Health Tips: ಕಿವಿಯನ್ನು ಸ್ವಚ್ಛಗೊಳಿಸಲು ಬಳಸುವ ಇಯರ್​ಬಡ್ಸ್​​ ಕಿವುಡುತನಕ್ಕೆ ಕಾರಣವಾಗಬಹುದು: ಎಚ್ಚರಿಕೆಯಿಂದಿರಿ

| Updated By: Pavitra Bhat Jigalemane

Updated on: Feb 19, 2022 | 12:54 PM

ಇಯರ್​ಬಡ್ಸ್​ಗಳನ್ನು ಬಳಸುವುದರಿಂದ ಕಿವಿಯ ಸೂಕ್ಷ್ಮ ಭಾಗಗಳಿಗೆ ಹಾನಿಯುಂಟಾಗಿ ಕಿವುಡುತನ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ. 

Health Tips: ಕಿವಿಯನ್ನು ಸ್ವಚ್ಛಗೊಳಿಸಲು ಬಳಸುವ ಇಯರ್​ಬಡ್ಸ್​​ ಕಿವುಡುತನಕ್ಕೆ ಕಾರಣವಾಗಬಹುದು: ಎಚ್ಚರಿಕೆಯಿಂದಿರಿ
ಪ್ರಾತಿನಿಧಿಕ ಚಿತ್ರ
Follow us on

ನಮ್ಮ ದೇಹದ ಪ್ರತಿಯೊಂದು ಅಂಗಗಳೂ ಒಂದೊಂದು ಅಧ್ಭುತ ಶಕ್ತಿಗಳನ್ನು ಹೊಂದಿದೆ. ಒಂದು ಅಂಗ ಊನವಾದರೂ ಅಂಗವಿಕಲ ಎಂದೇ ಗುರುತಿಸಲಾಗುತ್ತದೆ. ಕೆಲವು ಅಂಗಗಳು ಸ್ವಯಂ ಶುಚಿತ್ವವನ್ನು ಕಾಪಾಡಿಕೊಳ್ಳುತ್ತದೆ. ಅವುಗಳಲ್ಲಿ ಮುಖ್ಯವಾದ ಅಂಗ ಕಿವಿ (Ear). ಹೌದು, ಕಿವಿ ಮಾನವ ದೇಹದ ಪ್ರಮುಖ ಮತ್ತು ಸೂಕ್ಷ್ಮ ಅಂಗ, ಇದರಲ್ಲಿನ ಭಾಗಗಳು ಕಿವಿಯನ್ನು ಸ್ವಯಂ ಸ್ವಚ್ಛಗೊಳಿಸಿಕೊಳ್ಳುತ್ತವೆ. ಆದರೆ ಇತ್ತೀಚಿನ ದಿನಗಳಲ್ಲಿ ನಾವು ಕಿವಿಯ ಸ್ವಚ್ಛತೆಯನ್ನು ಕಾಪಾಡಿಕೊಳ್ಳಬೇಕೆಂದು ಮಾರುಕಟ್ಟೆಯಲ್ಲಿ ಸಿಗುವ ಹತ್ತಿಯ ಉಂಡೆಗಳನ್ನು ಅಂದರೆ ಇಯರ  ಬಡ್ಸ್(Ear Buds)  ​​ಗಳನ್ನು ತಂದು ಕಿವಿಗೆ ಹಾಕಿ ಸ್ವಚ್ಛಗೊಳಿಸಿಕೊಳ್ಳುತ್ತೇವೆ. ಆದರೆ  ಹೀಗೆ ಇಯರ್​ ಬಡ್ಸ್​ಗಳನ್ನು ಬಳಸಿ ಕಿವಿಯನ್ನು ಸ್ವಚ್ಛಗೊಳಿಸಿಕೊಳ್ಳುವುದರಿಂದ ಕಿವಿಗೆ ಹಾನಿಯಾಗುವ ಸಾಧ್ಯತೆ  ಹೆಚ್ಚು ಎನ್ನುತ್ತಾರೆ ತಜ್ಞರು.

