ಬೆಳಗ್ಗೆ 8 ಗಂಟೆಯೊಳಗೆ ಟಿಫಿನ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ? ಆಘಾತಕಾರಿ ಸಂಗತಿಗಳು ಇಲ್ಲಿವೆ

|

Updated on: Jan 19, 2024 | 6:06 AM

morning Tiffin time:: ಹೃದ್ರೋಗ ಕಡಿಮೆ ಮಾಡುವಲ್ಲಿ ಊಟದ ಸಮಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ರಾತ್ರಿ ಬೇಗ ಊಟ ಮಾಡಿ ಬೆಳಗ್ಗೆ 8 ಗಂಟೆಯ ಮೊದಲು ಟಿಫಿನ್ ಮಾಡುವವರಿಗೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಬೆಳಗ್ಗೆ 8 ಗಂಟೆಯೊಳಗೆ ಟಿಫಿನ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ? ಆಘಾತಕಾರಿ ಸಂಗತಿಗಳು ಇಲ್ಲಿವೆ
ಬೆಳಗ್ಗೆ 8 ಗಂಟೆಯೊಳಗೆ ಟಿಫಿನ್ ಮಾಡದಿದ್ದರೆ ಏನಾಗುತ್ತದೆ ಗೊತ್ತಾ? ಆಘಾತಕಾರಿ ಸಂಗತಿಗಳು ಇಲ್ಲಿವೆ
Follow us on

ನಮ್ಮಲ್ಲಿ ಹಲವರು ಸೋಮಾರಿತನ ಅಥವಾ ಇತರ ಕಾರಣಗಳಿಂದ ಬ್ರೇಕ್​ಫಾಸ್ಟ್​​ ಅಥವಾ ಬೆಳಗಿನ ಉಪಹಾರವನ್ನು ನಿರ್ಲಕ್ಷಿಸುತ್ತಾರೆ. ಆದರೆ ಬೆಳಿಗ್ಗೆ ಟಿಫಿನ್ ಮಾಡದಿದ್ದರೆ ಅದರಿಂದ ಅನೇಕ ಆರೋಗ್ಯ ಸಮಸ್ಯೆಗಳು ಬರಬಹುದು ಎಂದು ತಜ್ಞರು ಈಗಾಗಲೇ ಹೇಳಿದ್ದಾರೆ. ಬೆಳಿಗ್ಗೆ ಟಿಫಿನ್ ಮಾಡದಿರುವುದು ಹೃದಯದ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ ಎಂದು ಹಲವು ಸಂಶೋಧನೆಗಳು ಸಾಬೀತುಪಡಿಸಿವೆ.

ಬೆಳಗ್ಗೆ ಟಿಫಿನ್ ತೆಗೆದುಕೊಳ್ಳುವುದು ಎಷ್ಟು ಮುಖ್ಯವೋ, ಅದನ್ನು ಸೇವಿಸುವ ಸಮಯವೂ ಅಷ್ಟೇ ಮುಖ್ಯ ಎನ್ನುತ್ತಾರೆ ತಜ್ಞರು. ರಾತ್ರಿ ಬೇಗ ತಿಂದರೆ ಆರೋಗ್ಯಕ್ಕೆ ಒಳ್ಳೆಯದು ಆದರೆ ಬೆಳಗ್ಗೆ ತಡವಾಗಿ ಟಿಫಿನ್ ಮಾಡುವುದು ಹಾನಿಕಾರಕ ಎನ್ನುತ್ತಾರೆ ತಜ್ಞರು. ಬೆಳಗಿನ ಸಮಯದಲ್ಲಿ ತಡವಾಗಿ ಟಿಫಿನ್ ಸೇವಿಸುವವರಲ್ಲಿ ಹೃದ್ರೋಗದ ಅಪಾಯ ಹೆಚ್ಚುತ್ತದೆ ಎಂದು ಇತ್ತೀಚಿನ ಅಧ್ಯಯನವೊಂದು ತಿಳಿಸಿದೆ.

