Physical Weakness: ದೈಹಿಕ ನಿಶ್ಯಕ್ತಿ ಕಾಡುತ್ತಿದೆಯಾ? ಚಿಂತೆ ಬಿಡಿ ಈ 5 ಆಹಾರಗಳನ್ನು ಸೇವಿಸಿ

| Updated By: Pavitra Bhat Jigalemane

Updated on: Feb 05, 2022 | 4:11 PM

ಯಥೇಚ್ಛವಾದ ವಿಟಮಿನ್​, ಮಿನರಲ್ಸ್​​ಗಳಿಂದ ಕೂಡಿರುವ ಬಾಳೆಹಣ್ಣು ಡಯೆಟ್​ಗೆ ಉತ್ತಮ ಆಹಾರವಾಗಿದೆ. ಇದರೊಂದಿಗೆ ದೇಹದ ಬಳಲಿಕೆಯನ್ನೂ ಕಡಿಮೆಗೊಳಿಸುತ್ತದೆ.

Physical Weakness: ದೈಹಿಕ ನಿಶ್ಯಕ್ತಿ ಕಾಡುತ್ತಿದೆಯಾ? ಚಿಂತೆ ಬಿಡಿ ಈ 5 ಆಹಾರಗಳನ್ನು ಸೇವಿಸಿ
ಸಾಂಕೇತಿಕ ಚಿತ್ರ
Follow us on

ಇತ್ತೀಚಿನ ದಿನಗಳಲ್ಲಿ ವರ್ಕ್​ ಫ್ರಾಮ್​ ಹೋಮ್​, ಸಾಂಕ್ರಾಮಿಕ ರೋಗದ ಭೀತಿ, ವೈರಲ್​ ಫೀವರ್​ ಹೀಗೆ ಇಂದಿನ ಜನತೆ ಒಂದಲ್ಲ ಒಂದು ತೊಳಲಾಟಕ್ಕೆ ಸಿಲುಕಿ ಒದ್ದಾಡುವಂತಹ ಪರಿಸ್ಥಿತಿಯಿದೆ. ಅತಿಯಾದ ಕೆಲಸ, ಒತ್ತಡದಿಂದಾಗಿ (Stress) ದೇಹಕ್ಕೆ ಸರಿಯಾದ ಆಹಾರ ಪೂರೈಕೆಯಾಗದೆ ಸುಸ್ತು, ಬಳಲಿಕೆ, ನಿಶ್ಯಕ್ತಿ (Physical Weakness) ಕಾಡುತ್ತದೆ. ಇದರಿಂದ ಹಲವು ಆರೋಗ್ಯ ಸಮಸ್ಯೆಗಳೂ ಕೂಡ ಕಾಡುತ್ತದೆ. ಈ ರೀತಿ ನಿಶ್ಯಕ್ತಿ ವಯಸ್ಸಾದವರು, ಯುವ ಜನರಲ್ಲೂ ಕಾಡುತ್ತಿದೆ. ಇದಕ್ಕೆ ಹಲವು ಕಾರಣಗಳಿವೆ ಧೂಮಪಾನ, ಸರಿಯಾಗಿ ನೀರು ಕುಡಿಯದೇ ಇರುವುದು, ಅತಿಯಾದ ಕೆಲಸ, ಪೋಷಕಾಂಶಗಳ ಕೊರತೆ, ಕೆಫಿನ್​ ಅಂಶವಿರುವ ಚಹಾ, ಕಾಫಿಗಳ ಅಧಿಕ ಸೇವನೆ ಈ ರೀತಿ ದೈಹಿಕ ಬಳಲಿಕೆಗೆ ಕಾರಣವಾಗುತ್ತದೆ. ಅಂತಹ ಸಂದರ್ಭಗಳಲ್ಲಿ ಸರಿಯಾದ ಆಹಾರ ಸೇವನೆ ಅಗತ್ಯವಾಗಿದೆ. ಸರಿಯಾದ ಸಮಯದಲ್ಲಿ ಪೌಷ್ಟಿಕ ಆಹಾರ ಸೇವನೆ, ಸರಿಯಾದ ಯೋಗ, ವ್ಯಾಯಾಮ ಸದೃಢ ದೇಹ ಮತ್ತು ಆರೋಗ್ಯಯುತ ಜೀವನಕ್ಕೆ ದಾರಿಯಾಗುತ್ತದೆ.  ಹೀಗಾಗಿ ನೀವು ಈ ಆಹಾರಗಳನ್ನು ನೀವು ಸೇವಿಸಿದರೆ ನಿಮ್ಮ ದೇಹ ನಿಶ್ಯಕ್ತಿಯಿಂದ ಮುಕ್ತಗೊಳ್ಳುತ್ತದೆ.

