ಕರ್ನಾಟಕದಲ್ಲಿ ಇಂದು 298 ಹೊಸ ಕೊವಿಡ್ ಕೇಸ್ ಪತ್ತೆ: ನಾಲ್ವರು ಸಾವು
ರಾಜ್ಯದಲ್ಲಿ ಇಂದು 298 ಹೊಸ ಕೊವಿಡ್ ಕೇಸ್ ಪತ್ತೆಯಾಗಿದ್ದು, ಇಂದು ಕೊರೊನಾಗೆ ಬೆಂಗಳೂರಿನಲ್ಲಿ ಇಬ್ಬರು ಮತ್ತು ಧಾರವಾಡ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಇಂದು ಒಂದು ದಿನೇ 172 ಕೊವಿಡ್ ಕೇಸ್ ಪತ್ತೆ ಹಚ್ಚಲಾಗಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.82ರಷ್ಟಿದೆ.

ಬೆಂಗಳೂರು, ಜನವರಿ 04: ರಾಜ್ಯದಲ್ಲಿ ಇಂದು 298 ಹೊಸ ಕೊವಿಡ್ (Covid) ಕೇಸ್ ಪತ್ತೆಯಾಗಿದ್ದು, ಇಂದು ಕೊರೊನಾಗೆ ಬೆಂಗಳೂರಿನಲ್ಲಿ ಇಬ್ಬರು ಮತ್ತು ಧಾರವಾಡ, ಮೈಸೂರು ಜಿಲ್ಲೆಯಲ್ಲಿ ತಲಾ ಒಬ್ಬರು ಒಟ್ಟು ನಾಲ್ವರು ಸಾವನ್ನಪ್ಪಿದ್ದಾರೆ. ನಗರದಲ್ಲಿ ಇಂದು ಒಂದು ದಿನೇ 172 ಕೊವಿಡ್ ಕೇಸ್ ಪತ್ತೆ ಹಚ್ಚಲಾಗಿದೆ. ರಾಜ್ಯದಲ್ಲಿ ಕೊರೊನಾ ಪಾಸಿಟಿವಿಟಿ ರೇಟ್ ಶೇಕಡಾ 3.82ರಷ್ಟಿದೆ. 229 ಸೋಂಕಿತರು ಗುಣಮುಖರಾಗಿ ಆಸ್ಪತ್ರೆಯಿಂದ ಡಿಸ್ಚಾರ್ಜ್ ಮಾಡಲಾಗಿದೆ ಎಂದು ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ಮಾಹಿತಿ ನೀಡಿದೆ.
ರಾಜ್ಯದಲ್ಲಿ 24 ಗಂಟೆಯಲ್ಲಿ 7,791 ಜನರಿಗೆ ಕೊವಿಡ್ ಟೆಸ್ಟ್ ಮಾಡಲಾಗಿದ್ದು, 1240 ಜನರಲ್ಲಿ ಕೊರೊನಾ ಸೋಂಕು ಸಕ್ರಿಯವಾಗಿವೆ.
ಯಾವ ಜಿಲ್ಲೆಯಲ್ಲಿ ಎಷ್ಟೇಲ್ಲ ಕೊವಿಡ್ ಕೇಸ್ ಪತ್ತೆ
ಬಾಗಲಕೋಟೆ 4, ಬಳ್ಳಾರಿ 6, ಬೆಳಗಾವಿ 2, ಬೆಂಗಳೂರು ಗ್ರಾಮಾಂತರ 1, ಚಾಮರಾಜನಗರ 8, ಚಿಕ್ಕಬಳ್ಳಾಪುರ 3, ಚಿಕ್ಕಮಗಳೂರು 5, ಚಿತ್ರದುರ್ಗ 1, ದಕ್ಷಿಣ ಕನ್ನಡ 11, ದಾವಣಗೆರೆ 1, ಧಾರವಾಡ 3, ಗದಗ 1, ಹಾಸನ 19, ಕಲಬುರಗಿ 3, ಕೊಡಗು 2, ಕೋಲಾರ 1, ಕೊಪ್ಪಳ 6, ಮಂಡ್ಯ 11, ಮೈಸೂರು 18, ರಾಯಚೂರು 1, ರಾಮನಗರ 2, ಶಿವಮೊಗ್ಗ 3, ತುಮಕೂರು 5, ಉತ್ತರ ಕನ್ನಡ 4 ಮತ್ತು ವಿಜಯನಗರ 5 ಕೊವಿಡ್ ಕೇಸ್ ಪತ್ತೆ ಆಗಿವೆ.
