ಈ ತರಕಾರಿಗಳನ್ನು ಸೋರೆಕಾಯಿಯೊಂದಿಗೆ ಸೇವನೆ ಮಾಡಬೇಡಿ

ಸೋರೆಕಾಯಿ ನಮ್ಮ ಆರೋಗ್ಯಕ್ಕೆ ತುಂಬಾ ಪ್ರಯೋಜನಕಾರಿಯಾದ ತರಕಾರಿಗಳಲ್ಲಿ ಒಂದಾಗಿದೆ. ಇದು ದೇಹಕ್ಕೆ ಅಗತ್ಯವಿರುವ ಖನಿಜಗಳು ಮತ್ತು ಜೀವಸತ್ವಗಳನ್ನು ಒದಗಿಸುತ್ತವೆ. ಸಾಮಾನ್ಯವಾಗಿ ಸೋರೆಕಾಯಿಯಲ್ಲಿ ನಾರುಗಳು ಹೆಚ್ಚಾಗಿರುತ್ತವೆ. ಇವು ಕರುಳಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಆದರೆ ಸೋರೆಕಾಯಿಯ ಜೊತೆಗೆ ಕೆಲವು ಆಹಾರಗಳನ್ನು ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಜೊತೆಗೆ ಕೆಲವು ತರಕಾರಿಗಳ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಆ ತರಕಾರಿಗಳು ಯಾವವು ತಿಳಿದುಕೊಳ್ಳಿ.

ಈ ತರಕಾರಿಗಳನ್ನು ಸೋರೆಕಾಯಿಯೊಂದಿಗೆ ಸೇವನೆ ಮಾಡಬೇಡಿ
ಸಾಂದರ್ಭಿಕ ಚಿತ್ರ
Edited By:

Updated on: Feb 27, 2025 | 12:23 PM

ನಮ್ಮ ದೇಹಕ್ಕೆ ತರಕಾರಿಗಳ ಸೇವನೆ ಮಾಡುವುದು ಬಹಳ ಮುಖ್ಯವಾಗುತ್ತದೆ. ಇದು ನಮ್ಮ ಆಹಾರ ಪದ್ಧತಿಯ ಒಂದು ಭಾಗವಾಗಿರಬೇಕು. ಅಂದಾಗ ಮಾತ್ರ ನಮ್ಮ ಆರೋಗ್ಯ ಚೆನ್ನಾಗಿರುತ್ತದೆ. ವಿವಿಧ ರೀತಿಯ ತರಕಾರಿಗಳು ದೇಹಕ್ಕೆ ಅಗತ್ಯವಿರುವ ಖನಿಜಗಳು ಮತ್ತು ಜೀವಸತ್ವಗಳನ್ನು ಒದಗಿಸುತ್ತವೆ. ಸೋರೆಕಾಯಿ ಅಂತಹ ತರಕಾರಿಗಳಲ್ಲಿ ಒಂದಾಗಿದೆ. ಇದರಿಂದ ಅನೇಕ ರೀತಿಯ ಆರೋಗ್ಯ ಪ್ರಯೋಜನಗಳನ್ನು ಪಡೆದುಕೊಳ್ಳಬಹುದು. ಸಾಮಾನ್ಯವಾಗಿ ಸೋರೆಕಾಯಿಯಲ್ಲಿ ನಾರುಗಳು ಹೆಚ್ಚಾಗಿರುತ್ತವೆ. ಇವು ಕರುಳಿನ ಆರೋಗ್ಯವನ್ನು ಕಾಪಾಡುವುದರ ಜೊತೆಗೆ ಮಲಬದ್ಧತೆಯಂತಹ ಸಮಸ್ಯೆಗಳನ್ನು ತಡೆಗಟ್ಟಲು ಸಹಾಯ ಮಾಡುತ್ತದೆ. ಇದಲ್ಲದೆ, ಸೋರೆಕಾಯಿ ನೀರಿನಿಂದ ಸಮೃದ್ಧವಾಗಿರುವುದರಿಂದ ದೇಹಕ್ಕೆ ತಕ್ಷಣದ ಶಕ್ತಿಯನ್ನು ನೀಡುತ್ತದೆ. ಇದಲ್ಲದೆ, ಅಧಿಕ ರಕ್ತದೊತ್ತಡ ಹೊಂದಿರುವ ಜನರಿಗೆ ಇದು ತುಂಬಾ ಉಪಯುಕ್ತವಾಗಿದೆ. ಆದರೆ ಸೋರೆಕಾಯಿಯ (Bottle Gourd) ಜೊತೆಗೆ ಕೆಲವು ಆಹಾರಗಳನ್ನು ತಿನ್ನುವುದು ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಇದರ ಜೊತೆಗೆ ಕೆಲವು ತರಕಾರಿಗಳ ಸೇವನೆ ಒಳ್ಳೆಯದಲ್ಲ ಎಂದು ತಜ್ಞರು ಹೇಳುತ್ತಾರೆ. ಹಾಗಾದರೆ ಆ ತರಕಾರಿಗಳು ಯಾವವು ತಿಳಿದುಕೊಳ್ಳಿ.

