AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

ಕ್ಯಾನ್ಸರ್​​ ಹೇಗೆ ಹರಡುತ್ತದೆ? ಸಂಶೋಧನೆಯಿಂದ ಬೆಳಕಿಗೆ ಬಂತು ಹೊಸ ವಿಚಾರ

ಕ್ಯಾನ್ಸರ್ ಹೇಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯವಾಗುವಂತಹ ಕೆಲ ಅಂಶಗಳು ಕಂಡುಬಂದಿದ್ದು, ಇದು ಭವಿಷ್ಯದಲ್ಲಿ ಹೊಸ ಚಿಕಿತ್ಸಾ ವಿಧಾನಕ್ಕೆ ಕಾರಣವಾಗಬಹುದು.

ಕ್ಯಾನ್ಸರ್​​ ಹೇಗೆ ಹರಡುತ್ತದೆ? ಸಂಶೋಧನೆಯಿಂದ ಬೆಳಕಿಗೆ ಬಂತು ಹೊಸ ವಿಚಾರ
cancer (ಪ್ರಾತಿನಿಧಿಕ ಚಿತ್ರ)
TV9 Web
| Updated By: ಗಂಗಾಧರ​ ಬ. ಸಾಬೋಜಿ|

Updated on: Oct 18, 2022 | 7:00 AM

Share

ಮಾರಣಾಂತಿಕ ಕಾಯಿಲೆ ಕ್ಯಾನ್ಸರ್ ಕುರಿತಾದ ಸಂಶೋಧನೆಗಳು ಮುಂದುವರೆದಿದೆ. ಇದೀಗ ಕ್ಯಾನ್ಸರ್ (cancer) ದೇಹದ ಒಂದು ಭಾಗದಿಂದ ಇನ್ನೊಂದು ಭಾಗಕ್ಕೆ ಹೇಗೆ ಹರಡುತ್ತದೆ ಎಂಬುದನ್ನು ಸಂಶೋಧಕರು ಪತ್ತೆ ಹಚ್ಚುವಲ್ಲಿ ಬಹುತೇಕ ಸಫಲರಾಗಿದ್ದಾರೆ. ಮೆಟಾಸ್ಟಾಸಿಸ್ ಎಂದು ಕರೆಯಲ್ಪಡುವ ಈ ಪ್ರಕ್ರಿಯೆಯು ವಿಜ್ಞಾನಿಗಳನ್ನು ಇಂದಿಗೂ ಗೊಂದಲಕ್ಕೀಡು ಮಾಡಿದೆ. ಆದಾಗ್ಯೂ, ಈಗ ಹೊಸ ಅಧ್ಯಯನ ಒಂದರ ಪ್ರಕಾರ ಕ್ಯಾನ್ಸರ್ ಹೇಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳಲು ಸಂಶೋಧಕರಿಗೆ ಸಹಾಯವಾಗುವಂತಹ ಕೆಲ ಅಂಶಗಳು ಕಂಡು ಬಂದಿದೆ. ಇದು ಭವಿಷ್ಯದಲ್ಲಿ ಹೊಸ ಚಿಕಿತ್ಸಾ ವಿಧಾನಕ್ಕೆ ಸಹಕಾರಿಯಾಗಲುಬಹುದಾಗಿದೆ. ಈ ಕುರಿತಾಗಿ ಸಂಶೋಧಕರು ನೇಚರ್ ಜೆನೆಟಿಕ್ಸ್​ನಲ್ಲಿ ತಮ್ಮ ಸಂಶೋಧನೆಯ ಬಗ್ಗೆ ಒಂದು ಪ್ರಬಂಧವನ್ನು ಪ್ರಕಟಿಸಿದ್ದಾರೆ. ಕೇಂಬ್ರಿಡ್ಜ್ ವಿಶ್ವವಿದ್ಯಾಲಯದ ಕ್ಯಾನ್ಸರ್ ರಿಸರ್ಚ್ ಯುಕೆ (CRUK) ಕೇಂಬ್ರಿಡ್ಜ್ ಇನ್ಸ್ಟಿಟ್ಯೂಟ್​ನಲ್ಲಿ ಸಂಶೋಧಕರು ಕೈಗೊಂಡ ಸಂಶೋಧನೆಯಿಂದ ಕ್ಯಾನ್ಸರ್ ಹೇಗೆ ಹರಡುತ್ತದೆ ಎಂಬ ಅಂಶಗಳು ಪತ್ತೆಯಾಗಿವೆ.

