ಈ ಡಯೆಟ್​ನಿಂದ ಕೊವಿಡ್ ಅಪಾಯ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಹೊಸ ವಿಷಯ ಬಯಲು

ಮಾನವನ ದೇಹವು ವೈರಸ್‌ಗಳಿಂದ ಹೇಗೆ ಸುರಕ್ಷಿತವಾಗಿರಬಹುದು, ಯಾವ ರೀತಿಯ ಆಹಾರ ಸೇವಿಸುವುದು ಉತ್ತಮ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಯಾವ ರೀತಿಯ ಡಯೆಟ್ ಅನುಸರಿಸಿದರೆ ಕೊವಿಡ್​ನ ಅಪಾಯದಿಂದ ಪಾರಾಗಬಹುದು ಎಂಬ ಬಗ್ಗೆ ಮಾಹಿತಿ ಇಲ್ಲಿದೆ. 

ಈ ಡಯೆಟ್​ನಿಂದ ಕೊವಿಡ್ ಅಪಾಯ ಕಡಿಮೆಯಾಗುತ್ತದೆ; ಅಧ್ಯಯನದಲ್ಲಿ ಹೊಸ ವಿಷಯ ಬಯಲು
ಕೊರೊನಾ
Follow us
ಸುಷ್ಮಾ ಚಕ್ರೆ
|

Updated on: Jan 11, 2024 | 2:15 PM

ಭಾರತದಲ್ಲಿ ಮತ್ತೆ ಕೊವಿಡ್ ಆತಂಕ ಹೆಚ್ಚಾಗಿದೆ. ಹೀಗಾಗಿ, ಕೊವಿಡ್-19 ಎಲ್ಲೆಡೆ ಹರಡುವ ಅಪಾಯ ಮೂಡಿದೆ. ಈ ನಿಟ್ಟಿನಲ್ಲಿ ಮುನ್ನೆಚ್ಚರಿಕಾ ಕ್ರಮಗಳನ್ನು ತೆಗೆದುಕೊಳ್ಳಲು ಸರ್ಕಾರ ಮುಂದಾಗಿದೆ. ಅಲ್ಲದೆ, ಕೊವಿಡ್ ಅಪಾಯವಿನ್ನೂ ಕಡಿಮೆಯಾಗಿಲ್ಲ, ಎಲ್ಲರೂ ಆರೋಗ್ಯದ ಬಗ್ಗೆ ಎಚ್ಚರ ವಹಿಸಬೇಕೆಂದು ವಿಶ್ವ ಆರೋಗ್ಯ ಸಂಸ್ಥೆ (WHO) ಕೂಡ ಹೇಳಿದೆ. ಈಗಾಗಲೇ BA.2.86 ಒಮಿಕ್ರಾನ್ ರೂಪಾಂತರದ ಪ್ರಕಾರದ ಕೊವಿಡ್ JN.1 ರೂಪಾಂತರದ ಸೋಂಕಿನ ಅಲೆಯಿಂದಾಗಿ ಡಿಸೆಂಬರ್‌ನಲ್ಲಿ 10,000 ಜನರು ಸಾವನ್ನಪ್ಪಿರುವುದು ಆತಂಕ ಸೃಷ್ಟಿಸಿದೆ. ಹೊಸ ಹೊಸ ಕೊವಿಡ್ ರೂಪಾಂತರಿಗಳು ಕಾಣಿಸಿಕೊಳ್ಳುತ್ತಿರುವುದರಿಂದ ಅದಕ್ಕೆ ಲಸಿಕೆ ಕಂಡುಹಿಡಿಯಲು ಸಂಶೋಧಕರು ಪ್ರಯತ್ನಿಸುತ್ತಿದ್ದಾರೆ.

ಲಸಿಕೆಯ ಹೊರತಾಗಿಯೂ ನಮ್ಮ ಜೀವನಶೈಲಿ ಮತ್ತು ಆಹಾರ ಕ್ರಮದಿಂದಲೂ ಕೊವಿಡ್ ಸೋಂಕಿನ ಅಪಾಯದಿಂದ ಕೊಂಚ ಮಟ್ಟಿಗೆ ಪಾರಾಗಬಹುದು. ಮಾನವನ ದೇಹವು ವೈರಸ್‌ಗಳಿಂದ ಹೇಗೆ ಸುರಕ್ಷಿತವಾಗಿರಬಹುದು, ಯಾವ ರೀತಿಯ ಆಹಾರ ಸೇವಿಸುವುದು ಉತ್ತಮ ಎಂಬಿತ್ಯಾದಿ ವಿಷಯಗಳ ಬಗ್ಗೆ ಸಂಶೋಧನೆ ನಡೆಯುತ್ತಿದೆ. ಆ ಬಗ್ಗೆ ಮಾಹಿತಿ ಇಲ್ಲಿದೆ.

ಇದನ್ನೂ ಓದಿ: ಚಳಿಗಾಲದಲ್ಲಿ ಬೆಚ್ಚಗೆ, ಆರೋಗ್ಯವಾಗಿರಲು ಏನು ಮಾಡಬೇಕು?

