AQI
Sign In

By signing in or creating an account, you agree with Associated Broadcasting Company's Terms & Conditions and Privacy Policy.

Masala Tea: ಚಳಿಗಾಲದಲ್ಲಿ ಮಸಾಲ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿಗೆ ಗೊತ್ತಾ?

Health Tips: ಚಹಾಗೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜಾಯಿಕಾಯಿ, ಕೇಸರಿ ಮತ್ತು ಶುಂಠಿಯಂತಹ ಮಸಾಲೆಗಳನ್ನು ಸೇರಿಸಿದರೆ ಆ ಚಹಾ ದೇಹವನ್ನು ಬೆಚ್ಚಗಾಗಿಸುತ್ತದೆ. ಮಸಾಲ ಟೀಯನ್ನು ಸೇವಿಸುವುದರಿಂದ ಏನೆಲ್ಲ ಉಪಯೋಗವಿದೆ ಎಂಬ ಮಾಹಿತಿ ಇಲ್ಲಿದೆ.

Masala Tea: ಚಳಿಗಾಲದಲ್ಲಿ ಮಸಾಲ ಟೀ ಕುಡಿಯುವುದರಿಂದ ಆರೋಗ್ಯಕ್ಕೆ ಏನೆಲ್ಲ ಉಪಯೋಗಗಳಿಗೆ ಗೊತ್ತಾ?
ಮಸಾಲ ಚಹಾ
TV9 Web
| Updated By: ಸುಷ್ಮಾ ಚಕ್ರೆ|

Updated on: Feb 04, 2022 | 7:28 PM

Share

ಚಳಿಗಾಲದಲ್ಲಿ ಆದಷ್ಟೂ ಬಿಸಿ-ಬಿಸಿಯಾದ ಪಾನೀಯ, ಬಿಸಿ ಊಟ ಮಾಡುವುದು ಆರೋಗ್ಯಕ್ಕೆ ಬಹಳ ಒಳ್ಳೆಯದು. ಬಿಸಿಯಾದ ಆಹಾರ ನಮ್ಮ ದೇಹವನ್ನು ಒಳಗಿನಿಂದ ಬೆಚ್ಚಗಿಡುತ್ತವೆ. ಚಳಿಗಾಲದಲ್ಲಿ ನೀವು ಕುಡಿಯುವ ಚಹಾಕ್ಕೆ ಕೆಲವು ಮಸಾಲೆಗಳನ್ನು ಸೇರಿಸುವುದು ನಿಮ್ಮ ಆರೋಗ್ಯಕ್ಕೆ ತುಂಬ ಪ್ರಯೋಜನಕಾರಿ ಎಂಬ ವಿಷಯ ನಿಮಗೆ ಗೊತ್ತೇ? ಚಳಿಗಾಲದಲ್ಲಿ ಮಸಾಲೆಯುಕ್ತ ಚಹಾದ (Masala Chai) ಬಿಸಿ ಕಪ್ ನಿಮ್ಮ ದೇಹಕ್ಕೆ ಅಗತ್ಯವಾದ ಉಷ್ಣತೆಯನ್ನು ಒದಗಿಸುತ್ತದೆ. ಚಹಾಗೆ ದಾಲ್ಚಿನ್ನಿ, ಲವಂಗ, ಏಲಕ್ಕಿ, ಜಾಯಿಕಾಯಿ, ಕೇಸರಿ ಮತ್ತು ಶುಂಠಿಯಂತಹ ಮಸಾಲೆಗಳನ್ನು ಸೇರಿಸಿದರೆ ಆ ಚಹಾ ದೇಹವನ್ನು ಬೆಚ್ಚಗಾಗಿಸುತ್ತದೆ. ಹಾಗೇ, ಚಯಾಪಚಯ ಮತ್ತು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.

ಮಸಾಲೆ ಚಹಾ ಇಷ್ಟಪಡುವವರು ಚಹಾಕ್ಕೆ ಏಲಕ್ಕಿ, ದಾಲ್ಚಿನ್ನಿ, ಶುಂಠಿ, ಲವಂಗ, ಜಾಯಿಕಾಯಿ ಮುಂತಾದ ಅನೇಕ ಮಸಾಲೆಗಳನ್ನು ಸೇರಿಸಿಕೊಳ್ಳಬಹುದು. ಮಸಾಲೆ ಚಹಾವನ್ನು ಒಂದೇ ಮಸಾಲೆಯೊಂದಿಗೆ (ಶುಂಠಿ ಅಥವಾ ಲವಂಗದಂತಹ) ಅಥವಾ ಹಲವಾರು ಮಸಾಲೆಗಳ ಮಿಶ್ರಣ ಮಾಡಿ ತಯಾರಿಸಬಹುದು. ಶುಂಠಿ ಚಹಾ, ಗ್ರೀನ್ ಟೀ, ಬ್ಲಾಕ್ ಟೀ, ಲೆಮನ್ ಟೀ ಹೀಗೆ ಹಲವಾರು ಟೀಗಳಿವೆ. ಅವೆಲ್ಲವೂ ಆರೋಗ್ಯಕ್ಕೆ ಒಳ್ಳೆಯದೇ. ಆದರೆ, ಚಳಿಗಾಲಕ್ಕೆ ಮಸಾಲೆ ಟೀ ನಿಮ್ಮ ಆರೋಗ್ಯಕ್ಕೆ ಇನ್ನಷ್ಟು ಒಳ್ಳೆಯದು. ಶುಂಠಿಯನ್ನು ಪ್ರಾಚೀನ ಕಾಲದಿಂದಲೂ ಚಹಾದಲ್ಲಿ ಬಳಸಲಾಗುತ್ತಿತ್ತು. ಈಗ ಪ್ರಪಂಚದಾದ್ಯಂತ ಚಹಾಗಳಲ್ಲಿ ಶುಂಠಿಯನ್ನು ಬಳಸಲಾಗುತ್ತಿದೆ.