ಇಯರ್​ಬಡ್ಸ್​ಗಳನ್ನು ಬಳಸುವುದರಿಂದ ಕಿವಿಯ ಸೂಕ್ಷ್ಮ ಭಾಗಗಳಿಗೆ ಹಾನಿಯುಂಟಾಗಿ ಕಿವುಡುತನ ಉಂಟಾಗುವ ಸಾಧ್ಯತೆ ಇದೆ ಎಂದು ವೈದ್ಯರು ಎಚ್ಚರಿಸಿದ್ದಾರೆ.  ಈ ಕುರಿತು ಹಾರ್ವರ್ಡ್​ ವಿಶ್ವವಿದ್ಯಾನಿಲಯದ  ಹಿರಿಯ ವೈದ್ಯರಾದ ರಾಬರ್ಟ್​ ಎಚ್​ ಶ್ಮರ್ಲಿಂಗ್ ಅವರು ಇಯರ್​ ಬಡ್ಸ್​ಗಳನ್ನು ಕಿವಿಗೆ ಹಾಕಿಕೊಳ್ಳುವುದರಿಂಗೆ ಕಿವಿಗೆ ಆಗುವ ಹಾನಿಯ ಬಗ್ಗೆ ತಿಳಿಸಿದ್ದಾರೆ. ಈ ಕುರಿತು ಟೈಮ್ಸ್​ ನೌ ಸುದ್ದಿ ಸಂಸ್ಥೆ ವರದಿ ಮಾಡಿದೆ. ಹಾಗಾದರೆ ಇಯರ್​ ಬಡ್ಸ್​ಗಳನ್ನು ಬಳಸುವುದರಿಂದ ಯಾವೆಲ್ಲಾ ಅಪಾಯಕ್ಕೆ ಕಾರಣವಾಗುತ್ತದೆ ಎನ್ನುವ ಮಾಹಿತಿ ಇಲ್ಲಿದೆ ನೋಡಿ,

ಇಯರ್​ ಬಡ್ಸ್​ಗಳ ಬಳಕೆ ಅನಗತ್ಯ:
ಕಿವಿಯಲ್ಲಿ ಒಳಗಿನ ಭಾಗಗಳ ಡಿಎನ್​ಎಯಲ್ಲಿ ಸ್ವಯಂ ಸ್ವಚ್ಛಗೊಳಿಸುವ ಆಟೋ ಕ್ಲೀನ್​ ಪ್ರೋಗ್ರಾಮ್​ ಇದೆ. ಹೀಗಾಗಿ ನೀವು ಪ್ರತ್ಯೇಕ ವಾಗಿ ಸ್ವಚ್ಛಗೊಳಿಸುವ ಅಗತ್ಯವಿಲ್ಲ ಎನ್ನುತ್ತಾರೆ ವೈದ್ಯರು. ನೀವು ಸ್ನಾನ ಮಾಡಿದಾಗ ಅಥವಾ ಕಿವಿಯನ್ನು ಉಜ್ಜಿದಾಗ ಅದಾಗಿಯೇ ಸ್ವಚ್ಛಗೊಳ್ಳುತ್ತದೆ. ಒಂದು ವೇಳೆ ಕಿವಿಯ ಒಳಗೆ ನೋವು ತುಂಬಿದ ಗಟ್ಟಿ ಅಂಶ ಶೇಖರಣೆಯಾಗಿದ್ದರೆ ವೈದ್ಯರನ್ನು ಸಂಪರ್ಕಿಸಿ ಎನ್ನುತ್ತಾರೆ.

ಇಯರ್​ಬಡ್ಸ್​ಗಳು ಅಪಾಯಕಾರಿ:
ಹತ್ತಿ ತುಂಬಿದ ಇಯರ್​ ಬಡ್ಸ್​​ಗಳನ್ನು ಕಿವಿಯ ಒಳಗೆ ಹಾಕುವುದರಿಂದ ಕಿವಿಯ ಸೂಕ್ಷ್ಮ ಅಂಗಗಳಿಗೆ ಹಾನಿಯುಂಟಾಗುತ್ತದೆ. ಜತೆಗೆ ಹತ್ತಿಯ ಕಿರು ಅಂಶಗಳು ಕಿವಿಯ ಒಳಗಿನ ಭಾಗಗಳಿಗೆ ಸಿಲುಕಿ ಅಪಾಯ ಉಂಟುಮಾಡುತ್ತದೆ. ಇದರಿಂದ ಕಿವುಡತನದ ಸಮಸ್ಯೆ ಉಂಟಾಗುತ್ತದೆ. ಇನ್ನೂ ಕೆಲವರು ಪಿನ್​ ಅಥವಾ ಲೋಹದ ವಸ್ತುಗಳನ್ನು ಕಿವಿಯ ಒಳಗೆ ಹಾಕುತ್ತಾರೆ. ಇದು ಇನ್ನೂ ಅಪಾಯಕಾರಿಯಾಗಿದೆ.

