ನಿರಂತರವಾಗಿ ಕಂಡುಬರುವ ಮಲಬದ್ಧತೆ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದೇ?

ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಕ್ಯಾನ್ಸರ್ ಗೆ ಸಂಬಂಧಪಟ್ಟ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಇಂತಹ ಸಂದರ್ಭಗಳಲ್ಲಿ, ಈ ಸಮಸ್ಯೆ ಕಂಡುಬರುವುದಕ್ಕೆ ಕಾರಣಗಳನ್ನು ಅರ್ಥಮಾಡಿಕೊಳ್ಳುವುದು ಮುಖ್ಯ. ಇದರ ಜೊತೆಗೆ, ಅನೇಕರು ಮಲಬದ್ಧತೆಯ ಸಮಸ್ಯೆಯಿಂದ ಬಳಲುತ್ತಿರುವುದನ್ನು ನೀವು ನೋಡಿರಬಹುದು, ಇದು ಕೂಡ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಹಾಗಾದರೆ ಹೊಟ್ಟೆಯ ಕ್ಯಾನ್ಸರ್ ಗೂ ಮಲಬದ್ಧತೆಗೂ ಸಂಬಂಧವಿದೆಯೇ, ಈ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ನಿರಂತರವಾಗಿ ಕಂಡುಬರುವ ಮಲಬದ್ಧತೆ ಸಮಸ್ಯೆ ಹೊಟ್ಟೆಯ ಕ್ಯಾನ್ಸರ್ ಗೆ ಕಾರಣವಾಗಬಹುದೇ?
ಹೊಟ್ಟೆಯ ಕ್ಯಾನ್ಸರ್ ಗೂ ಮಲಬದ್ಧತೆಗೂ ಇರುವ ಸಂಬಂಧ
Image Credit source: Getty Images

Updated on: Jan 11, 2026 | 6:30 PM

ಇತ್ತೀಚಿನ ದಿನಗಳಲ್ಲಿ, ಹೊಟ್ಟೆಯ ಕ್ಯಾನ್ಸರ್ (Stomach Cancer) ಗೆ ಸಂಬಂಧಪಟ್ಟ ಪ್ರಕರಣಗಳು ನಿರಂತರವಾಗಿ ಹೆಚ್ಚುತ್ತಿವೆ. ಹೊಟ್ಟೆಯಲ್ಲಿರುವ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಮತ್ತು ಅದರ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರಿದಾಗ ಈ ರೋಗ ಕಂಡುಬರುತ್ತದೆ. ಪರಿಣಾಮವಾಗಿ, ಹೊಟ್ಟೆಯ ಕಾರ್ಯನಿರ್ವಹಣೆಯು ದುರ್ಬಲಗೊಳ್ಳಬಹುದು, ಅಷ್ಟೇ ಅಲ್ಲ, ಇದು ಗಂಭೀರ ಆರೋಗ್ಯ ಸಮಸ್ಯೆಗಳಿಗೆ ಕಾರಣವಾಗಬಹುದು. ಇದರ ಜೊತೆಗೆ, ಅನೇಕರು ಮಲಬದ್ಧತೆಯ (Constipation) ಸಮಸ್ಯೆಯಿಂದ ಬಳಲುತ್ತಿರುವುದನ್ನು ನೀವು ನೋಡಿರಬಹುದು, ಇದು ಕೂಡ ಹೊಟ್ಟೆಯ ಆರೋಗ್ಯದ ಮೇಲೆ ಪರಿಣಾಮ ಬೀರುತ್ತದೆ. ಈ ಸಮಸ್ಯೆ ನಿರಂತರವಾಗಿ ಕಂಡುಬಂದಲ್ಲಿ ಗಂಭೀರ ಆರೋಗ್ಯ ಸಮಸ್ಯೆಗೆ ಕಾರಣವಾಗಬಹುದು. ಹಾಗಾದರೆ ಹೊಟ್ಟೆಯ ಕ್ಯಾನ್ಸರ್ ಗೂ ಮಲಬದ್ಧತೆಗೂ ಸಂಬಂಧವಿದೆಯೇ, ಈ ಸಮಸ್ಯೆ ಕಂಡುಬರುವುದಕ್ಕೆ ಕಾರಣವೇನು ಎಂಬುದನ್ನು ಸ್ಟೋರಿ ಮೂಲಕ ತಿಳಿದುಕೊಳ್ಳಿ.

