AQI
TV9 Network
User
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಏನಿದು ಡಿಸೀಸ್ ಎಕ್ಸ್​?; ಇದು ಕೊವಿಡ್​ಗಿಂತಲೂ ಅಪಾಯಕಾರಿಯಾ?

ಡಿಸೀಸ್ ಎಕ್ಸ್ ಎಂಬುದು ವಿಶ್ವ ಆರೋಗ್ಯ ಸಂಸ್ಥೆ (WHO) 2016ರಲ್ಲಿ ಭವಿಷ್ಯದಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಕಾಯಿಲೆಯನ್ನು ವಿವರಿಸಲು ಸೃಷ್ಟಿಸಿದ ಒಂದು ಪದವಾಗಿದೆ.

ಏನಿದು ಡಿಸೀಸ್ ಎಕ್ಸ್​?; ಇದು ಕೊವಿಡ್​ಗಿಂತಲೂ ಅಪಾಯಕಾರಿಯಾ?
ಸಾಂದರ್ಭಿಕ ಚಿತ್ರ
ಸುಷ್ಮಾ ಚಕ್ರೆ
|

Updated on: Jan 17, 2024 | 6:45 PM

Share

ಜಗತ್ತಿನಾದ್ಯಂತ ಆತಂಕ ಸೃಷ್ಟಿಸಿದ್ದ ಕೊವಿಡ್ ಸೋಂಕಿನ ಬಳಿಕ ‘ಡಿಸೀಸ್ ಎಕ್ಸ್’ ಎಂದು ಕರೆಯಲ್ಪಡುವ ನಿಗೂಢ ಮತ್ತು ಮಾರಣಾಂತಿಕ ಕಾಯಿಲೆಯ ಬಗ್ಗೆ ಮತ್ತೆ ಆತಂಕ ಸೃಷ್ಟಿಯಾಗಿದೆ. ಈ ಡಿಸೀಸ್ ಎಕ್ಸ್ ನಿಖರವಾಗಿ ಏನು? ಇದು ಕೊವಿಡ್​ಗಿಂತಲೂ ಅಪಾಯಕಾರಿಯಾ? ಇದರ ಲಕ್ಷಣಗಳೇನು? ಈ ರೋಗ ಹೇಗೆ ಹರಡುತ್ತದೆ? ಎಂಬ ಬಗ್ಗೆ ಭಾರೀ ಚರ್ಚೆಗಳು ನಡೆಯುತ್ತಿವೆ.

ಡಿಸೀಸ್ ಎಕ್ಸ್ ಎಂಬುದು ವಿಶ್ವ ಆರೋಗ್ಯ ಸಂಸ್ಥೆ (WHO) 2016ರಲ್ಲಿ ಭವಿಷ್ಯದಲ್ಲಿ ಜಾಗತಿಕ ಸಾಂಕ್ರಾಮಿಕ ರೋಗವನ್ನು ಉಂಟುಮಾಡುವ ಸಾಮರ್ಥ್ಯವನ್ನು ಹೊಂದಿರುವ ಹೊಸ ಕಾಯಿಲೆಯನ್ನು ವಿವರಿಸಲು ಸೃಷ್ಟಿಸಿದ ಒಂದು ಪದವಾಗಿದೆ. ಇದು ಒಂದು ನಿರ್ದಿಷ್ಟ ರೋಗವಲ್ಲ. ಇದು ಸಾರ್ವಜನಿಕರ ಆರೋಗ್ಯಕ್ಕೆ ಅಪಾಯವನ್ನುಂಟುಮಾಡುವ ಅಜ್ಞಾತ ಅಥವಾ ಹೊಸದಾಗಿ ಹೊರಹೊಮ್ಮುತ್ತಿರುವ ಸಾಂಕ್ರಾಮಿಕ ಕಾಯಿಲೆಗೆ ಪ್ಲೇಸ್‌ಹೋಲ್ಡರ್ ಆಗಿದೆ.