ದಾಲ್ಚಿನ್ನಿ ಚಹಾ, ದಾಲ್ಚಿನ್ನಿ ಸಾಮಾನ್ಯವಾಗಿ ಬ್ಲಾಕ್​ ಟೀಗೆ ಸುವಾಸನೆ ನೀಡಲು ಬಳಸಲಾಗುತ್ತದೆ. ಚಳಿಗಾಲದಲ್ಲಿ ಮಸಾಲೆಯುಕ್ತ ಚಹಾದ ಕೆಲವು ಪ್ರಯೋಜನಗಳೆಂದರೆ..

ರೋಗ ನಿರೋಧಕ ಶಕ್ತಿ ಹೆಚ್ಚಿಸುತ್ತದೆ: ಮಸಾಲೆ ಟೀಯಲ್ಲಿ ಬಳಸಲಾಗುವ ಮಸಾಲೆಗಳು ನಮ್ಮ ದೇಹದ ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತವೆ. ಹಾಗೇ, ಶೀತ ಮತ್ತು ಜ್ವರದ ಲಕ್ಷಣಗಳ ವಿರುದ್ಧ ಹೋರಾಡುತ್ತದೆ.

ತೂಕ ಇಳಿಸಲು ಸಹಕಾರಿ: ಮಸಾಲೆಗಳಿರುವ ಟೀಯಲ್ಲಿ ಕಡಿಮೆ ಪ್ರಮಾಣದ ಕ್ಯಾಲೊರಿಗಳು ಇರುವುದರಿಂದ ಮತ್ತು ಹೆಚ್ಚಿನ ನ್ಯೂಟ್ರಿಷನಲ್ ಅಂಶಗಳು ಇರುವುದರಿಂದ ತೂಕ ಇಳಿಸಿಕೊಳ್ಳಲು ಸಹಕಾರಿಯಾಗಲಿದೆ. ಮಸಾಲೆಗಳನ್ನು ಹಾಕಿ ಕುದಿಸಿದ ಟೀಗೆ ಹಾಲಿನ ಬದಲು ಒಂದೆರಡು ಹನಿ ಲಿಂಬೆ ರಸ ಹಿಂಡಿ ಕುಡಿದರೆ ಹಸಿವೂ ನಿಯಂತ್ರಣವಾಗುತ್ತದೆ ಹಾಗೇ ತೂಕವೂ ಕಡಿಮೆಯಾಗುತ್ತದೆ.

ರಕ್ತ ಸಂಚಲನಕ್ಕೆ ಸಹಕಾರಿ: ದಿನನಿತ್ಯ ಸೂಕ್ತ ಪ್ರಮಾಣದಲ್ಲಿ ನಾವು ದೇಹಕ್ಕೆ ವ್ಯಾಯಾಮ ನೀಡದ ಕಾರಣದಿಂದ ನಮ್ಮ ದೇಹದಲ್ಲಿ ಸರಿಯಾಗಿ ರಕ್ತ ಸಂಚಲನ ಉಂಟಾಗುವುದಿಲ್ಲ. ಅದರಲ್ಲೂ ಚಳಿಗಾಲದಲ್ಲಿ ರಕ್ತ ಸಂಚಲನ ಬಹಳ ಕಡಿಮೆ ಇರುತ್ತದೆ. ಹೀಗಾಗಿ, ಮಸಾಲೆ ಪದಾರ್ಥಗಳನ್ನು ಬಳಸಿ ಮಾಡಲಾದ ಟೀ ಸೇವಿಸಿದರೆ ರಕ್ತದ ಸಂಚಲನ ಹೆಚ್ಚಾಗುವುದು ಮಾತ್ರವಲ್ಲದೆ ರಕ್ತದಲ್ಲಿನ ಸಕ್ಕರೆ ಪ್ರಮಾಣವೂ ಕಡಿಮೆಯಾಗುತ್ತದೆ.

