ಮದುವೆಯ ನಂತರ, ಸಾಮಾನ್ಯವಾಗಿ ಪ್ರತಿ ಮಹಿಳೆಯೂ ತನಗೊಂದು ಮಗು ಬೇಕು ಎಂದು ಬಯಸುತ್ತಾಳೆ. ಸಹಜವಾಗಿ ಮಕ್ಕಳು ಎಂದರೆ ಖುಷಿಯ ಖಜಾನೆ. ಹಾಗಾಗಿ ಎಲ್ಲರಿಗೂ ಆ ಸಂತಸವನ್ನು ಆನಂದಿಸುವ ಬಯಕೆ ಇದ್ದೇ ಇರುತ್ತದೆ. ಆದರೆ ಮಹಿಳೆಗೆ ಕೆಲವು ಕಾಯಿಲೆಗಳಿದ್ದರೆ, ಅವಳು ಗರ್ಭಧಾರಣೆಯನ್ನು ಯೋಜಿಸಬಾರದು. ಏಕೆಂದರೆ ಈ ರೋಗವಿದ್ದರೆ ಮಗು ಮತ್ತು ತಾಯಿ ಇಬ್ಬರ ಆರೋಗ್ಯಕ್ಕೂ ಹಾನಿಯಾಗುತ್ತದೆ. ಹಾಗಾಗಿ ಕೆಲವು ರೋಗಗಳಿದ್ದರೆ ಗರ್ಭಧರಿಸಬಾರದು ಅಥವಾ ಕೆಲವು ವರ್ಷಗಳ ಅಂತರವನ್ನು ತೆಗೆದುಕೊಂಡ ನಂತರವೇ ಅದರ ಬಗ್ಗೆ ಯೋಚಿಸಬೇಕು ಎಂದು ವೈದ್ಯರು ಹೇಳುತ್ತಾರೆ. ಹಾಗಾದರೆ ಯಾವ ರೋಗವಿದ್ದರೆ ಗರ್ಭಧರಿಸುವುದು ಒಳ್ಳೆಯದಲ್ಲ? ಇಲ್ಲಿದೆ ತಜ್ಞರ ಅಭಿಪ್ರಾಯ.
ದೆಹಲಿಯ ಜಿಟಿಬಿ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಡಾ. ಮಂಜು ವರ್ಮಾ ಅವರು ಹೇಳುವ ಪ್ರಕಾರ, ಮಹಿಳೆಗೆ ಹೃದ್ರೋಗವಿದ್ದರೆ, ಅಂದರೆ ಮಹಿಳೆಯ ಹೃದಯವು ದುರ್ಬಲವಾಗಿದ್ದರೆ ಅಥವಾ ಈ ಮೊದಲು ಹೃದ್ರೋಗದಿಂದಾಗಿ ಹೃದಯಾಘಾತವಾಗಿದ್ದರೆ ಅಥವಾ ಹೃದಯ ಸ್ತಂಭನವಾಗಿದ್ದರೆ ಮತ್ತು ಮಹಿಳೆ ಹೃದಯರಕ್ತನಾಳದ ಕಾಯಿಲೆಯ ಕೊನೆಯ ಹಂತದಲ್ಲಿದ್ದರೆ, ಅವಳು ಗರ್ಭಧರಿಸಬಾರದು ಎಂದು ಹೇಳುತ್ತಾರೆ. ಏಕೆಂದರೆ ಈ ಹಂತದಲ್ಲಿ ಹೃದಯವು ತುಂಬಾ ದುರ್ಬಲವಾಗಿರುತ್ತದೆ. ಮಹಿಳೆಗೆ ಉಸಿರಾಟದ ತೊಂದರೆ ಇರುತ್ತದೆ. ಅಲ್ಲದೆ ಯಾವುದೇ ಕೆಲಸವನ್ನು ಸರಿಯಾಗಿ ಮಾಡಲು ಸಾಧ್ಯವಾಗುವುದಿಲ್ಲ. ಅವರ ಆರೋಗ್ಯದ ಗುಣಮಟ್ಟವೂ ಕಳಪೆಯಾಗಿರುತ್ತದೆ ಇಂತಹ ಪರಿಸ್ಥಿತಿಯಲ್ಲಿ, ಮಗುವನ್ನು ಯೋಜಿಸಿದರೆ, ತಾಯಿ ಮತ್ತು ಮಗುವಿನ ಜೀವ ಅಪಾಯಕ್ಕೆ ಸಿಲುಕಬಹುದು ಎಂದು ತಜ್ಞರು ಹೇಳುತ್ತಾರೆ.
