತ್ತ ಮುತ್ತ ನೀರು ನಿಲ್ಲದಂತೆ ನೋಡಿಕೊಳ್ಳಬೇಕು. ಅಥವಾ ನೀವು ಈಗಾಗಲೇ ಡೆಂಗ್ಯೂ ಜ್ವರದಿಂದ ಬಳಲುತ್ತಿದ್ದರೆ ಸಂಪೂರ್ಣವಾಗಿ ಚೇತರಿಸಿಕೊಳ್ಳುವ ತನಕ ತುಂಬಾ ಜಾಗರೂಕರಾಗಿರಬೇಕು. ನೀವು ಸೇವಿಸುವ ಆಹಾರವು ನಿಮ್ಮ ಚೇತರಿಕೆಯ ಮೇಲೆ ಪ್ರಭಾವ ಬೀರುತ್ತದೆ. ಸರಿಯಾದ ಆಹಾರವು ಡೆಂಗ್ಯೂ ಜ್ವರದಿಂದ ವೇಗವಾಗಿ ಚೇತರಿಸಿಕೊಳ್ಳಲು ನಿಮಗೆ ಸಹಾಯ ಮಾಡುತ್ತದೆ. ಇದು ಡೆಂಗ್ಯೂವಿನ ವಿವಿಧ ರೋಗಲಕ್ಷಣಗಳನ್ನು ನಿವಾರಿಸುತ್ತದೆ ಮತ್ತು ಸಲಹೆ ನೀಡಿದ ಔಷಧಿಗಳ ಜೊತೆಗೆ ನಿಮಗೆ ಸ್ವಲ್ಪ ಹೆಚ್ಚುವರಿ ಪರಿಹಾರವನ್ನು ನೀಡುತ್ತದೆ. ನಿಮ್ಮ ಆಹಾರದಲ್ಲಿ ಹೆಚ್ಚುವರಿ ಆಹಾರಗಳನ್ನು ಸೇರಿಸುವುದರ ಜೊತೆಗೆ ಕೆಲವು ಆಹಾರಗಳನ್ನು ಸಹ ತಪ್ಪಿಸಬೇಕು. ವೇಗವಾಗಿ ಚೇತರಿಸಿಕೊಳ್ಳಲು ಡೆಂಗ್ಯೂ ಆಹಾರದಲ್ಲಿ ಸೇವಿಸಬೇಕಾದ ಮತ್ತು ಸೇವಿಸಬಾರದ ಕೆಲಸಗಳ ಸಂಪೂರ್ಣ ಮಾಹಿತಿ ಇಲ್ಲಿವೆ.

ಡೆಂಗ್ಯೂ ಜ್ವರದಿಂದ ಚೇತರಿಸಿಕೊಳ್ಳಲು ಇಲ್ಲಿವೆ ಆಹಾರ ಸಲಹೆಗಳು:

ತಿನ್ನಬೇಕಾದ ಆಹಾರಗಳು

1. ಪಪ್ಪಾಯಿ ಎಲೆಯ ರಸ ಪಪ್ಪಾಯಿ ಎಲೆಯ ರಸವು ಡೆಂಗ್ಯೂ ಜ್ವರಕ್ಕೆ ಸಾಕಷ್ಟು ಪ್ರಸಿದ್ಧವಾಗಿರುವ ಪರಿಹಾರವಾಗಿದೆ. ಈ ಜ್ವರಕ್ಕೆ ಪರಿಣಾಮಕಾರಿಯಾಗಿ ಚಿಕಿತ್ಸೆ ನೀಡಲು ಪಪ್ಪಾಯಿ ಎಲೆ ನಿಮಗೆ ಸಹಾಯ ಮಾಡುತ್ತದೆ. ಅದಲ್ಲದೆ ಇದು ಡೆಂಗ್ಯೂ ರೋಗಿಗಳ ಪ್ಲೇಟ್ಲೆಟ್ ಎಣಿಕೆಯನ್ನು ಹೆಚ್ಚಿಸುತ್ತದೆ ಮತ್ತು ರೋಗನಿರೋಧಕ ಶಕ್ತಿಯನ್ನು ಸುಧಾರಿಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ಬೇಗ ಚೇತರಿಕೆ ಕಾಣಲು ನೀವು ಸ್ವಲ್ಪ ಪಪ್ಪಾಯಿ ಎಲೆಯ ರಸವನ್ನು ಸ್ವಲ್ಪ ನೀರಿಗೆ ಸೇರಿಸಿ ದಿನಕ್ಕೆ ಎರಡು ಅಥವಾ ಮೂರು ಬಾರಿ ಕುಡಿಯಬೇಕು.

