Kannada News Health Eight things you should not do after taking bath to avoid loss of wealth know the Astro Tips in kannada
ಸ್ನಾನದ ಬಳಿಕ ಈ 8 ಕೆಲಸ ಮಾಡಬಾರದು: ಬಾತ್ ರೂಮ್ನಲ್ಲಿ ಏನು ಮಾಡಬೇಕು, ಮಾಡಬಾರದು ಎಂಬುದರ ಬಗ್ಗೆ ಇಲ್ಲಿದೆ ಟಿಪ್ಸ್
ಸ್ನಾನ ಮಾಡಿದ ಬಳಿಕ ಸ್ನಾನದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸ್ನಾನದ ಕೋಣೆಯನ್ನು ಕೊಳಕಾಗಿ ಇಟ್ಟುಕೊಳ್ಳಬೇಡಿ. ಇಲ್ಲವಾದಲ್ಲಿ ರಾಹು, ಕೇತು, ಶನಿ ಗ್ರಹಗಳ ಪ್ರಭಾವ ಅಲ್ಲಿ ಮನೆ ಮಾಡುವುದು ಖಚಿತ. ಮೂರೂ ಗ್ರಹಗಳು ಒಟ್ಟಿಗೆ ಸೇರಿದರೆ ಋಣಾತ್ಮಕತೆ ಅಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ.
ಸ್ನಾನ ಮಾಡಿದ ಬಳಿಕ ಈ 8 ಕಾರ್ಯ ಅಸಲು ಮಾಡಲೇಬಾರದು; ಇಲ್ಲದಿದ್ದರೆ ಭಾರೀ ನಷ್ಟ ಉಂಟಾಗುತ್ತದೆ! ಏನದು?
Follow us on
Astro Tips: ಬಹುತೇಕ ಮಂದಿ ತಮ್ಮ ಮನೆಯನ್ನು ಹಾಗೂ ದೇಹವನ್ನು ಸದಾ ಶುಚಿಯಾಗಿಟ್ಟುಕೊಳ್ಳಲು ಹಾತೊರೆಯುತ್ತಾರೆ. ಆದರೆ ಕೆಲವರು ಮಾತ್ರ ಅದರಲ್ಲಿ ಯಶಸ್ವಿಯಾಗುತ್ತಾರೆ. ಕೆಲವರಂತೂ ತಮ್ಮ ಸ್ನಾನದ ಮನೆಯನ್ನು ಅತ್ಯಂತ ಕೊಳಕಾಗಿ ಇಟ್ಟುಕೊಂಡಿರುತ್ತಾರೆ. ಹಾಗೆಯೇ ಕೆಲವರು ತಮ್ಮ ದೇಹಕ್ಕೆ ಸ್ನಾನದ ಕರುಣೆ ತೋರದೆ, ದುರ್ಗಂಧ ಬೀರುತ್ತಾ ಇರುತ್ತಾರೆ. ಆದರೆ ತಮ್ಮ ಮನೆ ಸ್ವಚ್ಛ ಭಾರತ್ ಎಂದೂ, ತಮ್ಮ ದೇಹ ದೇಗುಲದಲ್ಲಿದ್ದಂತೆ ಪರಿಮಳ ಬೀರುತ್ತದೆ ಎಂದು ಬಡಾಯಿ ಕೊಚ್ಚಿಕೊಳ್ಳುತ್ತಾರೆ. ಆದರೆ ಸ್ನಾನದ ಕೋಣೆ ಶುಚಿಯಾಗಿ ಇಟ್ಟುಕೊಟ್ಟುಕೊಳ್ಳುವುದು ವಾಸ್ತು ಪ್ರಕಾರ ಅನಿವಾರ್ಯವೂ ಹೌದು. ಸ್ನಾನದ ಕೋಣೆಯಲ್ಲಿ ವಾಸ್ತು ಪಾಲಿಸದೆ ಹಣಕಾಸು ನಷ್ಟಕ್ಕೆ ತುತ್ತಾಗುತ್ತಾರೆ. ಆ ಮನೆ ಮತ್ತು ಮನೆಯಾತನ ಪ್ರಗತಿಗೆ ವಾಸ್ತು ಪಾಲಿಸದಿರುವುದು ತೊಡಕಾಗುತ್ತದೆ ಎನ್ನುತ್ತಾರೆ ವಾಸ್ತು ತಜ್ಞರು. ಹಾಗಾಗಿ ಬಾತ್ ರೂಮ್ನಲ್ಲಿ ಏನು ಮಾಡಬೇಕು/ ಏನು ಮಾಡಬಾರದು ಎಂಬುದರ ಬಗ್ಗೆ ಒಂದಷ್ಟು ಟಿಪ್ಸ್ ಇಲ್ಲಿ ನೀಡಲಾಗಿದೆ.
ಸ್ನಾನ ಮಾಡಿದ ಬಳಿಕ ಬಕೆಟ್ನಲ್ಲಿ ನೀರು ಬಿಡಬಾರದು. ಹಾಗೆ ಬಕೆಟ್ನಲ್ಲಿ ಉಳಿದ ನೀರಿಂದ ಯಾರಾದರೂ ಸ್ನಾನ ಮಾಡಿದರೆ ಅವರಿಗೆ ಜೀವನದಲ್ಲಿ ಕೆಟ್ಟದ್ದಾಗುತ್ತದೆ. ಅಷ್ಟೇ ಅಲ್ಲ… ನೀರು ಬಿಟ್ಟು ಬಂದ ವ್ಯಕ್ತಿಯ ಮೇಲೂ ಕೆಟ್ಟ ಪ್ರಭಾವ ಬೀರುತ್ತದೆ.
