ಪ್ರೈವೇಟ್ ಪಾರ್ಟ್ ನಲ್ಲಿ ತುರಿಕೆ ಬರುವುದನ್ನು ತಡೆಯಲು ಈ ರೀತಿ ಮಾಡಿ

ಬೇಸಿಗೆ ಆರಂಭವಾಗುತ್ತಿದ್ದಂತೆ ಖಾಸಗಿ ಭಾಗಗಳಲ್ಲಿ ತುರಿಕೆಯೂ ಹೆಚ್ಚಾಗುತ್ತದೆ. ಇದು ಅತಿಯಾದಾಗ ಕಿರಿಕಿರಿ ಉಂಟು ಮಾಡುವುದಲ್ಲದೆ, ಮುಜುಗರ ತಂದಿಡುತ್ತದೆ. ಕೆಲವೊಮ್ಮೆ ತುರಿಸದೆಯೂ ಇರಲಾಗದ, ತುರಿಸಲು ಆಗದಂತಹ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಈ ಖಾಸಗಿ ಭಾಗಗಳಲ್ಲಿ ಗಾಳಿ, ಬೆಳಕು ತುಂಬಾ ಕಡಿಮೆ ಬೀಳುವ ಕಾರಣದಿಂದಾಗಿ ಕೀಟಾಣುಗಳು ಬೇಗನೆ ಬೆಳೆಯುತ್ತದೆ. ಇದಕ್ಕೆ ಚಿಕಿತ್ಸೆ ನೀಡುವುದು ತುಂಬಾ ಕಠಿಣವಾಗಿರಬಹುದು. ಆದರೆ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಪ್ರೈವೇಟ್ ಪಾರ್ಟ್ ನಲ್ಲಿ ತುರಿಕೆ ಬರುವುದನ್ನು ತಡೆಯಲು ಈ ರೀತಿ ಮಾಡಿ
ಸಾಂದರ್ಭಿಕ ಚಿತ್ರ
Edited By:

Updated on: Mar 05, 2025 | 9:53 AM

ಬೇಸಿಗೆ ಕಾಲ ಆರಂಭವಾಗುತ್ತಿದ್ದಂತೆ ಶಾಖ ಜಾಸ್ತಿಯಾಗಿ ಬೆವರು ಬರುವುದು ಸಾಮಾನ್ಯ. ಆದರೆ ಇದರಿಂದ ಖಾಸಗಿ ಭಾಗಗಳಲ್ಲಿ ತುರಿಕೆಯೂ ಹೆಚ್ಚಾಗುತ್ತದೆ. ಇದು ಅತಿಯಾದಾಗ ಕಿರಿಕಿರಿ ಉಂಟು ಮಾಡುವುದಲ್ಲದೆ, ಮುಜುಗರ ತಂದಿಡುತ್ತದೆ. ಕೆಲವೊಮ್ಮೆ ತುರಿಸದೆಯೂ ಇರಲಾಗದ, ತುರಿಸಲು ಆಗದಂತಹ ಪರಿಸ್ಥಿತಿಯು ನಿರ್ಮಾಣವಾಗುತ್ತದೆ. ಸಾಮಾನ್ಯವಾಗಿ ಈ ಖಾಸಗಿ ಭಾಗಗಳಲ್ಲಿ ಗಾಳಿ, ಬೆಳಕು ತುಂಬಾ ಕಡಿಮೆ ಬೀಳುವ ಕಾರಣದಿಂದಾಗಿ ಕೀಟಾಣುಗಳು ಬೇಗನೆ ಬೆಳೆಯುತ್ತದೆ. ಈ ಕಾರಣದಿಂದಾಗಿ ಗುಪ್ತಾಂಗದಲ್ಲಿ ಕಾಣಿಸಿಕೊಂಡ ತುರಿಕೆ ತೊಡೆಯ ಒಳಭಾಗ ಮತ್ತು ತೊಡೆ ಸಂಧುಗಳಿಗೆ ಹರಡುತ್ತದೆ. ಇದಕ್ಕೆ ಚಿಕಿತ್ಸೆ ನೀಡುವುದು ತುಂಬಾ ಕಠಿಣವಾಗಿರಬಹುದು. ಆದರೆ ಕೆಲವೊಂದು ಸಲಹೆಗಳನ್ನು ಪಾಲಿಸುವ ಮೂಲಕ ಇದಕ್ಕೆ ಪರಿಹಾರ ಕಂಡುಕೊಳ್ಳಬಹುದು.

