ಭಾರತದಲ್ಲಿ ಹೃದಯ ವೈಫಲ್ಯದ ಪ್ರಕರಣಗಳು ನಿರಂತವಾಗಿ ಹೆಚ್ಚುತ್ತಿದೆ. ವಯಸ್ಸಾದಂತೆ ದೇಹಯ ಸ್ನಾಯು ಗಟ್ಟಿಯಾಗುತ್ತದೆ ಮತ್ತು ಹೃದಯವು ರಕ್ತವನ್ನು ಸರಿಯಾಗಿ ಪಂಪ್ ಮಾಡಲು ಸಾಧ್ಯವಾಗುವುದಿಲ್ಲ. ಇದರಿಂದಾಗಿ ದೇಹದ ಪ್ರಮುಖ ಅಂಗಗಳಿಗೆ ಸಾಗುವ ಆಮ್ಲಜನಕ ಮತ್ತು ಪೋಷಕಾಂಶಗಳಿಗೆ ಅಡ್ಡಿಯುಂಟಾಗುತ್ತದೆ. ಮುಖ್ಯವಾಗಿ ಯುವಕರಲ್ಲಿ ಹೃದಯ ವೈಫಲ್ಯದ ಸಮಸ್ಯೆಯ ಹಿಂದಿರುವ ಪ್ರಮುಖ ಕಾರಣವೆಂದರೆ, ಜೀವನ ಶೈಲಿಯಲ್ಲಿನ ಕೆಲವು ಬದಲಾವಣೆಗಳು, ಹೆಚ್ಚುತ್ತಿರುವ ಒತ್ತಡ ಮತ್ತು ಮಾಲಿನ್ಯಕ್ಕೆ ಒಗ್ಗಿಕೊಂಡಿರುವ ಜಂಕ್ ಫುಟ್ಗಳು. ಇವು ನಿಮ್ಮ ಆರೋಗ್ಯವನ್ನು ದುರ್ಬಲಗೊಳಿಸುತ್ತವೆ ಮತ್ತು ಹೃದಯ ವೈಫಲ್ಯ ಸಮಸ್ಯೆಯನ್ನು ಹೆಚ್ಚಿಸಬಹುದು.
ಹೃದಯ ವೈಫಲ್ಯಕ್ಕೆ ಕಾರಣವಾಗುವ ಲಕ್ಷಣಗಳು
ಆಯಾಸ
ಒತ್ತಡ
ಪಾದದ ಊತ
ಉಸಿರಾಟ ತೊಂದರೆ
ಆರೋಗ್ಯಕರ ಹೃದಯಕ್ಕಾಗಿ ಸಲಹೆಗಳು
ಉಪ್ಪಿನ ಸೇವನೆಯನ್ನು ಕಡಿಮೆ ಮಾಡಿ
ಸೋಡಿಯಂ ದೇಹದಲ್ಲಿ ನೀರು ಉಳಿಸಿಕೊಳ್ಳಲು ಕಾರಣವಾಗುತ್ತದೆ. ಆದ್ದರಿಂದ ಹೃದಯ ವೈಫಲ್ಯದ ಲಕ್ಷಣಗಳನ್ನು ನಿರ್ವಹಿಸಲು ಉಪ್ಪು ಸೇವನೆಯನ್ನು ಕಡಿಮೆ ಮಾಡಿ. ದೇಹದಲ್ಲಿ ಅಧಿಕವಾದ ನೀರಿನ ಅಂಶ ಹೃದಯವು ಸರಿಯಾಗಿ ಪಂಪ್ ಮಾಡಲು ಅಡ್ಡಿಯುಂಟು ಮಾಡುತ್ತದೆ.