2. ತರಕಾರಿ ರಸಗಳು ತರಕಾರಿಗಳು ಅಗತ್ಯ ಪೋಷಕಾಂಶಗಳಿಂದ ಸಮೃದ್ಧವಾಗಿರುವುದರಿಂದ, ನಿಮ್ಮ ದೇಹಕ್ಕೆ ಶಕ್ತಿ ನೀಡುವಲ್ಲಿ ಸಹಕಾರಿಯಾಗಿದೆ. ಅನೇಕ ತರಕಾರಿಗಳ ಮಿಶ್ರಣದಿಂದ ತರಕಾರಿ ರಸ ತಯಾರಿಸಿ, ಕುಡಿಯುವುದರಿಂದ ನಿಮಗೆ ಸರಿಯಾದ ಪೋಷಣೆಯನ್ನು ಒದಗಿಸುತ್ತದೆ ಜೊತೆಗೆ ನಿಮ್ಮನ್ನು ಆರೋಗ್ಯವಾಗಿರಿಸುತ್ತದೆ. ವಿಟಮಿನ್ ಸಿ ಅಂಶವನ್ನು ಹೆಚ್ಚಿಸಲು ಮತ್ತು ಆ ರಸದ ರುಚಿಯನ್ನು ಅಧಿಕಗೊಳಿಸಲು ತರಕಾರಿ ರಸಕ್ಕೆ ಸ್ವಲ್ಪ ನಿಂಬೆ ರಸವನ್ನು ಸೇರಿಸಬಹುದು. ಬೇಡವಾದಲ್ಲಿ ಹಾಗೇ ಕುಡಿಯಬಹುದು.

ಇದನ್ನೂ ಓದಿ: ಡೆಂಗ್ಯೂನಿಂದ ಬಳಲುತ್ತಿರುವಾಗ ಅಮೃತಬಳ್ಳಿ ಉತ್ತಮ ಔಷಧಿಯೇ? ತಜ್ಞರ ಉತ್ತರ ಇಲ್ಲಿದೆ

3. ಎಳನೀರು ಡೆಂಗ್ಯೂ ಬಂದಾಗ ದೇಹದ ನಿರ್ಜಲೀಕರಣವನ್ನು ತಪ್ಪಿಸಲು ಎಳನೀರನ್ನು ಕುಡಿಯಲು ವೈದ್ಯರು ಶಿಫಾರಸು ಮಾಡುತ್ತಾರೆ. ಇದು ನಿಮ್ಮ ದೇಹವನ್ನು ಹೈಡ್ರೇಟ್ ಆಗಿರಿಸುತ್ತದೆ. ಹಾಗಾಗಿ ದಿನಕ್ಕೆ ಎರಡು ಲೋಟ ಎಳನೀರನ್ನು ಕುಡಿಯಬಹುದು. ಇದು ಆರೋಗ್ಯಕರ ಪಾನೀಯವಾಗಿರುವುದರಿಂದ ದೇಹಕ್ಕೆ ಯಾವುದೇ ರೀತಿಯ ಅಡ್ಡಪರಿಣಾಮ ಇರುವುದಿಲ್ಲ.

4. ಗಿಡಮೂಲಿಕೆಗಳ ಚಹಾ ಚಹಾವು ನಿಮ್ಮ ಆರೋಗ್ಯಕ್ಕೆ ಪ್ರಯೋಜನಕಾರಿ ಗುಣಲಕ್ಷಣಗಳಿಂದ ತುಂಬಿದೆ. ಉತ್ತಮ ಆರೋಗ್ಯಕ್ಕಾಗಿ ನೀವು ಶುಂಠಿ ಚಹಾ, ಏಲಕ್ಕಿ ಚಹಾ ಅಥವಾ ದಾಲ್ಚಿನ್ನಿ ಚಹಾವನ್ನು ಆಯ್ಕೆ ಮಾಡಬಹುದು. ಸಂಜೆ ಅಥವಾ ಬೆಳಗ್ಗೆ ಗಿಡಮೂಲಿಕೆ ಚಹಾವನ್ನು ಕುಡಿಯಬಹುದು. ಇದು ಡೆಂಗ್ಯೂನಿಂದ ನಿಮ್ಮ ಚೇತರಿಸಿಕೊಳ್ಳಲು ಸಹಾಯ ಮಾಡುತ್ತದೆ. ಜೊತೆಗೆ ಗಿಡಮೂಲಿಕೆ ಚಹಾದ ತಾಜಾ ಪರಿಮಳವು ನಿಮ್ಮ ಮನಸ್ಸನ್ನು ಉಲ್ಲಾಸಗೊಳಿಸುತ್ತದೆ.