ಫ್ರೆಂಚ್ ಸಂಶೋಧನಾ ಸಂಸ್ಥೆ ಮತ್ತು ಕೃಷಿ, ಆಹಾರ ಮತ್ತು ಪರಿಸರ ರಾಷ್ಟ್ರೀಯ ಸಂಶೋಧನಾ ಸಂಸ್ಥೆ ನಡೆಸಿದ ಸಂಶೋಧನೆಯಲ್ಲಿ ಈ ವಿಷಯ ಬಹಿರಂಗವಾಗಿದೆ. ಬೆಳಿಗ್ಗೆ 9 ಗಂಟೆಯ ನಂತರ ಮೊದಲ ಊಟವನ್ನು (ಬ್ರೇಕ್​ಫಾಸ್ಟ್​​) ಸೇವಿಸುವವರಲ್ಲಿ ಹೃದ್ರೋಗದ ಅಪಾಯವು ಹೆಚ್ಚಾಗುತ್ತದೆ ಎಂದು ತಿಳಿದುಬಂದಿದೆ. ಪ್ರತಿ ಗಂಟೆಯೂ ತಡವಾದಾಗ ಹೃದ್ರೋಗದ ಅಪಾಯವು ಶೇಕಡಾ 6 ರಷ್ಟು ಹೆಚ್ಚಾಗುತ್ತದೆ ಎಂದು ಸಂಶೋಧಕರು ಹೇಳುತ್ತಾರೆ.

Also Read: ಯಾವ ಭಂಗಿಯಲ್ಲಿ ನಿದ್ರೆ ಮಾಡಬೇಕು: ಯಾವ ಮಲಗುವ ಭಂಗಿಯು ಆರೋಗ್ಯಕ್ಕೆ ಒಳ್ಳೆಯದು?

ಸಂಶೋಧನೆಯ ಭಾಗವಾಗಿ, 2009 ರಿಂದ 2022 ರವರೆಗೆ ಡೇಟಾವನ್ನು ಸಂಗ್ರಹಿಸಲಾಗಿದೆ. ಈ ಉದ್ದೇಶಕ್ಕಾಗಿ oಂದು ಲಕ್ಷಕ್ಕೂ ಹೆಚ್ಚು ಜನರ ಮಾದರಿಗಳನ್ನು ಸಂಗ್ರಹಿಸಲಾಗಿದೆ. ತಡರಾತ್ರಿ ಊಟ ಮಾಡುವವರು ಅಥವಾ ಬೆಳಗಿನ ಉಪಾಹಾರವನ್ನು ತಡವಾಗಿ ಸೇವಿಸುವವರು ಹೃದ್ರೋಗಕ್ಕೆ ತುತ್ತಾಗುವ ಸಾಧ್ಯತೆ ಹೆಚ್ಚು ಎಂದು ಸಂಶೋಧನೆಯಿಂದ ತಿಳಿದುಬಂದಿದೆ. ಆದಾಗ್ಯೂ, ರಾತ್ರಿಯಲ್ಲಿ ಹೆಚ್ಚು ಸಮಯ ಉಪವಾಸ ಮಾಡುವುದರಿಂದ ಸ್ಟ್ರೋಕ್‌ನಂತಹ ಸೆರೆಬ್ರೊವಾಸ್ಕುಲರ್ ಕಾಯಿಲೆಗಳ ಅಪಾಯವನ್ನು ಕಡಿಮೆ ಮಾಡಬಹುದು.

ರಾತ್ರಿ 9 ಗಂಟೆಯ ನಂತರ ತಿನ್ನುವ ಮಹಿಳೆಯರಲ್ಲಿ ಪಾರ್ಶ್ವವಾಯು ಮತ್ತು ಸೆರೆಬ್ರೊವಾಸ್ಕುಲರ್ ಕಾಯಿಲೆಯ ಅಪಾಯವು 8 ಗಂಟೆಯ ಮೊದಲು ತಿನ್ನುವವರಿಗೆ ಹೋಲಿಸಿದರೆ 28 ಪ್ರತಿಶತದಷ್ಟು ಕಡಿಮೆಯಾಗಿದೆ ಎಂದು ಕಂಡುಬಂದಿದೆ. ಹೃದ್ರೋಗ ಕಡಿಮೆ ಮಾಡುವಲ್ಲಿ ಊಟದ ಸಮಯ ಪ್ರಮುಖ ಪಾತ್ರ ವಹಿಸುತ್ತದೆ ಎನ್ನುತ್ತಾರೆ ತಜ್ಞರು. ಹಾಗಾಗಿ ರಾತ್ರಿ ಬೇಗ ಊಟ ಮಾಡಿ ಬೆಳಗ್ಗೆ 8 ಗಂಟೆಯ ಮೊದಲು ಟಿಫಿನ್ ಮಾಡುವವರಿಗೆ ಆರೋಗ್ಯ ಸಮಸ್ಯೆಗಳು ಬರುವ ಸಾಧ್ಯತೆ ಕಡಿಮೆ ಎಂದು ತಜ್ಞರು ಸಲಹೆ ನೀಡಿದ್ದಾರೆ.

ಆರೋಗ್ಯಕ್ಕೆ ಸಂಬಂಧಿಸಿದ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