ಹೊಟ್ಟೆಯ ಕ್ಯಾನ್ಸರ್ ಕಂಡುಬರುವುದಕ್ಕೆ ಕಾರಣವೇನು?

ಲೇಡಿ ಹಾರ್ಡಿಂಗ್ ಆಸ್ಪತ್ರೆಯ ಡಾ. ಎಲ್.ಎಚ್. ​​ಘೋಟೇಕರ್ ಹೇಳುವ ಪ್ರಕಾರ, ಹೊಟ್ಟೆಯ ಜೀವಕೋಶಗಳು ಅಸಹಜವಾಗಿ ಬೆಳೆಯಲು ಪ್ರಾರಂಭಿಸಿದಾಗ ಹೊಟ್ಟೆಯಲ್ಲಿ ಕ್ಯಾನ್ಸರ್ ಕಂಡುಬರುತ್ತದೆ. ಈ ಜೀವಕೋಶಗಳು ತಮ್ಮ ಸಾಮಾನ್ಯ ಕಾರ್ಯಗಳನ್ನು ನಿರ್ವಹಿಸುವುದಿಲ್ಲ, ಅದಾದ ಬಳಿಕ, ಕ್ರಮೇಣ ಹೊಟ್ಟೆಯ ಹತ್ತಿರದ ಅಂಗಗಳನ್ನು ಹಾನಿಗೊಳಿಸಬಹುದು. ಈ ಬೆಳವಣಿಗೆಗೆ ಹಲವಾರು ಕಾರಣಗಳಿವೆ. ವಯಸ್ಸಾಗುವುದು ಮತ್ತು ಕುಟುಂಬದ ಇತಿಹಾಸವಿರುವುದು ಸೇರಿದಂತೆ ಇನ್ನಿತರ ಕಾರಣಗಳು ಇಂತಹ ಅಪಾಯವನ್ನು ಹೆಚ್ಚಿಸುತ್ತದೆ. ಇದೆಲ್ಲದರ ಜೊತೆಗೆ, ಎಣ್ಣೆಯುಕ್ತ, ಮಸಾಲೆಯುಕ್ತ ಮತ್ತು ಸಂಸ್ಕರಿಸಿದ ಆಹಾರಗಳನ್ನು ನಿರಂತರವಾಗಿ ಸೇವಿಸುವುದರ ಜೊತೆಗೆ ಧೂಮಪಾನ ಮತ್ತು ಮದ್ಯಪಾನವು ಹೊಟ್ಟೆಯ ಆರೋಗ್ಯದ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ. ಹೊಟ್ಟೆಯಲ್ಲಿರುವ ಎಚ್. ಪೈಲೋರಿ ಬ್ಯಾಕ್ಟೀರಿಯಾದಂತಹ ಸೋಂಕುಗಳು ಸಹ ಕ್ಯಾನ್ಸರ್‌ಗೆ ಕಾರಣವಾಗಬಹುದು. ನಿಯಮಿತವಾಗಿ ಹೊಟ್ಟೆ ತಪಾಸಣೆ ಮಾಡದಿರುವುದು ಅಥವಾ ಆರಂಭಿಕ ಲಕ್ಷಣಗಳನ್ನು ನಿರ್ಲಕ್ಷಿಸುವುದರಿಂದ ರೋಗವು ತ್ವರಿತವಾಗಿ ಪ್ರಗತಿ ಹೊಂದಲು ಅನುವು ಮಾಡಿಕೊಡುತ್ತದೆ. ಆದ್ದರಿಂದ, ಸಮಯಕ್ಕೆ ಸರಿಯಾಗಿ ತಪಾಸಣೆ ಮಾಡುವುದು ಮತ್ತು ಆರೋಗ್ಯಕರ ಜೀವನಶೈಲಿಯನ್ನು ಅಳವಡಿಸಿಕೊಳ್ಳುವುದು ಬಹಳ ಮುಖ್ಯ.