ಜೀರ್ಣ ಕ್ರಿಯೆಗೆ ಸಹಕಾರಿ: ಚಳಿಗಾಲದಲ್ಲಿ ಎಣ್ಣೆ ಪದಾರ್ಥಗಳನ್ನು ಸೇವಿಸುವುದರಿಂದ ಮತ್ತು ಘನ ಆಹಾರವನ್ನು ಸೇವಿಸುವುದರಿಂದ ಜೀರ್ಣ ಕ್ರಿಯೆ ಸರಿಯಾಗಿ ಆಗುವುದಿಲ್ಲ. ಹಾಗೇ, ಒಂದೇ ಕಡೆ ಕುಳಿತಿರುವುದರಿಂದ ದೇಹಕ್ಕೆ ವ್ಯಾಯಾಮವೂ ಇರುವುದಿಲ್ಲ. ಹೀಗಾಗಿ, ಶುಂಠಿ, ಪುದೀನ, ಲಿಂಬೆ ಹುಳಿ ಹಾಕಿದ ಟೀ ಕುಡಿಯುವುದರಿಂದ ಜೀರ್ಣ ಕ್ರಿಯೆ ಚೆನ್ನಾಗಿ ಆಗುತ್ತದೆ. ಇದರಿಂದ ಗ್ಯಾಸ್ಟ್ರಿಕ್ ಸಮಸ್ಯೆಯೂ ಕಡಿಮೆಯಾಗುತ್ತದೆ.

ಇದನ್ನೂ ಓದಿ: Health Tips: ನೀವು ಕಾಫಿ, ಜ್ಯೂಸ್​ ಪ್ರಿಯರಾ?; ಪಾನೀಯ ಸೇವಿಸುವಾಗ ಈ 5 ತಪ್ಪನ್ನು ಎಂದೂ ಮಾಡಬೇಡಿ!

Weight Loss Tips: ಬೇಗ ತೂಕ ಕಡಿಮೆಯಾಗಲು ಮೊಟ್ಟೆ ತಿನ್ನಬೇಕಾ? ಪನೀರ್​​ ಒಳ್ಳೆಯದಾ?

ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ದರ್ಶನ್ ನಟನೆಯ ‘ದಿ ಡೆವಿಲ್’ ಸಿನಿಮಾ ನೋಡಿ ಫಿದಾ ಆದ ಪೂಜಾ ಗಾಂಧಿ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ರೈತರ ಮಕ್ಕಳಿಗೆ ಹೆಣ್ಣು ಕೊಡಲು ಹಿಂದೇಟು: ಯುವಕರಿಂದ ವಿನೂತನ ಪ್ರತಿಭಟನೆ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ದೇಶಿ ಟಿ20 ಟೂರ್ನಿಯಲ್ಲಿ ಹ್ಯಾಟ್ರಿಕ್ ವಿಕೆಟ್ ಪಡೆದ ನಿತೀಶ್ ರೆಡ್ಡಿ
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ನನ್ನ ಹಿಂದೆ ಯಾರೂ ಬರೋದು ಬೇಡ: ಡಿಕೆ ಶಿವಕುಮಾರ್​​ ಹೀಗಂದಿದ್ದೇಕೆ?
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಆಂಧ್ರದಲ್ಲಿ ಬಸ್ ಅಪಘಾತ; ಪ್ರಧಾನಿಯಿಂದ 2 ಲಕ್ಷ ರೂ. ಪರಿಹಾರ ಘೋಷಣೆ
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ಮೈಸೂರಿನ ಅಭಿಮಾನಿಗಳಿಗೆ ‘ದಿ ಡೆವಿಲ್’ ಸಿನಿಮಾ ಇಷ್ಟ ಆಯ್ತಾ? ವಿಡಿಯೋ ನೋಡಿ..
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ರೈತರಿಗೆ ಕನ್ಯಾ ಕೊಡುತ್ತಿಲ್ಲ ಎಂದು ಡಿಸಿ ಮುಂದೆ ಅಳಲು ತೋಡಿಕೊಂಡ ಯುವಕ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ಇನ್ಸ್​​ಸ್ಟಾದಲ್ಲಿ ನೋಡಿ ಓಡೋಡಿ ಬಂದು ಪ್ರಿಯಕರನ ಮದ್ವೆ ತಡೆದ ಪ್ರೇಯಿಸಿ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದರ್ಶನ್ ಪತ್ನಿ ವಿಜಯಲಕ್ಷ್ಮಿಗೆ ಧನ್ಯವಾದ ಹೇಳಿದ ‘ಡೆವಿಲ್’ ನಟಿ ರಚನಾ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ
ದುರಹಂಕಾರದ ಫೈಟ್: ಬಿಗ್ ಬಾಸ್ ಮನೆಯಲ್ಲಿ ರಜತ್, ಅಶ್ವಿನಿ ಗೌಡ, ಚೈತ್ರಾ ಜಗಳ