ಇಯರ್​ವಾಕ್ಸ್​ ನೈಸರ್ಕವಾಗಿದೆ, ಅಶುಚಿಯ ಲಕ್ಷಣವಲ್ಲ:
ಕಿವಿಯಲ್ಲಿ ಉತ್ಪತ್ತಿಯಾಗುವ ಗಟ್ಟಿ ಪದಾರ್ಥವು ಕಿವಿಯ ಸುರಕ್ಷತೆಯನ್ನು ಕಾಪಾಡುತ್ತದೆ. ಕಿವಿಯ ಒಳಗಿನ ಚರ್ಮವು ಒಣಗದಂತೆ ಮಾಶ್ಚರೈಸ್​ ಆಗಿ ಇರುವಂತೆ ನೋಡಿಕೊಳ್ಳುತ್ತದೆ. ಜತೆಗೆ ಹೊರಗಿನಿಂದ ಬರುವ ಧೂಳನ್ನು ತಡೆದು ಹೀರಿಕೊಳ್ಳುತ್ತದೆ. ಅಲ್ಲದೆ ತಂಪನೆಯ ಗಾಳಿ ಕಿವಿಯನ್ನು ಪ್ರವೇಶಿಸುವುದನ್ನು ತಡೆದು ದೇಹ ಬೆಚ್ಚಗಿರುವಂತೆ ಮಾಡುತ್ತದೆ. ಹೀಗಾಗಿ ಇಯರ್​ಬಡ್ಸ್​​ಗಳನ್ನು ಬಳಸಿ ಕಿವಿಯನ್ನು ಸ್ವಚ್ಛಗೊಳಿಸುವ ಅಗತ್ಯವಿಲ್ಲ ಎನ್ನುತ್ತಾರೆ ತಜ್ಞರು. ಇದನ್ನು ಗುಗ್ಗೆ ಅಥವಾ ವೈಜ್ಞಾನಿಕವಾಗಿ ಸೆರುಮೆನ್ ಎಂದು ಕರೆಯುತ್ತಾರೆ.

ಸೆರುಮೆನ್ ಸ್ಚಚ್ಛತೆ ಹೇಗೆ?
ಸೆರುಮೆನ್ಅಥವಾ ಗುಗ್ಗೆ ಕಿವಿಯಲ್ಲಿ ಉಂಟಾಗುವ ಸ್ವಾಭಾವಿಕ ಗಟ್ಟಿ ಪದಾರ್ಥ. ಇದು ಕಿವಿಯ ರಕ್ಷಣೆಯನ್ನು ಮಾಡುತ್ತದೆ. ಜತೆಗೆ ಅದಾಗಿಯೇ ಸ್ವಚ್ಛಗೊಳುತ್ತದೆ. ಸ್ನಾನ ಮಾಡುವ ವೇಳೆ ಕಿವಿಯನ್ನು ಸ್ವಚ್ಛಗೊಳಿಸುತ್ತೆವೆ ಆಗಲಾದರೂ ಶುಚಿಯಾಗುತ್ತದೆ. ಇಲ್ಲವಾದರೆ ಸ್ವಲ್ಪ ಕೊಬ್ಬರಿ ಎಣ್ಣೆಯನ್ನು ಕಿಉವಿಗೆ ಹಾಕಿಕೊಂಡರೆ ಸ್ವಚ್ಛಗೊಳುತ್ತದೆ. ಒಂದ ವೇಳೆ ನೋವು, ಉರಿ ಅಥವಾ ಇನ್ನಿತರ ಸಮಸ್ಯೆಗಳು ಕಾಡುತ್ತಿದ್ದರೆ ತಕ್ಷಣ ವೈದ್ಯರನ್ನು ಸಂಪರ್ಕಿಸುವುದು ಒಳಿತಾಗಿದೆ.

(ಇಲ್ಲಿರುವ ಮಾಹಿತಿ ಟಿವಿ9 ಡಿಜಿಟಲ್​ನ ಅಭಿಪ್ರಾಯವಾಗಿರುವುದಿಲ್ಲ. ಟೈಮ್ಸ್​ ನೌ ವರದಿಯನ್ನು ಆದರಿಸಿ ಸಲಹೆ ನೀಡಲಾಗಿದೆ)

ಇದನ್ನೂ ಓದಿ:

Women Health: ಮುಟ್ಟಿನ ಸಮಯದಲ್ಲಿ ಮೊಸರು ತಿನ್ನುವುದು ಸುರಕ್ಷಿತವೇ? ಇಲ್ಲಿದೆ ಸಂಪೂರ್ಣ ಮಾಹಿತಿ

Published On - 10:21 am, Sat, 19 February 22