ಸಾಮಾನ್ಯವಾಗಿ ಖಾಸಗಿ ಭಾಗಗಳಲ್ಲಿ ತುರಿಕೆ ಕಂಡು ಬರಲು ಹಲವು ಕಾರಣಗಳಿರಬಹುದು. ಬೆವರು, ಬಿಗಿಯಾದ ಬಟ್ಟೆ, ಕಳಪೆ ನೈರ್ಮಲ್ಯ ಅಥವಾ ಕೆಲವು ಆಹಾರಗಳಂತಹ ವಿವಿಧ ಅಂಶಗಳಿಂದ ಉಂಟಾಗಬಹುದು. ನೀವು ಅದನ್ನು ಹೇಗೆ ನಿರ್ವಹಿಸಬಹುದು ಮತ್ತು ತುರಿಕೆ ಮುಕ್ತವಾಗಿರಲು ಹೇಗೆ ಸಾಧ್ಯ ಎಂಬುದರ ಬಗ್ಗೆ ಶ್ರವಣ್ ಅವರು ತಮ್ಮ ಇನ್ಸ್ಟಾ ಖಾತೆಯಲ್ಲಿ (tuluhealthandfitness) ಈ ವಿಚಾರವಾಗಿ ಕೆಲವು ಮಾಹಿತಿಗಳನ್ನು ಹಂಚಿಕೊಂಡಿದ್ದು ಸಂಪೂರ್ಣ ವಿವರ ಇಲ್ಲಿದೆ.

ತುರಿಕೆ ಕಡಿಮೆ ಮಾಡಲು ಸಹಾಯ ಮಾಡುವ ಕೆಲವು ಪರಿಹಾರಗಳು ಇಲ್ಲಿವೆ:

  • ಬಿಗಿಯಾದ ಒಳ ಉಡುಪುಗಳನ್ನು ತಪ್ಪಿಸಿ; ಬೇಸಿಗೆ ಕಾಲದಲ್ಲಿ ಶಾಖ ಹೆಚ್ಚಾಗಿರುವುದರಿಂದ ಬೆವರು ಕಂಡು ಬರುವುದು ಸಾಮಾನ್ಯ. ಹಾಗಾಗಿ ಇಂತಹ ಸಮಯದಲ್ಲಿ ತೆಳ್ಳಗಿನ ಮತ್ತು ಗಾಳಿಯಾಡುವ ಬಟ್ಟೆಗಳನ್ನು ಹಾಕಿಕೊಳ್ಳಿ. ಬಿಗಿಯಾಗಿರುವ ಮತ್ತು ದೇಹಕ್ಕೆ ಅಂಟಿಕೊಳ್ಳುವ ಬಟ್ಟೆಗಳಿಂದ ಸ್ವಲ್ಪ ದೂರವಿರಿ.
  • ನಿಮ್ಮ ಸೊಂಟದ ಸುತ್ತಲಿನ ಜಾಗವನ್ನು ಸ್ವಚ್ಛವಾಗಿರಿಸಿಕೊಳ್ಳಿ; ಪ್ರತಿನಿತ್ಯ ಸ್ನಾನ ಮಾಡುವಾಗ ಖಾಸಗಿ ಭಾಗಗಳನ್ನು ಸರಿಯಾಗಿ ತೊಳೆದುಕೊಂಡು ನೈರ್ಮಲ್ಯ ಕಾಪಾಡಿಕೊಳ್ಳಿ.
  • ಜಂಕ್ ಫುಡ್ ಮತ್ತು ಆಲ್ಕೋಹಾಲ್ ಸೇವನೆಯನ್ನು ಕಡಿಮೆ ಮಾಡಿ; ಪ್ರತಿನಿತ್ಯ ಆಹಾರದಲ್ಲಿ ಜಂಕ್ ಫುಡ್ ಮತ್ತು ಆಲ್ಕೋಹಾಲ್ ಸೇವನೆ ಮಾಡುವುದನ್ನು ತಪ್ಪಿಸಿ. ಇಲ್ಲವಾದಲ್ಲಿ ಅವು ಬೆವರಿನ ಉತ್ಪಾದನೆ ಮತ್ತು ಕಿರಿಕಿರಿಯನ್ನು ಹೆಚ್ಚಿಸುತ್ತವೆ.
  • ಹೈಡ್ರೇಟ್ ಆಗಿರಿ; ಯಾವಾಗಲೂ ತಂಪಾಗಿರುವುದಕ್ಕೆ ಮತ್ತು ಬೆವರು ಸಂಗ್ರಹವಾಗುವುದನ್ನು ತಡೆಯಲು ನಿಮ್ಮನ್ನು ಸರಿಯಾಗಿ ಹೈಡ್ರೇಟ್ ಆಗಿ ಇಟ್ಟುಕೊಳ್ಳಿ. ನೀರನ್ನು ಹೆಚ್ಚಾಗಿ ಕುಡಿಯಿರಿ, ಜೊತೆಗೆ ನೀರಿನಾಂಶ ಹೆಚ್ಚಾಗಿರುವ ಹಣ್ಣುಗಳನ್ನು ಸೇವನೆ ಮಾಡಿ.
  • ಪ್ರೋಬಯಾಟಿಕ್ ಆಹಾರಗಳ ಸೇವನೆ ಮಾಡಿ; ಆರೋಗ್ಯಕರ ಕರುಳು ಮತ್ತು ಚರ್ಮದ ಆರೋಗ್ಯವನ್ನು ಕಾಪಾಡಲು ಮೊಸರು, ಮತ್ತು ಹುದುಗಿಸಿದ ತರಕಾರಿಗಳಂತಹ ಹೆಚ್ಚು ಪ್ರೋಬಯಾಟಿಕ್ ಆಹಾರಗಳನ್ನು ಸೇವಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