ಐಸ್ ಕ್ರೀಮ್ ತಿಂದ ನಂತರ ನೀರು ಕುಡಿಯಲೇ ಬೇಡಿ, ಕುಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು

ಐಸ್ ಕ್ರೀಮ್ ತಿಂದ ನಂತರ ಬಾಯಾರಿಕೆಯಾಗುತ್ತದೆ. ಇದೇ ಕಾರಣಕ್ಕೆ ಹೆಚ್ಚಿನವರು ನೀರು ಕುಡಿಯುತ್ತಾರೆ. ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಐಸ್​ ಕ್ರೀಂ ತಿಂದ ನಂತರ ನೀರು ಕುಡಿಯಬಹುದೇ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

ಐಸ್ ಕ್ರೀಮ್ ತಿಂದ ನಂತರ ನೀರು ಕುಡಿಯಲೇ ಬೇಡಿ, ಕುಡಿದರೆ ಈ ಸಮಸ್ಯೆ ಕಾಣಿಸಿಕೊಳ್ಳಬಹುದು
ಐಸ್ ಕ್ರೀಮ್ ತಿಂದ ನಂತರ ನೀರು ಕುಡಿಯಲೇ ಬೇಡಿ, ಕುಡಿದರೆ ಈ ಆರೋಗ್ಯ ಸಮಸ್ಯೆ ಕಾಣಿಸಿಕೊಳ್ಳಬಹುದುImage Credit source: Shutterstock
Follow us
Rakesh Nayak Manchi
|

Updated on: May 19, 2023 | 6:35 AM

ಬೇಸಿಗೆ ಕಾಲದಲ್ಲಿ ಐಸ್ ಕ್ರೀಂ (Ice Cream) ತಿನ್ನದೇ ಇರಲು ಸಾಧ್ಯವಿಲ್ಲ. ವಾಸ್ತವವಾಗಿ, ಈ ಸಮಯದಲ್ಲಿ ಸಣ್ಣ ಮಕ್ಕಳಿಂದ ಹಿರಿಯರವರೆಗೆ ಐಸ್ ಕ್ರೀಮ್ ತಿನ್ನುತ್ತಾರೆ. ಕೆವರಿಗೆ ಇದು ಅಚ್ಚುಮೆಚ್ಚು. ಐಸ್ ಕ್ರೀಂ ಬೇಸಿಗೆಯಲ್ಲಿ ದೇಹವನ್ನು ತಂಪಾಗಿರಿಸುತ್ತದೆ. ಸ್ವಲ್ಪ ಮಟ್ಟಿಗೆ ಇದು ಕೂಡ ಸರಿ. ಆದರೆ ಐಸ್ ಕ್ರೀಮ್ ತಿಂದ ನಂತರ ನಿಮಗೆ ಬಾಯಾರಿಕೆಯ ಅನುಭವ ಆಗುತ್ತದೆ. ಹೀಗಾಗಿ ಹೆಚ್ಚಿನವರು ನೀರು ಕುಡಿಯುತ್ತಾರೆ. ಆದರೆ ವೈಜ್ಞಾನಿಕವಾಗಿ ನೋಡುವುದಾದರೆ ಐಸ್​ ಕ್ರೀಂ ತಿಂದ ನಂತರ ನೀರು ಕುಡಿಯಬಹುದೇ? ತಜ್ಞರು ಹೇಳುವುದೇನು? ಇಲ್ಲಿದೆ ಮಾಹಿತಿ.

ಐಸ್ ಕ್ರೀಮ್ ಅಥವಾ ಸಿಹಿತಿಂಡಿಗಳನ್ನು ತಿಂದ ನಂತರ ಬಾಯಾರಿಕೆಯಾಗುವುದರ ಹಿಂದೆ ವೈಜ್ಞಾನಿಕ ಕಾರಣವೂ ಇದೆ. ಒಂದು ಸಂಶೋಧನೆಯ ಪ್ರಕಾರ, ಐಸ್ ಕ್ರೀಂನಲ್ಲಿ ಸಕ್ಕರೆ ಮತ್ತು ಸೋಡಿಯಂ ಎರಡೂ ಕಂಡುಬರುತ್ತವೆ. ಐಸ್ ಕ್ರೀಮ್ ತಿಂದ ನಂತರ ಸೋಡಿಯಂ ಮತ್ತು ಸಕ್ಕರೆ ಎರಡೂ ನಿಮ್ಮ ರಕ್ತದಲ್ಲಿ ಬೆರೆಯುತ್ತದೆ. ಸಕ್ಕರೆ ನಮ್ಮ ರಕ್ತವನ್ನು ಪ್ರವೇಶಿಸಿ ದೇಹದಾದ್ಯಂತ ಹರಡಲು ಪ್ರಾರಂಭಿಸುತ್ತದೆ. ಇದರ ನಂತರ ಅದು ನಮ್ಮ ದೇಹದ ಜೀವಕೋಶಗಳಿಂದ ನೀರನ್ನು ಹೀರಲು ಪ್ರಾರಂಭಿಸುತ್ತದೆ.