ಬ್ರೆಜಿಲ್‌ನ ಯೂನಿವರ್ಸಿಡೇಡ್ ಡಿ ಸಾವೊ ಪಾಲೊ ಸಂಶೋಧಕರು ನಡೆಸಿದ ಅಧ್ಯಯನವು ಹೆಚ್ಚಾಗಿ ಸಸ್ಯ ಆಧಾರಿತ ಅಥವಾ ಸಸ್ಯಾಹಾರಿ ಆಹಾರವನ್ನು ಸೇವಿಸುವ ಜನರು ಕೊವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಶೇ. 39ರಷ್ಟು ಕಡಿಮೆ ಎಂದು ಕಂಡುಹಿಡಿದಿದೆ.

“ಬ್ರಿಟಿಷ್ ಮೆಡಿಕಲ್ ಜರ್ನಲ್ ನ್ಯೂಟ್ರಿಷನ್ ಪ್ರಿವೆನ್ಷನ್ ಮತ್ತು ಹೆಲ್ತ್” ನಲ್ಲಿ ಪ್ರಕಟವಾದ ಅಧ್ಯಯನವು ಸಸ್ಯಾಹಾರಿ ಆಹಾರಗಳನ್ನು ಸೇವಿಸುವವರಿಗೆ ಹೋಲಿಸಿದರೆ ಕೊವಿಡ್ ಸೋಂಕಿಗೆ ಒಳಗಾಗುವ ಸಾಧ್ಯತೆ ಹೆಚ್ಚಾಗಿದೆ ಎಂದು ತಿಳಿಸಿದೆ.

ಸಸ್ಯ ಆಧಾರಿತ ಆಹಾರವು ಕೊವಿಡ್ ಅಪಾಯವನ್ನು ಹೇಗೆ ಕಡಿಮೆ ಮಾಡುತ್ತದೆ?:

ಹೆಚ್ಚಿನ ತರಕಾರಿಗಳು, ಕಾಳುಗಳು, ನಟ್ಸ್ ಮತ್ತು ಕಡಿಮೆ ಡೈರಿ ಉತ್ಪನ್ನಗಳು ಹಾಗೂ ಮಾಂಸ ಉತ್ಪನ್ನಗಳ ಆಹಾರದ ಸೇವನೆಯು ಸೋಂಕನ್ನು ನಿವಾರಿಸಲು ಸಹಾಯ ಮಾಡುತ್ತದೆ ಎಂದು ಸಂಶೋಧನೆಗಳು ಸೂಚಿಸುತ್ತವೆ. “ಸಸ್ಯ ಆಧಾರಿತ ಆಹಾರದ ಮಾದರಿಗಳಲ್ಲಿ ಉತ್ಕರ್ಷಣ ನಿರೋಧಕಗಳು, ಫೈಟೊಸ್ಟೆರಾಲ್‌ಗಳು ಮತ್ತು ಪಾಲಿಫಿನಾಲ್‌ ಸಮೃದ್ಧವಾಗಿವೆ.

ಇದನ್ನೂ ಓದಿ: ಕರ್ನಾಟಕದಲ್ಲಿ ಇಂದು 298 ಹೊಸ ಕೊವಿಡ್​ ಕೇಸ್ ಪತ್ತೆ: ನಾಲ್ವರು ಸಾವು

ಈ ಅಧ್ಯಯನಕ್ಕಾಗಿ 700 ಕ್ಕೂ ಹೆಚ್ಚು ವಯಸ್ಕರ ಆಹಾರ ಪದ್ಧತಿಯನ್ನು ಗಮನಿಸಲಾಯಿತು. 424 ಜನರು ಸಸ್ಯಾಹಾರ ಮತ್ತು ಮಾಂಸಾಹಾರಿಗಳಾಗಿದ್ದು, 278 ಜನರು ಸಸ್ಯಾಹಾರವನ್ನು ಮಾತ್ರ ಸೇವಿಸುವವರಾಗಿದ್ದರು. ಇದರಲ್ಲಿ ಭಾಗವಹಿಸುವವರ ಜೀವನಶೈಲಿ ಮತ್ತು ವೈದ್ಯಕೀಯ ಇತಿಹಾಸ ಮತ್ತು ಕೋವಿಡ್ ವಿರುದ್ಧ ವ್ಯಾಕ್ಸಿನೇಷನ್ ಜೊತೆಗೆ ಅವರ ಸಾಮಾನ್ಯ ಆಹಾರ ಪದ್ಧತಿ ಮತ್ತು ಆಹಾರದ ಬಗ್ಗೆ ವಿವರಗಳಿಗಾಗಿ ಪ್ರಶ್ನಾವಳಿಗಳ ಮೂಲಕ ಸಮೀಕ್ಷೆ ನಡೆಸಲಾಯಿತು. ಈ ವೇಳೆ ಸಸ್ಯ ಆಧಾರಿತ ಆಹಾರಗಳನ್ನು ಸೇವಿಸುವವರಿಗಿಂತ ಸಸ್ಯಾಹಾರದ ಜೊತೆಗೆ ಮಾಂಸಾಹಾರ ಸೇವಿಸುವವರು ಕೋವಿಡ್‌ನ ಹೆಚ್ಚಿನ ಸಂಭವವನ್ನು ಹೊಂದಿದ್ದಾರೆ ಎಂದು ಅಧ್ಯಯನ ಕಂಡುಹಿಡಿದಿದೆ.

ಇನ್ನಷ್ಟು ಜೀವನಶೈಲಿಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