ಎನ್ಎಎಲ್ಸಿಎನ್ ಪ್ರೋಟೀನ್​ನಂತಹ ಕೆಲವು ಪ್ರೋಟೀನ್​ಗಳ ಚಟುವಟಿಕೆಯನ್ನು ತಡೆಯುವುದು, ಇಲಿಗಳಲ್ಲಿ ಕ್ಯಾನ್ಸರ್ ಕೋಶಗಳ ಮೆಟಾಸ್ಟಾಸಿಸ್​ನ್ನು ಪ್ರಚೋದಿಸುತ್ತದೆ ಎಂದು ಸಂಶೋಧಕರು ತಮ್ಮ ಸಂಶೋಧನೆಯಿಂದ ಕಂಡುಕೊಂಡಿದ್ದಾರೆ. ಕ್ಯಾನ್ಸರ್​ಗೆ ಹೊಸ ಚಿಕಿತ್ಸಾ ವಿಧಾನಗಳನ್ನು ಕಂಡುಹಿಡಿಯುವ ಪ್ರಕ್ರಿಯೆಯೂ ದೀರ್ಘ ಮತ್ತು ಪ್ರಯಾಸಕರವಾಗಿದೆ. ಚರ್ಮದ ಕ್ಯಾನ್ಸರ್ ಕೋಶಗಳನ್ನು ಕೊಲ್ಲಬಲ್ಲ ವಿಕಿರಣಶೀಲ ಜೆಲ್​ನ್ನು ವೈದ್ಯರು ರಚಿಸಿದ್ದು, ಮತ್ತೆ ಕೆಲವರು ವಯಾಗ್ರವು ಕ್ಯಾನ್ಸರ್-ವಿರೋಧಿ ಔಷಧಿಯಾಗಿಯೂ ಕಾರ್ಯನಿರ್ವಹಿಸುತ್ತದೆ ಎಂದು ಹೇಳಿದ್ದಾರೆ.

ಕ್ಯಾನ್ಸರ್​​ ಏಕೆ ಮತ್ತು ಹೇಗೆ ಹರಡುತ್ತದೆ?

ಈ ಹೊಸ ಸಂಶೋಧನೆಯು ಕ್ಯಾನ್ಸರ್ ಏಕೆ ಮತ್ತು ಅದು ಹೇಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವಲ್ಲಿ ಸಹಕಾರಿಯಾಗಲಿದೆ. ಇದು ಅನೇಕರಿಗೆ ಹೊಸ ಚಿಕಿತ್ಸಾ ವಿಧಾನಗಳಿಗೆ ದಾರಿ ಮಾಡಿಕೊಡಬಹುದು. ಮೆಟಾಸ್ಟಾಸಿಸ್ ಮೂಲಕ ಕ್ಯಾನ್ಸರ್ ಕೋಶಗಳನ್ನು ಹರಡುವ ಜೊತೆಗೆ, ಆರೋಗ್ಯಕರ ಜೀವಕೋಶಗಳು ದೇಹದ ಇತರ ಭಾಗಗಳಿಗೆ ಹರಡುವುದನ್ನು ತಡೆಯಲು ಎನ್​ಎಎಲ್​ಸಿಎನ್ ಪ್ರೋಟೀನ್ ಸಹ ಕಾರಣವಾಗಬಹುದು ಎಂದು ಸಂಶೋಧಕರು ಕಂಡುಕೊಂಡಿದ್ದಾರೆ.