ಇದನ್ನೂ ಓದಿ: Silent Dehydration: ಶೇ.75ರಷ್ಟು ಭಾರತೀಯರಿಗೆ ಬಾಯಾರಿಕೆಯೇ ಆಗಲ್ವಂತೆ, ಸೈಲೆಂಟ್​ ಡಿಹೈಡ್ರೇಷನ್ ಎಂದರೇನು, ಇಲ್ಲಿದೆ ಮಾಹಿತಿ

ನಮ್ಮ ಮೆದುಳು ಈ ಸಂಪೂರ್ಣ ಪ್ರಕ್ರಿಯೆಯನ್ನು ಅರ್ಥಮಾಡಿಕೊಳ್ಳುತ್ತದೆ ಮತ್ತು ಮೆದುಳಿನ ಸಣ್ಣ ಭಾಗಕ್ಕೆ ಸಂಕೇತಗಳನ್ನು ಕಳುಹಿಸಲು ಪ್ರಾರಂಭಿಸುತ್ತದೆ. ಇದನ್ನು ಹೈಪೋಥಾಲಮಸ್ ಎಂದು ಕರೆಯಲಾಗುತ್ತದೆ. ವಾಸ್ತವವಾಗಿ, ಈ ಸಂದೇಶವು ನಮ್ಮ ದೇಹಕ್ಕೆ ನೀರಿನ ಅಗತ್ಯವಿದೆ ಎಂದು ಅನಿಸಲು ಪ್ರಾರಂಭವಾಗುತ್ತದೆ. ಅದಕ್ಕಾಗಿಯೇ ನಮಗೆ ಬಾಯಾರಿಕೆಯಾಗಿದೆ.

ನಾನು ತಕ್ಷಣ ನೀರು ಕುಡಿಯಬೇಕೇ?

ಆರೋಗ್ಯ ತಜ್ಞರ ಪ್ರಕಾರ, ಕೆಲವರು ಬಾಯಾರಿಕೆಯಾದಾಗ ಐಸ್ ಕ್ರೀಮ್ ತಿಂದ ತಕ್ಷಣ ನೀರು ಕುಡಿಯುತ್ತಾರೆ. ಆದರೆ ನೀವು ಐಸ್​ಕ್ರೀಂ ಸೇವನೆ ನಂತರ ನೀರು ಕುಡಿಯುತ್ತಿದ್ದರೆ, ಈ ತಪ್ಪನ್ನು ಸರಿಪಡಿಸಿ. ತಕ್ಷಣ ನೀರು ಕುಡಿಯುವುದರಿಂದ ಗಂಟಲು ನೋವು ಮತ್ತು ಹಲ್ಲಿನ ಸಮಸ್ಯೆಗಳು ಉಂಟಾಗಬಹುದು. ಹೀಗಾಗಿ ಐಸ್ ಕ್ರೀಂ ತಿಂದ ಸುಮಾರು 15 ನಿಮಿಷದ ನಂತರವೇ ನೀರು ಕುಡಿಯಬೇಕು.

ಆರೋಗ್ಯ ಸಲಹೆಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ

ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ಜನವರಿ 20 ರಿಂದ 26ರವರೆಗಿನ ವಾರ ಭವಿಷ್ಯ ಮತ್ತು ಗ್ರಹಗಳ ಸಂಚಾರ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
ತಾಮ್ರದ ಪಾತ್ರೆಯಲ್ಲಿ ನೀರಿಡುವುದರ ಹಿಂದಿನ ರಹಸ್ಯ ತಿಳಿಯಿರಿ
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
Daily horoscope: ಈ ರಾಶಿಯವರು ಆರ್ಥಿಕವಾಗಿ ಪ್ರಗತಿ ಕಾಣುವರು
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ವಾರ್ಡ್​ನನ್ನು ಸಸ್ಪೆಂಡ್ ಮಾಡುವಂತೆ ಅದೇಶಿಸಿದ ಉಪಲೋಕಾಯುಕ್ತ ವೀರಪ್ಪ
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಸೂಟ್​ಕೇಸ್​ನಲ್ಲಿ ಅಡಗಿದೆ ಸ್ಪರ್ಧಿಗಳ ಭವಿಷ್ಯ, ಮನೆಗೆ ಹೋಗುವರ್ಯಾರು?
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಅಗತ್ಯಕ್ಕಿಂತ ಹೆಚ್ಚು ಕೆಲಸ ಮಾಡಿದರೆ ಮಾನವ ರೋಗಗ್ರಸ್ತನಾಗುತ್ತಾನೆ: ವಾಟಾಳ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಬಿಜೆಪಿ ಸರ್ಕಾರ ನಡೆಸಿದ ಹಗರಣಗಳ ಚರ್ಚೆ ಮೊದಲು ನಡೆಯಲಿ: ಶಿವಕುಮಾರ್
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಎಲ್ಲ ರಾಜ್ಯಗಳಲ್ಲಿ ಪಕ್ಷದ ಚುನಾವಣಾ ಪ್ರಕ್ರಿಯೆ ಶುರುವಾಗಿದೆ: ಜೋಶಿ
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಮಹಾಕುಂಭದಲ್ಲಿ ಪವಿತ್ರ ಸ್ನಾನ ಮಾಡಿದ ರಕ್ಷಣಾ ಸಚಿವ ರಾಜನಾಥ್ ಸಿಂಗ್
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ
ಯಡಿಯೂರಪ್ಪ ಬಗ್ಗೆ ಗೌರವವಿದೆ, ಯಾವತ್ತಿಗೂ ನಮ್ಮ ನಾಯಕರು: ಜಾರಕಿಹೊಳಿ