ಮೊಟ್ಟೆ:
ದಿನಕ್ಕೊಂದು ಮೊಟ್ಟೆ ಆರೋಗ್ಯವನ್ನು ಸುಧಾರಿಸುತ್ತದೆ. ಮೊಟ್ಟೆಯಲ್ಲಿರುವ ವಿಟಮಿನ್​ ಎ. ಬಿ12, ಸೆಲೇನಿಯಂ ಅಂಶಗಳು ದೇಹದಲ್ಲಿ ಪ್ರತಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ನಿಮ್ಮ ನಿಶ್ಯಕ್ತಿಯ ಸಮಸ್ಯೆಯನ್ನೂ ನಿವಾರಿಸುತ್ತದೆ. ಮೊಟ್ಟೆಯಲ್ಲಿರುವ ಪ್ರೊಟೀನ್​ ಅಂಶಗಳು ಕಣ್ಣಿನ ಆರೋಗ್ಯವನ್ನೂ ಕಾಪಾಡುತ್ತದೆ. ಜತೆಗೆ ಸ್ನಾಯುಗಳನ್ನು ಬಲಪಡಿಸಲು ಕೂಡ ನೆರವಾಗುತ್ತದೆ. ಹೀಗಾಗಿ ನಿಮಗೆ ಪರಿಪೂರ್ಣ ಆಹಾರವಾಗುವುದರಲ್ಲಿ ಎರಡು ಮಾತಿಲ್ಲ. ದೈಹಿಕ ನಿಶ್ಯಕ್ತಿಯನ್ನು ಕೂಡ ಸುಧಾರಿಸುತ್ತದೆ.

ಪನ್ನೀರ್​:
ಸಮೃದ್ದವಾದ ಪ್ರೊಟೀನ್​ ಮತ್ತು ಮ್ಯಾಗ್ನೀಶಿಯಂ ಗುಣಗಳನ್ನು ಹೊಂದಿರುವ ಪನ್ನೀರ್​ ಸಸ್ಯಾಹಾರಿಗಳಿಗೆ ಉತ್ತಮ ಆಹಾರವಾಗಿದೆ.  ದೇಹದಲ್ಲಿನ ಬಳಲಿಕೆಯನ್ನು ಕಡಿಮೆ ಮಾಡಿ ದೇಹವನ್ನು ಸುರಕ್ಷಿವಾಗಿಡುತ್ತದೆ. ಹೀಗಾಗಿ ಪನ್ನೀರ್​ ದೇಹದ ಸುಸ್ತನ್ನು ಸುಧಾರಿಸುತ್ತದೆ,

ಓಟ್ಸ್​​​:
ಓಟ್ಸ್​​ನ ಓಟ್​ಮೀಲ್​ ಸೇವನೆ ದೇಹವನ್ನು ಅಶಕ್ತತೆಯಿಂದ ಕಾಪಾಡುತ್ತದೆ. ಓಟ್ಸ್​ಅನ್ನು ಪ್ರತಿದಿನ ಬೆಳಗ್ಗೆ ಉಪಹಾರದ ರೀತಿಯಲ್ಲಿ ಸೇವಿಸಿದರೆ ದೇಹವೂ ಆರೋಗ್ಯವಾಗಿರುತ್ತದೆ. ಜತೆಗೆ ಅತಿಯಾದ ತೂಕ ಇಳಿಕೆಗೂ ನೆರವಾಗುತ್ತದೆ.

ಬಾಳೆಹಣ್ಣು:
ಯಥೇಚ್ಛವಾದ ವಿಟಮಿನ್​, ಮಿನರಲ್ಸ್​​ಗಳಿಂದ ಕೂಡಿರುವ ಬಾಳೆಹಣ್ಣು ಡಯೆಟ್​ಗೆ ಉತ್ತಮ ಆಹಾರವಾಗಿದೆ. ಇದರೊಂದಿಗೆ ದೇಹದ ಬಳಲಿಕೆಯನ್ನೂ ಕಡಿಮೆಗೊಳಿಸುತ್ತದೆ. ಬಾಳೆಹಣ್ಣಿನ ಮಿಲ್ಕ್​ಶೇಕ್ಅನ್ನೂ ಕೂಡ ಮಾಡಿ ಸೇವಿಸಬಹುದು.

ಡ್ರೈ ಪ್ರೂಟ್ಸ್​:
ಬಾದಾಮಿ, ಪಿಸ್ತಾ, ಗೋಡಂಬಿಯಂತಹ ಡ್ರೈ ಪ್ರೂಟ್ಸ್​ಗಳು ದೇಹಕ್ಕೆ ಶಕ್ತಿಯನ್ನು ನೀಡುತ್ತದೆ. ದೇಹದಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವ ಮೂಲಕ ನಿಶ್ಯಕ್ತಿಯನ್ನು ಕಡಿಮೆಗೊಳಿಸುತ್ತದೆ.

ನೀರಿನ ಸೇವನೆ:
ದೇಹಕ್ಕೆ ಸರಿಯಾದ ಪ್ರಮಾಣದಲ್ಲಿ ನೀರು ಪೂರೈಕೆಯಾಗದಿದ್ದರೆ ಸುಸ್ತು ಕಾಣಿಸಿಕೊಳ್ಳುತ್ತದೆ. ದೇಹದಲ್ಲಿ ಉಷ್ಣತೆ ಜಾಸ್ತಿಯಾದಾಗ ದೇಹ ನಿರ್ಜಲೀಕರಣಗೊಳ್ಳುತ್ತದೆ. ಅಂತಹ ಸಂದರ್ಭಗಳಲ್ಲಿ ಹೆಚ್ಚು ನೀರು ಬೇಕಾಗುತ್ತದೆ. ಏಳನೀರು ಅಥವಾ ನೀರು ಯಾವುದನ್ನು ಸೇವಿಸಿದರೂ ದೇಹಕ್ಕೆ ಉತ್ತಮ ಎನ್ನುತ್ತಾರೆ ತಜ್ಞರು.

ಇದನ್ನೂ ಓದಿ:

Pumpkin: ರೋಗ ನಿರೋಧಕ ಶಕ್ತಿ ವೃದ್ಧಿಗೆ ಸಹಕಾರಿ ಕುಂಬಳಕಾಯಿ

Published On - 4:11 pm, Sat, 5 February 22