ಇದನ್ನೂ ಓದಿ: ರಾಜ್ಯದಲ್ಲಿ ನಿನ್ನೆ 148 ಜನರಿಗೆ ಕೊರೊನಾ ಸೋಂಕು ದೃಢ; ಯಾವ್ಯಾವ ಜಿಲ್ಲೆಯಲ್ಲಿ ಎಷ್ಟು?
ಕೊರೊನಾ ಜಮಾನ ಮುಗಿದು ಹೋಯಿತು ಅನ್ನುವಾಗಲೇ ಜೆಎನ್.1 ಮೂಲಕ ರಾಜ್ಯವನ್ನೇ ವ್ಯಾಪಿಸುತ್ತಿದೆ. ಸರ್ಕಾರ ಚಿಕಿತ್ಸೆ ನೀಡಲು ತಯಾರಿ ಮಾಡಿದೆ ನಿಜ. ಆದರೆ ಜನ ಕೂಡ ಸೋಂಕು ಬರದಂತೆ ಎಚ್ಚರಿಕೆ ವಹಿಸಬೇಕಿದೆ.
ಯಾರಿಗೆ ಕೊವಿಡ್ ಲಸಿಕೆ?
ಫ್ರಂಟ್‌ಲೈನ್ ವಾರಿಯರ್ಸ್, ಹೆಲ್ತ್ ವರ್ಕರ್ಸ್, 60 ವರ್ಷ ಮೇಲ್ಪಟ್ಟ ಹಿರಿಯ ನಾಗರಿಕರು ಸೇರಿದಂತೆ ಅಹರ್ತೆ ಪಡೆದಿರುವವರಿಗೆ ಪ್ರಿಕಾಶನರಿ ಲಸಿಕೆ ನೀಡಲು ಸರ್ಕಾರ ಮಂದಾಗಿದೆ. ಈಗಾಗಲೇ ಮೊದಲ ಮತ್ತು ಎರಡನೇ ಡೋಸ್ 100 ಪರ್ಸೆಂಟ್ ವ್ಯಾಕ್ಸಿನೇಶನ್ ಮಾಡಲಾಗಿದೆ.. ಆದ್ರೆ ಪ್ರಿಕಾಶನರಿ ಮುನ್ನೇಚ್ಚರಿಕೆ ವ್ಯಾಕ್ಸಿನ್‌ನನ್ನ ಶೇಕಡಾ 27 ರಷ್ಟು ಜನರು ಮಾತ್ರ ಪಡೆದಿದ್ದಾರೆ . ರಾಜ್ಯದಲ್ಲಿ ಇನ್ನು 1.5 ಕೋಟಿಗೂ ಅಧಿಕ ಜನರು ಮುನ್ನೇಚ್ಚರಿಕಾ ವ್ಯಾಕ್ಸಿನ್ ಪಡೆಯಲು ಅಹರ್ತೆ ಪಡೆದಿದ್ದಾರೆ. ಎರಡು ದಿನದಲ್ಲಿ ರಾಜ್ಯದ ಎಲ್ಲಾ ಜಿಲ್ಲಾ ಆಸ್ಪತ್ರೆ, ತಾಲೂಕು ಆಸ್ಪತ್ರೆಗಳಲ್ಲಿ ವ್ಯಾಕ್ಸಿನ್ ನೀಡಲು ಪ್ಲಾನ್ ಮಾಡಿದೆ.
ರಾಜ್ಯದ ಮತ್ತಷ್ಟು ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.