ಮದ್ಯಪಾನ ಮತ್ತು ಧೂಮಪಾನದಿಂದ ದೂರವಿರಿ
ಮದ್ಯಪಾನ ಮತ್ತು ಧೂಮಪಾನವು ಹೃದಯವನ್ನು ತೀವ್ರವಾಗಿ ಹಾನಿಗೊಳಗಾಗಿಸುತ್ತದೆ. ಆಲ್ಕೊಹಾಲ್ ಸೇವನೆಯು ಅಧಿಕ ರಕ್ತದೊತ್ತಡಕ್ಕೆ ಕಾರಣವಾಗುತ್ತದೆ. ಹೀಗಾಗಿ ದೇಹಯ ವೈಫಲ್ಯ ಹೊಂದಿರುವ ರೋಗಿಗಳಿಗೆ ಧೂಮಪಾನ ಮತ್ತು ಮದ್ಯಪಾನವನ್ನು ಸಂಪೂರ್ಣವಾಗಿ ನಿಲ್ಲಿಸುವಂತೆ ತಜ್ಞರು ಸಲಹೆ ನೀಡುತ್ತಾರೆ.
ಮಿತವಾಗಿ ವ್ಯಾಯಾಮ ಮತ್ತು ವಾಕಿಂಗ್ ಮಾಡಿ
ದೈನಂದಿನ ದಿನಚರಿಯ ಭಾಗವಾಗಿ ದಿನದಲ್ಲಿ 20 ರಿಂದ 30 ನಿಮಿಷಗಳ ಕಾಲ ವ್ಯಾಯಾಮ ಮಾಡುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯದು. ವ್ಯಾಯಾಮ ಮತ್ತು ನಿಯಮಿತವಾದ ವಾಕಿಂಗ್ ಹೃದಯ ಸ್ನಾಯುವನ್ನು ಬಲಪಡಿಸುತ್ತದೆ. ಮುಖ್ಯವಾಗಿ ಗಮನಿಸಬೇಕಾದ ಅಂಶವೆಂದರೆ ಹೃದಯ ವೈಫಲ್ಯದ ಸಮಸ್ಯೆ ಹೊಂದಿರುವವರು ವೈದ್ಯರನ್ನು ಸಂಪರ್ಕಿಸಿ ಯೋಗ ಭಂಗಿಗಳನ್ನು ಮಾಡುವುದರ ಕುರಿತಾಗಿ ಚರ್ಚಿಸುವುದು ಒಳ್ಳೆಯದು.
ಆರೋಗ್ಯಕರ ಆಹಾರ
ಹೃದಯ ವೈಫಲ್ಯದ ರೋಗಿಗಳಿಗೆ ಆಹಾರ ಪದ್ಧತಿಯ ಮೇಲೆ ಸರಿಯಾದ ನಿಯಂತ್ರಣವನ್ನು ಇಟ್ಟುಕೊಳ್ಳುವುದು ಮುಖ್ಯ. ಆಹಾರದಲ್ಲಿ ತರಕಾರಿ, ಹಣ್ಣುಗಳು ಮತ್ತು ಹಸಿರು ಸೊಪ್ಪುಗಳಿರಲಿ. ಇವು ನಿಮ್ಮ ಆರೋಗ್ಯವನ್ನು ಸುಧಾರಿಸಲು ಸಹಾಯ ಮಾಡುತ್ತವೆ.
ಇದನ್ನೂ ಓದಿ:
Health Tips: ನಿಮ್ಮ ದೇಹದ ತೂಕ ಹೆಚ್ಚಳಕ್ಕೆ ಈ ಕೆಲವು ಅಂಶಗಳೇ ಕಾರಣ!
Health Tips: ಹಲಸಿನ ಹಣ್ಣಿನ ಸೇವನೆಯ ಆರೋಗ್ಯ ಪ್ರಯೋಜನಗಳು ಬಹಳಷ್ಟಿವೆ; ಈ ಕೆಲವು ಸಲಹೆಗಳು ನಿಮಗಾಗಿ
(don’t neglect these 5 heart failure symptoms)
Published On - 3:24 pm, Fri, 24 September 21