ಇದನ್ನೂ ಓದಿ: ನಿಮ್ಮ ಲಿವರ್ ಆರೋಗ್ಯಕ್ಕೆ ಆಲ್ಕೋಹಾಲ್​ಗಿಂತ ಹೆಚ್ಚು ಅಪಾಯಕಾರಿ ಆಹಾರಗಳಿವು

ಡಿಸೀಸ್ ಎಕ್ಸ್​ ಎಂಬುದು ಅಮೂರ್ತ ಪರಿಕಲ್ಪನೆಯಂತೆ ಕಾಣಿಸಬಹುದು. ಆದರೆ, ಡಿಸೀಸ್ X ಯಾವುದೇ ಸಂಭಾವ್ಯ ಆರೋಗ್ಯ ಬಿಕ್ಕಟ್ಟುಗಳಿಗೆ ತಯಾರಿ ಮಾಡಲು ಕಾರ್ಯನಿರ್ವಹಿಸುತ್ತದೆ. ಕೊವಿಡ್-19 ಸಾಂಕ್ರಾಮಿಕ ಸಮಯದಲ್ಲಿಯೂ ಈ ಪದವನ್ನು ಬಳಸಲಾಗಿತ್ತು. ಈ ವಾರ ದಾವೋಸ್‌ನಲ್ಲಿನ ವಿಶ್ವ ಆರ್ಥಿಕ ವೇದಿಕೆಯಲ್ಲಿ ಡಿಸೀಸ್ ಎಕ್ಸ್ ಕುರಿತು ಚರ್ಚೆ ನಡೆಯಲಿದೆ. ಮುಂಬರುವ ಸಾಂಕ್ರಾಮಿಕ ರೋಗವಾದ ಹೊಸ ‘ಡಿಸೀಸ್ ಎಕ್ಸ್’ ಕೊರೊನಾವೈರಸ್ ಸಾಂಕ್ರಾಮಿಕಕ್ಕಿಂತ 20 ಪಟ್ಟು ಹೆಚ್ಚು ಸಾವುಗಳಿಗೆ ಕಾರಣವಾಗಬಹುದು ಎಂದು ವಿಶ್ವ ಆರೋಗ್ಯ ಸಂಸ್ಥೆ ಇತ್ತೀಚೆಗಷ್ಟೇ ಎಚ್ಚರಿಕೆ ನೀಡಿತ್ತು. ಈ ಬಾರಿಯ ವಿಶ್ವ ಆರ್ಥಿಕ ವೇದಿಕೆಯ ವಾರ್ಷಿಕ ಸಭೆಯನ್ನು 2024ರ ಜನವರಿ 15-19ರವರೆಗೆ ದಾವೋಸ್‌ನಲ್ಲಿ ನಿಗದಿಪಡಿಸಲಾಗಿದೆ.

COVID-19ಗೆ ಹೋಲಿಸಿದರೆ ಡಿಸೀಸ್ X ಎಷ್ಟು ಮಾರಕವಾಗಿದೆ? ಎಂಬುದು ತಜ್ಞರಿಗೂ ಇನ್ನೂ ತಿಳಿದಿಲ್ಲ. ಡಿಸೀಸ್ X ಸಾಮಾನ್ಯ ಶೀತಕ್ಕಿಂತ ಕಡಿಮೆ ತೀವ್ರತೆಯಿಂದ ಹಿಡಿದು ಕೊವಿಡ್-19ಗಿಂತ ಹೆಚ್ಚು ಮಾರಣಾಂತಿಕವೂ ಆಗಿರಬಹುದು. ಡಿಸೀಸ್ ಎಕ್ಸ್​ ಅನ್ನು ಪತ್ತೆಹಚ್ಚಲು ಮತ್ತು ಚಿಕಿತ್ಸೆ ನೀಡಲು ಕಷ್ಟವಾಗಬಹುದು ಎಂದು ಊಹಿಸಲಾಗಿದೆ.

ಇದನ್ನೂ ಓದಿ: ಕ್ಯಾನ್ಸರ್ ಅಪಾಯವನ್ನು ಕಡಿಮೆ ಮಾಡುವುದು ಹೇಗೆ?