ಎನ್ಎಎಲ್ಸಿಎನ್ ಪ್ರೋಟೀನ್​ನ್ನು ತೆಗೆದುಹಾಕಿದಾಗ, ಮೇದೋಜೀರಕ ಗ್ರಂಥಿಯಿಂದ ಆರೋಗ್ಯಕರ ಜೀವಕೋಶಗಳು ಮೂತ್ರಪಿಂಡಕ್ಕೆ ಹರಡುತ್ತದೆ ಎಂದು ಸಂಶೋಧಕರು ಪತ್ತೆ ಹಚ್ಚಿದ್ದಾರೆ. ಇದು ಆರೋಗ್ಯಕರ ಮೂತ್ರಪಿಂಡದ ಕೋಶಗಳಾಗಿವೆ ಎಂದು ಕಂಡುಕೊಂಡಿದ್ದಾರೆ. ಈ ಆವಿಷ್ಕಾರಗಳ ಪರಿಣಾಮವಾಗಿ, ಕ್ಯಾನ್ಸರ್ ಹರಡುವ ಪ್ರಮುಖ ಮಾರ್ಗವಾದ ಮೆಟಾಸ್ಟಾಸಿಸ್, ರೋಗಕ್ಕೆ ಸಂಬಂಧಿಸಿದ ಅಸಹಜ ಪ್ರಕ್ರಿಯೆಯಲ್ಲ ಎಂದು ಸಂಶೋಧಕರು ನಂಬುತ್ತಾರೆ.

ಹೊಸ ಚಿಕಿತ್ಸಾ ವಿಧಾನಕ್ಕೆ ದಾರಿ:

ಇದು ವಿಶೇಷವಾಗಿ ಪ್ರಮುಖ ವರದಿಯಾಗಿದ್ದು, ಮೆಟಾಸ್ಟಾಸಿಸ್ ಎಂಬುದು ಕ್ಯಾನ್ಸರ್ ಕೋಶಗಳು ದೇಹದ ಒಂದು ಭಾಗದಿಂದ ಮತ್ತೊಂದು ಭಾಗಕ್ಕೆ ಹರಡುವ ಪ್ರಾಥಮಿಕ ಮಾರ್ಗವಾಗಿದೆ. ಆರೋಗ್ಯಕರ ಜೀವಕೋಶಗಳು ಈ ವರ್ಗಾವಣೆ ಪ್ರಕ್ರಿಯೆಯನ್ನು ಸಹ ಬಳಸಿಕೊಳ್ಳುವುದರಿಂದ, ಭವಿಷ್ಯದಲ್ಲಿ ಹೆಚ್ಚಿನ ಚಿಕಿತ್ಸಾ ವಿಧಾನಗಳನ್ನು ಅಭಿವೃದ್ಧಿಪಡಿಸಲು ಇದು ಅನುವು ಮಾಡಿಕೊಡಬಹುದು. ಕ್ಯಾನ್ಸರ್ ಹೇಗೆ ಹರಡುತ್ತದೆ ಎಂಬುದನ್ನು ಅರ್ಥಮಾಡಿಕೊಳ್ಳುವುದು ಮತ್ತು ಅದಕ್ಕೆ ಚಿಕಿತ್ಸೆ ನೀಡಲು ಹೊಸ ಮಾರ್ಗಗಳನ್ನು ಕಂಡುಹಿಡಿಯುವ ಪ್ರಮುಖ ಭಾಗವಾಗಿದೆ ಎನ್ನಲಾಗುತ್ತಿದೆ.

ಮತ್ತಷ್ಟು ಆರೋಗ್ಯ ಲೇಖನಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ.

ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಭಾರತದಲ್ಲಿ ಇದೇ ಮೊದಲ ಬಾರಿಗೆ ಡಿಜಿಟಲ್ ಜನಗಣತಿ
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಬಿಜೆಪಿಗೆ ವಾಪಸ್ ಆಗಲು ಎರಡ್ಮೂರು ಪ್ರಮುಖ ಬೇಡಿಕೆ ಇಟ್ಟ ಯತ್ನಾಳ್
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಡಿಕೆ ಸಿಎಂ, ವಿಜಯೇಂದ್ರ ಡಿಸಿಎಂ ಪ್ಲ್ಯಾನ್:ಅಮಿತ್ ಶಾ ಮುಂದೇನಾಗಿತ್ತು?
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!
ಕಂಟೇನರ್ ಲಾರಿ ಅಡಿ ಬೀಳುವುದರಿಂದ ಸ್ವಲ್ಪದರಲ್ಲೇ ಬಚಾವಾದ ಬೈಕ್ ಸವಾರರು!