ಇದನ್ನೂ ಓದಿ: Dengue Fever: ಡೆಂಗ್ಯೂ ಬಾರದಂತೆ ತಡೆಯುವುದು ಹೇಗೆ? ಸೋಂಕಿನ ಲಕ್ಷಣ, ಚಿಕಿತ್ಸೆ ಬಗ್ಗೆ ಇಲ್ಲಿದೆ ವಿವರ

5. ಬೇವಿನ ಎಲೆಗಳು

ಬೇವಿನ ಎಲೆಗಳು ಔಷಧೀಯ ಗುಣಗಳಿಂದ ತುಂಬಿವೆ ಎಂಬುದು ನಿಮಗೆ ಈಗಾಗಲೇ ತಿಳಿದಿರಬಹುದು. ಅದೆಲ್ಲದರ ಜೊತೆಗೆ ಬೇವಿನ ಎಲೆಗಳು ಡೆಂಗ್ಯೂ ರೋಗಿಗಳಿಗೂ ಪ್ರಯೋಜನಕಾರಿಯಾಗಿದೆ. ಇದು ವೈರಸ್ ಹರಡುವಿಕೆ ಮತ್ತು ಅದರ ಬೆಳವಣಿಗೆಯನ್ನು ನಿಯಂತ್ರಿಸಲು ಸಹಾಯ ಮಾಡುತ್ತದೆ. ಹಾಗಾಗಲಿ ಈ ಎಲೆಗಳು ಡೆಂಗ್ಯೂಗೆ ಪರಿಣಾಮಕಾರಿ ನೈಸರ್ಗಿಕ ಪರಿಹಾರ ಎಂದರೆ ತಪ್ಪಾಗಲಿಕ್ಕಿಲ್ಲ.

ಡೆಂಗ್ಯೂ ಜ್ವರದಿಂದ ಬಳಲುತ್ತಿರುವಾಗ ತಿನ್ನಬಾರದ ಆಹಾರಗಳು

ಡೆಂಗ್ಯೂ ಜ್ವರಕ್ಕೆ ಕೆಲವು ಆಹಾರಗಳು ಕೆಟ್ಟವು. ನಿಮ್ಮ ಚಿಕಿತ್ಸೆಯ ಪ್ರಗತಿಯನ್ನು ನಿಯಂತ್ರಣದಲ್ಲಿಡಲು ನೀವು ಕೆಲವು ಆಹಾರಗಳನ್ನು ಕಡ್ಡಾಯವಾಗಿ ತಪ್ಪಿಸಬೇಕು. ಅದರಲ್ಲಿ ಕೆಲವು ಆಹಾರಗಳೆಂದರೆ ಎಣ್ಣೆ ಮತ್ತು ಕರಿದ ಆಹಾರಗಳು, ಕೆಫೀನ್, ಕಾರ್ಬೊನೇಟೆಡ್ ಪಾನೀಯಗಳು, ಮಸಾಲೆಯುಕ್ತ ಆಹಾರ ಮತ್ತು ಕೊಬ್ಬು ಹೆಚ್ಚಿರುವ ಆಹಾರಗಳನ್ನು ಸೇವಿಸಬಾರದು. ಸೂಚನೆ: ಈ ಸಲಹೆ ಸೇರಿದಂತೆ ಹೇಳಿರುವ ವಿಷಯವು ಸಾಮಾನ್ಯ ಮಾಹಿತಿಯನ್ನು ಮಾತ್ರ ಒದಗಿಸುತ್ತದೆ. ಇದು ಯಾವುದೇ ರೀತಿಯಲ್ಲಿ ಅರ್ಹ ವೈದ್ಯಕೀಯ ಅಭಿಪ್ರಾಯಕ್ಕೆ ಪರ್ಯಾಯವಲ್ಲ. ಹೆಚ್ಚಿನ ಮಾಹಿತಿಗಾಗಿ ಯಾವಾಗಲೂ ತಜ್ಞರನ್ನು ಅಥವಾ ವೈದ್ಯರನ್ನು ಸಂಪರ್ಕಿಸಿ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್​ ಮಾಡಿ