ಮಕ್ಕಳಲ್ಲಿ ಮತ್ತು ದೊಡ್ಡವರಲ್ಲಿ ಒಣ ಕಣ್ಣಿ(Dry Eyes) ನ ಸಮಸ್ಯೆ ವಿಭಿನ್ನವಾಗಿರುತ್ತದೆ. ಇಂತಹ ಸಮಸ್ಯೆಗಳಿಗೆ ಪ್ರಾರಂಭಿಕ ಹಂತದಲ್ಲಿ ಮನೆ ಮದ್ದು(Home Remedies) ಗಳು ಕೂಡ ಪರಿಹಾರ ಕಂಡು ಕೊಳ್ಳಬಹುದಾಗಿದೆ.ಒಣ ಕಣ್ಣು ದಿನ ನಿತ್ಯದ ಚಟುವಟಿಕೆಗಳಲ್ಲಿ ಸಾಕಷ್ಟು ಕಿರಿ ಕಿರಿಯನ್ನುಂಟು ಮಾಡುತ್ತದೆ. ಸಾಮಾನ್ಯವಾಗಿ ಮಕ್ಕಳಲ್ಲಿ ಇಂತಹ ಸಮಸ್ಯೆ ಬೆಳಗಿನ ಸಮಯದಲ್ಲಿ ಹೆಚ್ಚಾಗಿ ಕಂಡುಬರುತ್ತದೆ. ಈ ರೀತಿಯಾದಾಗ ಮಕ್ಕಳು ಕಣ್ಣುಗಳನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಇದು ನಿಮ್ಮ ಮಗುವಿಗೆ ಮಸುಕಾದ ದೃಷ್ಟಿಗೆ ಕಾರಣವಾಗಬಹುದು. ಆದರೆ ಒಣ ಕಣ್ಣುಗಳು ಸಾಮಾನ್ಯವಾಗಿ ದೃಷ್ಟಿಗೆ ನಿರಂತರ ಸಮಸ್ಯೆಗಳನ್ನು ಉಂಟುಮಾಡುವುದಿಲ್ಲ.
ಮಕ್ಕಳಲ್ಲಿ ಈ ಸಮಸ್ಯೆಯು ಸಾಮಾನ್ಯವಾಗಿ ದೈನಂದಿನ ಚಟುವಟಿಕೆಗಳಲ್ಲಿ ಕಂಡುಬರುತ್ತದೆ. ಉದಾಹರಣೆಗೆ ಹೆಚ್ಚಾಗಿ ಆನ್ಲೈನ್ ಗೇಮಿಂಗ್ನಲ್ಲಿ ಸಮಯ ಕಳೆಯುವುದರಿಂದ ಇಂತಹ ಸಮಸ್ಯೆಗಳು ಹೆಚ್ಚಾಗಿ ಕಂಡುಬರುತ್ತದೆ. ಇದರಿಂದಾಗಿ ಕಣ್ಣು ಉರಿ,ಕಣ್ಣು ತುರಿಕೆ ಮುಂತಾದ ಸಮಸ್ಯೆಗಳು ಕಂಡುಬರುತ್ತದೆ. ಕಾಲಕ್ರಮೇಣ ಇದು ಕಣ್ಣಿನ ತೀವ್ರವಾದ ಅಲರ್ಜಿಗೆ ಕಾರಣವಾಗಬಹುದು. ಜೊತೆಗೆ ಕಣ್ಣಿನಲ್ಲಿ ತುರಿಕೆ ಹೆಚ್ಚಾದಂತೆ ಮಕ್ಕಳು ಕಣ್ಣನ್ನು ಉಜ್ಜಲು ಪ್ರಾರಂಭಿಸುತ್ತಾರೆ. ಇದರಿಂದಾಗಿ ಕಣ್ಣು ನೋವು ಹಾಗೂ ಕೆಂಪು ಬಣ್ಣಕ್ಕೆ ತಿರುಗುವ ಸಾಧ್ಯತೆ ಹೆಚ್ಚಿದೆ.