ಮಹಿಳೆ ಟಿಬಿಯಿಂದ ಬಳಲುತ್ತಿದ್ದರೆ, ಈ ಅವಧಿಯಲ್ಲಿ ಅವಳು ಎಂದಿಗೂ ಮಗುವನ್ನು ಯೋಜಿಸಬಾರದು. ಕ್ಷಯರೋಗವನ್ನು ಗುಣಪಡಿಸಿದ ನಂತರವೇ ವೈದ್ಯರ ಸಲಹೆ ಪಡೆದು ಮಗುವನ್ನು ಪಡೆಯಲು ಪ್ಲಾನ್ ಮಾಡಬೇಕು. ಏಕೆಂದರೆ ಟಿಬಿ ಇದ್ದರೆ, ಅದು ತಾಯಿಯಿಂದ ಮಗುವಿಗೆ ಹರಡುವ ಅಪಾಯವಿರುತ್ತದೆ. ಇಂತಹ ಸಂದರ್ಭದಲ್ಲಿ ಮಗುವಿನ ಆರೋಗ್ಯ ಹದಗೆಡಬಹುದು. ಹಾಗಾಗಿ, ಮೊದಲು ಟಿಬಿಗೆ ಸಂಪೂರ್ಣ ಚಿಕಿತ್ಸೆ ನೀಡಬೇಕು ನಂತರವೇ ಮಗುವನ್ನು ಪಡೆಯಲು ನಿರ್ಧರಿಸಬೇಕು ಎಂದು ಡಾ. ಮಂಜು ಹೇಳುತ್ತಾರೆ. ಟಿಬಿಯಂತೆ, ಎಚ್ಐವಿಯಲ್ಲೂ, ಮಗುವನ್ನು ಯೋಜಿಸುವ ಮೊದಲು ವೈದ್ಯರಿಂದ ಸಲಹೆ ಪಡೆಯುವುದು ಬಹಳ ಮುಖ್ಯ.
ಇದನ್ನೂ ಓದಿ: ಊಟದ ನಂತರ ಸಣ್ಣ ನಿದ್ದೆ ಮಾಡುವುದು ಒಳ್ಳೆಯದೇ? ತಜ್ಞರು ಏನು ಹೇಳುತ್ತಾರೆ?
ಸಫ್ದರ್ಜಂಗ್ ಆಸ್ಪತ್ರೆಯ ಸ್ತ್ರೀರೋಗ ವಿಭಾಗದ ಡಾ. ಸಲೋನಿ ಅವರು ಹೇಳುವ ಪ್ರಕಾರ, ಮಹಿಳೆಗೆ ಗಂಭೀರವಾಗಿ ಮೂತ್ರಪಿಂಡದ ಕಾಯಿಲೆ ಇದ್ದರೂ ಮತ್ತು ಡಯಾಲಿಸಿಸ್ನಲ್ಲಿದ್ದರೂ, ಅಂತವರು ಮಗುವನ್ನು ಪಡೆಯಬೇಕೆಂಬ ನಿರ್ಧಾರ ಮಾಡಬಾರದು ಎಂದು ಹೇಳುತ್ತಾರೆ. ಏಕೆಂದರೆ ಮೂತ್ರಪಿಂಡದ ಕಾಯಿಲೆಯು ಮಗುವಿಗೆ ಅಪಾಯಕಾರಿಯಾದ ಸೋಂಕುಗಳನ್ನು ಹೊಂದಿರಬಹುದು. ಮಹಿಳೆಯ ಡಯಾಲಿಸಿಸ್ ಪೂರ್ಣಗೊಂಡ ನಂತರ ಅಥವಾ ಅವಳು ಮೂತ್ರಪಿಂಡ ಕಸಿಗೆ ಒಳಗಾದ ನಂತರ, ಮೊದಲು ಕನಿಷ್ಠ ಮೂರು ವರ್ಷ ಕಾಯಬೇಕು. ಬಳಿಕ ಆಕೆ ಮಗುವನ್ನು ಪಡೆಯಬಹುದು. ಇದಕ್ಕಾಗಿ, ಮೊದಲು ವೈದ್ಯರನ್ನು ಸಂಪರ್ಕಿಸುವುದು ಸಹ ಅವಶ್ಯಕ.
ಇನ್ನಷ್ಟು ಆರೋಗ್ಯ ಸುದ್ದಿಗಳನ್ನು ಓದಲು ಇಲ್ಲಿ ಕ್ಲಿಕ್ ಮಾಡಿ