ಇಲ್ಲಿಯವರೆಗೆ, ಡಿಸೀಸ್ ಎಕ್ಸ್​ನ ಯಾವುದೇ ಪ್ರಕರಣಗಳು ವರದಿಯಾಗಿಲ್ಲ. ಆದರೆ ಅದು ಅಸ್ತಿತ್ವದಲ್ಲಿಲ್ಲ ಎಂದು ಅರ್ಥವಲ್ಲ. ಅಜ್ಞಾತ ರೋಗಕಾರಕದಿಂದ ಉಂಟಾಗುವ ಭವಿಷ್ಯದ ಸಾಂಕ್ರಾಮಿಕದ ಸಂಭಾವ್ಯತೆಯು ಆತಂಕ ಪಡಲೇಬೇಕಾದ ಸಂಗತಿಯಾಗಿದೆ. ಈ ರೋಗದ ಸಾಧ್ಯತೆಗಳು ಬಗ್ಗೆ ಸಾಕಷ್ಟು ಅಧ್ಯಯನಗಳು ನಡೆಯುತ್ತಿವೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ

Follow Us
ಸುಷ್ಮಾ ಚಕ್ರೆ
ಸುಷ್ಮಾ ಚಕ್ರೆ

ಸುಷ್ಮಾ ಚಕ್ರೆ ಮೂಲತಃ ಮಲೆನಾಡ ಹೆಬ್ಬಾಗಿಲು ಶಿವಮೊಗ್ಗದವರು. ಬೆಂಗಳೂರಿನಲ್ಲಿ ವಾಸ. ಪತ್ರಿಕೋದ್ಯಮದಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 10 ವರ್ಷಗಳಿಂದ ಸಂಯುಕ್ತ ಕರ್ನಾಟಕ, ವಿಜಯವಾಣಿ, ನ್ಯೂಸ್18 ಕನ್ನಡ, ಟಿವಿ9 ಡಿಜಿಟಲ್ ವಿಭಾಗದಲ್ಲಿ ಕೆಲಸ ಮಾಡಿದ ಅನುಭವವಿದೆ. ಸಾಹಿತ್ಯ, ಸಂಗೀತ, ಸಿನಿಮಾ, ಬರವಣಿಗೆಯಲ್ಲಿ ಆಸಕ್ತಿ ಹೊಂದಿದ್ದಾರೆ.

Read More
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಬಹಳ ದಿನಗಳ ಬಳಿಕ ಸುತ್ತೂರು ಶಕ್ತಿಪೀಠಕ್ಕೆ ಸಿಎಂ ಸಿದ್ದರಾಮಯ್ಯ ಭೇಟಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ಮೆಕ್ಕಾದಲ್ಲಿ ಸಿಲುಕಿದ 4,000 ಕನ್ನಡಿಗರು: ನೆರವಿಗೆ ಧಾವಿಸುವಂತೆ CMಗೆ ಮನವಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ತಾಂಡವ್ ರಾಮ್, ಗಗನ್ ಚಿನ್ನಪ್ಪ ಸ್ನೇಹದ ನಡುವೆ ಬಂದ ಸೌಂದರ್ಯಾ ಶೆಟ್ಟಿ
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ನಿರುದ್ಯೋಗಿ ತರ ವರ್ತಿಸಬೇಡಿ: ಪ್ರಿಯಾಂಕ್ ಖರ್ಗೆಗೆ ಜೋಶಿ ಟಾಂಗ್
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
ಶಿಕ್ಷಕರ ಕ್ಷೇತ್ರದ ಚುನಾವಣೆ ವೇಳೆ ಗಲಾಟೆ :ಮುನಿರತ್ನ ಮೇಲೆ ಹಲ್ಲೆಗೆ ಯತ್ನ!
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
'ಆತನ ಬಳಿ ಒಟ್ಟು 12 ಸ್ಟಿಂಗ್ ವಿಡಿಯೋ ಇದೆಯಂತೆ': ಹೆಚ್​​.ಡಿ.ಕುಮಾರಸ್ವಾಮಿ
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಸಿದ್ದರಾಮಯ್ಯ ನಮ್ ಜೊತೆ ಇದ್ದವರೇ, ಭೇಟಿಯಾದ್ರೆ ತಪ್ಪೇನು?
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಗದಗದಲ್ಲಿ ಎಂಎಲ್‌ಸಿ ಎಲೆಕ್ಷನ್ ಹೈಡ್ರಾಮಾ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಡಿಕೆಶಿಯನ್ನು ತಾನು ಸಿಎಂ ಎಂದು ಒಪ್ಪಲ್ಲ ಎಂದ ಕುಮಾರಸ್ವಾಮಿ: ಕಾರಣ ಇಲ್ಲಿದೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ
ಮಾಂಜಾ ದಾರ ಬಳಸದಂತೆ ಬೆಳಗಾವಿ ಎಸ್​ಪಿ ರಾಮರಾಜನ್ ಖಡಕ್ ಎಚ್ಚರಿಕೆ