ಮಕ್ಕಳ ಆರೋಗ್ಯಕ್ಕೆ ಸಂಬಂಧಿಸಿದಂತೆ ಪೋಷಕರು ಹೆಚ್ಚಿನ ಜಾಗೃತಿ ವಹಿಸುವುದು ಅತ್ಯಂತ ಅಗತ್ಯವಾಗಿದೆ. ಯಾಕೆಂದರೆ ಮಕ್ಕಳಿಗೆ ಸಮಸ್ಯೆ ಎನು ಎಂಬುದನ್ನು ಸರಿಯಾಗಿ ತಿಳಿದಿರುವುದಿಲ್ಲ. ಉದಾಹರಣೆಗೆ ಕಣ್ಣಿನಲ್ಲಿ ಎನಾದರೂ ಸಮಸ್ಯೆ ಕಂಡು ಬಂದರೆ ಮೊದಲು ಕಣ್ಣನ್ನು ಉಜ್ಜಿಕೊಳ್ಳುವುದು. ಆದರೆ ಅಂತಹ ನಡವಳಿಕೆಯ ಮೂಲ ಕಾರಣವನ್ನು ಅರ್ಥಮಾಡಿಕೊಳ್ಳಲು ಅವರ ನಡವಳಿಕೆಯನ್ನು ಓದಲು ಪೋಷಕರು ತಮ್ಮ ಮಕ್ಕಳ ಮೇಲೆ ನಿಗಾ ಇಡಬೇಕು.
ಇದನ್ನೂ ಓದಿ: ಸ್ವೆಟರ್ ಹಾಕಿಕೊಂಡು ಮಲಗುವುದರಿಂದ ಆರೋಗ್ಯಕ್ಕಾಗುವ ದುಷ್ಪರಿಣಾಮಗಳೇನು ತಿಳಿಯಿರಿ
ಮಕ್ಕಳು ನಿಮ್ಮ ಜೊತೆಗೆ ಸಮಯ ಕಳೆಯುತ್ತಿದ್ದರೆ, ಆ ಸಮಯದಲ್ಲಿ ಧೂಮಪಾನ ಮಾಡದಿರಿ. ಇದು ನಿಮ್ಮ ಆರೋಗ್ಯವನ್ನು ಕೆಡಿಸುವುದರ ಜೊತೆಗೆ ನಿಮ್ಮ ಮಕ್ಕಳ ಆರೋಗ್ಯದ ಮೇಲೂ ನೇರವಾಗಿ ಪರಿಣಾಮ ಬೀರುತ್ತದೆ. ಆದ್ದರಿಂದ ಮಕ್ಕಳ ಜೊತೆಗಿರುವಾಗ ಧೂಮಪಾನದಿಂದ ದೂರವಿರಿ.
ಹೊರಗಡೆ ಹೋಗುವಾಗ ಸನ್ ಗ್ಲಾಸ್ ಧರಿಸುವುದನ್ನು ಮಕ್ಕಳಿಗೆ ಹೇಳಿಕೊಡಿ. ಸನ್ ಗ್ಲಾಸ್ ಬಳಸುವುದರಿಂದ ಹೊರಗಿನ ಧೂಳು ಮಾಲಿನ್ಯಗಳು ಕಣ್ಣಿನ ಒಳಗಡೆ ಹೋಗುವುದರಿಂದ ತಪ್ಪಿಸಬಹುದಾಗಿದೆ.
ನಿಮ್ಮ ಮಗು ಮಲಗುವ ಹಾಸಿಗೆ, ಕೋಣೆಯನ್ನು ಸ್ವಚ್ಚವಾಗಿರಿಸಿ. ಕೋಣೆಯೊಳಗಿನ ಧೂಳು ಕೂಡ ಕಣ್ಣಿನ ಜೊತೆಗೆ ಆರೋಗ್ಯವನ್ನು ಕೆಡಿಸುತ್ತದೆ. ಧೂಳಿನಿಂದ ಕೆಮ್ಮ, ಗಂಟಲು ನೋವಿಗೂ ಕಾರಣವಾಗಬಹುದು.
ಪ್ರತಿದಿನ ಬೆಳಿಗ್ಗೆ ಸುಮಾರು 5 ನಿಮಿಷಗಳ ಕಾಲ ನಿಮ್ಮ ಮಗುವಿನ ಕಣ್ಣುರೆಪ್ಪೆಗಳ ಮೇಲೆ ಬೆಚ್ಚಗಿನ, ತೇವವಾದ ಬಟ್ಟೆಯನ್ನು ಇರಿಸಿ. ನಂತರ ಕಣ್ಣಿನ ರೆಪ್ಪೆಗಳನ್ನು ಮೆತ್ತಗೆ ಮಸಾಜ್ ಮಾಡಿ. ಇದು ಕಣ್ಣಿನ ನೈಸರ್ಗಿಕ ತೇವಾಂಶವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
ಆರೋಗ್ಯಕ್ಕೆ ಸಂಬಂಧಿಸಿದ ಇನ್ನಷ್ಟು ಸುದ್ದಿಗಾಗಿ ಇಲ್ಲಿ ಕ್ಲಿಕ್ ಮಾಡಿ:
Published On - 1:58 pm, Sun, 1 January 23