ಮಲಬದ್ಧತೆ ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗಬಹುದೇ?

ಸಾಮಾನ್ಯವಾಗಿ ಮಲಬದ್ಧತೆ ಹೊಟ್ಟೆಯ ಸಾಮಾನ್ಯ ಕಾರ್ಯನಿರ್ವಹಣೆಯ ಮೇಲೆ ಪರಿಣಾಮ ಬೀರುತ್ತದೆ. ಹಾಗಾಗಿ ದೀರ್ಘಕಾಲದ ಮಲಬದ್ಧತೆ ಹೊಟ್ಟೆಗೆ ಒತ್ತಡವನ್ನುಂಟು ಮಾಡುತ್ತದೆ ಮತ್ತು ಆಂತರಿಕ ಸೋಂಕುಗಳ ಅಪಾಯವನ್ನು ಹೆಚ್ಚಿಸುತ್ತದೆ. ಮಲಬದ್ಧತೆಯಿಂದಾಗಿ, ಆಹಾರವು ದೀರ್ಘಕಾಲದವರೆಗೆ ಹೊಟ್ಟೆಯಲ್ಲಿ ಉಳಿಯುತ್ತದೆ, ಇದು ಹೊಟ್ಟೆಯ ಜೀವಕೋಶಗಳ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಅಷ್ಟೇ ಅಲ್ಲ, ನಿರಂತರ ಮಲಬದ್ಧತೆ ಅನಿಲ, ಅಜೀರ್ಣ ಮತ್ತು ಉಬ್ಬರದಂತಹ ಸಮಸ್ಯೆಗಳಿಗೆ ಕಾರಣವಾಗಬಹುದು. ಹಾಗಾಗಿ ಮಲಬದ್ಧತೆ ನೇರವಾಗಿ ಹೊಟ್ಟೆಯ ಕ್ಯಾನ್ಸರ್‌ಗೆ ಕಾರಣವಾಗದಿದ್ದರೂ, ಹೊಟ್ಟೆಗೆ ಸಂಬಂಧಿಸಿದ ಆರೋಗ್ಯ ಸಮಸ್ಯೆಗಳನ್ನು ಉಲ್ಬಣಗೊಳಿಸುವ ಮೂಲಕ ಅಪಾಯಗಳನ್ನು ಹೆಚ್ಚಿಸುತ್ತದೆ. ಆದ್ದರಿಂದ, ಮಲಬದ್ಧತೆಯನ್ನು ನಿರ್ಲಕ್ಷಿಸಬೇಡಿ.

ಇದನ್ನೂ ಓದಿ: ಈ ಆಹಾರಗಳ ಸೇವನೆ ಮಾಡಿದರೆ ಮಲಬದ್ಧತೆ ಕಡಿಮೆಯಾಗಿ ಹೊಟ್ಟೆ ಕ್ಲೀನ್ ಆಗುತ್ತೆ

ಹೊಟ್ಟೆಯ ಆರೋಗ್ಯಕ್ಕೆ ಮುಖ್ಯವಾಗಿ ಸೇವಿಸಬೇಕಾದ ಆಹಾರಗಳು:

  • ತರಕಾರಿಗಳು, ಹಣ್ಣುಗಳು ಮತ್ತು ಧಾನ್ಯಗಳಂತಹ ಫೈಬರ್ ಭರಿತ ಆಹಾರವನ್ನು ಸೇವಿಸಿ.
  • ದಿನವಿಡೀ ಸಾಕಷ್ಟು ನೀರು ಕುಡಿಯಿರಿ.
  • ಲಘು ವ್ಯಾಯಾಮದಂತಹ ನಿಯಮಿತ ದೈಹಿಕ ಚಟುವಟಿಕೆಯಲ್ಲಿ ತೊಡಗಿಸಿಕೊಳ್ಳಿ.
  • ಸಂಸ್ಕರಿಸಿದ, ಎಣ್ಣೆಯುಕ್ತ ಮತ್ತು ಮಸಾಲೆಯುಕ್ತ ಆಹಾರ ಸೇವನೆ ಮಾಡುವುದನ್ನು ತಪ್ಪಿಸಿ.

ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