ಆರೋಗ್ಯ ಗುಣಗಳ ಆಗರ ಹಸಿರು ಸೇಬು; ಇಲ್ಲಿದೆ ಗ್ರೀನ್ ಆಪಲ್ ಉಪಯೋಗದ ಮಾಹಿತಿ
ಪ್ರತಿದಿನ ಒಂದು ಸೇಬುವನ್ನು ಸೇವಿಸುವುದರಿಂದ ವೈದ್ಯರಿಂದ ದೂರವಿರಬಹುದು ಎನ್ನುವ ಮಾತಿದೆ. ಅದು ಕೆವಲ ಕೆಂಪು ಸೇಬುವಿಗೆ ಮಾತ್ರವಲ್ಲ. ಹಸಿರು ಸೇಬುವಿಗೂ ಅನ್ವಯವಾಗುತ್ತದೆ. ಹೀಗಾಗಿ ಹಸಿರು ಸೇಬುವಿನ ಆರೋಗ್ಯ ಗುಣಗಳ ಬಗ್ಗೆ ನೀವು ತಿಳಿದುಕೊಳ್ಳಬೇಕಾದ ಮಾಹಿತಿ ಇಲ್ಲಿದೆ.
Updated on: Feb 04, 2022 | 7:45 AM

ಗ್ರೀನ್ ಆಫಲ್ ಅಥವಾ ಹಸಿರು ಸೇಬು ಆರೋಗ್ಯವನ್ನು ಉತ್ತಮಗೊಳಿಸುವ ಹಣ್ಣಗಳಲ್ಲಿ ಒಂದಾಗಿದೆ. ಇದರಲ್ಲಿರುವ ವಿಟಮಿನ್, ಫೈಬರ್ ಅಂಶಗಳು ಜೀರ್ಣಕ್ರಿಯೆ ಸೇರಿದಂತೆ ಹಲವು ಆರೋಗ್ಯಕ್ಕೆ ಉತ್ತಮವಾದ ಗುಣಗಳನ್ನು ಹೊಂದಿದೆ.

ಹಸಿರು ಸೇಬಿನ ಸೇವನೆಯಿಂದ ದೇಹದಲ್ಲಿ ಚಯಾಪಯ ಕ್ರಿಯೆ ಸರಿಯಾದ ರೀತಿಯಲ್ಲಿ ನಡೆಯಲು ಸಹಾಯ ಮಾಡುತ್ತದೆ. ಅಲ್ಲದೆ ಜೀರ್ಣಕ್ರಿಯೆಗೆ ಅನುವು ಮಾಡಿಕೊಡುತ್ತದೆ.

ದೇಹದಲ್ಲಿ ರಕ್ತವನ್ನು ಶುದ್ಧಿ ಮಾಡಲು ಮತ್ತು ರಕ್ತವನ್ನು ಉತ್ಪತ್ತಿ ಮಾಡಲು ಹಸಿರು ಸೇಬು ನೆರವಾಗುತ್ತದೆ.

ಹಸಿರು ಸೇಬುವಿನಲ್ಲಿ ವಿಟಮಿನ್ ಸಿ ಮತ್ತು ವಿಟಮಿನ್ ಎ ಅಂಶಗಳು ಯಥೇಚ್ಛವಾಗಿರುತ್ತದೆ. ಇವುಗಳು ದೇಹವನ್ನು ಸುಸ್ಥಿತಿಯಲ್ಲಿಡಲು ನೆರವಾಗುತ್ತದೆ.

ಹಸಿರು ಸೇಬು ಚರ್ಮದ ಆರೋಗ್ಯವನ್ನು ಕಾಪಾಡುವಲ್ಲಿ ನೆರವಾಗುತ್ತದೆ. ಸುಕ್ಕುಗಟ್ಟಿದ ಚರ್ಮವನ್ನು ನಿವಾರಿಸುತ್ತದೆ ಜತೆಗೆ ವಯಸ್ಸಾದಂತೆ ಕಾಣುವ ಚರ್ಮವನ್ನು ತಡೆಯುತ್ತದೆ.

ಹಸಿರು ಸೇಬುವಿನಲ್ಲಿರುವ ವಿಟಮಿನ್ ಸಿ ಅಂಶಗಳು ಚರ್ಮದ ಕ್ಯಾನ್ಸರ್ ತಡೆಯಲು ಬಹುಮುಖ್ಯ ಪಾತ್ರವನ್ನು ವಹಿಸುತ್ತದೆ.

ಅಸ್ತಮಾ ನಿಯಂತ್ರಣಕ್ಕೆ ಮತ್ತು ಮಧುಮೇಹವನ್ನು ಸಮತೋಲನದಲ್ಲಿಡಲು ಹಸಿರು ಸೇಬು ನೆರವಾಗುತ್ತದೆ.

ಮೂಳೆಗಳ ಆರೋಗ್ಯವನ್ನು ಕಾಪಾಡಲು ಸಹಾಯ ಮಾಡುವ ಹಸಿರು ಸೇಬು, ಕಣ್ಣಿನ ಕೆಳಗಿನ ಡಾರ್ಕ್ ಸರ್ಕಲ್ಗಳನ್ನೂ ನಿವಾರಿಸುತ್ತದೆ.
