  • ಸೋರೆಕಾಯಿಯೊಂದಿಗೆ ಹೂಕೋಸು ತಿನ್ನುವುದು ಸೂಕ್ತವಲ್ಲ. ಈ ಎರಡು ತರಕಾರಿಗಳನ್ನು ಒಟ್ಟಿಗೆ ಸೇವನೆ ಮಾಡುವುದರಿಂದ ಇದು ಜೀರ್ಣಕ್ರಿಯೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತದೆ. ಪರಿಣಾಮವಾಗಿ, ಉಬ್ಬರ ಮತ್ತು ಅಜೀರ್ಣದಂತಹ ಸಮಸ್ಯೆಗಳು ಉಂಟಾಗಬಹುದು. ಆದ್ದರಿಂದ ಇವುಗಳನ್ನು ಒಟ್ಟಿಗೆ ತಿನ್ನುವುದನ್ನು ತಪ್ಪಿಸುವುದು ಉತ್ತಮ.
  • ಹಾಗಲಕಾಯಿಯೊಂದಿಗೆ ಸೋರೆಕಾಯಿಯನ್ನು ತಿನ್ನುವುದು ಅನೇಕ ರೀತಿಯ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಈ ಎರಡು ತರಕಾರಿಗಳನ್ನು ಒಟ್ಟಿಗೆ ತಿನ್ನುವುದು ದೇಹಕ್ಕೆ ವಿಷವಾಗಿ ಪರಿಣಮಿಸುತ್ತದೆ ಎಂದು ತಜ್ಞರು ಹೇಳುತ್ತಾರೆ. ಪರಿಣಾಮವಾಗಿ, ಜೀರ್ಣಕಾರಿ ಸಮಸ್ಯೆಗಳು ಮತ್ತು ಹೊಟ್ಟೆ ನೋವು ಹೆಚ್ಚಾಗುವ ಸಾಧ್ಯತೆ ಇರುತ್ತದೆ ಹಾಗಾಗಿ ಇವುಗಳನ್ನು ಒಟ್ಟಿಗೆ ಸೇವನೆ ಮಾಡಬೇಡಿ.
  • ಆಯುರ್ವೇದದ ಪ್ರಕಾರ, ಹಾಲಿನೊಂದಿಗೆ ಸೋರೆಕಾಯಿ ತಿನ್ನುವುದು ಆರೋಗ್ಯಕ್ಕೆ ಒಳ್ಳೆಯದಲ್ಲ. ನೀವು ಹಾಲು ಮತ್ತು ಸೋರೆಕಾಯಿಯನ್ನು ಒಟ್ಟಿಗೆ ಸೇವಿಸಿದರೆ, ದೇಹದಲ್ಲಿ ವಿವಿಧ ರಾಸಾಯನಿಕ ಪ್ರತಿಕ್ರಿಯೆಗಳು ನಡೆಯುತ್ತವೆ. ಇದು ಆರೋಗ್ಯ ಸಮಸ್ಯೆಗಳನ್ನು ಉಂಟುಮಾಡುತ್ತವೆ ಎಂದು ಹೇಳಲಾಗುತ್ತದೆ. ವಿಶೇಷವಾಗಿ ಜೀರ್ಣಕಾರಿ ಸಮಸ್ಯೆಗಳು ಉಂಟಾಗಬಹುದು ಹಾಗಾಗಿ ಇವೆರಡನ್ನೂ ಬೆರೆಸಿ ಯಾವುದೇ ರೀತಿಯ ಅಡುಗೆ ಮಾಡಬೇಡಿ.
  • ಬೀಟ್ರೂಟ್ ಜೊತೆಗೆ ಸೋರೆಕಾಯಿಯನ್ನು ತಿನ್ನುವುದರಿಂದ ಚರ್ಮದ ಆರೋಗ್ಯ ಹದಗೆಡುತ್ತದೆ. ಸೋರಿಯಾಸಿಸ್ ನಂತಹ ಚರ್ಮದ ಕಾಯಿಲೆಗಳು ವಿಶೇಷವಾಗಿ ಮುಖ ಮತ್ತು ದೇಹದ ಮೇಲೆ ಕಂಡು ಬರಬಹುದು. ಹಾಗಾಗಿ ಚರ್ಮದ ಆರೋಗ್ಯ ಕಾಪಾಡಿಕೊಳ್ಳಲು ಈ ಎರಡು ತರಕಾರಿಗಳನ್ನು ಒಟ್ಟಿಗೆ ಸೇವನೆ ಮಾಡಬೇಡಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