ಸ್ನಾನ ಮಾಡಿದ ಬಳಿಕ ಬಕೆಟ್ ಅನ್ನು ಖಾಲಿ ಬಿಡಬಾರದು. ವಾಸ್ತು ಪ್ರಕಾರ ಬಕೆಟ್ನಲ್ಲಿ ಒಳ್ಳೆಯ ನೀರನ್ನು ಹಾಕಿಡಬೇಕು. ಒಂದು ವೇಳೆ ನೀರು ತುಂಬಿಸದೆ ಇಡದಿದ್ದರೆ ಬಕೆಟ್ ಅನ್ನು ಬೋರಲು ಮಾಡಬೇಕು. ಹಾಗೆ ಮಾಡಿದಾಗ ವಾಸ್ತು ದೋಷ ಬಾಧಿಸದು.
ತಲೆ ಸ್ನಾನ ಮಾಡಿದ ಬಳಿಕ ತಲೆಕೂದಲು ಒದ್ದೆಯಾಗಿದ್ದರೆ ವಿವಾಹಿತ ಮಹಿಳೆಯರು ಕುಂಕುಮ ಇಟ್ಟುಕೊಳ್ಳಬಾರದು. ಇದು ಅವರ ಮೇಲೆ ಪ್ರತಿಕೂಲ ಪರಿಣಾಮ ಬೀರುತ್ತದೆ. ಇದರಿಂದ ಅವರ ಮನಸಿನಲ್ಲಿ ಋಣಾತ್ಮಕ ಆಲೋಚನೆಗಳು ಮೊಳಕೆಯೊಡೆಯುತ್ತದೆ.
ಸ್ನಾನ ಮಾಡಿದ ತಕ್ಷಣವೇ ಚೂಪಾದ ವಸ್ತುಗಳನ್ನು ಬಳಸಬಾರದು. ಸ್ನಾನಕ್ಕೆ ಮುಂಚೆ ನೈಲ್ ಕಟ್ಟರ್ ಬಳಸಬಹುದು.
ಸ್ನಾನ ಮಾಡಿದ ತಕ್ಷಣವೇ ಅಗ್ನಿಯನ್ನು ಮುಟ್ಟಬಾರದು. ಮೊದಲು ಏನಾದರೂ ತಿಂದು ಬಳಿಕವಷ್ಟೇ ಅಡುಗೆ ಮನೆಗೆ ಹೋಗಬೇಕು.
ಸ್ನಾನ ಮಾಡಿದ ತಕ್ಷಣವೇ ಮೇಕಪ್ ಹಚ್ಚಬೇಡಿ. ನಿಮ್ಮ ಜುಟ್ಟು ತೇವದಿಂದ ಕೂಡಿದ್ದರೆ ಅಸಲಿಗೆ ಮೇಕಪ್ ಹಾಕಿಕೊಳ್ಳಬೇಡಿ. ಇದು ನಿಮ್ಮ ಜೀವನದ ಮೇಲೆ ಪ್ರತಿಕೂಲ ಶಕ್ತಿಯನ್ನು ಹೆಚ್ಚಿಸುತ್ತದೆ.
ಸ್ನಾನ ಮಾಡಿದ ಬಳಿಕ ಸ್ನಾನದ ಮನೆಯನ್ನು ಸ್ವಚ್ಛವಾಗಿಟ್ಟುಕೊಳ್ಳಿ. ಸ್ನಾನದ ಕೋಣೆಯನ್ನು ಕೊಳಕಾಗಿ ಇಟ್ಟುಕೊಳ್ಳಬೇಡಿ. ಇಲ್ಲವಾದಲ್ಲಿ ರಾಹು, ಕೇತು, ಶನಿ ಗ್ರಹಗಳ ಪ್ರಭಾವ ಅಲ್ಲಿ ಮನೆ ಮಾಡುವುದು ಖಚಿತ. ಮೂರೂ ಗ್ರಹಗಳು ಒಟ್ಟಿಗೆ ಸೇರಿದರೆ ಋಣಾತ್ಮಕತೆ ಅಲ್ಲಿ ಹೆಚ್ಚಾಗಿ ಕಾಣಿಸಿಕೊಳ್ಳುತ್ತದೆ. ಇದರಿಂದ ಆರ್ಥಿಕ ನಷ್ಟ ಉಂಟಾಗುವುದು ನಿಶ್ಚಿತ. ಮುಂದೆ ಹಣಕಾಸು ಕೊರತೆ ಎದುರಾಗುತ್ತದೆ.
ಬಾತ್ ರೂಮ್ನಲ್ಲಿ ಒದ್ದೆ ಬಟ್ಟೆಗಳನ್ನು ಬಿಟ್ಟುಬರಬೇಡಿ. ಹೀಗೆ ಮಾಡಿದರೆ ವಾಸ್ತು ಪ್ರಕಾರ ಆ ಮನೆ ಮಂದಿಯ ಮೇಲೆ ಸೂರ್ಯ ದೇವನ ಪ್ರಭಾವ ಕುಂಠಿತಗೊಳ್ಳುತ್ತದೆ. ಇದರಿಂದ ಅವರ ಪ್ರಭಾವಳಿ ಮಂಕಾಗುತ್ತದೆ. ವ್ಯಕ್ತಿಯ ಗೌರವ ಕ್ಷೀಣಿಸುತ್ತದೆ.